Tipu Sultan Sword: ಕೋಟಿ ಕೋಟಿ ರೂಪಾಯಿಗೆ ಮಾರಾಟವಾಗಿ ದಾಖಲೆ ಸೃಷ್ಟಿಸಿದ ಟಿಪ್ಪು ಸುಲ್ತಾನ್ ಖಡ್ಗ!

ಟಿಪ್ಪು ಸುಲ್ತಾನ್ ಖಡ್ಗ

ಟಿಪ್ಪು ಸುಲ್ತಾನ್ ಖಡ್ಗ

ಟಿಪ್ಪು ಸುಲ್ತಾನ್ ಕತ್ತಿಯ ಬೆಲೆ ಈ ಹಿಂದಿಗಿಂತ ಏಳು ಪಟ್ಟು ಹೆಚ್ಚಾಗಿದೆ. ಆಕ್ಷನ್‌ ಹೌಸ್ ಬೋನ್‌ಹಾಮ್ಸ್‌ ಹರಾಜು ಕರೆದಿತ್ತು. ಇದೀಗ ಆ ಹರಾಜಿನಲ್ಲಿ ಮಾರಾಟ ಆಗಿರುವ ಬಗ್ಗೆ ಮಾಹಿತಿ ನೀಡಿದೆ.

  • Share this:

ನವದೆಹಲಿ: ಟಿಪ್ಪು ಸುಲ್ತಾನ್‌.. ಈ ಹೆಸರು ಕೇಳಿದ್ರೆನೇ ಎಂತವರ ಕಿವಿ ಕೂಡ ಒಂದು ಸಲ ನೆಟ್ಟಗಾಗುತ್ತೆ. ತಾನು ಸತ್ತು 200-300 ವರ್ಷಗಳು ಕಳೆದರೂ ಕೂಡ ಇಂದಿಗೂ ಸದಾ ಪ್ರಚಲಿತದಲ್ಲಿದ್ದು ಮತ್ತು ಆಗಾಗ ವಿವಾದಗಳಿಗೆ ಎಡೆ ಮಾಡುತ್ತಿರುವ ಟಿಪ್ಪು ಸುಲ್ತಾನ್ (Tipu Sultan) ಒಂದು ಕಾಲದ ಮೈಸೂರು ಹುಲಿ (Tiger Of Mysuru) ಎಂದೇ ಕರೆಸಿಕೊಂಡಿದ್ದ ಮೈಸೂರಿನ ದೊರೆ. ಕಳೆದ ಕೆಲ ವರ್ಷಗಳಿಂದ ರಾಜಕೀಯ ಕಾರಣಗಳಿಗಾಗಿ ಸುದ್ದಿಯಾಗುತ್ತಿದ್ದ ಟಿಪ್ಪು ಸುಲ್ತಾನ್ ಹೆಸರು ಈಗ ಮತ್ತೊಂದು ಬೇರೆ ವಿಷಯಕ್ಕೆ ಸುದ್ದಿಯಾಗಿದೆ.


ಹೌದು. 18ನೇ ಶತಮಾನದಲ್ಲಿ ಮೈಸೂರನ್ನು ಆಳಿದ್ದ ಟಿಪ್ಪು ಸುಲ್ತಾನ್ ಬಳಸುತ್ತಿದ್ದ ಅನೇಕ ವಸ್ತುಗಳನ್ನು ಅಲ್ಲಲ್ಲಿ ವಸ್ತು ಸಂಗ್ರಹಾಲಯಗಳಲ್ಲಿ ಕಾಪಾಡಿಕೊಂಡು ಬರಲಾಗಿದೆ. ಮೈಸೂರಿನ ದೊರೆ ಟಿಪ್ಪು ಸುಲ್ತಾನ್ ಬಳಸುತ್ತಿದ್ದ ಖಡ್ಗವನ್ನು ಇತ್ತೀಚೆಗೆ ಅಂದರೆ 2004ರಲ್ಲಿ ಮದ್ಯದ ದೊರೆಯಾಗಿದ್ದ ವಿಜಯ್ ಮಲ್ಯ ಖರೀದಿಸಿದ್ದರು. ಆಗ 1.5 ಕೋಟಿ ರೂಪಾಯಿ ನೀಡಿ ಖರೀದಿಸಿದ್ದ ಟಿಪ್ಪು ಸುಲ್ತಾನ್ ಖಡ್ಗವು ವಿಜಯ್ ಮಲ್ಯ ಜೊತೆ ಇತ್ತು. ಇದೀಗ ಆ ಖಡ್ಗವನ್ನು ಹರಾಜಿಗೆ ಹಾಕಲಾಗಿದೆ.


ಇದನ್ನೂ ಓದಿ: Viral News: 17 ರೂಪಾಯಿ ಇದ್ದ ಖಾತೆಯಲ್ಲೀಗ ಕೋಟಿ ಕೋಟಿ ಮೊತ್ತ, ದಿನ ಬೆಳಗಾಗ್ತಿದಂತೆ ಕುಬೇರನಾದ ಕೂಲಿ ಕಾರ್ಮಿಕ!


ಬರೋಬ್ಬರಿ 140 ಕೋಟಿಗೆ ಸೇಲ್


ಹೌದು.. ಟಿಪ್ಪು ಸುಲ್ತಾನ್ ಬಳಸುತ್ತಿದ್ದ ಖಡ್ಗವನ್ನು ಲಂಡನ್‌ನಲ್ಲಿ ಹರಾಜಿಗೆ ಹಾಕಲಾಗಿದ್ದು, ಇತ್ತೀಚೆಗೆ ನಡೆದ ಹರಾಜಿನಲ್ಲಿ 14 ಮಿಲಿಯನ್ ಪೌಂಡ್‌ ($ 17.4 ಮಿಲಿಯನ್) ಅಂದರೆ ಭಾರತೀಯ ಮೌಲ್ಯದಲ್ಲಿ ಬರೋಬ್ಬರಿ 140 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. ಆ ಮೂಲಕ ಟಿಪ್ಪು ಸುಲ್ತಾನ್ ಕತ್ತಿಯ ಬೆಲೆ ಈ ಹಿಂದಿಗಿಂತ ಏಳು ಪಟ್ಟು ಹೆಚ್ಚಾಗಿದೆ. ಆಕ್ಷನ್‌ ಹೌಸ್ ಬೋನ್‌ಹಾಮ್ಸ್‌ ಹರಾಜು ಕರೆದಿತ್ತು. ಇದೀಗ ಆ ಹರಾಜಿನಲ್ಲಿ ಮಾರಾಟ ಆಗಿರುವ ಬಗ್ಗೆ ಮಾಹಿತಿ ನೀಡಿದೆ. ಅಲ್ಲದೇ, ಟಿಪ್ಪು ಸುಲ್ತಾನ್ ಬಳಸುತ್ತಿದ್ದ ಈ ಖಡ್ಗವು  ಅತ್ಯಂತ ಪ್ರಮುಖವಾಗಿದೆ ಎಂದು ಬೊನ್ಹಾಮ್ಸ್ ಹೇಳಿದೆ.


ಇದನ್ನೂ ಓದಿ: Teachers Fight: ಕಿಟಕಿ ವಿಚಾರಕ್ಕೆ ನೆಲದಲ್ಲಿ ಉರುಳಾಡಿ ಹೊಡೆದಾಡಿಕೊಂಡ ಶಿಕ್ಷಕಿಯರು! ವಿಡಿಯೋ ವೈರಲ್‌




ಈ ಬಗ್ಗೆ ಹೇಳಿಕೆ ನೀಡಿರುವ ಬೋನ್‌ಹಾಮ್ಸ್ ಮುಖ್ಯಸ್ಥ ಆಲಿವರ್ ವೈಟ್, ಖಾಸಗಿ ವ್ಯಕ್ತಿಗಳ ಕೈಯಲ್ಲಿದ್ದ ಈ ಅದ್ಭುತವಾದ ಖಡ್ಗವು ಟಿಪ್ಪು ಸುಲ್ತಾನನಿಗೆ ಸಂಬಂಧಿಸಿದ ಎಲ್ಲಾ ಆಯುಧಗಳಲ್ಲಿ ತುಂಬಾನೆ ಶ್ರೇಷ್ಠವಾಗಿದೆ. ಟಿಪ್ಪು ಸುಲ್ತಾನ್‌ ಇದರೊಂದಿಗೆ ತುಂಬಾ ವೈಯಕ್ತಿಕ ಒಡನಾಟ ಹೊಂದಿದ್ದರು. ಅದನ್ನು ವಶಪಡಿಸಿಕೊಂಡ ದಿನದಿಂದ ಅದರ ಮೂಲ, ನಿರ್ಮಾಣ ವೇಳೆ ಉಪಯೋಗಿಸಿರುವ ಅತ್ಯುತ್ತಮ ಕರಕುಶಲತೆಯ ಬಗ್ಗೆ ತಿಳಿಯಬಹುದು. ಇದು ತುಂಬಾ ಅದ್ಭುತ ಮತ್ತು ಆಕರ್ಷಣೀಯವಾಗಿದೆ ಎಂದು ಹೇಳಿದ್ದಾರೆ.

top videos
    First published: