ಜಾಗತಿಕ ತಾಪಮಾನ ಬದಲಾವಣೆಗೆ ಮಾತಿಗಿಂತ ಕಾರ್ಯದ ಅಗತ್ಯವಿದೆ; ಪ್ರಧಾನಿ ನರೇಂದ್ರ ಮೋದಿ

ಜಾಗತಿಕ ತಾಪಮಾನ ತಡೆಗೆ ಜಾಗತಿಕವಾಗಿ ಕೈಗೊಳ್ಳುತ್ತಿರುವ ಕಾರ್ಯ ಸಾಕಾಗುತ್ತಿಲ್ಲ. ಇದನ್ನು ನಾವು ಒಪ್ಪಿಕೊಂಡು, ಇಂತಹ ಗಂಭೀರ ಸಮಸ್ಯೆಯಿಂದ ಹೊರಬರಬೇಕಿದೆ. ಜಾಗತಿಕ ತಾಪಮಾನ ತಡೆಗೆ ಜಾಗತಿಕ ಆಂದೋಲನ ಕೈಗೊಳ್ಳಬೇಕಿದೆ .

Seema.R | news18-kannada
Updated:September 23, 2019, 9:53 PM IST
ಜಾಗತಿಕ ತಾಪಮಾನ ಬದಲಾವಣೆಗೆ ಮಾತಿಗಿಂತ ಕಾರ್ಯದ ಅಗತ್ಯವಿದೆ; ಪ್ರಧಾನಿ ನರೇಂದ್ರ ಮೋದಿ
ಮೋದಿ
  • Share this:
ನವದೆಹಲಿ (ಸೆ.23):  ಸಣ್ಣಪ್ರಮಾಣದ ಪ್ಲಾಸ್ಟಿಕ್​ ಬಳಕೆಯನ್ನು ಕೂಡ ಭಾರತ ನಿಷೇಧಿಸುವ ಮೂಲಕ ಜಗತ್ತಿಗೆ ಪ್ರೇರಣೆಯಾಗಿದೆ. ಜಾಗತಿಕ ತಾಪಮಾನ ಬದಲಾವಣೆಗೆ ಈಗ ಭಾಷಣ ಮಾಡುವ ಸಮಯ ಮೀರಿದೆ. ಈಗ ಜಗತ್ತಿಗೆ ಕ್ರಿಯೆಯ ಅಗತ್ಯವಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ವಿಶ್ವಸಂಸ್ಥೆಯ 74ನೇ ಜಾಗತಿಕ ತಾಪಮಾನದ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತ ಇಂದು ಕೇವಲ ಈ ಗಂಭೀರ ವಿಚಾರ ಕುರಿತು ಮಾತನಾಡುವುದಿಲ್ಲ. ಬದಲಿಗೆ ಪ್ರಾಯೋಗಿಕ ಪ್ರಯತ್ನ ನಡೆಸಲಿದೆ. ಹವಾಮಾನ ಬದಲಾವಣೆಗೆ ಜನಾಂದೋಲವಾಗಬೇಕು ಎಂದು ಕರೆ ನೀಡಿದರು.

ಜಾಗತಿಕ ತಾಪಮಾನ ತಡೆಗೆ ಜಾಗತಿಕವಾಗಿ ಕೈಗೊಳ್ಳುತ್ತಿರುವ ಕಾರ್ಯ ಸಾಕಾಗುತ್ತಿಲ್ಲ. ಇದನ್ನು ನಾವು ಒಪ್ಪಿಕೊಂಡು, ಇಂತಹ ಗಂಭೀರ ಸಮಸ್ಯೆಯಿಂದ ಹೊರಬರಬೇಕಿದೆ. ಜಾಗತಿಕ ತಾಪಮಾನ ತಡೆಗೆ ಜಾಗತಿಕ ಆಂದೋಲನ ಕೈಗೊಳ್ಳಬೇಕಿದೆ ಎಂದರು

2022ಕ್ಕೆ ಭಾರತದ ಪಳೆಯುಳಿಕೆ ರಹಿತ ಇಂಧನ ಹೆಚ್ಚಳಕ್ಕೆ ನಾವು ಮುಂದಾಗಿದ್ದೇವೆ. ನಮ್ಮ ನವೀಕರಿಸಬಹುದಾದ ಇಂಧನದ ಶಕ್ತಿ ಸಾಮರ್ಥ್ಯವನ್ನು ನಾವು ಹೆಚ್ಚಿಸಬೇಕಿದೆ. ಸೌರವಿದ್ಯುತ್​ ಅಭಿಯಾನಕ್ಕೆ ಈಗಾಗಲೇ 80 ರಾಷ್ಟ್ರಗಳು ಕೈ ಜೋಡಿಸಿವೆ, ಭಾರತದ 4ಜಿಗಾ ವ್ಯಾಟ್​ ಸೌರತಾಪಮಾನದಿಂದ 100ಜಿಗಾ ವ್ಯಾಟ್​ ತಾಪಮಾನದ ಗುರಿಯನ್ನು 2022ಕ್ಕೆ ಹೊಂದಿದೆ ಎಂದರು.

ಇದನ್ನು ಓದಿ: ನೀವು ಟ್ರಂಪ್​ಗೆ ಸ್ಟಾರ್ ಪ್ರಚಾರಕರಾದಿರಿ; ಬೇರೆ ದೇಶದ ಚುನಾವಣೆಯಲ್ಲಿ ಮೂಗು ತೂರಿಸಿದಿರಿ: ಮೋದಿ ವಿರುದ್ಧ ಕಾಂಗ್ರೆಸ್ ಸಂಸದ ಆನಂದ್ ಶರ್ಮಾ ಟೀಕೆ

ಇದೇ ವೇಳೆ ಮೈತ್ರಿ ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಕುರಿತು ಘೋಷಿಸಿದ ಅವರು, ಭಾರತ ಇದನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದೆ. ಜಗತ್ತಿನ ಎಲ್ಲ ನಾಯಕರು ಕೂಡ ಈ ಮೈತ್ರಿಗೆ ಮುಂದಾಗಬೇಕು ಎಂದು ಆಹ್ವಾನಿಸಿದರು.

First published: September 23, 2019, 9:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading