ಒಂದು ತಿಂಗಳಲ್ಲಿ ಭಕ್ತರು ಮುಡಿ ಕೊಟ್ಟ ಕೂದಲಿನಿಂದ ತಿರುಪತಿ ದೇಗುಲಕ್ಕೆ ಸಿಕ್ಕ ಆದಾಯವೆಷ್ಟು ಗೊತ್ತೆ?

news18
Updated:September 1, 2018, 9:47 AM IST
ಒಂದು ತಿಂಗಳಲ್ಲಿ ಭಕ್ತರು ಮುಡಿ ಕೊಟ್ಟ ಕೂದಲಿನಿಂದ ತಿರುಪತಿ ದೇಗುಲಕ್ಕೆ ಸಿಕ್ಕ ಆದಾಯವೆಷ್ಟು ಗೊತ್ತೆ?
news18
Updated: September 1, 2018, 9:47 AM IST
ಜನಾರ್ದನ್ ವೇಲೂರು, ನ್ಯೂಸ್ 18 

ಹೈದರಾಬಾದ್ (ಸೆ.1): ಶ್ರೀಮಂತ ದೇಗುಲ ಎಂಬ ಖ್ಯಾತಿ ಗಳಿಸಿರುವ ತಿರುಪತಿ ದೇಗುಲ ಭಕ್ತರು ಮುಡಿ ಕೊಟ್ಟ ಕೂದಲಿನಿಂದಲೂ ಕೋಟಿ, ಕೋಟಿ ಆದಾಯ ಮಾಡಿದೆ. ಭಕ್ತರ ಕೂದಲು ಇ- ಹರಾಜಿನಿಂದ ತಿರುಪತಿಯ ತಿರುಮಲ ದೇಗುಲ 7.84 ಕೋಟಿ ರೂ. ಆದಾಯ ಗಳಿಸಿದೆ.

ಆಗಸ್ಟ್ ತಿಂಗಳಿನಲ್ಲಿ ದೇಗುಲದಲ್ಲಿ ಭಕ್ತರು ಮುಡಿ ಕೊಟ್ಟ ಕೂದಲಿನಲ್ಲಿ ಒಟ್ಟು 5,600 ಕೆಜಿ ಕೂದಲು ಇ-ಹರಾಜಿನಲ್ಲಿ ಮಾರಾಟವಾಗಿದೆ. ಕೂದಲನ್ನು ಮೂರು ವಿಧವಾಗಿ ಮತ್ತು ಬಿಳಿ ಕೂದಲು ಎಂದು ವರ್ಗ ಮಾಡಿ, ಹರಾಜು ಹಾಕಲಾಗಿತ್ತು.

31 ಇಂಚುಗಳಿಗಿಂತ ಉದ್ದದ ಕೂದಲನ್ನು ಮೊದಲ ವರ್ಗ, 16ರಿಂದ 30 ಇಂಚು ಉದ್ದದ ಕೂದಲನ್ನು ಎರಡನೇ ವರ್ಗ ಹಾಗೂ 10ರಿಂದ 15 ಇಂಚು ಉದ್ದದ ಕೂದಲನ್ನು ಮೂರನೇ ವರ್ಗ ಎಂದು ಅವುಗಳಿಗೆ ದರ ನಿಗದಿ ಮಾಡಿ, ವಿಂಗಡಿಸಲಾಗಿತ್ತು.

ಟಿಟಿಡಿ 8,300 ಕೆಜಿ ಮೊದಲ ವರ್ಗದ ಕೂದಲನ್ನು ಕೆ.ಜಿ.ಗೆ 22,494 ರೂ. ದರ ನಿಗದಿಗೊಳಿಸಿ, ಇ- ಹರಾಜು ಮಾಡಿತ್ತು. ಅದರಲ್ಲಿ 1600 ಕೆ.ಜಿ. ಕೂದಲು 3.56 ಕೋಟಿ ರೂ.ಗೆ ಬಿಕರಿಯಾಯಿತು.

ಎರಡನೇ ವರ್ಗದಲ್ಲಿ 37,800 ಕೆ.ಜಿ. ಕೂದಲನ್ನು ಪ್ರತಿ ಕೆ.ಜಿ.ಗೆ 17,223 ರೂ. ದರ ನಿಗದಿ ಮಾಡಿ ಹರಾಜು ಹಾಕಿತು. ಅದರಲ್ಲಿ 2,000 ಕೆ.ಜಿ. ಕೂದಲು 3.44 ಕೋಟಿ ರೂ.ಗೆ ಮಾರಾಟವಾಯಿತು.

ಮೂರನೇ ವರ್ಗದಲ್ಲಿ 800 ಕೆ.ಜಿ. ಕೂದಲನ್ನು ಕೆ.ಜಿ.ಗೆ 3,014 ದರ ನಿಗದಿ ಮಾಡಿ, ಇ- ಹರಾಜು ಪ್ರಕ್ರಿಯೆ ನಡೆಸಿತು. ಇದರಿಂದ ಟಿಟಿಡಿ 24.11 ಲಕ್ಷ ರೂ. ಆದಾಯ ಗಳಿಸಿತು.
Loading...

ಕೆ.ಜಿ.ಗೆ 5,462 ರು. ದರ ನಿಗದಿಗೊಳಿಸಿ ಹರಾಜು ಮಾಡಿದ 6,700 ಕೆ.ಜಿ. ಬಿಳಿ ಕೂದಲಿನಲ್ಲಿ 1200 ಕೆ.ಜಿ. ಮಾರಾಟವಾಯಿತು. ಇದರಿಂದ 66.55 ಲಕ್ಷ ರೂ. ಆದಾಯ ಬಂದಿತು.

ಒಟ್ಟು ಎಲ್ಲ ವಿಭಾಗಗಳಿಂದ ಒಟ್ಟು 5,600 ಕೆ.ಜಿ. ಕೂದಲನ್ನು ಇ-ಹರಾಜು ಮಾಡಲಾಗಿದ್ದು, ಒಟ್ಟಾಗಿ ತಿರುಪತಿ ತಿರುಮಲ ದೇಗುಲಕ್ಕೆ ಒಂದೇ ತಿಂಗಳಿನಲ್ಲಿ 7.84 ಕೋಟಿ ರೂ. ಆದಾಯ ಬಂದಿದೆ.
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ