HOME » NEWS » National-international » TMC CANDIDATES NOMINATION PAPERS REJECTED AFTER SHE SPELLS HUSBANDS NAME INCORRECTLY STG LG

Assembly Election 2021: ನಾಮಪತ್ರದಲ್ಲಿ ಗಂಡನ ಹೆಸರು ತಪ್ಪು ಬರೆದ ಟಿಎಂಸಿ ಅಭ್ಯರ್ಥಿ ಚುನಾವಣೆಯಿಂದ ಔಟ್

ಮಾಲ್ದಾ ಜಿಲ್ಲೆಯ ಮಾಣಿಕ್‍ಚಕ್ ಅಭ್ಯರ್ಥಿಯಾದ ಸಾವಿತ್ರಿ ಮಿತ್ರಾ ಅವರು ನಾಮಪತ್ರ ಸಲ್ಲಿಕೆ ಪತ್ರದಲ್ಲಿ ಪತಿಯ ಹೆಸರನ್ನು ತಪ್ಪಾಗಿ ಬರೆದ ಕಾರಣ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಸಾವಿತ್ರಿ ಮಿತ್ರಾ ಅವರ ಪತಿಯ ಹೆಸರು ಸ್ವಪನ್ ಮಿತ್ರಾ. ಆದರೆ ಇವರು ನಾಮಪತ್ರದಲ್ಲಿ ಸ್ವಪನ್ ಮೈತ್ರಾ ಎಂದು ತಪ್ಪಾಗಿ ಬರೆದಿದ್ದಾರೆ. ಈ ವೇಳೆ ಹೆಸರಿಗೆ ಸಂಬಂಧಪಟ್ಟಂತೆ ಸಲ್ಲಿಸುವ ಇನ್ನಿತರ ದಾಖಲೆಗಳು ಅವರ ಬಳಿ ಇರಲಿಲ್ಲ.

news18-kannada
Updated:April 3, 2021, 7:10 AM IST
Assembly Election 2021: ನಾಮಪತ್ರದಲ್ಲಿ ಗಂಡನ ಹೆಸರು ತಪ್ಪು ಬರೆದ ಟಿಎಂಸಿ ಅಭ್ಯರ್ಥಿ ಚುನಾವಣೆಯಿಂದ ಔಟ್
ಮಾಲ್ದಾ ಜಿಲ್ಲೆಯ ಮಾಣಿಕ್‍ಚಕ್ ಅಭ್ಯರ್ಥಿಯಾದ ಸಾವಿತ್ರಿ ಮಿತ್ರಾ ಅವರು ನಾಮಪತ್ರ ಸಲ್ಲಿಕೆ ಪತ್ರದಲ್ಲಿ ಪತಿಯ ಹೆಸರನ್ನು ತಪ್ಪಾಗಿ ಬರೆದ ಕಾರಣ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಸಾವಿತ್ರಿ ಮಿತ್ರಾ ಅವರ ಪತಿಯ ಹೆಸರು ಸ್ವಪನ್ ಮಿತ್ರಾ. ಆದರೆ ಇವರು ನಾಮಪತ್ರದಲ್ಲಿ ಸ್ವಪನ್ ಮೈತ್ರಾ ಎಂದು ತಪ್ಪಾಗಿ ಬರೆದಿದ್ದಾರೆ. ಈ ವೇಳೆ ಹೆಸರಿಗೆ ಸಂಬಂಧಪಟ್ಟಂತೆ ಸಲ್ಲಿಸುವ ಇನ್ನಿತರ ದಾಖಲೆಗಳು ಅವರ ಬಳಿ ಇರಲಿಲ್ಲ.
  • Share this:
ಪಶ್ಚಿಮ ಬಂಗಾಳ(ಏ.03): ದೇಶದಲ್ಲಿ ಪಂಚರಾಜ್ಯ ಚುನಾವಣೆಯ ಕಾವು ಜೋರಾಗಿದೆ. ಕ್ಷಣ ಕ್ಷಣವೂ ರಂಗೇರುತ್ತಿರುವ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಪಶ್ಚಿಮಬಂಗಾಳದತ್ತ ಎಲ್ಲರ ಚಿತ್ತ ನೆಟ್ಟಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷದ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದ್ದು ದೀದಿ ವರ್ಸಸ್ ಮೋದಿ ಎನ್ನುವಷ್ಟರ ಮಟ್ಟಿಗೆ ಚುನಾವಣೆ ಕಣ ಸಿದ್ಧವಾಗಿದೆ. ಇಂತಹ ಪ್ರಬಲ ಪೈಪೋಟಿ ಇರುವ ಸಂದರ್ಭದಲ್ಲಿ ಪಶ್ಚಿಮಬಂಗಾಳದ ಮಾಲ್ದಾ ಜಿಲ್ಲೆಯ ಮಾಣಿಕ್‍ಚಕ್‍ನ ತೃಣ ಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಹಿಳಾ ಅಭ್ಯರ್ಥಿಯೊಬ್ಬರು ನಾಮಪತ್ರ ಸಲ್ಲಿಸಲು ಹೋಗಿ ಎಡವಟ್ಟು ಮಾಡಿಕೊಂಡು ಬಂದ ದಾರಿಗೆ ಸುಂಕವಿಲ್ಲ ಎಂಬ ರೀತಿಯಲ್ಲಿ ಮನೆಗೆ ವಾಪಸ್ಸು ಬಂದಿದ್ದಾರೆ.

ಹೌದು, ಮಾಲ್ದಾ ಜಿಲ್ಲೆಯ ಮಾಣಿಕ್‍ಚಕ್ ಅಭ್ಯರ್ಥಿಯಾದ ಸಾವಿತ್ರಿ ಮಿತ್ರಾ ಅವರು ನಾಮಪತ್ರ ಸಲ್ಲಿಕೆ ಪತ್ರದಲ್ಲಿ ಪತಿಯ ಹೆಸರನ್ನು ತಪ್ಪಾಗಿ ಬರೆದ ಕಾರಣ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಸಾವಿತ್ರಿ ಮಿತ್ರಾ ಅವರ ಪತಿಯ ಹೆಸರು ಸ್ವಪನ್ ಮಿತ್ರಾ. ಆದರೆ ಇವರು ನಾಮಪತ್ರದಲ್ಲಿ ಸ್ವಪನ್ ಮೈತ್ರಾ ಎಂದು ತಪ್ಪಾಗಿ ಬರೆದಿದ್ದಾರೆ. ಈ ವೇಳೆ ಹೆಸರಿಗೆ ಸಂಬಂಧಪಟ್ಟಂತೆ ಸಲ್ಲಿಸುವ ಇನ್ನಿತರ ದಾಖಲೆಗಳು ಅವರ ಬಳಿ ಇರಲಿಲ್ಲ.

ನಂತರ ಇದಕ್ಕೆ ಸಂಬಂಧಿಸಿದಂತೆ ಬೇರೆ ದಾಖಲೆಗಳನ್ನು ಸಲ್ಲಿಸಿದರೂ ಯಾವುದೇ ರೀತಿಯಲ್ಲೂ ಪ್ರಯೋಜನವಾಗಿಲ್ಲ. ಯಾಕೆಂದರೆ ನಾಮಪತ್ರ ಸಲ್ಲಿಕೆಯ ಅವಧಿ ಮುಕ್ತಾಯವಾಗಿತ್ತು. ಈ ಕಾರಣ ಸಾವಿತ್ರಿ ಮಿತ್ರಾ ಅವರು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ವಂಚಿತರಾಗಿದ್ದಾರೆ.

Karnataka Politics: ರಾಜ್ಯ ಬಿಜೆಪಿಯಲ್ಲಿ ಅನುದಾನಕ್ಕಾಗಿ ಹಿರಿಯ ನಾಯಕರ ನಡುವೆ ಕಿತ್ತಾಟ

ಇದೇ ಜಿಲ್ಲೆಯ ಅಭ್ಯರ್ಥಿಗಳು ಎಡವಟ್ಟು ಮಾಡಿಕೊಳ್ಳುತ್ತಾರೆ ಎಂಬುದಕ್ಕೆ ಮತ್ತೊಂದು ನಿದರ್ಶನ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಉಜ್ವಲ ಕುಮಾರ್. ಜೈಪುರದ ಪುರುಲಿಯಾ ಕ್ಷೇತ್ರದವರಾದ ಇವರು ಮಾಲ್ಡಾ ಕ್ಷೇತ್ರದ ಅಭ್ಯರ್ಥಿಯಾಗಿಯೇ ಕಣಕ್ಕಿಳಿದಿದ್ದರು. ಸಾವಿತ್ರಿ ಅವರು ಮಾಡಿಕೊಂಡ ರೀತಿಯಲ್ಲೇ ಎಡವಟ್ಟು ಮಾಡಿಕೊಂಡು ಚುನಾವಣೆಯಿಂದ ಹೊರಗುಳಿದಿದ್ದರು. ಇದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದ ಉಜ್ವಲ್ ಕುಮಾರ್ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸಿದಾಗ ಇವರು ಮಾಡಿದ್ದ ತಪ್ಪು ಗೊತ್ತಾಗಿತ್ತು. ನಂತರ ನ್ಯಾಯಾಲಯ ಚುನಾವಣಾ ಆಯೋಗದ ನಿರ್ಧಾರವನ್ನು ಎತ್ತಿಹಿಡಿದಿತ್ತು.

ಪಶ್ಚಿಮ ಬಂಗಾಳದಲ್ಲಿ 8 ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮಾಲ್ದಾದಲ್ಲಿ ಏಪ್ರಿಲ್ 29ರಂದು ಚುನಾವಣೆ ಜರುಗಲಿದೆ. 294 ಸೀಟುಗಳಿಗೆ ನಡೆಯುತ್ತಿರುವ ಚುನಾವಣೆ ಮಾಲ್ದಾ ಚುನಾವಣೆ ಮೂಲಕ ಮುಕ್ತಾಯಗೊಳ್ಳಲಿದ್ದು, ಮೇ 2ರಂದು ಫಲಿತಾಂಶ ಹೊರಬೀಳಲಿದೆ.

ಇನ್ನು, ತೀವ್ರ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರು ಹಾಗೂ ಅವರ ಮಾಜಿ ಆಪ್ತನಾದ ಬಿಜೆಪಿಯ ಸುವೇಂದು ಅಧಿಕಾರಿ ನಡುವಿನ ಜಿದ್ದಾಜಿದ್ದಿಗೆ ನಂದಿಗ್ರಾಮ ಸಾಕ್ಷಿಯಾಗಿದೆ.
Youtube Video

ಅಲ್ಲದೇ ಮಮತಾ ಬ್ಯಾನರ್ಜಿ ಅವದು ನಂದಿಗ್ರಾಮಕ್ಕೆ ಪ್ರಚಾರದ ನಿಮಿತ್ತ ತೆರಳಿದಾಗ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಪರಿಣಾಮ ಅವರ ಕಾಲಿಗೆ ಗಂಭೀರ ಗಾಯವಾಗಿತ್ತು. ಇದರ ನಡುವೆಯೂ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡು ಪ್ರಚಾರಕ್ಕೆ ಇಳಿದಿದ್ದರು. ಚುನಾವಣೆ ಗೆಲ್ಲಬೇಕೆಂಬ ಹಠದಿಂದ ಮಮತಾ ಅವರು ಜೀವ ಲೆಕ್ಕಿಸದೆ ಚುನಾವಣಾ ಹೋರಾಟದಲ್ಲಿ ತೊಡಗಿದ್ದರೆ, ಇವರ ಪಕ್ಷದ ಅಭ್ಯರ್ಥಿಗಳು ಒಂದಲ್ಲಾ ಒಂದು ತೊಂದರೆ ಮಾಡಿಕೊಂಡು ಚುನಾವಣಾ ಕಣದಿಂದ ದೂರ ಉಳಿಯುತ್ತಿದ್ದಾರೆ.
Published by: Latha CG
First published: April 3, 2021, 7:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories