ಕೊಲ್ಕತ್ತಾ (ಆ. 26): ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ, ಬಂಗಾಳಿ ನಟಿ ನುಸ್ರತ್ ಜಹಾನ್ (Nusrat Jahan) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇಂದು ಮಧ್ಯಾಹ್ನ ಕೊಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಅವರು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬುಧವಾರ ಆಸ್ಪತ್ರೆಗೆ ದಾಖಲಾಗುವ ಮುನ್ನ ಅವರು ಟ್ವಿಟರ್ನಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದರು. ಸಾಮಾನ್ಯ ಚೆಕ್ಅಪ್ಗಾಗಿ ನಿನ್ನೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಅವರಿಗೆ ಹೆರಿಗೆಯಾಗಿದೆ. ನುಸ್ರತ್ ಜಹಾನ್ ತಾಯಿಯಾದ ಬಳಿಕ ಅವರ ಮದುವೆ ಹಾಗೂ ಖಾಸಗಿ ವಿಚಾರಗಳು ಸಾಕಷ್ಟು ಟೀಕೆಗೆ ಗುರಿಯಾಗಿದ್ದವು.
ಸಂಸದೆಯ ಹೆಸರು ಈಗ ಖ್ಯಾತ ಬಂಗಾಳಿ ನಟ ಯಶ್ ದಾಸ್ ಗುಪ್ತಾ (bengali Actor Yash das Gupta) ಅವರ ಹೆಸರಿನ ಜತೆ ತಳುಕು ಹಾಕಿಕೊಂಡಿದೆ. ಅಷ್ಟೇ ಅಲ್ಲದೇ, ಗರ್ಭಿಣಿಯಾಗಿರುವ ಸಂಸದೆಯಾಗಿರುವ ಅವರ ಮಗು ನಿಖಿಲ್ ಜೈನ್ (nikhil Jain) ಅವರದು ಅಲ್ಲ ಎಂಬ ಆಪಾದನೆಗಳು ಕೇಳಿ ಬಂದಿತು. ನುಸ್ರತ್ ಮಾತ್ರ ನಟ ಯಶ್ ದಾಸ್ ಗುಪ್ತಾ ವಿಚಾರವಾಗಿ ಯಾವುದೇ ಹೇಳಿಕೆಗಳನ್ನು ನೀಡಿರಲಿಲ್ಲ.
ಇನ್ನು ಇವರ ಇಬ್ಬರ ಸಂಬಂಧದ ಬಗ್ಗೆ ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್ (Taslima nasreen) ಮಾಡಿದ್ದ ಟ್ವೀಟ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಗರ್ಭಿಣಿಯಾಗಿದ್ದಾರೆ ಎನ್ನಲಾಗುತ್ತಿರುವ ನುಸ್ರತ್ ಜಹಾನ್ ಅವರು ತಮ್ಮ ಮಗುವನ್ನು ತಮ್ಮ ಐಡೆಂಟಿಟಿಯಿಂದಲೇ ಬೆಳೆಸಬಹುದು. ಅದಕ್ಕೆ ಅಪ್ಪನ ಆಸರೆ ಬೇಕೆಂದಿಲ್ಲ. ಸ್ಥಿರತೆ ಇಲ್ಲದ ಸಂಬಂಧದಲ್ಲಿ ಉಳಿಯುವುದರಲ್ಲಿ ಯಾವುದೇ ಅರ್ಥ ಇಲ್ಲ. ನುಸ್ರತ್ ಜಹಾನ್ ಯಶ್ ಅವರನ್ನು ಪ್ರೀತಿಸುತ್ತಿದ್ದರೆ ನಿಖಿಲ್ ಅವರಿಂದ ವಿಚ್ಚೇದನ ಪಡೆಯುವುದು ಸೂಕ್ತ. ನಿಖಿಲ್ ಹಾಗೂ ನುಸ್ರತ್ ಈ ದಾಂಪತ್ಯದಲ್ಲಿ ಇರಲು ಬಯಸದಿದ್ದರೆ, ದೂರವಾಗುವುದೇ ಒಳ್ಳೆಯದು ಎಂದಿದ್ದರು ತಸ್ಲೀಮಾ ನಸ್ರೀನ್.
ಇದನ್ನು ಓದಿ: ಕಬ್ಬಾಳು ಅರಣ್ಯದಲ್ಲಿ ಕಬೀರನ ಸಾವು, ಕಣ್ಣೀರಿಟ್ಟ ಅಧಿಕಾರಿಗಳು, ಜನಸಾಮಾನ್ಯರು
ಸ್ಟಾರ್ ಸಂಸದೆಯಾಗಿರುವ ನುಸ್ರತ್ ಜಹಾನ್ 2019ರಲ್ಲಿ ಉದ್ಯಮಿ ನಿಖಿಲ್ ಜೈನ್ ಅವರನ್ನು ಟರ್ಕಿಯಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಆದರೆ, ಕಳೆದ ಒಂದು ವರ್ಷದಿಂದ ಅವರ ವಿವಾಹದಲ್ಲಿ ಬಿರುಕು ಮೂಡಿದ್ದು, ಕಳೆದ ನವಂಬರ್ನಲ್ಲಿ ಈ ದಂಪತಿ ದೂರಾಗಿದ್ದಾರೆ. ಈ ಬಗ್ಗೆ ಕಳೆದ ನಾಲ್ಕು ದಿನಗಳ ಹಿಂದೆ ಬಹಿರಂಗಗೊಂಡಿತ್ತು. ಈ ಬಗ್ಗೆ ಅಧಿಕೃತವಾಗಿ ಮಾತನಾಡಿದ್ದ ನುಸ್ರತ್, ನಮ್ಮ ಮದುವೆ ವಿಶೇಷ ವಿವಾಹ ಕಾಯ್ದೆ ಅಡಿ ಬರಲಿದ್ದು, ಭಾರತದಲ್ಲಿ ಇದಕ್ಕೆ ಮಾನ್ಯತೆ ಇಲ್ಲ. ಕಾನೂನಿನ ಪ್ರಕಾರ ಅದು ಮದುವೆಯೇ ಅಲ್ಲ, ಆದರೆ, ನಮ್ಮದು ಲೀವಿಂಗ್ ರಿಲೇಷನ್ಶಿಪ್ ಎಂದಿದ್ದಾರೆ
ನಿಖಿಲ್ ಜೈನ್ ವಿರುದ್ಧ ಆರೋಪಿಸಿದ್ದ ನುಸ್ರತ್ ಆಕೆಯ ಒಡವೆ, ವಸ್ತ್ರಗಳನ್ನು ಅಕ್ರವಾಗಿ ಅವರ ಕುಟುಂಬ ಪಡೆದಿತ್ತು, ನಿಖಿಲ್ ತಮ್ಮ ಬ್ಯಾಂಕ್ ಖಾತೆಯನ್ನು ಅಕ್ರಮವಾಗಿ ಬಳಸಿದ್ದಾರೆ. ತಮ್ಮ ಖಾತೆಯಲ್ಲಿನ ಹಣವನ್ನು ಅಕ್ರಮ ಬಳಕೆ ಮಾಡಿದ ಕಾರಣ ಬ್ಯಾಂಕ್ ಗಳ ನೋಟಿಸ್ನ್ನು ನಾನು ಎದುರಿಸಿದ್ದೇನೆ. ಇದಕ್ಕೆ ಪುರಾವೆಗಳು ತನ್ನ ಬಳಿ ಇವೆ ಎಂದು ತಮ್ಮ ಗಂಡನ ಬಗ್ಗೆ ದೂರಿದ್ದರು.
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ