New Digital Rules: ಮೋದಿ ಸರ್ಕಾರದ ಹೊಸ ಡಿಜಿಟಲ್ ನಿಯಮಗಳ ವಿರುದ್ಧ ಹೈಕೋರ್ಟ್‌ ಮೊರೆ ಹೋದ ಖ್ಯಾತ ಗಾಯಕ

Singer TM Krishna: ಮೋದಿ ಸರ್ಕಾರದ ಹೊಸ ಡಿಜಿಟಲ್ ಮಾಧ್ಯಮ ನಿಯಮಗಳನ್ನು ಪ್ರಶ್ನಿಸಿ ಕರ್ನಾಟಕ ಸಂಗೀತದ ಗಾಯಕ ಟಿ.ಎಂ.ಕೃಷ್ಣ ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿದ್ದಾರೆ.

ಟಿಎಂ ಕೃಷ್ಣ

ಟಿಎಂ ಕೃಷ್ಣ

  • Share this:

ಚೆನ್ನೈ (ಜೂನ್ 11): ಕೇಂದ್ರ ಸರ್ಕಾರದ ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳು ಇತ್ತೀಚಿನ ಕೆಲ ತಿಂಗಳುಗಳಿಂದ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಇದರ ವಿರುದ್ಧ ಸಾಕಷ್ಟು ಟೀಕೆ, ಟಿಪ್ಪಣಿಗಳು ಕೇಳಿಬರುತ್ತಿವೆ. ಇದೇ ರೀತಿ, 2021 ರ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳನ್ನು ಅಸಂವಿಧಾನಿಕ ಮತ್ತು 2000 ರ ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು ಉಲ್ಲಂಘಿಸುವ ಮೋದಿ ಸರ್ಕಾರದ ಹೊಸ ಡಿಜಿಟಲ್ ಮಾಧ್ಯಮ ನಿಯಮಗಳನ್ನು ಪ್ರಶ್ನಿಸಿ ಕರ್ನಾಟಕ ಸಂಗೀತದ ಗಾಯಕ ಟಿ.ಎಂ.ಕೃಷ್ಣ ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿದ್ದಾರೆ. ಗಾಯಕನ ಈ ಅರ್ಜಿಯನ್ನು ಸ್ವೀಕರಿಸಿರುವ ಮದ್ರಾಸ್‌ ಹೈಕೋರ್ಟ್‌ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡಿದೆ.


ಈ ವಿಚಾರಣೆಯನ್ನು ಕೈಗೆತ್ತಿಕೊಂಡ ಮದ್ರಾಸ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸಂತಿಲ್‌ಕುಮಾರ್‌ ರಾಮಮೂರ್ತಿ ನೇತೃತ್ವದ ದ್ವಿಸದಸ್ಯ ಪೀಠವು ಗಾಯಕ ಕೃಷ್ಣ ಅವರು ಸಲ್ಲಿಸಿರುವ ಮನವಿಗೆ ಸ್ಪಂದಿಸಲು ಮೋದಿ ಸರ್ಕಾರಕ್ಕೆ 3 ವಾರಗಳ ಕಾಲಾವಕಾಶ ನೀಡಿದ್ದು, ಈ ಅರ್ಜಿಯ ವಿಚಾರಣೆಯನ್ನು 4 ವಾರಗಳವರೆಗೆ ಮುಂದೂಡಿದೆ.


"ನನಗೆ, ಸಂಗೀತದಂತೆ ಗೌಪ್ಯತೆ ಸಹ ಒಂದು ಅನುಭವವಾಗಿದೆ. ನಾನು ಗೌಪ್ಯತೆಯ ಬಗ್ಗೆ ಯೋಚಿಸುವಾಗ, ನಾನು ಜೀವನ, ಅನ್ಯೋನ್ಯತೆ, ಆವಿಷ್ಕಾರ, ಭದ್ರತೆ, ಸಂತೋಷ, ಭಯದ ಕೊರತೆ ಮತ್ತು ಸೃಷ್ಟಿಸುವ ಸ್ವಾತಂತ್ರ್ಯದ ಬಗ್ಗೆ ಯೋಚಿಸುತ್ತೇನೆ. ನನ್ನಲ್ಲಿ ಅಂತರ್ಗತವಾಗಿರುವ ಅಂಶಗಳಾದ ಸ್ವಾತಂತ್ರ್ಯ, ಘನತೆ ಮತ್ತು ಆಯ್ಕೆಯ ಬಗ್ಗೆಯೂ ಯೋಚಿಸುತ್ತೇನೆ. ಇದು ಒಬ್ಬ ಕಲಾವಿದನಾಗಿ ಮಾತ್ರವಲ್ಲದೆ, ಮನುಷ್ಯನಾಗಿ ಯೋಚಿಸುತ್ತೇನೆ'' ಎಂದು ಸಂಗೀತಗಾರ ಟಿ.ಎಂ. ಕೃಷ್ಣ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Petrol Price Today: ಗಗನಕ್ಕೇರಿದ ಪೆಟ್ರೋಲ್ ಬೆಲೆ; ಕೇಂದ್ರ ಸರ್ಕಾರದ ವಿರುದ್ಧ ಇಂದು ಕಾಂಗ್ರೆಸ್ ಪ್ರತಿಭಟನೆ

ಈ ಹಿನ್ನೆಲೆ "ಗೌಪ್ಯತೆ ಇಲ್ಲದೆ, ರಚಿಸುವುದು ಮತ್ತು ನಿರ್ವಹಿಸುವುದು ಅಸಾಧ್ಯ. ಹೊಸ ಐಟಿ ನಿಯಮಗಳು ಕಲಾವಿದ ಮತ್ತು ಸಾಂಸ್ಕೃತಿಕ ನಿರೂಪಕನಾಗಿ ನನ್ನ ಹಕ್ಕುಗಳನ್ನು ನೋಯಿಸುತ್ತದೆ, ಮುಕ್ತ ವಾಕ್ಚಾತುರ್ಯದ ಮೇಲೆ ಪರಿಣಾಮ ಹೇರುವ ಮೂಲಕ ಮತ್ತು ನನ್ನ ಗೌಪ್ಯತೆಯ ಹಕ್ಕನ್ನು ಹೇರುವ ಮೂಲಕ ಋಣಾತ್ಮಕ ಪರಿಣಾಮ ಬೀರುತ್ತದೆ" ಎಂದು ಅವರು ಹೇಳಿದರು.


"ಅಸ್ಪಷ್ಟ ಮತ್ತು ಅನಿರ್ದಿಷ್ಟವಾದ ಈ ನಿಯಮಗಳು ಕಲಾವಿದರು ಕರ್ನಾಟಕ ಸಂಗೀತದಲ್ಲಿ ಅಸ್ತಿತ್ವದಲ್ಲಿರುವ ಸೌಂದರ್ಯ, ಲಿಂಗ ಮತ್ತು ಜಾತಿ ಶ್ರೇಣಿಗಳ ವಿರುದ್ಧ ಕಠಿಣ ಪ್ರಶ್ನೆಗಳನ್ನು ಎತ್ತುವುದನ್ನು ತಡೆಯುತ್ತದೆ ಮತ್ತು ಚಾಲ್ತಿಯಲ್ಲಿರುವ ಸಾಂಸ್ಕೃತಿಕ ಪ್ರವೃತ್ತಿಯನ್ನು ಪ್ರಶ್ನಿಸುವ ಭಿನ್ನಮತೀಯರನ್ನು ತಡೆಯುತ್ತದೆ" ಎಂದು ಕೃಷ್ಣ ವಾದಿಸಿದರು.

ಇದನ್ನೂ ಓದಿ: Karnataka Lockdown: ಕರ್ನಾಟಕದ 11 ಜಿಲ್ಲೆಗಳಲ್ಲಿ ಲಾಕ್​ಡೌನ್ ವಿಸ್ತರಣೆ; ಸೋಮವಾರದಿಂದ ಯಾವುದಕ್ಕೆ ಅವಕಾಶ? ಯಾವುದಕ್ಕೆ ನಿರ್ಬಂಧ?

ಅಲ್ಲದೆ, ನಿಯಮಗಳು ಸೃಜನಶೀಲತೆಯನ್ನು ತಣಿಸುತ್ತವೆ ಮತ್ತು ಒಬ್ಬ ವ್ಯಕ್ತಿಯು ಕಾಲ್ಪನಿಕವಾಗಿ ಅಥವಾ ಸಾಂಪ್ರದಾಯಿಕ ಗಡಿಗಳನ್ನು ಮೀರಿ ಯೋಚಿಸುವುದು ಅಸಾಧ್ಯವಾಗಿಸುತ್ತದೆ. ಜತೆಗೆ, ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಪ್ರಮುಖವಾದ ಕಲೆಯನ್ನು ರಚಿಸುವ ಸೃಜನಶೀಲತೆಯೂ ಹೋಗುತ್ತದೆ ಎಂದು ಅವರು ಹೇಳಿದರು.


ಸೋಶಿಯಲ್ ಮೀಡಿಯಾ ಮಧ್ಯವರ್ತಿಗಳಿಗೆ ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಮಾಹಿತಿಯ ಮೂಲವನ್ನು ಪತ್ತೆಹಚ್ಚಲು ಅನುವು ಮಾಡಿಕೊಡುವ ನಿಯಮವು "ಅಸ್ಪಷ್ಟವಾಗಿ ಹೇಳಲ್ಪಟ್ಟಿದೆ" ಮತ್ತು ಈ ಮಧ್ಯವರ್ತಿಗಳು ನಿಯಮಗಳನ್ನು ಅನುಸರಿಸುವ ಪ್ರಯತ್ನದಲ್ಲಿ "ಗೌಪ್ಯತೆಗೆ ಮನಸ್ಸಿಲ್ಲದ ಸಾಧನಗಳನ್ನು" ಅಳವಡಿಸಿಕೊಳ್ಳಲು ಕಾರಣವಾಗುತ್ತದೆ ಎಂದು ಅರ್ಜಿಯಲ್ಲಿ ಸೇರಿಸಲಾಗಿದೆ .


ಒಟಿಟಿ ಪ್ಲಾಟ್‌ಫಾರ್ಮ್‌ಗಳು ಮತ್ತು ಆನ್‌ಲೈನ್ ಸುದ್ದಿ ಪ್ರಕಾಶಕರಿಗೆ ಸಹ ಈ ಹೊಸ ನಿಯಮಗಳ ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್, "ಅತಿಯಾದ ಸೆನ್ಸಾರ್‌ಶಿಪ್‌ ಮತ್ತು ಬಹುಸಂಖ್ಯಾತ ಗುಂಪುಗಳ ಒತ್ತಡದಲ್ಲಿ ಭಿನ್ನಾಭಿಪ್ರಾಯ ಮತ್ತು ವ್ಯತಿರಿಕ್ತ ಧ್ವನಿಗಳನ್ನು ಹೊರಹಾಕುತ್ತದೆ" ಎಂದೂ ಸಂಗೀತಗಾರ ಕೃಷ್ಣ ಮದ್ರಾಸ್‌ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಆರೋಪಿಸಿದ್ದಾರೆ.

4 ಹೈಕೋರ್ಟ್‌ಗಳಲ್ಲಿ ಡಿಜಿಟಲ್ ನಿಯಮದ ವಿರುದ್ಧ ಅರ್ಜಿ
ಸಂಗೀತಗಾರ ಕೃಷ್ಣ ಅವರ ಅರ್ಜಿಯನ್ನು ಅಂಗೀಕರಿಸುವ ಮೂಲಕ, ದೆಹಲಿ, ಕೇರಳ ಮತ್ತು ಕರ್ನಾಟಕದ ನಂತರ ಹೊಸ ಐಟಿ ನಿಯಮಗಳ ಸಿಂಧುತ್ವವನ್ನು ಪರಿಗಣಿಸಿದ ಮದ್ರಾಸ್ ಹೈಕೋರ್ಟ್ ದೇಶದ ನಾಲ್ಕನೇ ಹೈಕೋರ್ಟ್ ಆಗಿದೆ. ಮಾರ್ಚ್‌ನಲ್ಲಿ ಆನ್‌ಲೈನ್ ಸುದ್ದಿ ಮಾಧ್ಯಮ 'ದಿ ವೈರ್' ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು, ನಂತರ 'ದಿ ಕ್ವಿಂಟ್' ಸಹ ಕೋರ್ಟ್‌ ಮೊರೆ ಹೋಗಿತ್ತು. 'ಲೈವ್ ಲಾ' ಕೇರಳ ಹೈಕೋರ್ಟ್‌ನಲ್ಲಿ ನಿಯಮಗಳ ವಿರುದ್ಧ ಅರ್ಜಿ ಸಲ್ಲಿಸಿತ್ತು. ನಂತರ, ಕನ್ನಡ ನ್ಯೂಸ್ ಪೋರ್ಟಲ್ 'ಪ್ರತಿಧ್ವನಿ' ನಿಯಮಗಳ ವಿರುದ್ಧ ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿದೆ.


ಇತ್ತೀಚೆಗೆ, ವಾಟ್ಸ್‌ಆ್ಯಪ್‌ ಹಾಗೂ ಗೂಗಲ್‌ ಸಹ ನಿಯಮಗಳ ವಿರುದ್ಧ ದೆಹಲಿ ಹೈಕೋರ್ಟ್ ಮೊರೆ ಹೋಗಿದೆ.
ಫೆಬ್ರವರಿ 25ರಂದು ಕೇಂದ್ರ ಸರ್ಕಾರವು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್ ಮಾರ್ಗದರ್ಶಿ) ನಿಯಮಗಳು, 2021 ಕ್ಕೆ ಅಧಿಸೂಚನೆ ನೀಡಿತ್ತು.Published by:Sushma Chakre
First published: