85 Year Old Woman Becomes Panchayat President| ತಮಿಳುನಾಡಿನಲ್ಲಿ 85 ವರ್ಷದ ಅಜ್ಜಿಗೆ ಪಂಚಾಯತ್ ಅಧ್ಯಕ್ಷೆ ಪಟ್ಟ!

ಈ ನಡುವೆ ತಮಿಳು ನಟ ವಿಜಯ್ ಅವರ ಅಭಿಮಾನಿಗಳ ಸಂಘದಿಂದ ಸುಮಾರು 100ಕ್ಕೂ ಹೆಚ್ಚುಅಭ್ಯರ್ಥಿಗಳು ಸ್ಥಳೀಯ ಚುನಾವಣೆಯಲ್ಲಿ ವಿಜಯ್ ಹೆಸರಿನಲ್ಲಿ ಸ್ಪರ್ಧಿಸಿದ್ದರು. ಈ ಪೈಕಿ 50 ಜನ ಗೆಲುವು ಸಾಧಿಸುವ ಮೂಲಕ ಎಲ್ಲಾ ರಾಜಕೀಯ ಪಕ್ಷಗಳ ಹುಬ್ಬೇರಿಸಿದ್ದಾರೆ. ಅಲ್ಲದೆ, ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ.

85 ವರ್ಷದಲ್ಲಿ ಪಂಚಾಯತ್ ಅಧ್ಯಕ್ಷೆಯಾದ ಅಜ್ಜಿ.

85 ವರ್ಷದಲ್ಲಿ ಪಂಚಾಯತ್ ಅಧ್ಯಕ್ಷೆಯಾದ ಅಜ್ಜಿ.

  • Share this:
    ಚೆನ್ನೈ; ರಾಜಕೀಯದಲ್ಲಿ 75 ವರ್ಷ ದಾಟಿದರೆ ಭವಿಷ್ಯ ಮುಗಿಯಿತು ಎಂಬ ಮಾತಿದೆ. ಕೇವಲ ವಯಸ್ಸಾಗಿದ್ದ ಕಾರಣಕ್ಕೆ ಬಿಜೆಪಿ ಪಕ್ಷದ ಹಿರಿಯ ನಾಯಕ ಎಲ್​.ಕೆ. ಅಡ್ವಾನಿ (Lal Krishna Advani) ಪ್ರಧಾನಿ ಪಟ್ಟವನ್ನು ಮಿಸ್​ ಮಾಡಿಕೊಂಡಿದ್ದರು. ಇನ್ನೂ ಮುಖ್ಯಮಂತ್ರಿ ಗಾದಿಯಲ್ಲಿದ್ದರೂ ಸಹ ವಯಸ್ಸಿನ ಕಾರಣಕ್ಕೆ ಕರ್ನಾಟಕದ ಮಾಜಿ ಸಿಎಂ ಯಡಿಯೂರಪ್ಪ (BS Yeddyurappa )ಅವರನ್ನು ಆ ಸ್ಥಾನದಿಂದ ಇಳಿಸಲಾಗಿತ್ತು. ಅಲ್ಲದೆ, 75 ವರ್ಷ ದಾಟಿದ ಅನೇಕ ಹಿರಿಯ ನಾಯಕರನ್ನು ಇದೀಗ ಸೈಡ್​ ಲೈನ್ ಮಾಡಲಾಗುತ್ತಿದೆ. ಆದರೆ, ಇದೇ ಸಂದರ್ಭದಲ್ಲಿ ತಮಿಳುನಾಡಿನ 85 ವರ್ಷದ ಎಸ್. ಪೆರುಮಾತಾಳ್ (Perumathaal) ಎಂಬ ಹಿರಿಯ ಮಹಿಳೆ ತಮಿಳುನಾಡಿನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಪಂಚಾಯತ್ ಚುನಾವಣೆಯಲ್ಲಿ ಗೆದ್ದು (Tamilnadu Local Body Election), ಶಿವಂತಿಪಟ್ಟಿ (Sivanthipatti Panchayat) ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

    ಪೆರುಮಾತಾಳ್ ಹೆಸರಲ್ಲಿದೆ ದಾಖಲೆ:

    85 ವರ್ಷದ ಪೆರುಮಾತಾಳ್  ತಮಿಳುನಾಡಿನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಯ್ಕೆಯಾಗುವ ಮೂಲಕ ಅತ್ಯಂತ ಹಿರಿಯ ಪಂಚಾಯತ್ ಸದಸ್ಯೆ ಮತ್ತು ಅಧ್ಯಕ್ಷೆ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ. ದೀರ್ಘಕಾಲದಿಂದಲೂ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದ ಅವರು ಎಂದಿಗೂ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಇದುವೆ ಮೊದಲ ಬಾರಿಗೆ ಸ್ಪರ್ಧಿಸಿದ್ದ ಅವರು ಮೊದಲ ಪ್ರಯತ್ನದಲ್ಲೇ ಸಫಲರಾಗಿದ್ದಾರೆ ಎಂದು ವರದಿಯಾಗಿದೆ.

    ಪೆರುಮಾತಾಳ್ ಹಲವಾರು ವರ್ಷಗಳಿಂದ ಸ್ಥಳೀಯ ಚುನಾವಣೆಯಲ್ಲಿ ತನ್ನ ಮಗನಿಗಾಗಿ ಚುನಾವಣೆ ಪ್ರಚಾರ ಮಾಡುತ್ತಿದ್ದರು. ಆದರೆ, ಈ ಬಾರಿ ಪಂಚಾಯತ್‌ನ ಅಧ್ಯಕ್ಷ ಸ್ಥಾನವು ಮಹಿಳೆಗೆ ಮೀಸಲು ಎಂದು ಅಧಿಕಾರಿಗಳು ಘೋಷಿಸಿದಾ ಕಾರಣಕ್ಕೆ ಅವರು ಚುನಾವಣೆಯಲ್ಲಿ ಸ್ಫರ್ಧಿಸಲು ನಿರ್ಧರಿಸಿದ್ದರು. ಚಲಾವಣೆಯಾದ ಒಟ್ಟು 2,060 ಮತಗಳಲ್ಲಿ ಪೆರುಮಾತಾಳ್‌ ಅವರಿಗೆ 1,568 ಬಿದ್ದಿದೆ ಎಂದು TNIE ವರದಿ ಮಾಡಿದೆ.

    ಜನಾಭಿವೃದ್ಧಿಗಾಗಿ ಕೆಲಸ:

    ತನ್ನ ಮಗನ ದಾರಿಯಲ್ಲಿ ತಾನು ಅಧಿಕಾರವನ್ನು ಮುಂದುವರೆಯುತ್ತಿರುವುದು ಸಂತೋಷವಾಗಿದ್ದು, ಜನರ ಸೇವೆಯನ್ನು ಮುಂದುವರಿಸಲು ಬಯಸುತ್ತೇನೆ ಎಂದು ಪೆರುಮಾತಾಳ್ ಅವರು ಹೇಳಿದ್ದಾಗಿ ವರದಿಯಾಗಿದೆ.

    ಚುನಾವಣಾ ಫಲಿತಾಂಶದ ನಂತರ ಮಾಧ್ಯಮಗಳ ಎದುರು ಮಾತನಾಡಿರುವ ನೂತನ ಅಧ್ಯಕ್ಷೆ ಪೆರುಮಾತಾಳ್, "ಪ್ರತಿನಿತ್ಯ ಜನರೊಂದಿಗೆ ಮಾತನಾಡುವದರಿಂದ, ಪಂಚಾಯತ್‌ನಲ್ಲಿ ಪ್ರಚಾರ ಮಾಡುವುದು ಮತ್ತು ಮನೆಗಳಿಗೆ ಭೇಟಿ ನೀಡುವುದು ನನಗೆ ಯಾವುದೇ ಸಮಸ್ಯೆಯಾಗಿಲ್ಲ. ಪಂಚಾಯತ್‌ಗೆ ಕುಡಿಯುವ ನೀರಿನ ಪೂರೈಕೆ ನಿರಂತರವಾಗಿ ಆಗುವಂತೆ ನೋಡಿಕೊಳ್ಳುತ್ತೇನೆ. ನನ್ನ ಬಾಲ್ಯದಿಂದಲೂ ಕುಡಿಯುವ ನೀರು ಇಲ್ಲಿನ ಪ್ರಮುಖ ಸಮಸ್ಯೆಯಾಗಿದೆ. ಆ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸುತ್ತೇನೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ನಾವು ಮಳೆಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದ್ದು, ನಮ್ಮಲ್ಲಿ ಕುಡಿಯುವ ನೀರಿಗೆ ಬೇರೆ ಯಾವುದೇ ಮೂಲವಿಲ್ಲ. ಬೀದಿದೀಪಗಳನ್ನು ಅಳವಡಿಸಲು ಮತ್ತು ಪಂಚಾಯತ್‌ನಲ್ಲಿ ರಸ್ತೆಗಳನ್ನು ನಿರ್ಮಿಸಲು ಪ್ರಯತ್ನಿಸುವುದಾಗಿ ಅವರು ಹೇಳಿದ್ದಾರೆ.

    ಇದನ್ನೂ ಓದಿ: Single Vote BJP| ತ.ನಾಡು ಸ್ಥಳೀಯ ಚುನಾವಣೆ ಕೇವಲ ಒಂದು ಮತಕ್ಕೆ ತೃಪ್ತಿಪಟ್ಟ ಬಿಜೆಪಿ ಅಭ್ಯರ್ಥಿ; ಜಾಲತಾಣಗಳಲ್ಲಿ ಭಾರೀ ಟ್ರೋಲ್!

    ಸ್ಥಳೀಯ ಚುನಾವಣೆಯಲ್ಲಿ ಡಿಎಂಕೆ ಜಯಭೇರಿ:

    ಇತ್ತೀಚೆಗೆ ಮುಕ್ತಾಯವಾದ ತಮಿಳುನಾಡು ಸ್ಥಳೀಯ ಚುನಾವಣೆಯಲ್ಲಿ ಡಿಎಂಕೆ ಇತಿಹಾಸ ಕಾಣದ ದಾಖಲೆಯ ಗೆಲುವು ಸಾಧಿಸಿದ್ದಾರೆ. ಆಡಳಿತರೂಢ ಪಕ್ಷ ಸ್ಥಳೀಯ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ತಮಿಳುನಾಡಿನಲ್ಲಿ ವಾಡಿಕೆ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಸಿಎಂ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷ ತಮಿಳುನಾಡು ಚುನಾವಣಾ ಇತಿಹಾಸ ಕಾಣದ ಮಟ್ಟಿಗೆ ದಾಖಲೆಯ ಗೆಲುವು ಸಾಧಿಸಿದೆ.

    ಸ್ಥಳೀಯ ಚುನಾವಣೆ ನಡೆದ ಸ್ಥಾನಗಳ ಪೈಕಿ ಶೇ.77ಕ್ಕೂ ಅಧಿಕ ಸ್ಥಾನಗಳಲ್ಲಿ ಡಿಎಂಕೆ ಗೆಲುವು ದಾಖಲಿಸಿದೆ ಎನ್ನಲಾಗುತ್ತಿದೆ. ಇನ್ನೂ ಪ್ರಮುಖ ವಿರೋಧ ಪಕ್ಷದವಾದ ಎಡಿಎಂಕೆ ಮತ್ತು ಬಿಜೆಪಿ ಈ ಚುನಾವಣೆಯಲ್ಲಿ ಕಾಣದತಾಂಗಿದೆ. ಅದರಲ್ಲೂ ಕೋಯಮ್ತೂರಿನ ಓರ್ವ ಬಿಜೆಪಿ ಅಭ್ಯರ್ಥಿ ಕೇವಲ 1 ಮತಗಳನ್ನಷ್ಟೆ ಪಡೆಯಲು ಶಕ್ತವಾಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಟ್ರೋಲ್ ಆಗಿದೆ.

    ಇದನ್ನೂ ಓದಿ: India-China Trade $100 Billion Mark| ದಾಖಲೆಯ10 ಸಾವಿರ ಶತಕೋಟಿ ಡಾಲರ್ ತಲುಪಲಿರುವ ಭಾರತ-ಚೀನಾ ವ್ಯಾಪಾರ!

    ನಟ ವಿಜಯ್ ಅಭಿಮಾನಿಗಳಿಗೆ ಜಯಭೇರಿ:

    ಈ ನಡುವೆ ತಮಿಳು ನಟ ವಿಜಯ್ ಅವರ ಅಭಿಮಾನಿಗಳ ಸಂಘದಿಂದ ಸುಮಾರು 150ಕ್ಕೂ ಹೆಚ್ಚುಅಭ್ಯರ್ಥಿಗಳು ಸ್ಥಳೀಯ ಚುನಾವಣೆಯಲ್ಲಿ ವಿಜಯ್ ಹೆಸರಿನಲ್ಲಿ ಸ್ಪರ್ಧಿಸಿದ್ದರು. ಈ ಪೈಕಿ 100 ಜನ ಗೆಲುವು ಸಾಧಿಸುವ ಮೂಲಕ ಎಲ್ಲಾ ರಾಜಕೀಯ ಪಕ್ಷಗಳ ಹುಬ್ಬೇರಿಸಿದ್ದಾರೆ. ಅಲ್ಲದೆ, ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ.
    Published by:MAshok Kumar
    First published: