ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಬೆಂಗಾವಲು ಪಡೆಯ ಮೇಲೆ ದಾಳಿಯ ಕುರಿತು ರಾಜ್ಯ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ತೃಣಮೂಲ ಕಾಂಗ್ರೆಸ್ ನಾಯಕರು ಗುರುವಾರ ತ್ರಿಪುರಾದ ಅಗರ್ತಲಾದಲ್ಲಿ ಧರಣಿ ನಡೆಸಿದರು.
ಪ್ರತಿಭಟನೆಯ ನೇತೃತ್ವವನ್ನು ಟಿಎಂಸಿ ವಕ್ತಾರ ಕುನಾಲ್ ಘೋಷ್ ವಹಿಸಿಕೊಂಡಿದ್ದರು, ಅಗರ್ತಲಾದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವಾರು ಟಿಎಂಸಿ ಬೆಂಬಲಿತ ಕಾರ್ಮಿಕರು ಮತ್ತು ಕಾರ್ಯಕರ್ತರು ಇದ್ದರು.
ಅಭಿಷೇಕ್ ಬ್ಯಾನರ್ಜಿಯವರ ಬೆಂಗಾವಲಿನ ಮೇಲೆ ದಾಳಿ ನಡೆಸಿರುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವವರೆಗೂ ತಮ್ಮ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ, ಇದನ್ನು ಮುಂದುವರಿಸುವುದಾಗಿ ಟಿಎಂಸಿ ಹೇಳಿದೆ.
ತೃಣಮೂಲ ಕಾಂಗ್ರೆಸ್ ಅಗರ್ತಲಾದ ತ್ರಿಪುರಾ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಬುಧವಾರ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದೆ. ದೂರುದಾರರು ದಾಳಿಯ ವೀಡಿಯೊ ಪ್ರತಿಯನ್ನು ಲಗತ್ತಿಸಿದ್ದಾರೆ ಎಂದು ಹೇಳಲಾಗಿದೆ.
ಅಗರ್ತಲಾದಲ್ಲಿ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ಐ-ಪ್ಯಾಕ್ ತಂಡವನ್ನು ಬಂಧಿಸಿದ ವರದಿಯ ಮೇಲೆ ಪಶ್ಚಿಮ ಬಂಗಾಳ ಸಚಿವರಾದ ಬ್ರಾತ್ಯಾ ಬಸು, ಮೊಲಾಯ್ ಘಟಕ್ ಮತ್ತು ಸಂಸದ ಡೆರೆಕ್ ಒಬ್ರಿಯಾನ್ ಸೇರಿದಂತೆ ಟಿಎಂಸಿಯ ಪ್ರಮುಖ ನಾಯಕರು ತ್ರಿಪುರಕ್ಕೆ ಭೇಟಿ ನೀಡಿದ್ದರು.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಆರಾಮದಾಯಕ ಬಹುಮತದೊಂದಿಗೆ ಗೆದ್ದ ನಂತರ, ತೃಣಮೂಲ ಕಾಂಗ್ರೆಸ್ ಈಗ 2023 ರಲ್ಲಿ ನಡೆಸಲಿರುವ ತ್ರಿಪುರಾದ ಚುನಾವಣೆ ಮೇಲೆ ಕಣ್ಣಿಟ್ಟಿದೆ.
ಇದನ್ನೂ ಓದಿ: ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷಕ್ಕೆ ಸೇರುವುದು ಖಚಿತವೇ? ಪಕ್ಷಕ್ಕೆ ಪಿಕೆ ನೀಡಿರುವ ಸಲಹೆಗಳೇನು?
ಪ್ರಸ್ತುತ ಬಿಜೆಪಿ ಈ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದು, ಅನೇಕ ವಿವಾದಾತ್ಮಕ ಹೇಳಿಕೆಗಳಿಂದ ಇಲ್ಲಿನ ಸಿಎಂ ಸದಾ ವಿವಾದದಲ್ಲಿ ಇರುವ ಮನುಷ್ಯ ಆದ ಕಾರಣ ಬೆಂಗಾಳ ಹೊರತಾಗಿ ಹೊರಗೆ ಕಾಲಿಡಲು ಹವಣಿಸುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ