ಪ್ಲಾಸ್ಟಿಕ್ ಬಳಕೆಗೆ ಇಡೀ ವಿಶ್ವ ವಿದಾಯ ಹೇಳಬೇಕು, ನೀರಿನ ಅಜೆಂಡಾ ಪಾಲಿಸಬೇಕು; ಪ್ರಧಾನಿ ನರೇಂದ್ರ ಮೋದಿ ಕರೆ

ಭಾರತ ಸರ್ಕಾರ ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ಕೊನೆಗಾಣಿಸುವುದಾಗಿ ಘೋಷಿಸಿದೆ. ಅಲ್ಲದೆ, ಇಡೀ ವಿಶ್ವ ಈ ನಿರ್ಣಯವನ್ನು ತೆಗೆದುಕೊಳ್ಳಬೇಕು. ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಕೊನೆ ಹಾಡಲು ಎಲ್ಲಾ ದೇಶಗಳು ಶ್ರಮಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಹವಾಮಾನ ವೈಪರೀತ್ಯ ಅಧಿವೇಶನದಲ್ಲಿ ಮನವಿ ಮಾಡಿಕೊಂಡಿದ್ದಾರೆ.

MAshok Kumar
Updated:September 9, 2019, 2:49 PM IST
ಪ್ಲಾಸ್ಟಿಕ್ ಬಳಕೆಗೆ ಇಡೀ ವಿಶ್ವ ವಿದಾಯ ಹೇಳಬೇಕು, ನೀರಿನ ಅಜೆಂಡಾ ಪಾಲಿಸಬೇಕು; ಪ್ರಧಾನಿ ನರೇಂದ್ರ ಮೋದಿ ಕರೆ
ಪ್ರಧಾನಿ ನರೇಂದ್ರ ಮೋದಿ
  • Share this:
ನವ ದೆಹಲಿ (ಸೆಪ್ಟೆಂಬರ್.09); ಹವಾಮಾನ ಬದಲಾವಣೆ ಮತ್ತು ಭೂ ಕುಸಿತವನ್ನು ಪರಿಹರಿಸಲು ಎಲ್ಲಾ ದೇಶಗಳು ‘ಜಾಗತಿಕ ನೀರಿನ ಅಜೆಂಡಾ’ವನ್ನು ಪಾಲಿಸಬೇಕು ಭಾರತ ಸರ್ಕಾರ ಅನುಪಯುಕ್ತವಾದ 26 ದಶಲಕ್ಷ ಹೆಕ್ಟೇರ್ ಭೂಮಿಯನ್ನು ಪುನಃಸ್ಥಾಪಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಘೋಷಿಸಿದ್ದಾರೆ. ಅಲ್ಲದೆ, ಒಮ್ಮೆ ಉಪಯೋಗಿಸಿ ಎಸೆವ ಪ್ಲಾಸ್ಟಿಕ್ ಗೆ ಇಡೀ ವಿಶ್ವ ವಿದಾಯ ಘೋಷಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ಸೋಮವಾರ ಗ್ರೇಟರ್ ನೋಡ್ಡಾದಲ್ಲಿ ನಡೆದ ವಿಶ್ವಸಂಸ್ಥೆಯ (ಯುಎನ್​ಸಿಸಿಡಿ) ಹವಾಮಾನ ವೈಪರೀತ್ಯದ 14ನೇ ಅಂತಾರಾಷ್ಟ್ರೀಯ ಅಧಿವೇಶನದಲ್ಲಿ ಭೂಮಿಯ ಮೇಲೆ ಹೂಡಿಕೆ ಮಾಡುವುದು ಹಾಗೂ ಅವಕಾಶಗಳನ್ನು ಸೃಷ್ಟಿಸುವ ವಿಷಯದ ಕುರಿತು ಮಾತನಾಡಿದ ಅವರು, “ಈ ಅಧಿವೇಶನದಲ್ಲಿ ನಾನು ಜಾಗತಿಕ ನೀರಿನ ಕ್ರಿಯಾ ಕಾರ್ಯಸೂಚಿಯನ್ನು ರಚಿಸಲು ಬಯಸುತ್ತೇನೆ. ಇದು ಭೂ ನಾಶದ ತಟಸ್ಥತೆಯ ಕಾರ್ಯತಂತ್ರದ ಕೇಂದ್ರವಾಗಿದೆ. ಅಲ್ಲದೆ ಇಡೀ ಜಗತ್ತು ಇಂದು ಪ್ರಸ್ತುತ ಪ್ಲಾಸ್ಟಿಕ್ ಭೀತಿಯನ್ನು ಎದುರಿಸುತ್ತಿದೆ.

ಹೀಗಾಗಿ ಭಾರತದ ನನ್ನ ಸರ್ಕಾರ ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ಕೊನೆಗಾಣಿಸುವುದಾಗಿ ಘೋಷಿಸಿದೆ. ಅಲ್ಲದೆ, ಇಡೀ ವಿಶ್ವ ಈ ನಿರ್ಣಯವನ್ನು ತೆಗೆದುಕೊಳ್ಳಬೇಕು. ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಕೊನೆ ಹಾಡಲು ಎಲ್ಲಾ ದೇಶಗಳು ಶ್ರಮಿಸಬೇಕು ಎಂದು ನಾನು ಕೇಳಿಕೊಳ್ಳುತ್ತೇನೆ" ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : ಕಾಶ್ಮೀರದ ಕುರಿತು ಫೇಸ್​ಬುಕ್​ ಬರಹ!; ಐದು ಜನ ಅನಿವಾಸಿ ಭಾರತೀಯರ ಪಾಸ್​ಪೋರ್ಟ್​ ರದ್ದು ಮಾಡಲು ಮುಂದಾಗಿರುವ ಕೇಂದ್ರ!

ಭೂ ಪುನಃಸ್ಥಾಪನೆ ಸೇರಿದಂತೆ ಅನೇಕ ಅನ್ವಯಿಕ ವಿಚಾರಗಳಿಗೆ ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸುವುದರಲ್ಲಿ ಭಾರತ ಹೆಮ್ಮೆಪಡುತ್ತದೆ. ನಾವು ಇತ್ತೀಚಿನ ದಿನಗಳಲ್ಲಿ ಪ್ರತಿ ಹೆಕ್ಟೇರ್ ಭೂಮಿಯಲ್ಲೂ ಹೆಚ್ಚಿನ ಬೆಳೆ ಎಂಬ ಧ್ಯೇಯವಾಕ್ಯದೊಂದಿಗೆ ಕೆಲಸ ಮಾಡುತ್ತಿದ್ದೇವೆ. ಶೂನ್ಯ ಬಜೆಟ್ ನೈಸರ್ಗಿಕ ಕೃಷಿಯತ್ತಲೂ ಗಮನ ಹರಿಸುತ್ತಿದ್ದೇವೆ. ಅಲ್ಲದೆ ಹವಾಮಾನ ಬದಲಾವಣೆ, ಜೀವವೈವಿಧ್ಯತೆ ಮತ್ತು ಭೂ ಕುಸಿತದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಭಾರತದ ಉಪಕ್ರಮಗಳನ್ನು ಇಲ್ಲಿ ಪ್ರಸ್ತಾಪಿಸಲು ಸಂತೋಷವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಯುಗ ಯುಗಳಿಂದಲೂ ಭಾರತೀಯರು ಭೂಮಿಗೆ ಪ್ರಾಮುಖ್ಯತೆ ನೀಡಿದ್ದಾರೆ. ಇಲ್ಲಿ ಮಾತ್ರ ಭೂಮಿಯನ್ನು ಪವಿತ್ರವೆಂದು ತಾಯಿಯಂತೆ ಕಾಣಲಾಗುತ್ತದೆ. ಆದರೆ, ಹವಾಮಾನ ವೈಪರೀತ್ಯತೆ ಪರಿಸರ ಜೀವ ವೈವಿದ್ಯತೆ ಹಾಗೂ ಭೂಮಿ ಎರಡರ ಮೇಲೂ ಸಾಕಷ್ಟು ಪರಿಣಾಮ ಬೀರುತ್ತಿದೆ. ಇಂದಿನ ದಿನಗಳಲ್ಲಿ ಹವಾಮಾನ ಬದಲಾವಣೆಯ ಋಣಾತ್ಮಕ ಬೆಳವಣಿಗೆಯ ಪ್ರಭಾವವನ್ನು ಇಡೀ ವಿಶ್ವ ಎದುರಿಸುತ್ತಿದೆ. ಅಪರೂಪದ ಸಸ್ಯ ಹಾಗೂ ಪ್ರಾಣಿ ಪ್ರಭೇಧಗಳು ಅಳಿವಿನ ಅಂಚಿಗೆ ಸರಿದಿವೆ. ಹೀಗಾಗಿ ಭೂ ತಾಪಮಾನವನ್ನು ತುರ್ತಾಗಿ ನಿಯಂತ್ರಿಸಬೇಕಾದ ಅವಶ್ಯಕತೆ ವಿಶ್ವದ ಎಲ್ಲಾ ರಾಷ್ಟ್ರಗಳಿಗೂ ಇದೆ. ಹೀಗಾಗಿ ಈ ನಿಟ್ಟಿನಲ್ಲಿ ವಿಶ್ವಸಂಸ್ಥೆ ಕಾರ್ಯಪ್ರವೃತ್ತವಾಗಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ಪುಲ್ವಾಮ ದಾಳಿಯ ಸೂತ್ರದಾರ ಮಸೂದ್​ ಅಜರ್​ ಬಿಡುಗಡೆ; ಭಾರತ ವಿರುದ್ಧ ಪಾಕ್​ ಸಂಚು?
First published:September 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ