• Home
 • »
 • News
 • »
 • national-international
 • »
 • TamilNadu: ತಮಿಳುನಾಡು ಕಾಂಗ್ರೆಸ್ ಶಾಸಕ ನಿಧನ; ರಾಹುಲ್ ಗಾಂಧಿ ಸಂತಾಪ

TamilNadu: ತಮಿಳುನಾಡು ಕಾಂಗ್ರೆಸ್ ಶಾಸಕ ನಿಧನ; ರಾಹುಲ್ ಗಾಂಧಿ ಸಂತಾಪ

ತಿರುಮಹನ್ ಎವೆರಾ

ತಿರುಮಹನ್ ಎವೆರಾ

ತಿರುಮಹನ್ ಎವೆರಾ ತಿರುಮಗನ್ ಎವೆರಾ ತಮಿಳುನಾಡು ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಇದಕ್ಕೂ ಮೊದಲು, ತಿರುಮಗನ್ ಎವೆರಾ ಅವರು 2015 ರಿಂದ ತಮಿಳುನಾಡು ಕಾಂಗ್ರೆಸ್ ಪಕ್ಷದ ಐಟಿ ಮತ್ತು ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿದ್ದರು.

 • News18 Kannada
 • 2-MIN READ
 • Last Updated :
 • Tamil Nadu, India
 • Share this:

ಚೆನ್ನೈ: ಹಿರಿಯ ಕಾಂಗ್ರೆಸ್ (Congress) ನಾಯಕ ಎವ್ಕೆಸ್ ಇಳಂಗೋವನ್ (former Union minister E V K S Elangovan) ಅವರ ಪುತ್ರ ತಿರುಮಹನ್ ಎವೆರಾ  (46) ಇಂದು ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ. ತಿರುಮಗನ್ ಎವೆರಾ (E Thirumahan Everaa) ಈ ರೋಡ್ ಪೂರ್ವ (Erode East constituency) ಶಾಸಕರಾಗಿದ್ದರು. ಸೋಮವಾರ ಹೃದಯಾಘಾತದಿಂದ ಶ್ರೀ ಎವೆರಾ ಅವರನ್ನು ಈರೋಡ್‌ನ ಕೆಎಂಸಿಎಚ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಿರುಮಗನ್ ಎವೆರಾ ಇಂದು ಕೊನೆಯುಸಿರೆಳೆದಿದ್ದಾರೆ. 2021 ರ ವಿಧಾನಸಭಾ ಚುನಾವಣೆಯಲ್ಲಿ ತಿರುಮಗನ್ ಎವೆರಾ ಅವರು ಶಾಸಕರಾಗಿ ಅಧಿಕಾರ ವಹಿಸಿಕೊಂಡರು. ಮೊದಲ ಬಾರಿಗೆ ಈರೋಡ್ ಪೂರ್ವ ಕ್ಷೇತ್ರದಿಂದ ಕಾಂಗ್ರೆಸ್ ಪರವಾಗಿ ಸ್ಪರ್ಧಿಸಿದ್ದರು. ಇದೀಗ ಪಾರ್ಥಿವ ಶರೀರವನ್ನು ಶೀಘ್ರದಲ್ಲೇ ಈರೋಡ್‌ನಲ್ಲಿರುವ ಅವರ ಮನೆಗೆ ಕೊಂಡೊಯ್ಯಲಾಗಿದೆ. 


ತಿರುಮಹನ್ ಎವೆರಾ ಯಾರು?


ಎವೆರಾ ಅವರು ಈರೋಡ್ ಪೂರ್ವ ಶಾಸಕರ ಪುತ್ರರಾಗಿದ್ದು, ಇವರ  ಜನ್ಮ ಹೆಸರು ರಾಮ್. ತಿರುಮಹನ್ ಎವೆರಾ ತಂದೆ ಎವ್ಕೆಸ್ ಇಳಂಗೋವನ್ ಆಗಿದ್ದು, ಪೆರಿಯಾರ್ ಇ.ವಿ. ರಾಮಸಾಮಿ ಅವರ ಸಹೋದರ ಇ. ಡಬ್ಲ್ಯೂ. ಕೃಷ್ಣಸಾಮಿಯವರ ಮರಿಮೊಮ್ಮಗ ಕೂಡ ಆಗಿದ್ದಾರೆ. ಶ್ರೀ ಎವೆರಾ ಅವರಿಗೆ ಸಂಜಯ್ ಎಂಬ ಅಣ್ಣನಿದ್ದಾನೆ.


ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಎವೆರಾ


ತಿರುಮಗನ್ ಎವೆರಾ ತಮಿಳುನಾಡು ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಇದಕ್ಕೂ ಮೊದಲು, ತಿರುಮಗನ್ ಎವೆರಾ ಅವರು 2015 ರಿಂದ ತಮಿಳುನಾಡು ಕಾಂಗ್ರೆಸ್ ಪಕ್ಷದ ಐಟಿ ಮತ್ತು ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿದ್ದರು.


ಎವೆರಾ ನಿಧನಕ್ಕೆ ಸಿಎಂ ಸ್ಟಾಲಿನ್​ ಟ್ವೀಟ್ - ಎವೆರಾ ಸಾವಿನಿಂದ ದುಃಖವಾಗಿದೆ


ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಎವೆರಾ ಅವರ ಹಠಾತ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.


mk Stalin
ಸಿಎಂ ಸ್ಟಾಲಿನ್


ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ''ಈರೋಡ್ ಪೂರ್ವ ವಿಧಾನಸಭಾ ಕ್ಷೇತ್ರದ ಸದಸ್ಯ ತಿರುಮಹನ್ ಎವೆರಾ ಕಣ್ಮರೆಯಾದ ಸುದ್ದಿ ಕೇಳಿ ತುಂಬಾ ಆಘಾತವಾಯಿತು ಮತ್ತು ದುಃಖವಾಯಿತು.


ಎವೆರಾ ಮುಖದಲ್ಲಿದ್ದ ನಗು ಈಗಲೂ ನೆನಪಿದೆ


ಒಂದು ತಿಂಗಳ ಹಿಂದೆ ಈಕ್ವೆಸ್ಟ್ರಿಯನ್ ಸ್ಪರ್ಧೆಯಲ್ಲಿ ಭಾರತಕ್ಕೆ ಪ್ರಥಮ ಸ್ಥಾನ ಗಳಿಸಿದ ಮಗಳೊಂದಿಗೆ ನನ್ನನ್ನು ಅಭಿನಂದಿಸಲು ಬಂದಿದ್ದರು. ಈ ವೇಳೆ ತಿರುಮಹನ್ ಎವೆರಾ ಅವರ ಮುಖದಲ್ಲಿದ್ದ ಮಂದಹಾಸ ನನಗೆ ಈಗಲೂ ನೆನಪಿದೆ.


ಪ್ರೀತಿಯ ಮಗನನ್ನು ಕಳೆದುಕೊಂಡಿರುವ ಅರುಯಿರ್ ಅವರ ಸಹೋದರ ಇಳಂಗೋವನ್ ಅವರನ್ನು ಹೇಗೆ ಸಾಂತ್ವನ ಮಾಡುವುದು ಎಂದು ನನಗೆ ಗೊತ್ತಿಲ್ಲ.


ಸಂತಾಪ ಸೂಚಿಸಿದ ಸ್ಟಾಲಿನ್


ತಿರುಮಹನ್ ಎವೆರಾ ಅವರ ಸಾವಿನಿಂದ ತೀವ್ರ ದುಃಖಿದಲ್ಲಿರುವ ಅವರ ಕುಟುಂಬ, ತಮಿಳುನಾಡು ಕಾಂಗ್ರೆಸ್ ಸಮಿತಿ ಮತ್ತು ಈರೋಡ್ ಜನರಿಗೆ ನನ್ನ ಆಳವಾದ ಸಂತಾಪಗಳು ಎಂದು ತಿಳಿಸಿದ್ದಾರೆ.


ತಿರುಮಹನ್ ಎವೆರಾ ಅಗಲಿಕೆಗೆ ರಾಹುಲ್ ಸಂತಾಪ


ತಿರುಮಹನ್ ಅವರ ಅಗಲಿಕೆಗೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್​ ಅಧ್ಯಕ್ಷ್ಯ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ವಿರೋಧ ಪಕ್ಷದ ನಾಯಕ ಮತ್ತು ಎಐಎಡಿಎಂಕೆ ಹಂಗಾಮಿ ಮುಖ್ಯಸ್ಥ ಕೆ ಪಳನಿಸ್ವಾಮಿ ಸೇರಿದಂತೆ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ.


Rahul Gandhi Says Excuses To Stop Yatra After Health Minister's Letter
ರಾಹುಲ್ ಗಾಂಧಿ


ಇಳಂಗೋವನ್ ಅವರಿಗೆ ದೂರವಾಣಿ ಮೂಲಕ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹಿರಿಯ ನಾಯಕರು ಸಂತಾಪ ಸೂಚಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಕಟಣೆಯಲ್ಲಿ ತಿಳಿಸಿದೆ.


ಇದನ್ನೂ ಓದಿ: Bathroom Commodes: ಒಂದೇ ಸ್ನಾನ ಗೃಹದಲ್ಲಿ ಎರಡು ಕಮೋಡ್​​ಗಳಿರುವ ಕಟ್ಟಡ ಉದ್ಘಾಟಿಸಿದ ತಮಿಳುನಾಡು ಸಿಎಂ ಸ್ಟಾಲಿನ್!


ತಮಿಳುನಾಡು ಕಾಂಗ್ರೆಸ್ ರಾಜ್ಯಾಧ್ಯಕ್ಷರಿಂದ ಸಂತಾಪ


ಕಾಂಗ್ರೆಸ್ ರಾಜ್ಯಾಧ್ಯಕ್ಷ ಕೆ.ಎಸ್.ಅಗಳಗಿರಿ ಅವರು  ಎವೆರಾ ನಿಧನರಾದ ಸುದ್ದಿ ಕೇಳಿ ಆಘಾತ ಹಾಗೂ ದುಃಖವಾಯಿತು. 46 ನೇ ವಯಸ್ಸಿನಲ್ಲಿ ಅವರು ಸಾವನ್ನಪ್ಪಿದ್ದು, ಕಾಂಗ್ರೆಸ್​​ಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ತಮಿಳುನಾಡು ಕಾಂಗ್ರೆಸ್ ಪರವಾಗಿ ನಾನು ಇಳಂಗೋವನ್, ಅವರ ಕುಟುಂಬ ಮತ್ತು ಆಪ್ತರಿಗೆ ಸಂತಾಪ ಸೂಚಿಸುತ್ತೇನೆ ಎಂದು ತಿಳಿಸಿದ್ದಾರೆ.

Published by:Monika N
First published: