ಶ್ರೀನಿವಾಸ.. ಗೋವಿಂದ.. ಶ್ರೀ ವೆಂಕಟೇಶ.. ಗೋವಿಂದ.. ಸಂಕಟ ಬಂದಾಗ ವೆಂಕಟರಮಣ ಅನ್ನುತ್ತೇವೆ .ಆದರೆ ತಿರುಪತಿ(Tirupati) ತಿಮಪ್ಪನ ದರ್ಶನ ಪಡೆಯಲು ಇದೀಗ ಸಂಕಷ್ಟ ಎದುರಾಗಿದೆ. ರಣ ಮಳೆ(Rain)ಯ ಆರ್ಭಟಕ್ಕೆ ತಿರುಪತಿ ನಲುಗಿ ಹೋಗಿತ್ತು. ಇದೀಗ ಮಳೆ ನಿಂತಿದೆ. ಆದರೆ ಮಳೆಯಿಂದ ಆದ ಅವಾಂತರಗಳು ಮುಂದುವರೆಯುತ್ತಲೇ ಇದೆ. ಬೆಟ್ಟದಲ್ಲಿ ಅಲ್ಲಲ್ಲಿ ಭೂ ಕುಸಿತ(Landslide) ಆಗುತ್ತಿದೆ. ಮಂಗಳವಾರ(Tuesday), ಬುಧವಾರ(Wednesday) ಕೂಡ ಭಾರೀ ಮಳೆಯಾಗಿದೆ. ಪರಿಣಾಮ ತಿರುಪತಿ ಬೆಟ್ಟದಲ್ಲಿ ಮತ್ತೊಮ್ಮೆ ಭೂಕುಸಿತ ಸಂಭವಿಸಿದ್ದು, ಬಸ್ಸಿ(Bus)ನಲ್ಲಿದ್ದ 20 ಪ್ರಯಾಣಿಕರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಘಟನೆ ಬುಧವಾರ ನಡೆದಿದೆ. ಬುಧವಾರ ಬೆಳಗ್ಗೆ ಬಸ್ಸೊಂದು ಬೆಟ್ಟಏರುತ್ತಿದ್ದ ವೇಳೆ, ಏಕಾಏಕಿ ಬಂಡೆ(Rock)ಯೊಂದು ಬೆಟ್ಟದಿಂದ ಕೆಳಗೆ ಉರುಳಿದೆ. ಇದನ್ನು ಚಾಲಕ(Driver) ತಕ್ಷಣವೇ ಗಮನಿಸಿ ಬಸ್ಸನ್ನು ನಿಲ್ಲಿಸಿದ ಕಾರಣ, ಬಸ್ಸಿನಲ್ಲಿದ್ದ 20 ಜನರು ಪ್ರಾಣಾಪಾಯದಿಂದ ಪಾರಾಗಿದ್ದರೆ. ತಿರುಪತಿ ಬೆಟ್ಟದ 2ನೇ ಘಾಟ್ ರಸ್ತೆಯಲ್ಲಿ ಈ ಅವಘಡ ಸಂಭವಿಸಿದ್ದು, ಸಂಚಾರವನ್ನು ಬಂದ್ ಮಾಡಲಾಗಿದೆ ಎಂದು ಆಡಳಿತ ಮಂಡಳಿ ಹೇಳಿದೆ. ಈ ಘಟನೆ ಬಳಿಕ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ತೆರಳುವ ಭಕ್ತರಲ್ಲಿ ಆತಂಕ ಹೆಚ್ಚಿಸಿದೆ.
ತಿರುಪತಿ ಬೆಟ್ಟದ ರಸ್ತೆಗಳೆಲ್ಲ ಬ್ಲಾಕ್!
ಸುಮಾರು ಅಡಿ ಎತ್ತರದಿಂದ ಬಂಡೆಗಳು ಉರುಳಿ ಬಿದ್ದ ಪರಿಣಾಮ ಹಲವು ಕಾರುಗಳು ಸೇರಿ ರಸ್ತೆಗಳು ಹಾನಿಗೊಳಗಾಗಿವೆ. ಐಐಟಿ ದೆಹಲಿಯ ತಜ್ಞರು ಅವಗಢ ಘಟಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ವಾರ ಕೂಡಾ ಭಾರೀ ಮಳೆ ಸುರಿದ ಪರಿಣಾಮ ತಿರುಪತಿಯಲ್ಲಿ ಭಾರೀ ಅನಾಹುತ ಸಂಭವಿಸಿತ್ತು. ತಿರುಮಲ ತಿರುಪತಿ ದೇವಸ್ಥಾನದ ವಿಜಿಲೆನ್ಸ್, ಎಂಜಿನಿಯರಿಂಗ್ ಮತ್ತು ಅರಣ್ಯ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರಸ್ತೆಯಿಂದ ಬಂಡೆಗಳನ್ನು ತೆಗೆಯುವ ಮೇಲ್ವಿಚಾರಣೆ ನಡೆಸಿದರು.ಅಲಿಪಿರಿ ಸಮೀಪದ ಎರಡನೇ ಘಾಟ್ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದ್ದರಿಂದ ಹಲವು ವಾಹನಗಳು ಜಖಂಗೊಂಡಿವೆ.
ರಸ್ತೆಗೆ ಬಿದ್ದ ದೊಡ್ಡ ದೊಡ್ಡ ಬಂಡೆಗಳು!
ತಿರುಮಲ ಇತ್ತೀಚೆಗೆ ನವೆಂಬರ್ 18 ರಂದು ಅಭೂತಪೂರ್ವ ಭಾರೀ ಮಳೆಗೆ ಸಾಕ್ಷಿಯಾಯಿತು. ಇದರ ಪರಿಣಾಮವಾಗಿ ಘಾಟ್ ರಸ್ತೆಗಳಲ್ಲಿ ಅನೇಕ ಸ್ಥಳಗಳಲ್ಲಿ ಭೂಕುಸಿತ ಸಂಭವಿಸಿದೆ. ಮಳೆಯ ಮುನ್ಸೂಚನೆಯಿಂದಾಗಿ ಎರಡು ದಿನಗಳ ಕಾಲ ಘಾಟ್ ರಸ್ತೆಗಳನ್ನು ಮುಚ್ಚುವುದಾಗಿ ಟಿಟಿಡಿ ಈಗಾಗಲೇ ಘೋಷಿಸಿತ್ತು. ದುರಸ್ತಿ ಕಾರ್ಯದ ನಂತರ ಕೆಲವು ದಿನಗಳ ನಂತರ ಘಾಟ್ ರಸ್ತೆಗಳನ್ನು ವಾಹನ ಸಂಚಾರಕ್ಕೆ ತೆರೆಯಲಾಯಿತು. ಮೊದಲ ಘಾಟ್ ರಸ್ತೆಯಲ್ಲಿ ಅಕ್ಕಗರ್ಲ ದೇವಸ್ಥಾನದ ಬಳಿ ತಡೆಗೋಡೆಗೆ ಹಾನಿಯಾಗಿದ್ದು, ನಾಲ್ಕು ಕಡೆ ಬಂಡೆಗಳು ರಸ್ತೆಗೆ ಬಿದ್ದಿವೆ ಎಂದು ಟಿಟಿಡಿ ತಿಳಿಸಿದೆ.
ಇದನ್ನು ಓದಿ : ರಣ ಮಳೆ ಆರ್ಭಟದಿಂದ ತಿಮ್ಮಪ್ಪನಿಗೂ ತಪ್ಪದ ಸಂಕಷ್ಟ: ಸದ್ಯಕ್ಕೆ ತಿರುಪತಿಗೆ ಹೋಗುವ ಆಸೆ ಬೇಡ!
25 ವರ್ಷಗಳಲ್ಲೇ ಅತ್ಯಧಿಕ ಮಳೆ
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ವಿಶ್ವದ ಅತ್ಯಂತ ಸಿರಿವಂತ ದೇವರಾದ ತಿರುಪತಿ ತಿಮ್ಮಪ್ಪನಿಗೂ ಸಂಕಷ್ಟ ತಂದಿಟ್ಟಿದೆ. ವಾಯುಭಾರ ಕುಸಿತದ ಪರಿಣಾಮ ತಿರುಮಲ, ತಿರುಪತಿ ಸೇರಿದಂತೆ ಚಿತ್ತೂರು ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿದಿತ್ತು, ಎಲ್ಲೆಡೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿ ದೇಗುಲ ನಗರದಲ್ಲಿ ಇಂಥ ಮಳೆ ಅನಾಹುತ ಘಟಿಸಿದ್ದು 1996 ಭೀಕರ ಪ್ರವಾಹದ ಬಳಿಕ ಇದೇ ಮೊದಲು ಎನ್ನಲಾಗುತ್ತಿದೆ. ತಿರುಪತಿಯ ಹಲವು ತಗ್ಗು ಪ್ರದೇಶ ಮತ್ತು ಜನವಸತಿ ಪ್ರದೇಶಗಳು ನೀರಿನಲ್ಲಿ ಮುಳುಗಿದ್ದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. 20ಕ್ಕೂ ಹೆಚ್ಚು ಮಂದಿ ರಣ ಮಳೆಗೆ ಪ್ರಾಣ ಬಿಟ್ಟಿದ್ದರು.
ಇದನ್ನು ಓದಿ: ನಿಜವಾಯ್ತು ಬಬಲಾದಿ ಮಠದ ಮಾತು; 9 ತಿಂಗಳ ಹಿಂದೆಯೇ ತಿರುಪತಿ ಜಲಪ್ರಳದ ಭವಿಷ್ಯ ನುಡಿದಿದ್ದ ಸಿದ್ದು ಮುತ್ಯಾ!
ಇನ್ನೂ ಅದೆಷ್ಟೋ ಮೂಕಪ್ರಾಣಿಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಸದ್ಯ ತಿರುಪತಿಗೆ ಹೋಗುವ ಪ್ಲಾನ್ ನೀವು ಮಾಡಿಕೊಂಡಿದ್ದರೆ, ಕೆಲ ದಿನಗಳ ಕಾಲ ಮುಂದೂಡುವುದು ಸೂಕ್ತ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ