ನವದೆಹಲಿ: ಚಿತ್ರ ನಿರ್ಮಾಪಕಿ (Film Producer), ನಟಿ (Actress) ಲೀನಾ ಮಣಿಮೇಕಲೈ (Leena Manimekalai) ಕಾಳಿ ದೇವಿಯ (Goddess Kaali) ಅವತಾರದಲ್ಲಿ ಸಿಗರೇಟ್ (cigarette) ಹಿಡಿದು ಕಾಣಿಸಿಕೊಂಡಿರುವ ವಿವಾದಿತ ಫೋಟೋ (Controversial Photo) ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಇದು ತಣ್ಣಗಾಗುವ ಮುನ್ನವೇ ಟಿಎಂಸಿ ಸಂಸದೆಯೊಬ್ಬರು (TMC MP) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಕಾಳಿ ಮಾತೆ ನನಗೆ ಮಾಂಸಹಾರ (Non Veg) ತಿನ್ನುವ, ಮದ್ಯ (Alcohol) ಕುಡಿಯುವ ದೇವತೆಯಂತೆ (God) ಕಾಣುತ್ತಾಳೆ” ಅಂತ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ (Mahua Moitra) ಹೇಳಿದ್ದಾರೆ. ಖಾಸಗಿ ಸುದ್ದಿ ವಾಹಿನಿಯೊಂದರ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಮ್ಮ ದೇವತೆ ಬಗ್ಗೆ ಊಹಿಸಿಕೊಳ್ಳುವ ಸ್ವಾತಂತ್ರ್ಯ ನಮಗಿದೆ. ಅದಕ್ಕೆ ಯಾರೂ ಸಹ ಆಕ್ಷೇಪ ವ್ಯಕ್ತಪಡಿಸಬಾರದು ಅಂತ ಮಹುವಾ ಮೊಯಿತ್ರಾ ಹೇಳಿದ್ದಾರೆ.
ದೇವರಿಗೆ ವಿಸ್ಕಿ ಅರ್ಪಿಸಲಾಗುತ್ತದೆ
ಕೆಲವೊಂದು ಸ್ಥಳಗಳಲ್ಲಿ ದೇವರಿಗೆ ವಿಸ್ಕಿ ಅರ್ಪಣೆ ಮಾಡಲಾಗುತ್ತದೆ. ಜೊತೆಗೆ ಕೆಲವೊಂದು ಪ್ರದೇಶಗಳಲ್ಲಿ ಮಾಂಸ ಕೂಡ ನೈವೇದ್ಯ ರೀತಿಯಲ್ಲಿ ದೇವರಿಗೆ ನೀಡಲಾಗುತ್ತದೆ. ನನಗಂತೂ ಕಾಳಿ ಮಾತೆ ಮಾಂಸಹಾರ ತಿನ್ನುವ, ಮದ್ಯ ಕುಡಿಯುವ ದೇವತೆಯಂತೆ ಕಾಣುತ್ತಾಳೆ. ನಮ್ಮ ದೇವತೆ ಬಗ್ಗೆ ಊಹಿಸಿಕೊಳ್ಳುವ ಸ್ವಾತಂತ್ರ್ಯ ನಮಗಿದೆ. ಅದಕ್ಕೆ ಯಾರೂ ಸಹ ಆಕ್ಷೇಪ ವ್ಯಕ್ತಪಡಿಸಬಾರದು ಅಂತ ಹೇಳಿದ್ದಾರೆ.
“ಕಾಳಿ ಮಾತೆ ಮದ್ಯ ಸೇವಿಸುವ ದೇವತೆ”
ನೀವು ಸಿಕ್ಕಿಂ ಮತ್ತು ಭೂತಾನ್ಗೆ ಹೋದರೆ ಅಲ್ಲಿನ ಜನರು ಬೆಳಗ್ಗೆ ಪೂಜೆ ಮಾಡುವಾಗ ದೇವರಿಗೆ ವಿಸ್ಕಿ ನೀಡುತ್ತಾರೆ. ಆದರೆ, ಉತ್ತರ ಪ್ರದೇಶದಲ್ಲಿ ಅದನ್ನ ತಿರಸ್ಕಾರ ಮಾಡಲಾಗುತ್ತದೆ. ದೇವರನ್ನ ಪೂಜೆ ಮಾಡುವ ಸ್ವಾತಂತ್ರ್ಯ ಅವರ ಮೇಲೆ ಅವಲಂಬಿತವಾಗಿರುತ್ತದೆ. ನನ್ನ ಪ್ರಕಾರ ಕಾಳಿ ಮಾತೆ ಮದ್ಯ ಸೇವಿಸುವ ಹಾಗೂ ಮಾಂಸ ತಿನ್ನುವ ದೇವತೆಯಾಗಿದ್ದಾಳೆ ಎಂದು ಹೇಳಿಕೆ ನೀಡಿದ್ದಾರೆ. ಇದೀಗ ಸಂಸದೆ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Kaali Poster: ಕೆನಡಾದಲ್ಲಿ ಸಿಗರೇಟ್ ಸೇದುವ ಕಾಳಿಮಾತೆ ಪೋಸ್ಟರ್! ತಕ್ಷಣ ತೆಗೆಯುವಂತೆ ಭಾರತ ಸೂಚನೆ
ವಿವಾದ ಹುಟ್ಟುಹಾಕಿದ್ದ ಲೀನಾ
ಕವಯತ್ರಿ ಲೀನಾ ಮಣಿಮೇಕಲೈ ಅವರು ಕಾಳಿ ಎಂಬ ಸಾಕ್ಷ್ಯಚಿತ್ರ ನಿರ್ದೇಶಿಸಿದ್ದು, ಸಿಗರೇಟ್ ಸೇದುತ್ತಿರುವ ಕಾಳಿ ಮಾತೆಯ ಪೋಸ್ಟರ್ ಅನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು. ಒಂದೆಡೆ ಕಾಳಿ ಮಾತೆ ಸಿಗರೇಟ್ ಸೇದುತ್ತಿದ್ದರೆ, ಇನ್ನೊಂದು ಕೈಯಲ್ಲಿ ಎಲ್ ಜಿಬಿಟಿಕ್ಯೂ ಸಮುದಾಯದ ಧ್ವಜ ಹಿಡಿದಿರುವ ರೀತಿಯಲ್ಲಿ ಕಾಳಿ ಮಾತೆಯ ಅವತಾರವನ್ನು ಪೋಸ್ಟರ್ ನಲ್ಲಿ ಚಿತ್ರಿಸಿದ್ದರು. ಈ ಪೋಸ್ಟರ್ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅವರನ್ನು ಈ ಕೂಡಲೇ ಬಂಧಿಸಬೇಕೆಂದು ನೆಟ್ಟಿಗರು ಹಾಗೂ ವಿವಿಧ ಹಿಂದೂ ಪರ ಸಂಘಟನೆಗಳು ಒತ್ತಾಯಿಸಿಸಿದ್ದವು.
ಲೀನಾ ಮಣಿಮೇಕಲೈ ವಿರುದ್ಧ ಎಫ್ಐಆರ್
ಇದೀಗ ಲೀನಾ ಮಣಿಮೇಕಲೈ ವಿರುದ್ದ ದೂರು ದಾಖಲಾಗಿದೆ. ಜುಲೈ 4 ರಂದು ಹಜರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪಿತೂರಿ, ಪೂಜಾ ಸ್ಥಳದಲ್ಲಿ ಅಪರಾಧ, ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪ ಮತ್ತು ಚಲನಚಿತ್ರ ನಿರ್ಮಾಪಕರ ವಿರುದ್ಧ ಶಾಂತಿ ಕದಡುವ ಉದ್ದೇಶದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ: Explained: ನೂಪುರ್ ಶರ್ಮಾ ಮನವಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದ್ದೇಕೆ?
ವಕೀಲರಿಂದಲೂ ನಿರ್ದೇಶಕಿ ವಿರುದ್ಧ ದೂರು
ದೆಹಲಿಯ ವಕೀಲ ವಿನೀತ್ ಜಿಂದಾಲ್ ಅವರು ವಿವಾದಾತ್ಮಕ ಪೋಸ್ಟರ್‌ನ ಕುರಿತು ಚಲನಚಿತ್ರ ನಿರ್ಮಾಪಕರ ವಿರುದ್ಧ ದೂರು ದಾಖಲಿಸಿದರು, ಕೆನಡಾದ ಟೊರೊಂಟೊದಲ್ಲಿರುವ ಅಗಾ ಖಾನ್ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾದ ಆಕ್ಷೇಪಾರ್ಹ ಫೋಟೋ ಮತ್ತು ಸಾಕ್ಷ್ಯಚಿತ್ರದ ಕ್ಲಿಪ್ ಅನ್ನು ನಿಷೇಧಿಸುವಂತೆ ಒತ್ತಾಯಿಸಿದರು. ಗೌ ಮಹಾಸಭಾ ಸದಸ್ಯ ಅಜಯ್ ಗೌತಮ್ ಕೂಡ ಲೀನಾ ವಿರುದ್ಧ ದೂರು ದಾಖಲಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ