• Home
  • »
  • News
  • »
  • national-international
  • »
  • Mahua Moitra: ಪಪ್ಪು ಯಾರು ಅಂತ ಈಗ ಹೇಳಿ! ಬಿಜೆಪಿ ವಿರುದ್ಧ ಹರಿಹಾಯ್ದ ಸಂಸದೆ

Mahua Moitra: ಪಪ್ಪು ಯಾರು ಅಂತ ಈಗ ಹೇಳಿ! ಬಿಜೆಪಿ ವಿರುದ್ಧ ಹರಿಹಾಯ್ದ ಸಂಸದೆ

ಮಹುವಾ ಮೊಯಿತ್ರಾ

ಮಹುವಾ ಮೊಯಿತ್ರಾ

ಆರ್ಥಿಕತೆಯನ್ನು ಸರ್ಕಾರ ನಿರ್ವಹಿಸುತ್ತಿರುವ ಕುರಿತಾಗಿ ಪ್ರಶ್ನೆ ಎತ್ತಿದ ಸಂಸದೆ, "ಈಗ 'ಪಪ್ಪು' ಯಾರು?" ಎಂದು ರಾಹುಲ್ ಗಾಂಧಿ ಅವರನ್ನು ಲೇವಡಿ ಮಾಡುತ್ತಿರುವ ಬಿಜೆಪಿಯನ್ನು ವ್ಯಂಗ್ಯವಾಡಿದ್ದಾರೆ.

  • Share this:

ಕೈಗಾರಿಕಾ ಬೆಳವಣಿಗೆಯ ದತ್ತಾಂಶಗಳನ್ನು ಉಲ್ಲೇಖಿಸಿ ತನ್ನ ಪ್ರಗತಿ ಬಗ್ಗೆ ವರದಿ ಮಂಡಿಸಿರುವ ಕೇಂದ್ರದ ವಿರುದ್ಧ ಸಂಸದೆಯೊಬ್ಬರು ಲೋಕಸಭೆಯಲ್ಲಿ ಗುಡುಗಿದ್ದಾರೆ. ಬಿಜೆಪಿ ಸರ್ಕಾರ ಅಸಮರ್ಥವಾಗಿದೆ ಎಂದು ಸರ್ಕಾರದ ವಿರುದ್ಧ ಟೀಕೆಗಳ ಸುರಿಮಳೆಗೈದ ತೃಣಮೂಲ ಕಾಂಗ್ರೆಸ್ ಸಂಸದೆ (Congress MP) ಮಹುವಾ ಮೊಯಿತ್ರಾ (Mahua Moitra)  ಬಿಜೆಪಿಯ ಪ್ರತಿ ತಪ್ಪುಗಳಿಗೂ "ಈಗ ಹೇಳಿ ನಿಜವಾದ ಪಪ್ಪು ಯಾರು?" ಎಂಬ ಮಾತಿನೊಂದಿಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 2022-23ರ ಹೆಚ್ಚುವರಿ ಅನುದಾನದ ಬೇಡಿಕೆಗಳ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ ಮೊಯಿತ್ರಾ, "ಈ ಸರ್ಕಾರ ಮತ್ತು ಆಡಳಿತ ಪಕ್ಷವು ಪಪ್ಪು ಎಂಬ ಪದವನ್ನು ಸೃಷ್ಟಿಸಿದೆ. ನೀವು ಅದನ್ನು ನಿಂದಿಸಲು ಮತ್ತು ಅಸಮರ್ಥತೆಯನ್ನು ಸೂಚಿಸಲು ಬಳಸುತ್ತೀರಿ. ಆದರೆ ಅಂಕಿ ಅಂಶಗಳು ನಿಜವಾದ ಪಪ್ಪು (Pappu) ಯಾರು ಎಂಬುದನ್ನು ಹೇಳುತ್ತಿವೆ" ಎಂದಿದ್ದಾರೆ.


ಆರ್ಥಿಕತೆಯನ್ನು ಸರ್ಕಾರ ನಿರ್ವಹಿಸುತ್ತಿರುವ ಕುರಿತಾಗಿ ಪ್ರಶ್ನೆ ಎತ್ತಿದ ಸಂಸದೆ, "ಈಗ 'ಪಪ್ಪು' ಯಾರು?" ಎಂದು ರಾಹುಲ್ ಗಾಂಧಿ ಅವರನ್ನು ಲೇವಡಿ ಮಾಡುತ್ತಿರುವ ಬಿಜೆಪಿಯನ್ನು ವ್ಯಂಗ್ಯವಾಡಿದ್ದಾರೆ.


ಆಡಳಿತ ಪಕ್ಷದ ಅಸಮರ್ಥತೆ
ಬಜೆಟ್ ಅಂದಾಜಿಗಿಂತಲೂ ಹೆಚ್ಚುವರಿ ನಿಧಿಯಾಗಿ 4.36 ಲಕ್ಷ ಕೋಟಿ ಅಗತ್ಯವಿದೆ ಎಂದು ಸರ್ಕಾರ ಹೇಳಿದೆ. ಇದು ಬಜೆಟ್‌ನಲ್ಲಿನ ನಿಬಂಧನೆಗಿಂತ ವಿತ್ತೀಯ ಕೊರತೆಯನ್ನು ಹೆಚ್ಚಿಸಲಿದೆ ಎಂದು ಹೇಳಿದ ಅವರು ಇದು ಆಡಳಿತ ಪಕ್ಷದ ಅಸಮರ್ಥತೆಗೆ ಹಿಡಿದ ಕನ್ನಡಿ ಎಂದಿದ್ದಾರೆ.


ಸುಳ್ಳು ಮಾಹಿತಿ ನೀಡುತ್ತಿದೆ ಬಿಜೆಪಿ ಸರ್ಕಾರ - ಮೊಯಿತ್ರಾ
ಸೋಮವಾರ ಬಿಡುಗಡೆಯಾದ NSO ಸಂಖ್ಯೆಗಳ ಪ್ರಕಾರ, ದೇಶದ ಕೈಗಾರಿಕಾ ಫಲಿತಾಂಶವು ಅಕ್ಟೋಬರ್‌ನಲ್ಲಿ 4% ಕುಸಿದಿದ್ದು, ಇದು 26 ತಿಂಗಳಲ್ಲಿಯೇ ಕನಿಷ್ಠ ಮಟ್ಟದ್ದಾಗಿದೆ.


ಈಗಲೂ ಅತಿದೊಡ್ಡ ಉದ್ಯೋಗ ಸೃಷ್ಟಿ ಮಾಡುತ್ತಿರುವ ಉತ್ಪಾದನಾ ವಲಯ ಕೂಡ ಶೇ 5.6ರಷ್ಟು ಕುಸಿತ ಕಂಡಿದೆ. ಮತ್ತು ವಿದೇಶೀ ವಿನಿಮಯ ಸಂಗ್ರಹವು ಕೇವಲ ಒಂದು ವರ್ಷದೊಳಗೆ $ 72 ಶತಕೋಟಿಗಳಷ್ಟು ಕುಸಿದಿದೆ.


ಆದಾಗ್ಯೂ ಕೇಂದ್ರ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ 17% ಹೆಚ್ಚಾಗಿದೆ ಎಂದು ಬೆಳವಣಿಗೆ ದರಗಳನ್ನು ದಾಖಲಿಸಿದೆ. ಈ ಮೂಲಕ ಸುಳ್ಳು ಮಾಹಿತಿಯನ್ನು ಕೇಂದ್ರ ರವಾನಿಸುತ್ತಿದೆ ಎಂದು ಮೊಯಿತ್ರಾ ಹೇಳಿದ್ದಾರೆ.


"ಭಾರತೀಯ ಪೌರತ್ವ ತ್ಯಜಿಸಿದ್ದು  12.5 ಲಕ್ಷ ಜನ"
2022ರ ಮೊದಲ ಹತ್ತು ತಿಂಗಳಲ್ಲಿ ಸುಮಾರು 2 ಲಕ್ಷ ಜನರು ತಮ್ಮ ಭಾರತೀಯ ಪೌರತ್ವ ತ್ಯಜಿಸಿದ್ದಾರೆ ಎಂದು ಲೋಕಸಭೆಯಲ್ಲಿ ಶುಕ್ರವಾರ ಸರ್ಕಾರ ಪ್ರಶ್ನೆಯೊಂದಕ್ಕೆ ಉತ್ತರ ನೀಡಿತ್ತು.


ಸರ್ಕಾರವು ಹಂಚಿಕೊಂಡ ಡೇಟಾದ ಬಗ್ಗೆಯೂ ಮಾತನಾಡಿದ ಸಂಸದೆ "2022ರಲ್ಲಿನ ವಲಸೆಯು, 2014ರಿಂದ ಕಳೆದ 9 ವರ್ಷಗಳಲ್ಲಿ ಈ ಸರ್ಕಾರದ ಅಡಿಯಲ್ಲಿ ಭಾರತೀಯ ಪೌರತ್ವ ತ್ಯಜಿಸಿದ ಸಂಖ್ಯೆಯನ್ನು 12.5 ಲಕ್ಷವನ್ನು ಮೀರಿಸಿದೆ. ಇದು ಆರೋಗ್ಯಕರ ಆರ್ಥಿಕ ವಾತಾವರಣ ಅಥವಾ ಆರೋಗ್ಯ ತೆರಿಗೆ ಪರಿಸರದ ಸಂಕೇತವೇ? ಈಗ ಪಪ್ಪು ಯಾರು ಹೇಳಿ?" ಎಂದು ಈ ಸಮಸ್ಯೆಯನ್ನು ಉಲ್ಲೇಖಿಸಿ ವ್ಯಂಗ್ಯವಾಗಿ ಸಭೆಯಲ್ಲಿ ಪ್ರಶ್ನಿಸಿದ್ದಾರೆ.


"ಶಾಸಕರ ಖರೀದಿಗೆ ನೂರಾರು ಕೋಟಿ ವ್ಯಯ"
ಟಿಎಂಸಿ ಸಂಸದೆ ತಮ್ಮ ಪಕ್ಷ ಸೇರಿದಂತೆ ವಿರೋಧ ಪಕ್ಷದ ನಾಯಕರ ವಿರುದ್ಧ ಜಾರಿ ನಿರ್ದೇಶನಾಲಯದಂತಹ ಸರ್ಕಾರಿ ಸಂಸ್ಥೆಗಳು ಆರಂಭಿಸಿದ ತನಿಖೆಗಳ ಬಗ್ಗೆಯೂ ಪ್ರಶ್ನಿಸಿದರು.


"ಆಡಳಿತ ಪಕ್ಷವು ಶಾಸಕರನ್ನು ಖರೀದಿಸಲು ನೂರಾರು ಕೋಟಿ ರೂಪಾಯಿ ವ್ಯಯ ಮಾಡುತ್ತಿದೆ. ಆದರೂ ವಿರೋಧ ಪಕ್ಷದ ಶೇ 95ರಷ್ಟು ಸಂಸದರು ಜಾರಿ ನಿರ್ದೇಶನಾಲಯದ ದಾಳಿಗೆ ಒಳಗಾಗುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.


ಈಗ ಪಪ್ಪು ಯಾರು?
ಕೇವಲ ನಾಗರಿಕರಿಗೆ ಕಿರುಕುಳ ನೀಡುವುದು ಅಥವಾ ಆರ್ಥಿಕ ಅಪರಾಧಗಳ ಅಪರಾಧಿಗಳನ್ನು ಪತ್ತೆಹಚ್ಚುವುದು ಮತ್ತು ಶಿಕ್ಷಿಸುವುದು ED ಯ ಉದ್ದೇಶವಾಗಿದೆಯೇ? ಈ ಅಸಮರ್ಥತೆಯ ಮಟ್ಟ ಏನು? ಈಗ ಪಪ್ಪು ಯಾರು?" ಎಂದು ಮೊಯಿತ್ರಾ ಪ್ರಶ್ನಿಸಿದ್ದಾರೆ.


ಹೆಚ್ಚುತ್ತಿರುವ ರಸಗೊಬ್ಬರ ಸಬ್ಸಿಡಿ ವಿನಂತಿಗಳ ಸಮಸ್ಯೆ ಬಗ್ಗೆ ಪ್ರಶ್ನೆ ಎತ್ತಿದ ಅವರು "ಮಣ್ಣು, ಉತ್ಪಾದಕತೆ ಮತ್ತು ಆರೋಗ್ಯವನ್ನು ಹಾಳು ಮಾಡುತ್ತಿರುವ ಯೂರಿಯಾದ ಅತಿಯಾದ ಬಳಕೆಯನ್ನು ತಡೆಯಲು ಸರ್ಕಾರ ಏನು ಮಾಡಿದೆ" ಎಂದು ಕೇಳಿದರು.


"ಬಿಜೆಪಿ ಅಧ್ಯಕ್ಷರಿಗೇ ತಮ್ಮ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲು ಆಗಿಲ್ಲ"
ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಇತ್ತೀಚಿನ ಅಸೆಂಬ್ಲಿ ಚುನಾವಣೆಗಳು ಮತ್ತು ದೆಹಲಿ ನಾಗರಿಕ ಚುನಾವಣೆಗಳ ಬಗ್ಗೆಯೂ ಮಾತನಾಡಿದ ಮೊಯಿತ್ರಾ ಬಿಜೆಪಿಯ ರಾಜಕೀಯ ನಾಯಕತ್ವದ ಬಗ್ಗೆ ವ್ಯಂಗ್ಯವಾಡಿದರು.


ಆಡಳಿತ ಪಕ್ಷದ ಅಧ್ಯಕ್ಷರಿಗೇ ತಮ್ಮ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳುವುದು ಸಾಧ್ಯವಾಗಿಲ್ಲ "ಈಗ ಪಪ್ಪು ಯಾರು ಹೇಳಿ?" ಎಂದು ಪ್ರಶ್ನಿಸಿದ್ದಾರೆ.


ನೋಟು ಬ್ಯಾನ್ ಪ್ರಯೋಜನಗಳ ಬಗ್ಗೆಯೂ ಸುಳ್ಳು ಮಾಹಿತಿ ನೀಡುತ್ತಿದೆ
ಆಡಳಿತ ಪಕ್ಷವು ನೋಟು ಅಮಾನ್ಯೀಕರಣದ ಪ್ರಯೋಜನಗಳ ಬಗ್ಗೆಯೂ ಸುಳ್ಳು ಮಾಹಿತಿ ನೀಡುತ್ತಿದೆ ಎಂದು ಮೊಯಿತ್ರಾ ಆರೋಪಿಸಿದರು. ಸರ್ಕಾರ ನಗದು ರಹಿತ ಡಿಜಿಟಲ್ ಆರ್ಥಿಕತೆ ಅಥವಾ ನಕಲಿ ಕರೆನ್ಸಿಯನ್ನು ಹಂತಹಂತವಾಗಿ ಹೊರಹಾಕುವಂತಹ ಯಾವುದೇ ಗುರಿಗಳನ್ನು ಸಾಧಿಸಿಲ್ಲ. ನೋಟು ಅಮಾನ್ಯೀಕರಣವು ತಾನು ಅಂದುಕೊಂಡ ಯಾವುದೇ ಉದ್ದೇಶಗಳನ್ನು ತಲುಪಲಿಲ್ಲ ಎಂದು ಕಿಡಿ ಕಾರಿದ್ದಾರೆ. ‌


ಇದನ್ನೂ ಓದಿ: Jharkhand: ಲಿವ್ ಇನ್‌ನಲ್ಲಿದ್ದ ಮತ್ತೊಬ್ಬ ಯುವತಿಯ ದುರಂತ ಅಂತ್ಯ: ಪ್ರೇಮಿ, ಆತನ ಪೋಷಕರು ಅರೆಸ್ಟ್​!


ಭಾರತದ ಆರ್ಥಿಕ ಪ್ರಗತಿ ಬಗ್ಗೆ ಕೇಂದ್ರ ಸುಳ್ಳುಗಳನ್ನು ಹರಡುತ್ತಿದೆ ಎಂದು ಆರೋಪಿಸಿದ ಮೊಯಿತ್ರಾ, ಆರ್ಥಿಕತೆಯನ್ನು ನಿಯಂತ್ರಣಕ್ಕೆ ಪಡೆದುಕೊಳ್ಳುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದಾರೆ.


ಮೊಯಿತ್ರಾ ಮಾತಿಗೆ ವಿರೋಧ ಪಕ್ಷಗಳು ಜೋರಾಗಿ ಬೆಂಚು ಬಡಿದು ಬೆಂಬಲವನ್ನು ಸೂಚಿಸಿದವು. ಈ ಮಧ್ಯೆ ಮೊಯಿತ್ರಾ “ಸವಾಲ್ ಯೇ ನಹಿಂ ಕಿ ಬಸ್ತಿಯಾನ್ ಕಿಸ್ನೆ ಜಲಾಯಿ. ಸವಾಲ್ ಯೇ ಹೈ ಕಿ ಪಾಗಲ್ ಕೀ ಹಾಥ್ ಮೇ ಮಾಚಿಸ್ ಕಿಸ್ನೆ ದಿ ಎಂಬ ಎರಡು ಸಾಲಿನ ಪದ್ಯವನ್ನು ಉಚ್ಛರಿಸಿದರು.


ಇದನ್ನೂ ಓದಿ: Uttar Pradesh: ದೇಗುಲದಲ್ಲಿ ಭಿಕ್ಷೆ ಬೇಡುತ್ತಿದ್ದ ಮಗುವಿನ ಅದೃಷ್ಟವೇ ಬದಲು, ದಿನ ಬೆಳಗಾಗೋದ್ರಲ್ಲಿ ಕೋಟ್ಯಾಧಿಪತಿ!


ಇಲ್ಲಿ ಬೆಂಕಿ ಹೊತ್ತಿಸಿದವರು ಯಾರು ಎಂಬ ಪ್ರಶ್ನೆಯಲ್ಲ, ಹುಚ್ಚನಿಗೆ ಬೆಂಕಿಪೆಟ್ಟಿಗೆಯನ್ನು ಕೊಟ್ಟವರು ಯಾರು ಎಂಬುದು ಪ್ರಶ್ನೆ? ಎಂದು ಬಿಜೆಪಿ ಸರ್ಕಾರದ ವಿರುದ್ಧ ಅವರು ಖಾರವಾಗಿಯೇ ಟೀಕೆ ಮಾಡಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: