Balli Durga Prasad Death: ತೀವ್ರ ಅನಾರೋಗ್ಯದ ಕಾರಣದಿಂದಾಗಿ ತಿರುಪತಿ ಸಂಸದ ಬಲ್ಲಿ ದುರ್ಗಾ ಪ್ರಸಾದ್‌ ಮೃತ!

ಬಲ್ಲಿ ದುರ್ಗಾ ಪ್ರಸಾದ್‌ ತಿರುಪತಿ ಜಿಲ್ಲೆಯ ಗುಡೂರ್ ಮೂಲದವರಾಗಿದ್ದು, 1985-1989ರ ಅವಧಿಯಲ್ಲಿ ಮತ್ತು 1994 ಮತ್ತು 2014 ರ ನಡುವೆ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದಾರೆ. 

news18-kannada
Updated:September 16, 2020, 7:55 PM IST
Balli Durga Prasad Death: ತೀವ್ರ ಅನಾರೋಗ್ಯದ ಕಾರಣದಿಂದಾಗಿ ತಿರುಪತಿ ಸಂಸದ ಬಲ್ಲಿ ದುರ್ಗಾ ಪ್ರಸಾದ್‌ ಮೃತ!
ಬಲ್ಲಿ ದುರ್ಗಾ ಪ್ರಸಾದ್‌.
  • Share this:
ಚೆನ್ನೈ (ಸೆಪ್ಟೆಂಬರ್‌ 16); ಆಂಧ್ರಪ್ರದೇಶದ ತಿರುಪತಿ ಕ್ಷೇತ್ರದ ಸಂಸದ ಬಲ್ಲಿ ದುರ್ಗಾ ಪ್ರಸಾದ್ ರಾವ್ ಅವರು ಚೆನ್ನೈನ ಅಪೊಲೊ ಆಸ್ಪತ್ರೆಗಳಲ್ಲಿ ಇಂದು (ಬುಧವಾರ) ಸಂಜೆ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ವೈದ್ಯರು ಖಚಿತಪಡಿಸಿದ್ದಾರೆ. ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಉತ್ತಮ ಚಿಕಿತ್ಸೆಗಾಗಿ 15 ದಿನಗಳ ಹಿಂದೆ ಚೆನ್ನೈಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮೃತಪಟ್ಟಿದ್ದಾರೆ. ಮೃತ ಬಲ್ಲಿ ದುರ್ಗಾ ಪ್ರಸಾದ್‌ ಮಾಜಿ ಸಚಿವ ಎನ್.ಶ್ರೀನಿವಾಸುಲು ರೆಡ್ಡಿ ಅವರ ತೀವ್ರ ಅನುಯಾಯಿಯಾಗಿದ್ದರು. ಅಲ್ಲದೆ, ಪ್ರಖ್ಯಾತ ನಟ ರಾಜಕಾರಣಿ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ದಿವಂಗತ ಎ‌ನ್‌.ಟಿ. ರಾಮಾರಾವ್ ಅವರ ಸಂಪುಟದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದರು.

ಬಲ್ಲಿ ದುರ್ಗಾ ಪ್ರಸಾದ್‌ ತಿರುಪತಿ ಜಿಲ್ಲೆಯ ಗುಡೂರ್ ಮೂಲದವರಾಗಿದ್ದು, 1985-1989ರ ಅವಧಿಯಲ್ಲಿ ಮತ್ತು 1994 ಮತ್ತು 2014 ರ ನಡುವೆ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದಾರೆ.  1996 ಮತ್ತು 1998 ರ ನಡುವೆ ಪ್ರಾಥಮಿಕ ಶಿಕ್ಷಣ ಸಚಿವರಾಗಿಯೂ ಮತ್ತು 2009 ಮತ್ತು 2014 ರ ನಡುವೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ : ಮುಗಿಯಿತು ಕೊರೋನಾ ಭೀತಿ; ದಾಂಡೇಲಿಗೆ ದಾಂಗುಡಿಯಿಡುತ್ತಿದ್ದಾರೆ ಪ್ರವಾಸಿಗರು

ಆದರೆ, ಕೊನೆಯ ಲೋಕಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಅವರು ತಿರುಪತಿ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಇವರ ಸಾವಿಗೆ ಇಡೀ ಆಂಧ್ರಪ್ರದೇಶದ ಹಿರಿಯ ರಾಜಕೀಯ ನೇತಾರರು ಕಂಬನಿ ಮಿಡಿದಿದ್ದಾರೆ.
Published by: MAshok Kumar
First published: September 16, 2020, 7:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading