Tamil Nadu Rural Polls: ಮತದಾರರಿಗೆ ನಕಲಿ ಚಿನ್ನದ ನಾಣ್ಯ ವಿತರಿಸಿದ್ದ ಸ್ವತಂತ್ರ ಅಭ್ಯರ್ಥಿ ಸೋಲು

ಪಕ್ಷೇತರ ಅಭ್ಯರ್ಥಿ ಸಾರಥಿ ವಿನಯಗಮ್ ಕೋಲುಮಣಿವಾಕ್ಕಂ ಪಂಚಾಯತ್​ನ ಪಂಚಾಯತ್​ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಎರಡನೇ ಹಂತದ ಮತದಾನದ ವೇಳೆ, ಸಾರಥಿ ಬೆಂಬಲಿಗರು ಮತದಾರರಿಗೆ ಚಿನ್ನದ ನಾಣ್ಯಗಳನ್ನು ನೀಡಿ, ‘ಆಟೋ‘ ಚಿಹ್ನೆಗೆ ಮತ ಹಾಕುವಂತೆ ಮನವಿ ಮಾಡಿದರು.

ಅಭ್ಯರ್ಥಿ ವಿತರಿಸಿದ್ದ ಚಿನ್ನದ ನಾಣ್ಯ

ಅಭ್ಯರ್ಥಿ ವಿತರಿಸಿದ್ದ ಚಿನ್ನದ ನಾಣ್ಯ

  • Share this:
    ತಮಿಳುನಾಡು ಗ್ರಾಮೀಣ ಸ್ಥಳೀಯ ಸಂಸ್ಥೆ ಚುನಾವಣೆ(Tamil Nadu Rural Local Body Elections)ಯಲ್ಲಿ ಕೆಲವು ಹಾಸ್ಯಸ್ಪದ ಘಟನೆಗಳು ಜರುಗಿದ್ದು, ಸಾಮಾಜಿಕ ಜಾಲತಾಣ(Social Media)ದಲ್ಲಿ ಭಾರೀ ಟ್ರೋಲ್ ಆಗುತ್ತಿವೆ. ಬಿಜೆಪಿ ಅಭ್ಯರ್ಥಿ(BJP Candidate)ಗೆ ಕೇವಲ ಒಂದೇ ಒಂದು ಮತ ಬಿದ್ದಿರುವುದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲಿಗರ ಆಹಾರವಾಗಿದೆ. ಅಂತೆಯೇ ಮತದಾರರನ್ನು ಸೆಳೆಯಲು ನಕಲಿ ಚಿನ್ನದ ನಾಣ್ಯಗಳನ್ನು ನೀಡಿದ್ದ ಪಕ್ಷೇತರ ಅಭ್ಯರ್ಥಿ(Independent Candidate ) 147 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ

    ಹೌದು, ಕೋಲುಮಣಿವಾಕ್ಕಂ ಪಂಚಾಯತ್​​​ನಲ್ಲಿ ನಡೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ಸಾರಥಿ ವಿನಯಾಗಮ್ ಸೋತಿದ್ದಾರೆ. ಇವರು ಮತದಾರರನ್ನು ಆಕರ್ಷಿಸಲು ಲಂಚದ ರೂಪದಲ್ಲಿ ಜನರಿಗೆ ನಕಲಿ ಚಿನ್ನದ ನಾಣ್ಯಗಳನ್ನು ವಿತರಣೆ ಮಾಡಿದ್ದರು ಎಂದು ತಿಳಿದು ಬಂದಿದೆ.

    ತಮಿಳುನಾಡಿನ 9 ಮರುಸಂಘಟಿತ ಜಿಲ್ಲೆಗಳಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು. ಚುನಾವಣಾ ಆಯೋಗವು ಇಂದು ಮತ ಎಣಿಕೆ ಕಾರ್ಯವನ್ನು ನಡೆಸಿತ್ತು. ಎರಡು ಹಂತಗಳಲ್ಲಿ 9 ಜಿಲ್ಲೆಗಳ 27,003 ಸ್ಥಾನಗಳಿಗೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಿತು. ಮೊದಲ ಹಂತದ ಮತದಾನ ಅಕ್ಟೋಬರ್ 6ರಂದು ಹಾಗೂ ಎರಡನೇ ಹಂತ ಮತದಾನ ಅಕ್ಟೋಬರ್ 9ರಂದು ನಡೆಯಿತು.

    ಪಕ್ಷೇತರ ಅಭ್ಯರ್ಥಿ ಸಾರಥಿ ವಿನಯಗಮ್ ಕೋಲುಮಣಿವಾಕ್ಕಂ ಪಂಚಾಯತ್​ನ ಪಂಚಾಯತ್​ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಎರಡನೇ ಹಂತದ ಮತದಾನದ ವೇಳೆ, ಸಾರಥಿ ಬೆಂಬಲಿಗರು ಮತದಾರರಿಗೆ ಚಿನ್ನದ ನಾಣ್ಯಗಳನ್ನು ನೀಡಿ, ‘ಆಟೋ‘ ಚಿಹ್ನೆಗೆ ಮತ ಹಾಕುವಂತೆ ಮನವಿ ಮಾಡಿದರು.

    ಇದನ್ನೂ ಓದಿ:Single Vote BJP| ತ.ನಾಡು ಸ್ಥಳೀಯ ಚುನಾವಣೆ ಕೇವಲ ಒಂದು ಮತಕ್ಕೆ ತೃಪ್ತಿಪಟ್ಟ ಬಿಜೆಪಿ ಅಭ್ಯರ್ಥಿ; ಜಾಲತಾಣಗಳಲ್ಲಿ ಭಾರೀ ಟ್ರೋಲ್!

    ಮತದಾನ ಮುಗಿದ ಬಳಿಕ ಕೆಲವು ಮತದಾರರು ಆ ಚಿನ್ನದ ನಾಣ್ಯಗಳನ್ನು ಗಿರವಿ ಅಂಗಡಿಗೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ, ಆ ನಾಣ್ಯಗಳು ಚಿನ್ನ ಅಲ್ಲ, ಹಿತ್ತಾಳೆ ನಾಣ್ಯಗಳ ಎಂದು ಗೊತ್ತಾಗಿದೆ. ವಿಷಯ ತಿಳಿದ ಉಳಿದ ಅಭ್ಯರ್ಥಿಗಳು ಸ್ವತಂತ್ರ ಅಭ್ಯರ್ಥಿ ಸಾರಥಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಮತದಾರರಿಗೆ ಆಮಿಷ ಒಡ್ಡಿ, ನಕಲಿ ಚಿನ್ನದ ನಾಣ್ಯಗಳನ್ನು ವಿತರಿಸಿ ಮೋಸ ಮಾಡಿದ್ದಾರೆ. ಹೀಗಾಗಿ ಮತ್ತೆ ಚುನಾವಣೆ ನಡೆಸಬೇಕೆಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

    ಕೋಲುಮಣಿವಾಕ್ಕಂ ಪಂಚಾಯತ್​ಗೆ ಸೇರಿದ ವ್ಯಕ್ತಿಯೊಬ್ಬರು ಮಾತನಾಡಿ, ‘‘ನಾವು ಮೋಸ ಹೋಗಿದ್ದೇವೆ ಎಂದು ಗೊತ್ತಾಗಿದೆ. ಮತದಾನದ ದಿನ ನಮ್ಮನ್ನು ಏಕಾಂಗಿಯಾಗಿ ಕರೆಸಿ, ಇಬ್ಬರು ಪುರುಷರು ನಮ್ಮ ಕೈಯಲ್ಲಿ ಚಿನ್ನದ ನಾಣ್ಯಗಳೆಂದು ರಹಸ್ಯವಾಗಿ ಬಚ್ಚಿಟ್ಟು, ಆಟೋ ಗುರುತಿಗೆ ಮತ ಹಾಕುವಂತೆ ಕೇಳಿದರು. ನಾನು ಮಾತ್ರವಲ್ಲ, ನಮ್ಮ ಪಂಚಾಯತ್​ಗೆ ಸೇರಿದ ಅನೇಕರು ಮೋಸ ಹೋಗಿದ್ದಾರೆ. ಇನ್ನು ಮುಂದೆ ನಾವು ಮತಗಳನ್ನು ಮಾರಾಟ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೇವೆ‘‘ ಎಂದು ಅವರು ಹೇಳಿದರು.

    ಕುಂರತ್ತೂರು ಯೂನಿಯನ್ ವ್ಯಾಪ್ತಿಯ ಪಂಚಾಯತಿಗಳಲ್ಲಿ ಎರಡನೇ ಹಂತದ ಮತದಾನ ಅಕ್ಟೋಬರ್ 9ರಂದು ನಡೆಯಿತು. ಇದರಲ್ಲಿ ಕೋಲುಮಣಿವಾಕ್ಕಂ ಪಂಚಾಯತಿಯಲ್ಲಿ 2500ಕ್ಕೂ ಹೆಚ್ಚು ಮತದಾರರಿದ್ದರು. ಅನೇಕ ಸ್ವತಂತ್ರ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳಿಗೆ ಸೇರಿದ ಅಭ್ಯರ್ಥಿಗಳು ಪಂಚಾಯತ್ ಅಧ್ಯಕ್ಷ ಮತ್ತು ವಾರ್ಡ್​ ಸದಸ್ಯರ ಸ್ಥಾನಕ್ಕಾಗಿ ಸ್ಪರ್ಧಿಸಿದ್ದರು.
    Published by:Latha CG
    First published: