HOME » NEWS » National-international » TN POLLS AIADMK CANDIDATE IMPRESSES VOTERS BY WASHING CLOTHES MAK

Assembly Election2021: ತಮಿಳುನಾಡು ಚುನಾವಣೆ; ಪ್ರಚಾರದ ವೇಳೆ ಮತದಾರರ ಬಟ್ಟೆ ಒಗೆದ ಎಡಿಎಂಕೆ ಅಭ್ಯರ್ಥಿ

ಪಕ್ಷದ ಕಾರ್ಯಕರ್ತರು ವಂಡಿಪೆಟ್ಟೈನಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾಗ, ಒಬ್ಬ ಮಹಿಳೆ ತನ್ನ ಕುಟುಂಬ ಸದಸ್ಯರ ಬಟ್ಟೆ ಒಗೆಯುವುದನ್ನು ನೋಡಿದ ಕದಿರವನ್ ಮಹಿಳೆಯ ಬಳಿ ತಾವು ಬಟ್ಟೆ ಒಗೆದುಕೊಡುವುದಾಗಿ ತಿಳಿಸಿದ್ದಾರೆ.

news18-kannada
Updated:March 23, 2021, 6:01 PM IST
Assembly Election2021: ತಮಿಳುನಾಡು ಚುನಾವಣೆ; ಪ್ರಚಾರದ ವೇಳೆ ಮತದಾರರ ಬಟ್ಟೆ ಒಗೆದ ಎಡಿಎಂಕೆ ಅಭ್ಯರ್ಥಿ
ಎಡಿಎಂಕೆ ಅಭ್ಯರ್ಥಿ.
  • Share this:
ಚೆನ್ನೈ (ಮಾರ್ಚ್​ 23); ಭಾರತದ ಇತರೆ ರಾಜ್ಯಗಳ ಚುನಾವಣಾ ಪ್ರಚಾರವೇ ಒಂದು ತೂಕವಾದರೆ, ತಮಿಳುನಾಡಿನ ಚುನಾವಣಾ ಪ್ರಚಾರವೇ ಇಂದು ತೂಕ. ಸಿನಿಮಾ ಮತ್ತು ರಾಜಕೀಯವನ್ನೇ ತಮ್ಮ ಉಸಿರಾಗಿಸಿಕೊಂಡಿರುವ ಅಲ್ಲಿನ ಮತದಾರರನ್ನು ಸೆಳೆಯುವುದು ಸಹ ಅಷ್ಟು ಸುಲಭದ ಕೆಲಸವಲ್ಲ. ಇದೇ ಕಾರಣಕ್ಕೆ ಸಿನಿಮಾದಲ್ಲಿ ನಟರು ಹಾಗೂ ರಾಜಕೀಯದಲ್ಲಿ ನಾಯಕರು ಯಾವಾಗಲೂ ಒಂದಲ್ಲ ಒಂದು ವಿಭಿನ್ನ ಕಸರತ್ತಿಗೆ ಮುಂದಾಗುತ್ತಲೇ ಇರುತ್ತಾರೆ. ಇದೀಗ ಅಂತಹದ್ದೇ ಒಂದು ಕಸರತ್ತಿಗೆ ಮುಂದಾಗಿರುವ ಆಡಳಿತರೂಢ ಎಐಎಡಿಎಂಕೆ ಪಕ್ಷದ ಅಭ್ಯರ್ಥಿ ಟಿ. ಕದಿರವನ್​ ಮತದಾರರ ಬಟ್ಟೆ ಒಗೆಯುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾರೆ.

ತಮಿಳುನಾಡಿನ ಮಟ್ಟಿಗೆ ವಿಭಿನ್ನ ಚುನಾವಣಾ ಪ್ರಚಾರಕ್ಕೆ ಹೆಸರಾಗಿರುವ ನಾಗಪಟ್ಟಣಂ ವಿಧಾನಸಭಾ ಕ್ಷೇತ್ರದ ಎಐಎಡಿಎಂಕೆ ಅಭ್ಯರ್ಥಿ ತಂಗಾ ಕಾತಿರಾವನ್, ಇಂದು ಚುನಾವಣಾ ಪ್ರಚಾರದ ವೇಳೆ ಮಹಿಳೆಯೊಬ್ಬರ ಬಟ್ಟೆಗಳನ್ನು ತೊಳೆದು ಕೊಟ್ಟಿದ್ದಾರೆ. ಈ ಮೂಲಕ ತಮ್ಮ ಪ್ರಣಾಳಿಕೆಯಲ್ಲಿರುವ ವಾಷಿಂಗ್ ಮೆಷಿನ್ ಕೊಡುವ ಭರವಸೆಯನ್ನು ಜನರಿಗೆ ನೆನಪಿಸಲು ಮುಂದಾಗಿದ್ದಾರೆ.
ಎಐಎಡಿಎಂಕೆ ಅಭ್ಯರ್ಥಿ ತಂಗಾ ಕದಿರವನ್ ನಾಗೋರ್ ಬಳಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದರು. ಈ ವೇಳೆ ಪಕ್ಷದ ಕಾರ್ಯಕರ್ತರು ವಂಡಿಪೆಟ್ಟೈನಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾಗ, ಒಬ್ಬ ಮಹಿಳೆ ತನ್ನ ಕುಟುಂಬ ಸದಸ್ಯರ ಬಟ್ಟೆ ಒಗೆಯುವುದನ್ನು ನೋಡಿದ ಕದಿರವನ್ ಮಹಿಳೆಯ ಬಳಿ ತಾವು ಬಟ್ಟೆ ಒಗೆದುಕೊಡುವುದಾಗಿ ತಿಳಿಸಿದ್ದಾರೆ. ಮೊದಲಿಗೆ ಬೇಡ ಎಂದ ಮಹಿಳೆ ನಂತರ ಕೆಲವು ಬಟ್ಟೆಗಳನ್ನು ಒಗೆಯಲು ನೀಡಿದ್ದಾರೆ.ಅಭ್ಯರ್ಥಿ ಕದಿರವನ್ ಕೆಲವು ನಿಮಿಷಗಳ ಕಾಲ ಬಟ್ಟೆ ತೊಳೆದಿದ್ದಾರೆ. ನಂತರ ಬಟ್ಟೆ ಪಕ್ಕದಲ್ಲಿ ಇದ್ದ ಕೆಲವು ಪಾತ್ರೆಗಳನ್ನು ತೊಳೆದು ಇಟ್ಟಿದ್ದಾರೆ. ಕದಿರವನ್ ಕೆಲಸ ನೋಡಿ ಸ್ಥಳೀಯ ನಿವಾಸಿಗಳು ಆಶ್ಚರ್ಯಪಟ್ಟಿದ್ದಾರೆ. ಜೊತೆಗೆ ಗಾಬರಿ ಕೂಡ ಆಗಿದ್ದಾರೆ ಎಂದು ವರದಿಯಾಗಿದೆ.

ಬಟ್ಟೆ ತೊಳೆದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕದಿರವನ್ "ನಮ್ಮ ಅಮ್ಮನ ಸರ್ಕಾರವು ಮತ್ತೆ ಅಧಿಕಾರಕ್ಕೆ ಬಂದ ನಂತರ ಬಟ್ಟೆಗಳನ್ನು ತೊಳೆಯುವ ಯಂತ್ರಗಳನ್ನು ನೀಡುವ ಭರವಸೆ ನೀಡಿದ್ದೇವೆ. ಮಹಿಳೆಯರು ಮತ್ತು ಗೃಹಿಣಿಯರಿಗೆ ವಾಷಿಂಗ್ ಮಷಿನ್‌ಗಳನ್ನು ನೀಡಲಾಗುತ್ತದೆ. ಇದನ್ನೂ ಸೂಚಿಸಲು ಮತ್ತು ಸಾಬೀತು ಪಡಿಸಲು ನಾನು ಬಟ್ಟೆಯನ್ನು ತೊಳೆದಿದ್ದೇನೆ" ಎಂದಿದ್ದಾರೆ.

ಇದನ್ನೂ ಓದಿ: Assembly Election2021: ಬಂಗಾಳದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ನಟ ಮಿಥುನ್ ಚಕ್ರವರ್ತಿಗೆ ಟಿಕೆಟ್ ನಿರಾಕರಣೆ!

50 ವರ್ಷದ ಎಐಎಡಿಎಂಕೆ ಅಭ್ಯರ್ಥಿ ಕದಿರವನ್, ನಾಗಪಟ್ಟಣಂ ಪಟ್ಟಣ ಕಾರ್ಯದರ್ಶಿಯಾಗಿದ್ದಾರೆ. ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಪಕ್ಷಕ್ಕಾಗಿ ಅವರು ಮಾಡಿರುವ ಕೆಲಸವನ್ನು ಗುರುತಿಸಿ ಈ ಬಾರಿ ಟಿಕೆಟ್ ನೀಡಲಾಗಿದೆ ಎನ್ನಲಾಗಿದೆ.

ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಏಪ್ರಿಲ್ 6ರಂದು ಮತದಾನವನ್ನು ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗವು ಪ್ರಕಟಿಸಿದೆ. ಮೇ 2ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.
Published by: MAshok Kumar
First published: March 23, 2021, 6:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories