Tirath Singh Rawat | ಹರಿದ ಜೀನ್ಸ್ ಧರಿಸಿ, ದೇಹ ಪ್ರದರ್ಶಿಸುವುದು ಯಾವ ಸಂಸ್ಕೃತಿ?; ಉತ್ತರಾಖಂಡ ಸಿಎಂ ತೀರತ್ ಸಿಂಗ್ ಅಸಮಾಧಾನ

Tirath Singh Rawat | ಜೈಪುರದಿಂದ ಹಿಂತಿರುಗುವ ಸಂದರ್ಭದಲ್ಲಿ ತೀರತ್ ಸಿಂಗ್ ರವರ ಪಕ್ಕದಲ್ಲಿ ಮಹಿಳೆಯೊಬ್ಬರು ಆಸೀನರಾಗುತ್ತಾರೆ. ಅವರು ಹರಿದ ಜೀನ್ಸ್ ಅನ್ನು ಧರಿಸಿದ್ದನ್ನು ಕಂಡ ಉತ್ತರಾಖಂಡ ಸಿಎಂ ಎನ್‌ಜಿಒ ನಡೆಸುತ್ತಿರುವ ಮಕ್ಕಳಿರುವ ತಾಯಿಯ ಇದ್ಯಾವ ಸಂಸ್ಕೃತಿ?!" ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ತಿರಾತ್ ಸಿಂಗ್ ರಾವತ್

ತಿರಾತ್ ಸಿಂಗ್ ರಾವತ್

  • Share this:
    ಹರಿದ ಜೀನ್ಸ್ ಉಡುಪು ಧರಿಸಿಕೊಂಡು ತಮ್ಮ ದೇಹವನ್ನು ಪ್ರದರ್ಶಿಸುವ ಯುವಕ ಯುವತಿಯರು "ಕತ್ತರಿಯ ಸಂಸ್ಕೃತಿ" ಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಉತ್ತರಾಖಂಡದ ಮುಖ್ಯಮಂತ್ರಿ ತೀರತ್ ಸಿಂಗ್ ರಾವತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಜೈಪುರದಿಂದ ಹಿಂತಿರುಗುವ ಸಂದರ್ಭದಲ್ಲಿ ತೀರತ್ ಸಿಂಗ್ ರವರ ಪಕ್ಕದಲ್ಲಿ ಮಹಿಳೆಯೊಬ್ಬರು ಆಸೀನರಾಗುತ್ತಾರೆ. ಅವರು ಹರಿದ ಜೀನ್ಸ್ ಅನ್ನು ಧರಿಸಿದ್ದನ್ನು ಕಂಡ ಉತ್ತರಾಖಂಡ ಸಿಎಂ, ನೀವು ಏನು ಉದ್ಯೋಗ ಮಾಡುತ್ತಿದ್ದೀರ ಎಂದು ಮಹಿಳೆಗೆ ಕೇಳುತ್ತಾರೆ. ಆಗ ಆ ಮಹಿಳೆ ತಾನು ಎನ್‌ಜಿಒ ನಡೆಸುತ್ತಿರುವುದಾಗಿ ಹೇಳುತ್ತಾಳೆ. ಅವಳ ಹತ್ತಿರ ಮಕ್ಕಳು ಸಹ ಇರುವುದನ್ನು ಕಂಡು ತೀರತ್ ಸಿಂಗ್ ರವರು "ಎನ್‌ಜಿಒ ನಡೆಸುತ್ತಿರುವ ಮಕ್ಕಳಿರುವ ತಾಯಿಯ ಇದ್ಯಾವ ಸಂಸ್ಕೃತಿ?!" ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.

    ಈ ರೀತಿ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ರಾವತ್ ರವರಿಗಿಂತ ಮೊದಲು 2013ರಲ್ಲಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಗೌರ್ ಅವರು ಭಾನುವಾರ ಜೀನ್ಸ್ ಮತ್ತು ಟೀ ಶರ್ಟ್ ಧರಿಸಿ, ಮದ್ಯ ಸೇವಿಸಿ ಮತ್ತು ಇತರ ಪುರುಷರೊಂದಿಗೆ ನೃತ್ಯ ಮಾಡುವ ಮಹಿಳೆಯರ ‘ವಿದೇಶಿ ಸಂಸ್ಕೃತಿ’ ಭಾರತಕ್ಕೆ ಒಳ್ಳೆಯದಲ್ಲ ಎಂದು ಹೇಳಿದ್ದರು. "ಜೀನ್ಸ್ ಧರಿಸುವುದು ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿದೆ ಮತ್ತು ಅನಪೇಕ್ಷಿತ ನಡವಳಿಕೆಯನ್ನು ಪ್ರಚೋದಿಸುತ್ತದೆ" ಎಂದು ಪ್ರಸಿದ್ಧ ಗಾಯಕ ಕೆ.ಜೆ.ಯೆಸುದಾಸ್ ಅವರು ಜೀನ್ಸ್ ಉಡುಗೆ ವಿರುದ್ಧ ಅಸಮಧಾನಗೊಂಡಿದ್ದರು.

    ಇದನ್ನೂ ಓದಿ: Road Accident: ವಿಜಯಪುರದಲ್ಲಿ ಭೀಕರ ಅಪಘಾತ; ಪುಣೆಯ ಇಬ್ಬರು ಕಬಡ್ಡಿ ಕ್ರೀಡಾಪಟುಗಳು ಸಾವು

    2012ರ ಜುಲೈ 9ರಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರು ಪುರುಷರ ತಂಡದಿಂದ ಹುಡುಗಿಯ ಮೇಲೆ ಕಿರುಕುಳದ ತನಿಖೆ ಮಾಡಲು ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗಿಯ ಅವರು ಗುವಾಹಟಿಗೆ ಹೋಗಿದ್ದಾಗ "ಪುರುಷರನ್ನು ಕೆರಳಿಸುವ ರೀತಿಯಲ್ಲಿ ಮಹಿಳೆಯರು ಉಡುಗೆ ತೊಡಬಾರದು" ಎಂದು ಹೇಳಿದ್ದರು. 2013 ರಲ್ಲಿ ವಿಜಯವರ್ಗಿಯ ರಾಮಾಯಣವನ್ನು ಉಲ್ಲೇಖಿಸಿ, ಸೀತೆಯನ್ನು ರಾವಣನಿಂದ ಅಪಹರಿಸಿದಂತೆ, ಮಹಿಳೆ ತನ್ನ ಮಿತಿಗಳನ್ನು ಮೀರಿದರೆ ಶಿಕ್ಷೆ ಅನುಭವಿಸಬೇಕಾಗಬಹುದು ಎಂದು ಹೇಳಿದ್ದರು.

    ಉತ್ತರ ಪ್ರದೇಶದ ಮುಜಫರ್ನಗರ ಜಿಲ್ಲೆಯ ಖಪ್ ಪಂಚಾಯತಿಯಿಂದ ಇತ್ತೀಚೆಗೆ ಮಹಿಳೆಯರು ಜೀನ್ಸ್ ಮತ್ತು ಪುರುಷರು ಶಾರ್ಟ್ಸ್ ಧರಿಸುವುದನ್ನು ನಿಷೇಧಿಸಿತು. ಜೀನ್ಸ್ ಉಡುಗೆಯು ಪಾಶ್ಚಿಮಾತ್ಯ ಸಂಸ್ಕೃತಿಯ ಭಾಗವಾಗಿದೆ ಮತ್ತು ಜನರು ಸಾಂಪ್ರದಾಯಿಕ ಭಾರತೀಯ ಬಟ್ಟೆಗಳನ್ನು ಧರಿಸಬೇಕು ಎಂದು ಹೇಳಿದೆ. ರಜಪೂತ ಸಮುದಾಯದ ಪಂಚಾಯತ್ ಸಹ ಆಜ್ಞೆಯನ್ನು ಉಲ್ಲಂಘಿಸಿದವರಿಗೆ ಶಿಕ್ಷೆ ವಿಧಿಸಲಾಗುವುದು ಮತ್ತು ಬಹಿಷ್ಕಾರವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಭಾರತದ ಯುವ ಜನಾಂಗವು ಮೈಗೂಡಿಸಿಕೊಂಡಿದೆ. ವಿಲಕ್ಷಣ ಉಡುಪುಗಳಿಂದ ತಮ್ಮ ಮೈಮಾಟ ಪ್ರದರ್ಶಿಸಿ ಉತ್ತಮ ಸಮಾಜದ ಪರಿಸರವನ್ನು ಹದಗೆಟ್ಟಿಸುತ್ತಿರುವುದು ಸುಳ್ಳಲ್ಲ. ಹರಿದ ಜೀನ್ಸ್ ಉಡುಗೆ ತೊಟ್ಟು ತನ್ನ ಮೈಮಾಟ ತೋರಿಸುತ್ತಿದ್ದ ಮಕ್ಕಳಿರುವ ತಾಯಿ ಹಾಗೂ ಆಕೆಯು ಎನ್‌ಜಿಒ ನಡೆಸುತ್ತಿರುವುದನ್ನು ಕಂಡು ಉತ್ತರಾಖಂಡ್ ಮುಖ್ಯಮಂತ್ರಿ ಅಸಮಾಧಾನ ಹೊರಹಾಕಿದ್ದಾರೆ.
    Published by:Sushma Chakre
    First published: