ಒಂದರಲ್ಲ, ಎರಡಲ್ಲ 6 ಕೋಟಿ ಮೌಲ್ಯದ ವಾಚ್​ ಕದ್ದು ಪರಾರಿಯಾದ ಕಳ್ಳ!

ಬೆಲೆಬಾಳುವ, ಐಷಾರಾಮಿ ಮತ್ತು ದುಬಾರಿಯಾದ ವಸ್ತುಗಳನ್ನೇ ಟಾರ್ಗೆಟ್​ ಮಾಡಿ ಕದಿಯುವ ಕಳ್ಳರ ಗುಂಪು ಈ ಕೃತ್ಯ ಎಸಗಿದೆ. ಪ್ಯಾರಿಸ್​ ರಸ್ತೆಯಲ್ಲಿ ಈ ರೀತಿಯ ಕಳ್ಳತನಗಳು ನಡೆಯುತ್ತಿರುತ್ತವೆ.

Latha CG | news18-kannada
Updated:October 9, 2019, 12:58 PM IST
ಒಂದರಲ್ಲ, ಎರಡಲ್ಲ 6 ಕೋಟಿ ಮೌಲ್ಯದ ವಾಚ್​ ಕದ್ದು ಪರಾರಿಯಾದ ಕಳ್ಳ!
ಬೆಲೆಬಾಳುವ, ಐಷಾರಾಮಿ ಮತ್ತು ದುಬಾರಿಯಾದ ವಸ್ತುಗಳನ್ನೇ ಟಾರ್ಗೆಟ್​ ಮಾಡಿ ಕದಿಯುವ ಕಳ್ಳರ ಗುಂಪು ಈ ಕೃತ್ಯ ಎಸಗಿದೆ. ಪ್ಯಾರಿಸ್​ ರಸ್ತೆಯಲ್ಲಿ ಈ ರೀತಿಯ ಕಳ್ಳತನಗಳು ನಡೆಯುತ್ತಿರುತ್ತವೆ.
  • Share this:
ಪ್ಯಾರಿಸ್​(ಅ.09): ಸಮಯವೇ ಹಣ ಎನ್ನುವ ಮಾತು ಚಾಲ್ತಿಯಲ್ಲಿದೆ. ಈ ವಿಚಾರ ಪ್ಯಾರಿಸ್​​ ವ್ಯಕ್ತಿಯ ಪಾಲಿಗೆ ಅಕ್ಷರಶಃ ಸತ್ಯವಾಗಿದೆ. ಕಾರಣ, ಪ್ಯಾರಿಸ್​ನಲ್ಲಿ ಸಿಗರೇಟ್​ ಸೇದಲು ಹೋಟೆಲ್​ನಿಂದ ಹೊರಬಂದ ಜಪಾನ್​ ಉದ್ಯಮಿಯ  6 ಕೋಟಿ ವಾಚ್​ಅನ್ನು ಕಳ್ಳನೊಬ್ಬ ಕಸಿದು ಪರಾರಿಯಾಗಿದ್ದಾನೆ.

ಆರ್ಕ್ ಡಿ ಟ್ರಿಯೋಂಫ್ ಬಳಿಯ ​ ನೆಪೋಲಿಯನ್​ ಹೋಟೆಲ್​ನಲ್ಲಿ ತಂಗಿದ್ದ 30 ವರ್ಷದ ಜಪಾನಿನ ಉದ್ಯಮಿಯೊಬ್ಬರು, ಹೋಟೆಲ್​ನಿಂದ ಹೊರಗೆ ಮತ್ತೊಬ್ಬ ವ್ಯಕ್ತಿಯ ಜೊತೆ ಧೂಮಪಾನ ಮಾಡುತ್ತಿದ್ದರು. ಇವರು ಕೈಗೆ ಬರೋಬ್ಬರಿ 6 ಕೋಟಿ ರೂ. ಮೌಲ್ಯದ ವಾಚ್​ ಕಟ್ಟಿದ್ದರು. ಆದರೆ ಕಳ್ಳನೊಬ್ಬ ಆ ವಾಚ್​ ಎಗರಿಸಿದ್ದಾನೆ.

ಬೆಲೆಬಾಳುವ ವಾಚ್​ ಕಳೆದುಕೊಂಡ ವ್ಯಕ್ತಿ ದೂರು ದಾಖಲಿಸಿದ್ದಾರೆ. ಅವರು ಕಳೆದುಕೊಂಡ ವಾಚ್​, ರಿಚರ್ಡ್ ಮಿಲ್ಲೆ ಐಷಾರಾಮಿ ಬ್ರಾಂಡ್‌ನ ಸ್ವಿಸ್ ವಾಚ್​​ 'ಟೂರ್‌ಬಿಲ್ಲನ್ ಡೈಮಂಡ್ ಟ್ವಿಸ್ಟರ್'. ಈ ವಾಚ್​ ಮೌಲ್ಯ ಬರೋಬ್ಬರಿ 6 ಕೋಟಿ.

ನೆರೆ ಬಗ್ಗೆ ನಾನು ಮಾತನಾಡದಿದ್ದರೆ ಸಿಎಂ ಬಿಎಸ್​ವೈ ಇಷ್ಟೊತ್ತಿಗೆ ರಾಜೀನಾಮೆ ನೀಡಬೇಕಿತ್ತು; ಯತ್ನಾಳ್​ ಹೊಸ ಬಾಂಬ್

ಬೆಲೆಬಾಳುವ, ಐಷಾರಾಮಿ ಮತ್ತು ದುಬಾರಿಯಾದ ವಸ್ತುಗಳನ್ನೇ ಟಾರ್ಗೆಟ್​ ಮಾಡಿ ಕದಿಯುವ ಕಳ್ಳರ ಗುಂಪು ಈ ಕೃತ್ಯ ಎಸಗಿದೆ. ಪ್ಯಾರಿಸ್​ ರಸ್ತೆಯಲ್ಲಿ ಈ ರೀತಿಯ ಕಳ್ಳತನಗಳು ನಡೆಯುತ್ತಿರುತ್ತವೆ. ಆದರೆ ಅತಿ ಹೆಚ್ಚು ಬೆಲೆಬಾಳುವ ವಾಚನ್ನು ಕದ್ದಿರುವುದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ, ಪ್ಯಾರಿಸ್ ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿಯಲ್ಲಿ  ಈ ಪ್ರಕರಣದ  ಬಗ್ಗೆ ತನಿಖೆ ನಡೆಸಲು ಪ್ಯಾರಿಸ್ ನ್ಯಾಯಾಂಗ ಪೊಲೀಸರಿಗೆ ಈ ವಿಷಯವನ್ನು ತಿಳಿಸಲಾಗಿದೆ. ಸೋಮವಾರ ಸಂಜೆ 9: 30 ಕ್ಕೆ ಚಾಂಪ್ಸ್-ಎಲಿಸೀಸ್ ಬಳಿಯ ಅವೆನ್ಯೂ ಡಿ ಫ್ರೀಡ್‌ಲ್ಯಾಂಡ್‌ನಲ್ಲಿ ಈ ದರೋಡೆ ನಡೆದಿದೆ.

First published:October 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ