ರಾಜ್ಯಸಭೆಯಿಂದ ಟಿಎಂಸಿ ಸಂಸದ ಡೆರೆಕ್​ ಒಬ್ರಿಯನ್​ ಅಮಾನತು

ರಾಜ್ಯಸಭೆಯ ನಿಯಮ ಪುಸ್ತಕವನ್ನು ಅಧ್ಯಕ್ಷರ ಮೇಲೆ ಎಸೆದ ಆರೋಪದ ಮೇಲೆ ಈ ಅಮಾನತು ಮಾಡಲಾಗಿದೆ

ಡೆರೆಕ್​ ಒಬ್ರಿಯನ್

ಡೆರೆಕ್​ ಒಬ್ರಿಯನ್

 • Share this:
  ನವದೆಹಲಿ (ಡಿ. 21):  ಸಂಸತ್ ಸದನದಲ್ಲಿ ಅಶಿಸ್ತಿನ ವರ್ತನೆಗಾಗಿ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒಬ್ರಿಯನ್ (TMC MP Derek O'Brien)​ ಅವರನ್ನು ಚಳಿಗಾಲದ ಅಧಿವೇಶನದ (Winter Session) ಉಳಿದ ಭಾಗಕ್ಕೆ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ. ಒಬ್ರಿಯನ್​ ಅವರು ರಾಜ್ಯಸಭೆಯ (Rajyasabha) ನಿಯಮ ಪುಸ್ತಕವನ್ನು ಅಧ್ಯಕ್ಷರ ಮೇಲೆ ಎಸೆದ ಆರೋಪದ ಮೇಲೆ ಈ ಅಮಾನತು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಟಿಎಂಸಿ ಸಂಸದರು ಆದೇಶದ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಉಪಸಭಾಪತಿಯವರು ಸರಿಯಾಗಿ ಪ್ರತಿಕ್ರಿಯಿಸಿದರು, ಸ್ವಲ್ಪ ಸಮಯದ ನಂತರ, ಒಬ್ರಿಯನ್ ನಿಯಮ ಪುಸ್ತಕವನ್ನು ಅಧ್ಯಕ್ಷರ ಕಡೆಗೆ ಎಸೆದರು, ಇದನ್ನು ಸಿಸ್ಮ ಪತ್ರಾ ಗಮನಿಸಿದರು.

  ಈ ಸಂಬಂಧ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರು ಮಂಡಿಸಿದ ಪ್ರಸ್ತಾವನೆಯನ್ನು ಸದನವು ಅಂಗೀಕರಿಸಿತು, ಬಳಿಕ ಒಬ್ರಿಯನ್​ ಅವರನ್ನು ಅಮಾನತುಗೊಳಿಸಲಾಯಿತು.

  ಟ್ವೀಟ್​ ಮಾಡಿದ ಡೆರೆಕ್​ ಒಬ್ರಿಯನ್​

  ಇನ್ನು ಈ ಕುರಿತು ಟ್ವೀಟ್​ ಮೂಲಕ ತಿಳಿಸಿರುವ ಒಬ್ರಿಯನ್​ ಅವರು, ಸಂಸತ್​ನ್ನು ಅಪಹಾಸ್ಯ ಮಾಡುವ ಮತ್ತು ಚುನಾವಣಾ ಕಾನೂನುಗಳ ಮಸೂದೆ 2021ಅನ್ನು ಅಂಗೀಕರಿಸುತ್ತಿರುವವಾಗ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಅಮಾನತುಗೊಳಿಸಲಾಗಿದೆ. ಈ ಮಸೂದೆ ಕೂಡ ಶೀಘ್ರದಲ್ಲೇ ರದ್ದಾಗಲಿದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ. ಅಷ್ಟೇ ಅಲ್ಲದೇ ಮೇಲ್ಮನೆಯಲ್ಲಿ ಚರ್ಚೆ ನಡೆಯುವ ವಿಡಿಯೋವನ್ನು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
  ಸಂಸತ್ತಿನ ಸದಸ್ಯರನ್ನು ಅಮಾನತುಗೊಳಿಸುವುದು ಹೊಸ ಸಾಮಾನ್ಯವಾಗಿದೆ ಆದರೆ ಸರ್ವಾಧಿಕಾರದಿಂದ ನಾವು ಇನ್ನೇನು ನಿರೀಕ್ಷಿಸಬಹುದು ಎಂದು ಟಿಎಂಸಿ ರಾಜ್ಯ ಸಭಾ ಸುಸ್ಮಿತ ದೇವ ಟೀಕಿಸಿದ್ದಾರೆ.  ಮತದಾರರ ಚೀಟಿಗೆ ಆಧಾರ್ ಲಿಂಕ್​  ಮಸೂದೆಗೆ ವಿಪಕ್ಷಗಳ ವಿರೋಧ

  ಸಂಸತ್ತು ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆ, 2021 ಅನ್ನು ಅಂಗೀಕರದ ವೇಳೆ ಕೂಡ ಪ್ರತಿಪಕ್ಷಗಳ ವಾಕ್‌ಔಟ್ ನಡೆಸಿದವು. ಈ ಪ್ರತಿಭಟನೆ ನಡುವೆಯೇ ರಾಜ್ಯಸಭೆಯು ಧ್ವನಿ ಮತದ ಮೂಲಕ ಈ ಮಸೂದೆಯನ್ನು ಅಂಗೀಕರಿಸಿತು. ಈ ಮಸೂದೆ ನಕಲಿ ಮತದಾರರನ್ನು ಮತದಾರರ ಪಟ್ಟಿ ತಡೆಯಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

  ಇದನ್ನು ಓದಿ: ಮಹಿಳಾ ಮತದಾರರ ಓಲೈಕೆ: ಸ್ವ ಸಹಾಯ ಗುಂಪುಗಳಿಗೆ 1000 ಕೋಟಿ ರೂ ಹಣ ವರ್ಗಾವಣೆ ಮಾಡಿದ ಪ್ರಧಾನಿ

  ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸುವ ಪ್ರಸ್ತಾವನೆಯನ್ನು ಮಂಡಿಸಿದ್ದರಿಂದ ವಿರೋಧ ಪಕ್ಷಗಳು ಮತಗಳ ವಿಭಜನೆಗೆ ಒತ್ತಾಯಿಸುತ್ತಿದ್ದವು, ಧ್ವನಿ ಮತದ ಮೂಲಕ ತಿರಸ್ಕರಿಸಲಾಯಿತು. ಈ ನಡೆ ವಿರುದ್ಧ ವಿರೋಧ ಪಕ್ಷಗಳಾದ ಕಾಂಗ್ರೆಸ್, ಟಿಎಂಸಿ, ಎಡಪಕ್ಷಗಳು, ಡಿಎಂಕೆ ಮತ್ತು ಎನ್‌ಸಿಪಿ ಸದಸ್ಯರು ಪ್ರತಿಭಟಿಸಿ ಸದನದಿಂದ ಹೊರನಡೆದರು.

  ಈಗಾಗಲೇ 12 ಸದಸ್ಯರ ಅಮಾನತು
  ಇನ್ನು ಈ ಬಾರಿ ಅಧಿವೇಶನದಲ್ಲಿ ರಾಜ್ಯಸಭೆಯ ಸದಸ್ಯರನ್ನು ಅಮಾನತುಗೊಳಿಸುತ್ತಿರುವುದು ಇದು ಎರಡನೇ ಬಾರಿ ಆಗಿದೆ. ಚಳಿಗಾಲ ಅಧಿವೇಶನದ ಮೊದಲ ದಿನ ಕೂಡ 12 ಸಂಸದರನ್ನು ಅಧಿವೇಶನದಿಂದ ಅಮಾನತುಗೊಳಿಸಲಾಗಿತ್ತು.'

  ಇದನ್ನು ಓದಿ: ಅಶಿಸ್ತಿನ ವರ್ತನೆ ತೋರಿದ್ದ 12 Rajya Sabha Members Suspended; ನಾಳೆ ಕ್ಷಮೆಯಾಚನೆ ಸಾಧ್ಯತೆ

  ಅಮಾನತುಗೊಂಡ ಸಂಸದರು

  ಅಖಿಲೇಶ್ ಪ್ರಸಾದ್ ಸಿಂಗ್, ಫುಲೋ ದೇವಿ ನೇತಮ್, ಸೈಯದ್ ನಾಸೀರ್ ಹುಸೇನ್, ಛಾಯಾ ವರ್ಮಾ, ರಾಜಮಣಿ ಪಟೇಲ್ ಮತ್ತು ಕಾಂಗ್ರೆಸ್‌ನ ರಿಪುನ್ ಬೋರಾ, ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ, ಅನಿಲ್ ದೇಸಾಯಿ, ಸಿಪಿಐ-ಎಂನ ಎಲಮರಮ್ ಕರೀಂ, ಸಿಪಿಐನ ಬಿನೋಯ್ ವಿಶ್ವಂ ಮತ್ತು ತೃಣಮೂಲ ಕಾಂಗ್ರೆಸ್‌ನ ಡೋಲಾ ಸೇನ್ ಮತ್ತು ಶಾಂತಾ ಛೆಟ್ರಿ ಅವರನ್ನು ಅಮಾನತುಗೊಳಿಸಲಾಗಿದೆ.

  ಅಮಾನತಿಗೆ ಕಾರಣ

  ಆಗಸ್ಟ್​​ 11ರಂದು ಮುಂಗಾರು ಅಧಿವೇಶನದಲ್ಲಿ ಮೂರು ಕೃಷಿ ಮಸೂದೆಗಳ ವಿರುದ್ಧ ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾಗ ರಾಜ್ಯಸಭೆಯು ಅಸಭ್ಯ ವರ್ತನೆಗೆ ಸಾಕ್ಷಿಯಾಗಿತ್ತು. ಈ ಸಂಬಂಧ ಈಗ ಚಳಿಗಾಲದ ಅಧಿವೇಶನದಲ್ಲಿ ಕ್ರಮ ಕೈಗೊಳ್ಳಲಾಗಿದೆ.
  Published by:Seema R
  First published: