ಕೊರೋನಾ ಸಂದಿಗ್ದತೆಯಲ್ಲೂ ಹುಂಡಿ ಕಾಣಿಕೆಯಲ್ಲಿ ಹೊಸ ದಾಖಲೆ ಬರೆದ ತಿರುಪತಿ

ಸೆಪ್ಟೆಂಬರ್ 6ರಂದು ಸುಮಾರು 13,486 ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದರು. ಲಾಕ್​ಡೌನ್​ ಬಳಿಕ ಮೊದಲ ಬಾರಿಗೆ ದೇವಾಲಯದ ಆದಾಯ 1 ಕೋಟಿ ರೂ.ಗೂ ಮೀರಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ತಿರುಪತಿ(ಅ.10): ವಿಶ್ವ ಪ್ರಸಿದ್ದ ತಿರುಪತಿ ಶ್ರೀ ವೆಂಕಟೇಶ್ವರನಿಗೆ ಅಪಾರ ಸಂಖ್ಯೆಯ ಭಕ್ತರು ಇದ್ದಾರೆ. ದೇಶ ಮಾತ್ರವಲ್ಲದೇ ವಿದೇಶಗಳಿಂದಲೂ ಸಹ ತಿಮ್ಮಪ್ಪನ ದರ್ಶನ ಪಡೆಯಲು ಆಗಮಿಸುತ್ತಾರೆ. ಈ ಬಾರಿ ಮಾತ್ರ ಕೊರೋನಾ ಮಾಹಾ ಮಾರಿಯಿಂದಾಗಿ ಕೆಲ ತಿಂಗಳ ಕಾಲ ದೇವಾಲಯವನ್ನು ಮುಚ್ಚಲಾಗಿತ್ತು. ಕೆಲವು ಮುಂಜಾಗ್ರತಾ ಮತ್ತು ಸುರಕ್ಷತಾ ಕ್ರಮಗಳೊಂದಿಗೆ ಮತ್ತೆ ದೇವಾಲಯವನ್ನು ತೆರೆಯಲಾಗಿದ್ದು, ಭಾರೀ ಪ್ರಮಾಣದ ಭಕ್ತರು ಆಗಮಿಸಿ ತಿಮ್ಮಪ್ಪನ ದರ್ಶನ ಪಡೆಯುತ್ತಿದ್ದಾರೆ. ಈ ನಡುವೆ ತಿರುಪತಿ ವೆಂಕಟೇಶ್ವರ ದೇವಾಲಯ ಹುಂಡಿ ಕಾಣಿಕೆ ಸಂಗ್ರಹದಲ್ಲಿ ಹೊಸ ದಾಖಲೆ ಬರೆದಿದೆ. ಹೌದು, ಅಕ್ಟೋಬರ್ 2ರಂದು ಗಾಂಧಿ ಜಯಂತಿಗೆ ರಜೆ ಇದ್ದ ಕಾರಣ ಅಸಂಖ್ಯಾತ ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು. ಆ ದಿನ ಸುಮಾರು 2.14 ಕೋಟಿ ರೂ.ಹುಂಡಿ ಹಣ ಸಂಗ್ರಹವಾಗಿದೆ. ಒಂದೇ ದಿನ ಇಷ್ಟು ಮೊತ್ತದ ಹಣ ಸಂಗ್ರಹವಾಗಿರುವುದು ಇದೇ ಮೊದಲು ಎಂದು ತಿಳಿದು ಬಂದಿದೆ.

  ಕೊರೋನಾ ಮಹಾಮಾರಿ ಕಾಲಿಟ್ಟಾಗಿನಿಂದ ದೇಶದ ಎಲ್ಲಾ ದೇವಾಲಯಗಳನ್ನು ಮುಚ್ಚಲಾಗಿತ್ತು. ಮತ್ತೆ ಲಾಕ್​ಡೌನ್​ ಸಡಿಲಿಕೆಯಲ್ಲಿ ಜೂನ್ 11ರಂದು ತಿರುಪತಿ ದೇವಾಲಯವನ್ನು ತೆರೆಯಲಾಗಿತ್ತು. ಅದೂ ಸಹ ಇಂತಿಷ್ಟು ಭಕ್ತರು ಬರಬೇಕೆಂಬ ನಿರ್ಬಂಧದ ಮೇಲೆ. ಹಾಗಾಗಿ ನಿರ್ಬಂಧಗಳ ಅನ್ವಯ ಇತಿ-ಮಿತಿಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸತೊಡಗಿದ್ದರು.

  ಅ.28ರಂದು ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಚುನಾವಣೆ; ನಾಮಪತ್ರ ಸಲ್ಲಿಸಲು ಅ.8 ಕೊನೆಯ ದಿನ

  ಸೆಪ್ಟೆಂಬರ್ 6ರಂದು ಸುಮಾರು 13,486 ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದರು. ಲಾಕ್​ಡೌನ್​ ಬಳಿಕ ಮೊದಲ ಬಾರಿಗೆ ದೇವಾಲಯದ ಆದಾಯ 1 ಕೋಟಿ ರೂ.ಗೂ ಮೀರಿತ್ತು. ದಿನ ಕಳೆದಂತೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ದೇವಾಲಯದ ಆದಾಯವೂ ಹೆಚ್ಚಾಗುತ್ತಿದೆ.

  ಇನ್ನು, ಅಕ್ಟೋಬರ್ 2 ಗಾಂಧೀ ಜಯಂತಿಯಂದು ಸುಮಾರು 20,228 ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು. ಮರುದಿನ ಅಂದರೆ ಅ.3ರಂದು ಹುಂಡಿ ಹಣ ಎಣಿಕೆ ಮಾಡಲಾಗಿದ್ದು, ಸುಮಾರಿ 2.14 ಕೋಟಿ ರೂ. ಸಂಗ್ರಹವಾಗಿದೆ.

  ತಿರುಪತಿ ಶ್ರೀ ವೆಂಕಟೇಶ್ವರನ ದೇವಾಲಯದಲ್ಲಿ ಅ.16ರಿಂದ 24ರ ತನಕ ಬ್ರಹ್ಮೋತ್ಸವ ನಡೆಯಲಿದೆ. ಈ ವೇಳೆ ಹೆಚ್ಚಿನ ಭಕ್ತರು ದೇವಾಲಯಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ. ಹೀಗಾಗಿ ಹೆಚ್ಚಿನ ಆದಾಯದ ನಿರೀಕ್ಷೆ ಕೂಡ ಇದೆ.
  Published by:Latha CG
  First published: