• Home
  • »
  • News
  • »
  • national-international
  • »
  • ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಿಹಿಸುದ್ದಿ; ದರ್ಶನಕ್ಕೆ ಆನ್​ಲೈನ್ ಟಿಕೆಟ್ ಸಂಖ್ಯೆ ಹೆಚ್ಚಿಸಿದ ಟಿಟಿಡಿ

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಿಹಿಸುದ್ದಿ; ದರ್ಶನಕ್ಕೆ ಆನ್​ಲೈನ್ ಟಿಕೆಟ್ ಸಂಖ್ಯೆ ಹೆಚ್ಚಿಸಿದ ಟಿಟಿಡಿ

ತಿರುಪತಿ ತಿರುಮಲ ದೇವಸ್ಥಾನ

ತಿರುಪತಿ ತಿರುಮಲ ದೇವಸ್ಥಾನ

Tirumal Tirupati Devasthanam: ತಿರುಪತಿ ತಿರುಮಲ ದೇವಸ್ಥಾನದಲ್ಲಿ ಇದುವರೆಗೂ ದಿನಕ್ಕೆ 6 ಸಾವಿರ ಭಕ್ತರಿಗೆ ದರ್ಶನಕ್ಕೆ ಆನ್​ಲೈನ್ ಟಿಕೆಟ್ ನೀಡಲಾಗುತ್ತಿತ್ತು. ಆದರೆ, ಜುಲೈ 1ರಿಂದ ಆ ಸಂಖ್ಯೆಯನ್ನು 9 ಸಾವಿರಕ್ಕೆ ಏರಿಕೆ ಮಾಡಲಾಗಿದೆ. 

  • Share this:

ತಿರುಮಲ (ಜೂ. 29): ಕೊರೋನಾ ಅಟ್ಟಹಾಸ ಹೆಚ್ಚಾಗಿರುವುದರಿಂದ ದೇಶದ ಎಲ್ಲ ಪ್ರಮುಖ ದೇವಸ್ಥಾನಗಳನ್ನೂ ಮುಚ್ಚಲಾಗಿತ್ತು. ಇದೀಗ ಬಹುಪಾಲು ದೇವಾಲಯಗಳ ಬಾಗಿಲನ್ನು ತೆರೆಯಲಾಗಿದ್ದರೂ ಹೆಚ್ಚಿನ ಭಕ್ತರಿಗೆ ಅವಕಾಶ ನೀಡುತ್ತಿಲ್ಲ. ದೇಶದ ಶ್ರೀಮಂತ ದೇಗುಲಗಳಲ್ಲಿ ಒಂದಾಗಿರುವ ತಿರುಪತಿ ತಿರುಮಲ ದೇವಸ್ಥಾನದಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.


ಹೆಚ್ಚಿನ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡುವ ಬಗ್ಗೆ ಭಾನುವಾರ ಚರ್ಚೆ ನಡೆಸಿರುವ ಟಿಟಿಡಿ ಆನ್​ಲೈನ್ ಟಿಕೆಟ್ ಕೋಟಾದ ಪ್ರಮಾಣವನ್ನು ಹೆಚ್ಚಿಸಿದೆ. ಇದುವರೆಗೂ ದಿನಕ್ಕೆ 6 ಸಾವಿರ ಭಕ್ತರಿಗೆ ದರ್ಶನಕ್ಕೆ ಆನ್​ಲೈನ್ ಟಿಕೆಟ್ ನೀಡಲಾಗುತ್ತಿತ್ತು. ಆದರೆ, ಜುಲೈ 1ರಿಂದ ಆ ಸಂಖ್ಯೆಯನ್ನು 9 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ತಿರುಪತಿ ತಿರುಮಲ ದೇವಸ್ಥಾನ ನಾಳೆಯಿಂದ 300 ರೂ.ಗಳ ಆನ್​ಲೈನ್ ಟಿಕೆಟ್ ನೀಡಲಿದೆ.


ಇದನ್ನೂ ಓದಿ: ಮಳೆಯಿಂದ ಮಲೆನಾಡು, ಕರಾವಳಿಯಲ್ಲಿ ಆರೆಂಜ್ ಅಲರ್ಟ್​; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ


ಪ್ರತಿದಿನ 9,000 ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಇದರ ಜೊತೆಗೆ ಪ್ರತಿದಿನ 3000 ಸರ್ವದರ್ಶನ ಟಿಕೆಟ್​ಗಳನ್ನು ನೀಡಲಾಗುತ್ತದೆ. ಒಂದು ದಿನ ಮುಂಚಿತವಾಗಿ ಈ ಟಿಕೆಟ್​ಗಳನ್ನು ತೆಗದುಕೊಳ್ಳಬೇಕಾಗುತ್ತದೆ. ಕೊರೋನಾದಿಂದಾಗಿ ಎರಡೂವರೆ ತಿಂಗಳ ಕಾಲ ತಿರುಪತಿ ದೇವಸ್ಥಾನವನ್ನು ಮುಚ್ಚಲಾಗಿತ್ತು. ಆರಂಭದಲ್ಲಿ ದಿನಕ್ಕೆ 6 ಸಾವಿರ ಜನರಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಈಗ ದಿನಕ್ಕೆ 9,750 ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 10 ವರ್ಷದೊಳಗಿನ ಮಕ್ಕಳು ಮತ್ತು 65 ವರ್ಷ ಮೇಲ್ಪಟ್ಟವರಿಗೆ ದರ್ಶನಕ್ಕೆ ಅವಕಾಶ ನೀಡುವುದಿಲ್ಲ.

Published by:Sushma Chakre
First published: