HOME » NEWS » National-international » TMC MAMATA BANERJEE SEEKS AMIT SHAH RESIGNATION OVER FIRING BY CENTRAL FORCES AT SITALKUCHI SESR

Mamata Banerjee: ಕೊಚ್​ಬೆಹಾರ್​​ ಗುಂಡಿನ ದಾಳಿ: ಅಮಿತ್​ ಶಾ ರಾಜೀನಾಮೆಗೆ ಮಮತಾ ಬ್ಯಾನರ್ಜಿ ಆಗ್ರಹ

ಬಿಜೆಪಿ ಜನಾದೇಶ ಪಡೆಯುವಲ್ಲಿ ವಿಫಲವಾಗುತ್ತದೆ ಎಂದು ರೂಪಿಸಿರುವ ಸಂಚು ಇದು. ಈ ಘಟನೆ ಕೇಂದ್ರ ಗೃಹ ಸಚಿವ ಪಿತೂರಿಯ ಭಾಗವಾಗಿದೆ

news18-kannada
Updated:April 10, 2021, 6:04 PM IST
Mamata Banerjee: ಕೊಚ್​ಬೆಹಾರ್​​ ಗುಂಡಿನ ದಾಳಿ: ಅಮಿತ್​ ಶಾ ರಾಜೀನಾಮೆಗೆ ಮಮತಾ ಬ್ಯಾನರ್ಜಿ ಆಗ್ರಹ
ಅಮಿತ್ ಶಾ- ಮಮತಾ ಬ್ಯಾನರ್ಜಿ (ಫೈಲ್​ ಫೋಟೋ)
  • Share this:
ಕೋಲ್ಕತ್ತಾ (ಏ. 10):  ನಾಲ್ಕನೇ ಹಂತದ ಮತದಾನ ನಡೆಯುತ್ತಿರುವ ಪಶ್ಚಿಮ ಬಂಗಾಳದ ಸಿಟಾಲ್ಕುಚಿ ಮತಗಟ್ಟೆಯ ಬಳಿ ಸಿಐಎಸ್​ಎಫ್​ ಯೋಧರ ಗುಂಡಿನ ದಾಳಿಗೆ ನಾಲ್ವರು ಸಾವನ್ನಪ್ಪಿದ್ದಾರೆ. ಈ ಘಟನೆ ಖಂಡಿಸಿರುವ ಟಿಎಂಸಿ, ಕೇಂದ್ರ ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿದೆ. ಉತ್ತರ ಪರಗಣದ ಬದುರಿಯಾದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಸಿಎಂ ಮಮತಾ ಬ್ಯಾನರ್ಜಿ, ಇಲ್ಲಿನ ಪ್ರಚಾರ ಸಭೆ ಬಳಿಕ ಕೇಂದ್ರ ಪಡೆ ಗುಂಡು ಹಾರಿಸಿದ ಸ್ಥಳಕ್ಕೆ ಭೇಟಿ ನೀಡುವುದಾಗಿ ತಿಳಿಸಿದರು. ಸಿಐಎಸ್​ಎಫ್​ ಯೋಧರು ಮತದಾನಕ್ಕೆ ಸರದಿಯಲ್ಲಿ ನಿಂತಿದ್ದ ಜನರ ಮೇಲೆ ಗುಂಡಿಕ್ಕಿ ಕೊಂದಿದ್ದಾರೆ. ಈ ಘಟನೆಯ ಜವಾಬ್ದಾರಿ ಹೊತ್ತು ಕೇಂದ್ರ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಇನ್ನು ಈ ಘಟನೆ ಖಂಡಿಸಿ ನಾಳೆ ಮಧ್ಯಾಹ್ನ 2 ರಿಂದ 4 ಗಂಟೆವರೆಗೆ ರಾಜ್ಯಾದ್ಯಂತ ಶಾಂತಿಯುತ ಪ್ರತಿಭಟನಾ ಸಮಾವೇಶ ನಡೆಸಲಾಗುವುದು. ಘಟನೆ ಖಂಡಿಸಿ ನಮ್ಮ ಕಾರ್ಯಕರ್ತರಿಗೆ ಕಪ್ಪು ಬ್ಯಾಡ್ಜ್​ ಧರಿಸುವಂತೆ ಹೇಳಲಾಗಿದೆ.

ಇದಕ್ಕೂ ಮೊದಲು ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ ದೀದಿ, ಬಿಜೆಪಿ ಜನಾದೇಶ ಪಡೆಯುವಲ್ಲಿ ವಿಫಲವಾಗುತ್ತದೆ ಎಂದು ರೂಪಿಸಿರುವ ಸಂಚು ಇದು. ಈ ಘಟನೆ ಕೇಂದ್ರ ಗೃಹ ಸಚಿವ ಪಿತೂರಿಯ ಭಾಗವಾಗಿದೆ ಎಂದು ಆರೋಪಿಸಿದರು.

ಎಲ್ಲರೂ ಶಾಂತವಾಗಿದ್ದು, ಶಾಂತಿಯುತ ಮತ ಚಲಾಯಿಸುವಂತೆ ಕೇಳಿಕೇಳುತ್ತೇನೆ. ಅವರನ್ನು ಸೋಲಿಸುವ ಮೂಲಕ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇದನ್ನು ಓದಿ: ಟಿಎಂಸಿ ಸಮೀಕ್ಷೆ ಪ್ರಕಾರವೂ ಬಿಜೆಪಿಗೇ ಗೆಲುವು; ಬಿರುಗಾಳಿ ಎಬ್ಬಿಸಿದ ಪ್ರಶಾಂತ್ ಕಿಶೋರ್ ಆಡಿಯೋ!

ಮೂರು ವರ್ಷಗಳ ಹಿಂದೆ ನಡೆದ ಪಂಚಾಯತ್​ ಚುನಾವಣೆಗಿಂತ ಈ ಚುನಾವಣೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ. ಚುನಾವಣೆ ಪ್ರಾರಂಭವಾಗಿದಗಿನಿಂದ 17-18 ಜನರು ಕೊಲ್ಲಲ್ಪಟ್ಟಿದ್ದಾರೆ. ಇದಲ್ಲಿ ಸುಮಾರು 12 ಮಂದಿ ನಮ್ಮ ಪಕ್ಷದವರೇ. ಇಂದಿನ ಈ ಘಟನೆ ಬಗ್ಗೆ ಚುನಾವಣಾ ಆಯೋಗ ಕೂಡ ಜನರಿಗೆ ವಿವರಣೆಯನ್ನು ನೀಡಬೇಕು ಅವರು ಆಗ್ರಹಿಸಿದರು

ಚುನಾವಣಾ ಆಯೋಗ ಆಡಳಿತದ ಉಸ್ತುವಾರಿಯನ್ನು ವಹಿಸಿದೆ, ಅವರು, ಹಿರಿಯ ಐಪಿಎಸ್​ ಅಧಿಕಾರಿ ಸೂರಜಿತ್​ ಕಾರ್​ ಪುರಕಯಸ್ಥ ಅವರನ್ನು ತೆಗೆದುಹಾಕಿದ್ದಾರೆ. ಆರ್​ಪಿಎಫ್​ನಿಂದ ಒಎಸ್​ಡೊ ಅಶೋಕ್​ ಚಕ್ರವರ್ತಿಯನ್ನು ತೆಗೆದು ಹಾಕಲಾಗಿದೆ. ಆದರೂ ಚುನಾವಣಾ ಆಯೋಗ ಮತಗಟ್ಟೆ ಉಸ್ತುವಾರಿಗೆ ನಿವೃತ್ತ ಅಧಿಕಾರಿಗಳು ಕರೆತರುತ್ತಿದೆ ಯಾಕೆ ಎಂದು ಪ್ರಶ್ನಿಸಿದರು.ಘಟನೆಯಲ್ಲಿ ಸಾವನ್ನಪ್ಪಿದವರಿಗೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಘಟನೆಗೆ ಪ್ರಮುಖವಾದವರ ವಿರುದ್ಧ ಕಠಿಣ ಕ್ರಮಕ್ಕೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ. ಘಟನೆಗೆ ಟಿಎಂಸಿ ಆಡಳಿತವನ್ನು ದೂಷಿಸಿರುವ ಪ್ರಧಾನಿ, ಕೇಂದ್ರ ಪಡೆಗಳ ವಿರುದ್ಧ ಜನರನ್ನು ದೀದಿ ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Published by: Seema R
First published: April 10, 2021, 5:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories