• Home
  • »
  • News
  • »
  • national-international
  • »
  • Tirupati: ವೈಕುಂಠ ಏಕಾದಶಿ ಸಂಭ್ರಮ; ತಿಮ್ಮಪ್ಪನ ದರ್ಶನಕ್ಕೆಂದು ಬಿಟ್ಟ 10,000 ಟಿಕೆಟ್ ಕೇವಲ 15 ನಿಮಿಷದಲ್ಲೇ ಸೋಲ್ಡ್‌ಔಟ್​

Tirupati: ವೈಕುಂಠ ಏಕಾದಶಿ ಸಂಭ್ರಮ; ತಿಮ್ಮಪ್ಪನ ದರ್ಶನಕ್ಕೆಂದು ಬಿಟ್ಟ 10,000 ಟಿಕೆಟ್ ಕೇವಲ 15 ನಿಮಿಷದಲ್ಲೇ ಸೋಲ್ಡ್‌ಔಟ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

'ವೈಕುಂಠ ಏಕಾದಶಿ' ಸಂದರ್ಭದಲ್ಲಿ ಜನವರಿ 13 ರಿಂದ ಜನವರಿ 22 ರವರೆಗೆ ಪ್ರತಿದಿನ 5,000 ಟಿಕೆಟ್ ಗಳನ್ನು ಆನ್‌ಲೈನ್ ನಲ್ಲಿ ಲಭ್ಯವಾಗುವಂತೆ ಮಾಡಲಾಗುವುದು

  • Share this:

ಇತ್ತೀಚೆಗೆ ಭಾರಿ ಮಳೆಯಿಂದಾಗಿ ( Heavy Rains) ಬಹುತೇಕ ಭಕ್ತರು(Devotees) ತಿರುಮಲ ತಿರುಪತಿ ದೇವಸ್ಥಾನಕ್ಕೆ(Tirumala Tirupati) ಹೋಗುವ ರಸ್ತೆಗಳೆಲ್ಲವೂ ತುಂಬಿ ಹರಿದಿರುವುದರಿಂದ (Crowded ) ಸ್ವಲ್ಪ ಸಮಯದವೆರೆಗೆ ಹೋಗಲು ಸಾಧ್ಯವಾಗಿರಲಿಲ್ಲ ಮತ್ತು ಅನೇಕರಿಗೆ ಆ ಘಟನೆಯಿಂದ ವೆಂಕಟೇಶ್ವರನ ದರ್ಶನಕ್ಕೆ (Venkateswara's darshan) ಹೋಗಲು ಆಗಿರಲಿಲ್ಲ.ತಾವು ಮುಂಗಡವಾಗಿ (Booking) ಕಾಯ್ದಿರಿಸಿಕೊಂಡ ದರ್ಶನದ ಟಿಕೆಟ್ ಗಳನ್ನು ಮತ್ತೊಮ್ಮೆ ಮಾಡಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದ್ದು ನಮಗೆಲ್ಲಾ ತಿಳಿದಿರುವ ವಿಚಾರವೇ ಆಗಿದೆ.


15 ನಿಮಿಷಗಳಲ್ಲಿಯೇ ಮಾರಾಟ
ಆದರೆ ಭಕ್ತಾದಿಗಳಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ, ಅದೇನಪ್ಪಾ ಅಂತೀರಾ? ತಿರುಮಲ ತಿರುಪತಿ ದೇವಸ್ಥಾನದವರು (ಟಿಟಿಡಿ) ಭಕ್ತಾದಿಗಳಿಗೆ ಸರ್ವ ದರ್ಶನಂ ಟಿಕೆಟ್ ಗಳನ್ನು ಬಿಡುಗಡೆ ಮಾಡಿತ್ತು, ಪ್ರತಿದಿನ 10,000 ಭಕ್ತಾದಿಗಳಿಗೆ ದೇವರ ದರ್ಶನವನ್ನು ಕಲ್ಪಿಸಿಕೊಡುವ ಉದ್ದೇಶದಿಂದ ಟಿಕೆಟ್ ಗಳನ್ನು  ಆನ್‌ಲೈನ್ ನಲ್ಲಿ ಬಿಡುಗಡೆ ಮಾಡಿತ್ತು. ಆದರೆ ಆ ಎಲ್ಲಾ ಟಿಕೆಟ್ ಗಳು ಆನ್‌ಲೈನ್ ನಲ್ಲಿ ಬಿಡುಗಡೆಯಾದ ಕೇವಲ 15 ನಿಮಿಷಗಳಲ್ಲಿಯೇ ಮಾರಾಟವಾಗಿವೆ.


ಇದನ್ನೂ ಓದಿ: Viral Video: ನಿಜವಾಯ್ತು ಬಬಲಾದಿ ಮಠದ ಮಾತು; 9 ತಿಂಗಳ ಹಿಂದೆಯೇ ತಿರುಪತಿ ಜಲಪ್ರಳದ ಭವಿಷ್ಯ ನುಡಿದಿದ್ದ ಸಿದ್ದು ಮುತ್ಯಾ!


ವೈಕುಂಠ ಏಕಾದಶಿ
'ವೈಕುಂಠ ಏಕಾದಶಿ' ಸಂದರ್ಭದಲ್ಲಿ ಜನವರಿ 13 ರಿಂದ ಜನವರಿ 22 ರವರೆಗೆ ಪ್ರತಿದಿನ 5,000 ಟಿಕೆಟ್ ಗಳನ್ನು ಆನ್‌ಲೈನ್ ನಲ್ಲಿ ಲಭ್ಯವಾಗುವಂತೆ ಮಾಡಲಾಗುವುದು. ಕೌಂಟರ್ ಗಳಲ್ಲಿ ಮಾರಾಟವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ವೆಬ್‌ಸೈಟ್ ಹತ್ತು ನಿಮಿಷಗಳ ಕಾಯುವಂತೆ ತೋರಿಸಿತು. ಐದು ನಿಮಿಷಗಳಲ್ಲಿ ಎಲ್ಲಾ ಟಿಕೆಟ್ ಗಳನ್ನು ಬುಕ್​ ಆಗಿದೆ


 ಬುಕ್ಕಿಂಗ್‌ ಕ್ಲೋಸ್
ನಾವು ಟಿಟಿಡಿ ವೆಬ್‌ಸೈಟ್ ಅನ್ನು ನಮ್ಮ ಕಂಪ್ಯೂಟರ್ ಗಳಲ್ಲಿ ತೆರೆದಿದ್ದೇವೆ. ನಾನು ಬೆಳಿಗ್ಗೆ 9 ಗಂಟೆಗೆ 10 ನಿಮಿಷಗಳ ಕಾಲ ವರ್ಚುವಲ್ ಸರದಿಯಲ್ಲಿ ಕಾಯಬೇಕಾಯಿತು ಎಂದು ಪರದೆಯ ಮೇಲೆ ಕಾಣಿಸಿಕೊಂಡಿತು. ನನ್ನ ಕುಟುಂಬ ಸದಸ್ಯರ ವಿವರಗಳನ್ನು ನಮೂದಿಸುವಾಗ, ಬೆಳಿಗ್ಗೆ 9 ಗಂಟೆಯಾಗಿ 15 ನಿಮಿಷ ಸುಮಾರಿಗೆ ಬುಕಿಂಗ್ ಮುಚ್ಚಲಾಗಿದೆ ಎಂದು ತೋರಿಸಿತು" ಎಂದು ಭಕ್ತರೊಬ್ಬರು ಹೇಳಿದರು.


ಏತನ್ಮಧ್ಯೆ, ಶ್ರೀವಾಣಿ ಟ್ರಸ್ಟ್ ಬ್ರೇಕ್ ದರ್ಶನ್ ಟಿಕೆಟ್ ಗಳು ನಾಳೆ ಆನ್‌ಲೈನ್ ನಲ್ಲಿ ಬಿಡುಗಡೆಯಾಗಲಿದೆ. ಟಿಟಿಡಿ ಡಿಸೆಂಬರ್ 28 ರಂದು ಮಧ್ಯಾಹ್ನ 3 ಗಂಟೆಗೆ ಜನವರಿ ಮತ್ತು ಫೆಬ್ರವರಿ ಕೋಟಾವನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ.

ಬ್ರೇಕ್ ದರ್ಶನ್ ಟಿಕೆಟ್
ಅಲ್ಲದೆ, ಜನವರಿ 1ನೇ ತಾರೀಖಿಗೆ 500 ರೂಪಾಯಿಯ 1,000 ಬ್ರೇಕ್ ದರ್ಶನ್ ಟಿಕೆಟ್ ಗಳು ಮತ್ತು ಜನವರಿ 13 ರಂದು ನಡೆಯುವ ವೈಕುಂಠ ಏಕಾದಶಿಗೆ 300 ರೂಪಾಯಿಯ 1,000 ಮಹಾಲಗು ದರ್ಶನ ಟಿಕೆಟ್ ಗಳನ್ನು ಬಿಡುಗಡೆ ಮಾಡಲಾಯಿತು. ಇನ್ನೂ 500 ರೂಪಾಯಿಯ ಲಘು ದರ್ಶನ ಟಿಕೆಟ್ ಗಳನ್ನು ನಾಳೆ ಮಧ್ಯಾಹ್ನ ಜನವರಿ 14 ರಿಂದ 22 ರವೆರೆಗೆ ದಿನಕ್ಕೆ 2,000 ಟಿಕೆಟ್ ಗಳಂತೆ ಬಿಡುಗಡೆ ಮಾಡಲಾಗುವುದು. ಬ್ರೇಕ್ ದರ್ಶನ್ ಟಿಕೆಟ್ ಗಳು ಜನವರಿ ಮತ್ತು ಫೆಬ್ರವರಿಯಲ್ಲಿ ಉಳಿದ ದಿನಗಳಲ್ಲಿ ಆನ್‌ಲೈನ್ ನಲ್ಲಿಯೂ ಲಭ್ಯವಿರಲಿವೆ ಎಂದು ಟಿಟಿಡಿ ಹೇಳಿದೆ.


ಇದನ್ನೂ ಓದಿ: ತಿರುಪತಿ ತಿಮ್ಮಪ್ಪನದ ದರ್ಶನಕ್ಕೆ ಬರೋಬ್ಬರಿ 2000 ಕಿ.ಮೀ ಪಾದಯಾತ್ರೆ ನಡೆಸಿದ ಗುಜರಾತಿನ ವೃದ್ಧ ದಂಪತಿ


ಈ ಎಲ್ಲಾ ದರ್ಶನವನ್ನು ಭಕ್ತರು ಪಡೆಯಲು ಅವರು ಹಾಕಿಸಿಕೊಂಡ ಕೋವಿಡ್-19 ಲಸಿಕೆ ಪ್ರಮಾಣ ಪತ್ರವನ್ನು ಹಾಜರುಪಡಿಸುವುದು ಅಥವಾ 48 ಗಂಟೆಗಳ ಮುಂಚಿತವಾಗಿ ತಪಾಸಣೆ ಮಾಡಿಸಿದ ಆರ್‌ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ಹಾಜರುಪಡಿಸಿದರೆ ಮಾತ್ರ ಯಾತ್ರಿಕರಿಗೆ ದರ್ಶನಕ್ಕಾಗಿ ತಿರುಮಲಕ್ಕೆ ಭೇಟಿ ನೀಡಲು ಅನುಮತಿ ನೀಡಲಾಗುವುದು ಎಂದು ಟಿಟಿಡಿ ಹೇಳಿದೆ.

Published by:vanithasanjevani vanithasanjevani
First published: