ಕರುಣಾನಿಧಿ ಆಸ್ಪತ್ರೆಗೆ ದಾಖಲಾದ ದಿನದಿಂದ ಈವರೆಗಿನ ಟೈಮ್​ಲೈನ್


Updated:August 8, 2018, 10:13 AM IST
ಕರುಣಾನಿಧಿ ಆಸ್ಪತ್ರೆಗೆ ದಾಖಲಾದ ದಿನದಿಂದ ಈವರೆಗಿನ ಟೈಮ್​ಲೈನ್

Updated: August 8, 2018, 10:13 AM IST
ನ್ಯೂಸ್ 18 ಕನ್ನಡ
ಚೆನ್ನೈ (ಆ.7) : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ರಾಜಕಾರಣಿ ಎಂ.ಕರುಣಾನಿಧಿ ಅವರು ಮಂಗಳವಾರ ವಯೋಸಹಜ ಕಾಯಿಲೆಯಿಂದ ಇಲ್ಲಿನ ಕಾವೇರಿ ಆಸ್ಪತ್ರೆಯಲ್ಲಿ ಇಂದು ವಿಧಿವಶರಾಗಿದ್ದಾರೆ. ಕರುಣಾನಿಧಿ ಅವರು ಕಾವೇರಿ ಆಸ್ಪತ್ರೆಗೆ ದಾಖಲಾದ ದಿನದಿಂದ ಈವರೆಗೆ ನಡೆದ ಪ್ರಮುಖ ಘಟನೆಗಳು ಮತ್ತು ಆಸ್ಪತ್ರೆಗೆ ಭೇಟಿ ನೀಡಿದವರ ವಿವರ ಇಲ್ಲಿದೆ.
 • ಜುಲೈ 27 (ಶುಕ್ರವಾರ)


* ವಯೋಸಹಜ ಕಾಯಿಲೆ ಹಾಗೂ ಮೂತ್ರಪಿಂಡ ಸಮಸ್ಯೆಯಿಂದ ಬಿಗಡಾಯಿಸಿದ ಕರುಣಾನಿಧಿ ಆರೋಗ್ಯ ಸಮಸ್ಯೆ
Loading...


 • ಜುಲೈ 28 (ಶನಿವಾರ)


* ಜ್ವರ ಮತ್ತು ಮೂತ್ರಪಿಂಡದ ಸಮಸ್ಯೆಯಿಂದ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲು


*ಸಹಸ್ರಾರು ಸಂಖ್ಯೆಯಲ್ಲಿ ಆಸ್ಪತ್ರೆ ಮುಂದೆ ಜಮಾಯಿಸಿದ ಬೆಂಬಲಿಗರು


*ಶೀಘ್ರ ಗುಣಮುಖರಾಗಲೆಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಂದ ಟ್ವೀಟ್


*ಕರುಣಾನಿಧಿ ಮಗ ಎಂ.ಕೆ.ಸ್ಟಾಲಿನ್ ಅವರಿಂದ ಆರೋಗ್ಯ ಮಾಹಿತಿ ಪಡೆದ ತಮಿಳುನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿ


*ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್
 • ಜುಲೈ 29 (ಭಾನುವಾರ)


*ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಕಾವೇರಿ ಆಸ್ಪತ್ರೆಗೆ ಬಂದು ಕರುಣಾನಿಧಿ ಅವರ ಆರೋಗ್ಯ ವಿಚಾರಣೆ


*ಪೂರ್ವನಿಗದಿ ಕಾರ್ಯಕ್ರಮಗಳನ್ನು ರದ್ದುಮಾಡಿ ಆಸ್ಪತ್ರೆಗೆ ಧಾವಿಸಿದ ತಮಿಳುನಾಡು ಮುಖ್ಯಮಂತ್ರಿ ಇ. ಪಳನಿಸ್ವಾಮಿ


*ಆಸ್ಪತ್ರೆ ಮುಂದೆ ಜಮಾಯಿಸಿದ್ದ ಬೆಂಬಲಿಗರನ್ನು ಚದುರಿಸಲು ಪೊಲೀಸರಿಂದ ಲಾಠಿ ಪ್ರಹಾರ
 • ಜುಲೈ 30 (ಸೋಮವಾರ)


*ಆಸ್ಪತ್ರೆಗೆ ತೆರಳಿ ಕರುಣಾನಿಧಿ ಆರೋಗ್ಯ ವಿಚಾರಿಸಿದ ಡಿಎಂಕೆ ನಾಯಕ ಎ.ರಾಜಾ ಮತ್ತು ಇ.ವಿ.ವೇಲು


*ಕಾವೇರಿ ಆಸ್ಪತ್ರೆ ಆವರಣದಲ್ಲಿ ಹೆಚ್ಚುವರಿವಾಗಿ ಬಿಗಿ ಪೊಲೀಸ್ ಭದ್ರತೆ ನಿಯೋಜನೆ


*ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಭೇಟಿ, ಆರೋಗ್ಯ ವಿಚಾರಣೆ


*ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ್ ಸಿರಿಸೇನಾ ಅವರು ಕಾವೇರಿ ಆಸ್ಪತ್ರೆಗೆ ತೆರಳಿ ಕರುಣಾನಿಧಿ ಆರೋಗ್ಯ ವಿಚಾರಣೆ
 • ಜುಲೈ 31 (ಮಂಗಳವಾರ)


*ಆಸ್ಪತ್ರೆಗೆ ಆಗಮಿಸಿ ಆರೋಗ್ಯ ವಿಚಾರಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ


*ಶೀಘ್ರ ಮುಖಮುಖರಾಗಲೆಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಂದ ಟ್ವೀಟ್


*ಆಸ್ಪತ್ರೆಗೆ ಭೇಟಿ ನೀಡಿದ ತಮಿಳುನಾಡು ಸೂಪರ್ ಸ್ಟಾರ್ ರಜನಿಕಾಂತ್
 • ಆಗಸ್ಟ್ 1 (ಬುಧವಾರ)


*ತಮಿಳು ನಟರಾದ ವಿಜಯ್, ಅಜಿತ್, ಗೌಂಡಮಣಿ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಣೆ
 • ಆಗಸ್ಟ್ 3 (ಶುಕ್ರವಾರ)


*ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ


*ತಮಿಳುನಾಡಿನ ನಟ ಹಾಗೂ ರಾಜಕಾರಣಿ ಕಮಲ ಹಾಸನ್ ಅವರ ಭೇಟಿ
 • ಆಗಸ್ಟ್ 4 (ಶನಿವಾರ)


*ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು
 • ಆಗಸ್ಟ್ 5 (ಭಾನುವಾರ)


*ಎರಡು ಮೂರು ದಿನದಲ್ಲಿ ಕರುಣಾನಿಧಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಡಿಎಂಕೆಯಿಂದ ಪ್ರಕಟಣೆ


*ಕಾವೇರಿ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್
 • ಆಗಸ್ಟ್ 6 (ಸೋಮವಾರ)


*ಮೊದಲ ಬಾರಿಗೆ ಕರುಣಾನಿಧಿ ಅವರ ಪತ್ನಿ ದಯಾಲು ಅಮ್ಮಾಲ್ ಅವರು ಆಸ್ಪತ್ರೆಗೆ ಭೇಟಿ


*ಕರುಣಾನಿಧಿ ಅವರ ಆರೋಗ್ಯ ಚಿಂತಾಜನಕವಾಗಿದೆ ಎಂದು ಕಾವೇರಿ ಆಸ್ಪತ್ರೆಯಿಂದ ಪ್ರಕಟಣೆ
 • ಆಗಸ್ಟ್ 7(ಮಂಗಳವಾರ)


ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಸಂಜೆ 6.10ಕ್ಕೆ ಕೊನೆಯುಸಿರೆಳೆದ ಎಂ. ಕರುಣಾನಿಧಿ.

First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...