News18 India World Cup 2019

ಕಲೆಗೆ ಧರ್ಮದ ಕಟ್ಟುಪಾಡು: ಏಸು ಕ್ರಿಸ್ತ ಮತ್ತು ಅಲ್ಲಾ ಬಗ್ಗೆ ತಿಂಗಳಿಗೊಂದು ಹಾಡು ಬಿಡುಗಡೆಗೆ ಮುಂದಾದ ಟಿಎಂ ಕೃಷ್ಣ

news18
Updated:August 10, 2018, 1:28 PM IST
ಕಲೆಗೆ ಧರ್ಮದ ಕಟ್ಟುಪಾಡು: ಏಸು ಕ್ರಿಸ್ತ ಮತ್ತು ಅಲ್ಲಾ ಬಗ್ಗೆ ತಿಂಗಳಿಗೊಂದು ಹಾಡು ಬಿಡುಗಡೆಗೆ ಮುಂದಾದ ಟಿಎಂ ಕೃಷ್ಣ
news18
Updated: August 10, 2018, 1:28 PM IST
- ಪಾರ್ಥ್​ ಶರ್ಮ, ನ್ಯೂಸ್​ 18 

ಚೆನ್ನೈ (ಆಗಸ್ಟ್​ 10): ಕಲೆಗೆ ಧರ್ಮದ ಕಟ್ಟುಪಾಡುಗಳನ್ನು ಹೇರುವ ಪ್ರಯತ್ನ ಭಾರತದಂತ ಸಂಪ್ರದಾಯಸ್ತ ದೇಶಗಳಲ್ಲಿ ಹಲವು ದಶಕಗಳಿಂದ ನಡೆಯುತ್ತಲೇ ಇದೆ. ಅದರ ಮುಂದುವರಿದ ಭಾಗವಾಗಿ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ, ತಮಿಳುನಾಡಿನ ಖ್ಯಾತ ಕರ್ನಾಟಿಕ್​ ಸಂಗೀತಗಾರ ಟಿ.ಎಂ. ಕೃಷ್ಣ ಮತ್ತು ಸಂಗೀತಗಾರ ಒ.ಎಸ್​. ಅರುಣ್​ ಅವರ ಸ್ವಾತಂತ್ರ್ಯವನ್ನು ಕಟ್ಟಿಹಾಕಲು ರಾಷ್ಟ್ರೀಯ ಸನಾತನ ಸೇವಾ ಸಂಗಮ (ಆರ್​ಎಸ್​ಎಸ್​ಎಸ್​) ಸಂಘಟನೆ ಪ್ರಯತ್ನಿಸಿದೆ.

ಏಸು ಕ್ರಿಸ್ತ ಮತ್ತು ಅಲ್ಲಾಹು ಬಗೆಗಿನ ಭಾವಗೀತೆಗಳನ್ನು ಹಾಡದಂತೆ ನಿರ್ಬಂಧ ಹೇರಲು ಯತ್ನಿಸಿದ ಬೆನ್ನಲ್ಲೇ ಟಿ.ಎಂ. ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಏಸು ಮತ್ತು ಅಲ್ಲಾಹು ಬಗೆಗಿನ ಒಂದು ಕರ್ನಾಟಕ ಸಂಗೀತವನ್ನು ಪ್ರತಿ ತಿಂಗಳು ಹೊರ ತರುವುದಾಗಿ ಟಿ.ಎಂ. ಕೃಷ್ಣ ಟ್ವೀಟ್​ ಮಾಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು, ಕಲೆಗೆ ಧರ್ಮದ ಕಟ್ಟುಪಾಡುಗಳನ್ನು ಹೇರುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

Considering the vile comments and threats issued by many on social media regarding Karnatik compositions on Jesus, I announce here that I will be releasing one karnatik song every month on Jesus or Allah. 

ದಿ ಹಿಂದು ಪತ್ರಿಕೆ ವರದಿಯ ಪ್ರಕಾರ ಕರ್ನಾಟಿಕ್​ ಸಂಗೀತಗಾರ ಒ.ಎಸ್​. ಅರುಣ್​ ಅವರು ಕ್ರಿಶ್ಚಿಯನ್​ ಸಂಗೀತ ಗೋಷ್ಠಿಯಲ್ಲಿ ಪಾಲ್ಗೊಂಡು ಏಸುವಿನ ಬಗ್ಗೆ ಹಾಡಿದ್ದರು. ಅದಾದ ನಂತರ ಹಿಂದೂ ಧರ್ಮದ ಹೊರತಾಗಿ ಬೇರೆ ಧರ್ಮಗಳ ಗೀತೆಗಳನ್ನು ಹಾಡಬಾರದು ಎಂಬ ಆಗ್ರಹವನ್ನು ಆರ್​ಎಸ್​ಎಸ್​ಎಸ್​ ಸಂಸ್ಥೆ ಮಾಡಲು ಆರಂಭಿಸಿತ್ತು. ಇದರ ಬಿಸಿ ಕೃಷ್ಣ ಅವರನ್ನೂ ತಲುಪಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ದೂರವಾಣಿ ಕರೆಗಳ ಮೂಲಕ ಹಿಂದೂ ಧರ್ಮಕ್ಕೆ ಸೀಮಿತವಾಗಿ ಹಾಡುವಂತೆ ಬೆದರಿಕೆ ಒಡ್ಡಲಾಗಿತ್ತು. ಆದರೆ ಹಾಡುಗಾರರಿಗೆ ಸ್ವಚ್ಛಂದದ ವಾತಾವರಣ ಬೇಕು ಮತ್ತು ಕಲೆಗೂ ಧರ್ಮಕ್ಕೂ ಅಂಟು ಹಾಕಬೇಡಿ ಎಂಬುದನ್ನು ಕೃಷ್ಣ ಸಾರಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಟಿ.ಎಂ. ಕೃಷ್ಣ ಅವರ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಹೆಚ್ಚಿನ ಮಂದಿ ಕೃಷ್ಣ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಕೆಲ ಪ್ರತಿಕ್ರಿಯೆ ಈ ಕೆಳಗಿವೆ.

 


 

 

 

ಇದೇ ರೀತಿಯ ಹಲವು ಪ್ರತಿಕ್ರಿಯೆಗಳು ಟ್ವೀಟಿಗರಿಂದ ಬಂದಿದೆ. ಕೇವಲ ಟಿ.ಎಂ. ಕೃಷ್ಣ, ಒ.ಎಸ್​. ಅರುಣ್​ ಮಾತ್ರ ಹಿಂದೂಯೇತರ ಹಾಡುಗಳನ್ನು ಹಾಡಿಲ್ಲ ಬದಲಾಗಿ ಬೇರೆ ಬೇರೆ ಧರ್ಮದ ಮೂಲದ ಗಾಯಕರು ಧರ್ಮಾತೀತವಾಗಿ ಹಾಡುಗಳನ್ನು ಹೇಳಿದ್ದಾರೆ. ಆ ಮೂಲಕ ಜನಸಾಮಾನ್ಯರಲ್ಲಿರುವ ರಾಮ, ಕೃಷ್ಣ, ಏಸು, ಅಲ್ಲಾಹು ಸೇರಿದಂತೆ ಎಲ್ಲಾ ಧರ್ಮದ ಧಾರ್ಮಿಕ ನಂಬಿಕೆಗಳಿಗೂ ಉನ್ನತ ಮೌಲ್ಯಗಳನ್ನು ತಂದುಕೊಂಡಿದ್ದಾರೆ ಎಂಬ ಪ್ರತಿಕ್ರಿಯೆಗಳು ದಾಖಲಾಗಿವೆ.

ಟಿ.ಎಂ. ಕೃಷ್ಣ ಅವರ ಪ್ರಕಾರ ಯಾವುದೇ ಕಲೆ ಒಂದು ಧರ್ಮಕ್ಕೆ ಸೀಮಿತವಾಗಿರುವುದಿಲ್ಲ. ಸೀಮಿತವಾದರೆ ಅದು ಕಲೆಯೇ ಅಲ್ಲ. ಕಲೆ ಭಾವನೆಗಳನ್ನು ಮತ್ತು ಭಕ್ತಿಯನ್ನು ಹೊರಹಾಕುವ ಒಂದು ಪ್ರಕಾರವಾಗಿದೆ. ಅದರಲ್ಲಿ ಏಸುವೂ ಒಂದೇ, ರಾಮನೂ ಒಂದೇ, ಅಲ್ಲಾಹುವೂ ಒಂದೇ. ಭಾರತದ ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಹಲವು ಖ್ಯಾತ ಸಂಗೀತಗಾರರು ಧರ್ಮಾತೀತವಾಗಿ ಹಾಡುಗಳನ್ನು ಹೇಳಿದ್ದಾರೆ. ಹಿಂದೂ ಧರ್ಮದ ಅಡಿಪಾಯ ನಿಂತಿರುವುದೇ ಸರ್ವಧರ್ಮ ಸಹಿಷ್ಣುತೆ ಮತ್ತು ಎಲ್ಲಾ ಧರ್ಮಗಳನ್ನೂ ಗೌರವಿಸುವುದರಲ್ಲಿ. ಹೀಗಿರುವಾಗ ಧಾರ್ಮಿಕ ಸಂಸ್ಥೆಗಳು ಕಲೆಯನ್ನು ಕಟ್ಟಿಹಾಕುವ ಪ್ರಯತ್ನಗಳನ್ನು ಬಿಟ್ಟು, ಪ್ರೋತ್ಸಾಹ ನೀಡಿದರೆ ಉತ್ತಮ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ.
First published:August 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...