TN Seshan Passes Away: ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿಎನ್​ ಶೇಷನ್ ನಿಧನ

TN Seshan Passes Away: ಡಿಸೆಂಬರ್​ 15, 1932ರಲ್ಲಿ ಕೇರಳದ ತಿರುನೆಲ್ಲಿಯಲ್ಲಿ ಜನಿಸಿದ ಶೇಷನ್​, ಚುನಾವಣಾ ಆಯುಕ್ತರಾಗಿ ಚುನಾವಾಣೆ ಪ್ರಕ್ರಿಯೆಯಲ್ಲಿ ಹಲವು ಸುಧಾರಣೆಗಳನ್ನು ಜಾರಿಗೆ ತಂದಿದ್ದರು.

Rajesh Duggumane | news18-kannada
Updated:November 11, 2019, 11:30 AM IST
TN Seshan Passes Away: ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿಎನ್​ ಶೇಷನ್ ನಿಧನ
ಟಿಎನ್​ ಸೇಶನ್​
Rajesh Duggumane | news18-kannada
Updated: November 11, 2019, 11:30 AM IST
ನವದೆಹಲಿ (ನ.11): ಮಾಜಿ ಚುನಾವಣಾ ಆಯುಕ್ತ ಟಿಎನ್​ ಶೇಷನ್​ (86) ಚೆನ್ನೈ ನಿವಾಸದಲ್ಲಿ ಭಾನುವಾರ ರಾತ್ರಿ  ನಿಧನರಾದರು. ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕರು ಸಂತಾಪ ಸೂಚಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ಸೇಶನ್​ ಅವರಿಗೆ ಅನಾರೋಗ್ಯ ಕಾಡುತ್ತಿತ್ತು. ಭಾನುವಾರ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ರಾತ್ರಿ 9.30ರ ಸುಮಾರಿಗೆ ನಿಧನರಾದರು.

ಡಿಸೆಂಬರ್​ 15, 1932ರಲ್ಲಿ ಕೇರಳದ ತಿರುನೆಲ್ಲಿಯಲ್ಲಿ ಜನಿಸಿದ ಶೇಷನ್​, ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಅಧಿಕಾರಾವಧಿಯಲ್ಲಿ ಚುನಾವಾಣೆ ಪ್ರಕ್ರಿಯೆಯಲ್ಲಿ ಹಲವು ಸುಧಾರಣೆಗಳನ್ನು ಜಾರಿಗೆ ತಂದಿದ್ದರು. ಶೇಷನ್​ ಬರುವುದಕ್ಕೂ ಮೊದಲು ಚುನಾವಣೆ ವೇಳೆ ಹಣ ಹಂಚಿಕೆ, ಅಕ್ರಮಗಳು ಮಿತಿಮೀರಿ ನಡೆಯುತ್ತಿದ್ದವು. ಆದರೆ, ಇವರು ಅಧಿಕಾರ ಸ್ವೀಕರಿಸಿದ ನಂತರ ಇವೆಲ್ಲವೂ ನಿಯಂತ್ರಣಕ್ಕೆ ಬಂದವು.

ಇವರ ಸಾವಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. “ಟಿನ್​ ಶೇಷನ್​ ಅವರು ಓರ್ವ ಅತ್ಯುತ್ತಮ ಸರ್ಕಾರಿ ನೌಕರ. ಅವರು ಭಾರತಕ್ಕೆ ಅತ್ಯುತ್ತಮ ಸೇವೆ ನೀಡಿದ್ದಾರೆ. ಚುನಾವಣಾ ಪ್ರಕ್ರಿಯೆ ಸುಧಾರಣೆಗೆ ಅವರು ನೀಡಿದ ಕೊಡುಗೆಯಿಂದ ನಮ್ಮ ದೇಶದ ಪ್ರಜಾಪ್ರಭುತ್ವ ಮತ್ತಷ್ಟು ಬಲಗೊಂಡಿದೆ. ಅವರ ಅಗಲುವಿಕೆ ನೋವು ತಂದಿದೆ,” ಎಂದಿದ್ದಾರೆ.



Loading...

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಿಂದ ಹಿಂದೆ ಸರಿದ ಬಿಜೆಪಿ; ಶಿವಸೇನೆ ಅಂಗಳದಲ್ಲಿ ಚೆಂಡು

ಶೇಷನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಭಾರತೀಯ ಚುನಾವಣಾ ಆಯೋಗದ ಕಾರ್ಯನಿರ್ವಹಣೆಗೆ ಹೊಸ ಆಯಾಮ ನೀಡಿದ ದಿಟ್ಟ ವ್ಯಕ್ತಿ . ಚುನಾವಣಾ ವ್ಯವಸ್ಥೆ ಸುಧಾರಣೆಗೆ ಅವರ ಕೊಡುಗೆ ಅವಿಸ್ಮರಣೀಯ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಬಂಧುವರ್ಗಕ್ಕೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ," ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.



First published:November 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...