Goa Assembly Election 2022: ಸೆಲಬ್ರಿಟಿಗಳಿಗೆ ಗಾಳ ಹಾಕುತ್ತಿರುವ ಟಿಎಂಸಿ!

ಟಿಎಂಸಿ ರಾಜ್ಯಸಭಾ ಸದಸ್ಯ ಡೇರಿಕ್ ಓ'ಬ್ರೆಯನ್ ಅವರು ಗಾಯಕ ಲಕ್ಕಿ ಅಲಿ ಮತ್ತು ನಟಿ ಹಾಗೂ ಸಾಮಾಜಿಕ ಕಾರ್ಯಕರ್ತೆ ನಫೀಸಾ ಅಲಿ ಅವರನ್ನು ಭೇಟಿಯಾಗಿದ್ದಾರೆ. ಇಬ್ಬರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.

ಮಮತಾ ಬ್ಯಾನರ್ಜಿ.

ಮಮತಾ ಬ್ಯಾನರ್ಜಿ.

  • Share this:
ನವದೆಹಲಿ, ‌ಅ. 10: ಮುಂದಿನ‌ ವರ್ಷದ ಮಾರ್ಚ್ - ಏಪ್ರಿಲ್ ತಿಂಗಳಲ್ಲಿ ಉತ್ತರ ಪ್ರದೇಶ (Uttar Pradesh), ಪಂಜಾಬ್ (Punjab) ಮಣಿಪುರ (Manipur) ಉತ್ತರಾ ಖಂಡ (Uttarkhand) ಮತ್ತು ಗೋವಾ (Goa) ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಪೈಕಿ‌ 2024ರ ಲೋಕಸಭಾ‌ ಚುನಾವಣೆಯ (2024 Lokasabha Election) ದೃಷ್ಟಿಯಿಂದ ಉತ್ತರ ಪ್ರದೇಶ‌ ವಿಧಾನಸಭಾ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದರೆ ಎರಡು ಪ್ರಮುಖ ಪ್ರತಿಪಕ್ಷಗಳಾದ ಆಮ್ ಆದ್ಮಿ‌ಪಕ್ಷ (Aam Admi Party) ಮತ್ತು ತೃಣಮೂಲ ಕಾಂಗ್ರೆಸ್ (Trinamool Congress) ಪಕ್ಷಗಳ ನೆಲೆ ವಿಸ್ತರಣೆ ಆಗುವ ದೃಷ್ಟಿಯಿಂದ ಗೋವಾ ವಿಧಾನಸಭಾ ಚುನಾವಣೆ ಅತ್ಯಂತ ಕುತೂಹಲಕಾರಿಯಾಗಿದೆ.

ತೃಣಮೂಲ ಕಾಂಗ್ರೆಸ್ ಪಕ್ಷ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧೆ ಮಾಡುವುದಾಗಿ ಘೋಷಿಸಿದಾಗಲೇ ಇಂಥದೊಂದು ಕುತೂಹಲ ನಿರ್ಮಾಣ ಆಗಿತ್ತು. ಈಗ ಅದು ಇನ್ನಷ್ಟು ಹರಳು‌ಗಟ್ಟುತ್ತಿದೆ. ಇತ್ತೀಚಿಗಿನ ಟಿಎಂಸಿ ಗೋವಾದಲ್ಲಿ ಇಡುತ್ತಿರುವ ಹೆಜ್ಜೆಗಳಿಂದ ಆ ಪಕ್ಷ ತನ್ನ ಪ್ರಚಾರಕ್ಕೆ ಸ್ಟಾರ್ ಗಳನ್ನು ಸೆಳೆಯಲು ನೋಡುತ್ತಿದೆ ಎಂಬುದು ಗೊತ್ತಾಗಲಿದೆ. ಸದ್ಯ ಗೋವಾ ಪ್ರವಾಸದಲ್ಲಿರುವ ತೃಣಮೂಲ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಡೇರಿಕ್ ಓ'ಬ್ರೆಯನ್ (Trinamool Congress Rajasabha Member Derek O’Brien) ಅವರು ಗಾಯಕ ಲಕ್ಕಿ ಅಲಿ (Singer Lucky Ali) ಮತ್ತು ನಟಿ ಹಾಗೂ ಸಾಮಾಜಿಕ ಕಾರ್ಯಕರ್ತೆ ನಫೀಸಾ ಅಲಿ (Actress and Activist Nafisa Ali) ಅವರನ್ನು ಭೇಟಿಯಾಗಿದ್ದಾರೆ. ಇವರಿಬ್ಬರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.

ನ್ಯೂಸ್ 18 (News 18) ಜೊತೆ ಮಾತನಾಡಿರುವ ಡೇರಿಕ್ ಓ'ಬ್ರೆಯನ್, 'ರಾಜಕಾರಣಿಗಳು ಮಾತ್ರವಲ್ಲ, ನಾವು ಎಲ್ಲಾ ವರ್ಗದ ಜನರನ್ನು, ನಿರ್ದಿಷ್ಟವಾಗಿ ನಾಗರಿಕ ಸಮಾಜದ (Civil Society) ಜನರನ್ನು ಭೇಟಿಯಾಗುತ್ತಿದ್ದೇವೆ. ಹಾಗಾಗಿ ಎಲ್ಲೆಡೆಯಿಂದ ಜನರು ಟಿಎಂಸಿಗೆ ಸೇರುವುದನ್ನು ನೀವು ನೋಡುತ್ತೀದ್ದೀರಿ' ಎಂದು ಹೇಳಿದ್ದಾರೆ.

ಡೇರಿಕ್ ಓ'ಬ್ರೆಯನ್ ಅವರನ್ನು ಭೇಟಿಯಾದ ಬಳಿಕ ಭೇಟಿಯ ಚಿತ್ರದೊಂದಿಗೆ ಪಶ್ಚಿಮ‌ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (West Bengal Chief Minister Mamata Banarji) ಅವರ ತೃಣಮೂಲ ಕಾಂಗ್ರೆಸ್ ಗೋವಾದಿಂದ ಸ್ಪರ್ಧೆ ಮಾಡಲು ನಿರ್ಧರಿಸಿದ ಸಂತೋಷವನ್ನು ನಫಿಸಾ ಅಲಿ ತಮ್ಮ ಇನ್‌ಸ್ಟಾಗ್ರಾಮ್‌ (Instagram) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. "ಭಾರತಕ್ಕೆ ಈಗ ಉತ್ತಮ ನಾಯಕತ್ವದ ಅಗತ್ಯವಿದೆ ಮತ್ತು ಮಮತಾ ಬ್ಯಾನರ್ಜಿ ಗೋವಾದಿಂದ ಸ್ಪರ್ಧಿಸಲು ನಿರ್ಧರಿಸಿರುವುದಕ್ಕೆ ನನಗೆ ಸಂತೋಷವಾಗಿದೆ. ಗೋವಾ ಭವಿಷ್ಯದ ಬಗ್ಗೆ ಯೋಚಿಸಬಲ್ಲ ಒಬ್ಬ ಉತ್ತಮ ನಾಯಕನ ಅಗತ್ಯವಿದೆ' ಎಂದು ಒತ್ತಿ ಹೇಳಿದ್ದಾರೆ.

ಸದ್ಯ ಗೋವಾದಲ್ಲಿ ಉಳಿದಿರುವ ನಫೀಸಾ ಅಲಿ ಅವರು ಮಮತಾ ಬ್ಯಾನರ್ಜಿ ಅವರನ್ನು 'ಹುಲಿ' ಎಂದು ಸಂಬೋಧಿಸಿದ ಕೆಲವೇ ದಿನಗಳಲ್ಲಿ ಈ ಪೋಸ್ಟ್ (Post) ಬಂದಿದೆ. ನಫೀಸಾ ಅಲಿ ಹಿಂದೆ ಪಶ್ಚಿಮ ಬಂಗಾಳದಲ್ಲೂ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಮತ್ತೊಂದೆಡೆ ಲಕ್ಕಿ ಅಲಿ ಅವರು ಕೂಡ ಇತ್ತೀಚೆಗೆ ಹೆಚ್ಚಾಗಿ ಗೋವಾದಲ್ಲಿಯೇ ಇರುತ್ತಾರೆ. 90ರ ದಶಕದಲ್ಲಿ ಅವರ "ಓ ಸನಮ್" (O Sanam) ಚಿತ್ರ ಬಹಳ ಹಿಟ್ ಆಗಿತ್ತು.

ಇದನ್ನು ಓದಿ: HD Kumaraswamy: ಮೈತ್ರಿಯ ಭಾಗವಾಗಿದ್ದುಕೊಂಡೇ ಬೆನ್ನಿಗಿರಿದ ನಿಮ್ಮ ಹೀನ ರಾಜಕೀಯ ಯಾರಿಗೆ ಗೊತ್ತಿಲ್ಲ ಹೇಳಿ?: ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ

ಮೂಲಗಳು ನಫೀಸಾ ಅಲಿ ಮತ್ತು ಲಕ್ಕಿ ಅಲಿ ಅವರ ಪಾತ್ರ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಏನಿರಲಿದೆ ಎಂಬುದನ್ನು ಹೇಳುತ್ತಿಲ್ಲವಾದರೂ ಇವರು ಸ್ಟಾರ್ ಪ್ರಚಾರಕರಾಗಬಹುದು, ಟಿಎಂಸಿಯಿಂದ ಸ್ಪರ್ಧೆ ಮಾಡಬಹುದು ಎಂಬ ಅಂಶಗಳನ್ನಂತೂ ತಿಳಿಸುತ್ತವೆ. ಟಿಎಂಸಿ (TMC) ನಾಯಕರು ಹೇಳುವ ಪ್ರಕಾರ ಪಕ್ಷವು ಗೋವಾದ ಬಗ್ಗೆ ತುಂಬಾ ಗಂಭೀರವಾಗಿದೆ. ಮಮತಾ ಬ್ಯಾನರ್ಜಿ ಅವರ ಬಳಿಕ ಪಕ್ಷದಲ್ಲಿ ಅತ್ಯಂತ ಪ್ರಭಾವಿ ಎನಿಸಿಕೊಂಡಿರುವ ಅಭಿಷೇಕ ಬ್ಯಾನರ್ಜಿ (Abhishek Banerjee) ದುರ್ಗಾ ಪೂಜೆಯ (Durga Pooja) ನಂತರ ಗೋವಾಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.
Published by:HR Ramesh
First published: