ಲವ್​ ಜಿಹಾದ್​ ಟೀಕೆಗೆ ಗುರಿಯಾಗಿತ್ತು ವಿಚ್ಛೇದನಕ್ಕೆ ಮುಂದಾಗಿರುವ ಐಎಎಸ್​ ಟಾಪರ್​ ಟೀನಾ ಡಾಬಿ ಮದುವೆ

Tina Dabi- Athar Khan:ಇದೊಂದು ಲವ್​ ಜಿಹಾದ್​ ಆಗಿದ್ದು, ಈ ಮದುವೆಯನ್ನು ನಿಲ್ಲಿಸಬೇಕು ಎಂದು ಹಿಂದೂ ಮಹಾಸಭಾ ಟೀನಾ ಪೋಷಕರಿಗೆ ಪತ್ರವನ್ನು ಬರೆದಿತ್ತು.

ಟೀನಾ ಡಾಬಿ-ಅಥರ್​ ಅಮರ್​ ಉಲ್​ ಶಫಿ ಖಾನ್

ಟೀನಾ ಡಾಬಿ-ಅಥರ್​ ಅಮರ್​ ಉಲ್​ ಶಫಿ ಖಾನ್

 • Share this:
  2015ರಲ್ಲಿ ಕಿರಿಯ ವಯಸ್ಸಿನಲ್ಲಿಯೇ ಐಎಎಸ್​ ಟಾಪರ್​ ಆಗಿ ಹೊರಹೊಮ್ಮಿದ ಟೀನಾ ಡಾಬಿ ಇಡೀ ದೇಶದ ಗಮನ ಸೆಳೆದಿದ್ದರು. ಐಎಎಸ್​ ಟಾಪರ್​ ಆದ ಮೊದಲ ದಲಿತ ಮಹಿಳೆ ಎಂಬ ಹೆಗ್ಗಳಿಕೆ ಕೂಡ ಟೀನಾ ಅವರಾದಗಿದೆ. ಇದಾದ ಬಳಿಕ ಮದುವೆ ತಮ್ಮ ಬ್ಯಾಚಿನ ಎರಡನೇ ಟಾಪರ್​ ಆಗಿದ್ದ ಕಾಶ್ಮೀರಿ ಮುಸ್ಲಿಂ ಅಥರ್​ ಅಮರ್​ ಉಲ್​ ಶಫಿ ಖಾನ್​ ಅವರನ್ನು ಮದುವೆಯಾಗುವ ಮೂಲಕ ಸುದ್ದಿಯಾಗಿದ್ದರು. ಅಥರ್​ 2015ನೇ ಬ್ಯಾಚಿನ ಎರಡನೇ ಟಾಪರ್​ ಆಗಿದ್ದು, ಮಸ್ಸೂರಿಯಲ್ಲಿ ತರಬೇತಿ ವೇಳೆ ಇವರಿಬ್ಬರಾಗಿದ್ದರು. 2019ರಲ್ಲಿ ಮದುವೆಯಾದ ಈ ಜೋಡಿಗೆ ವಿವಾಹವೂ ಸುದ್ದಿಯಾಗಿತ್ತು. ಮೂರು ಆರತಕ್ಷತೆ ಮೂಲಕ ಅದ್ಧೂರಿ ವಿವಾಹವಾಗಿದ್ದ ಈ ಜೋಡಿಯ ಮದುವೆಗೆ ರಾಜಕೀಯ ಗಣ್ಯರಾದ ವೆಂಕಯ್ಯ ನಾಯ್ಡು, ಸುಮಿತ್ರಾ ಮಹಾಜನ್​, ರವಿಶಂಕರ್​ ಸೇರಿ ಅನೇಕರು ಭಾಗಿಯಾಗಿದ್ದರು. ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೂಡ ಇವರ ಹೊಸ ಜೀವನಕ್ಕೆ ಟ್ವೀಟ್​ ಮೂಲಕ ಶುಭ ಕೋರಿದ್ದರು.

  ರಾಜಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಜೋಡಿ ಜೈಪುರದಲ್ಲಿ ಮೊದಲು ಸರಳವಾಗಿ ನ್ಯಾಯಾಲಯದಲ್ಲಿ ವಿವಾಹವಾಗಿದ್ದರು. ಬಳಿಕ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ ಬಳಿಕ ದೆಹಲಿಯಲ್ಲಿ ಅದ್ಧೂರಿ ಆರತಕ್ಷತೆ ನಡೆದಿತ್ತು. ಈ ಮದುವೆ ಕೋಮು ಸೌಹರ್ದತೆಯ ಸಂಕೇತ ಎಂದು ಅನೇಕರು ಪ್ರಶಂಸಿದ್ದರು. ಇದರ ಜೊತೆಗೆ ಇದೊಂದು ಲವ್​ ಜಿಹಾದ್​ ಎಂಬ ಟೀಕೆಕೂಡ ವ್ಯಕ್ತವಾಗಿತ್ತು.

  ಇದನ್ನು ಓದಿ: ಮೊದಲ ಸೋದರ ಸಂಬಂಧಿಯೊಂದಿಗಿನ ಮದುವೆ ಕಾನೂನು ಬಾಹಿರ ಎಂದ ನ್ಯಾಯಾಲಯ

  ಟೀನಾ ಅಂತರ್​ಧರ್ಮೀಯ ಮದುವೆಯಾದ ಕುರಿತು ಅನೇಕ ಬಲಪಂಥೀಯ ಸಂಘಟನೆಗಳು ಅಲ್ಲದೇ ಭಾರತೀಯ ಹಿಂದೂ ಮಹಾಸಭಾ ಟೀಕಿಸಿತ್ತು. ಇದೊಂದು ಲವ್​ ಜಿಹಾದ್​ ಆಗಿದ್ದು, ಈ ಮದುವೆಯನ್ನು ನಿಲ್ಲಿಸಬೇಕು ಎಂದು ಹಿಂದೂ ಮಹಾಸಭಾ ಟೀನಾ ಪೋಷಕರಿಗೆ ಪತ್ರವನ್ನು ಬರೆದಿತ್ತು. ಆದರೆ, ಈ ನಿರ್ಧಾರ ನಮ್ಮ ಮಗಳದು. ಆಕೆ ತಮ್ಮ ಜೀವನದ ನಿರ್ಧರ ತೆಗೆದುಕೊಳ್ಳಲು ಸ್ವತಂತ್ರಳು ಎಂದು ಟೀನಾ ಪೋಷಕರು ಸ್ಪಷ್ಟಪಡಿಸಿದ್ದರು.

  ಮದುವೆಯ ನಿರ್ಧಾರ, ಸಾಧನೆ, ವೃತ್ತಿ ಬದುಕಿನಲ್ಲಿ ಅನೇಕರಿಗೆ ಆದರ್ಶವಾಗಿದ್ದ ಈ ಜೋಡಿ ಈಗ ತಮಗೆ ವಿಚ್ಛೇದನ ಬೇಕು ಎಂದು ಕೋರ್ಟ್​ ಮೊರೆ ಹೋಗಿದ್ದಾರೆ. ಈ ಮೂಲಕ ಮತ್ತೆ ಟೀನಾ ಹೆಸರು ಸುದ್ದಿಯಾಗಿದೆ.
  Published by:Seema R
  First published: