Tik Tok: ಟಿಕ್ ಟಾಕ್ ಮಾದರಿಯಲ್ಲಿ ಮತ್ತೊಂದು ಆ್ಯಪ್: ಯೂಟ್ಯೂಬ್​ನಿಂದ ಭಾರತದಲ್ಲಿ ಟೆಸ್ಟಿಂಗ್

ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದರಿಂದ ಭಾರತವು ಜೂನ್​ನಲ್ಲಿ ಟಿಕ್​ಟಾಕ್​ ಸೇರಿದಂತೆ ಇತರೆ 58 ಚೀನೀ ಆ್ಯಪ್​ಗಳನ್ನು ನಿಷೇಧಿಸಿತ್ತು. ಆ ಸಮಯದಲ್ಲಿ ಭಾರತವು ಟಿಕ್​ಟಾಕ್​ನ ಅತಿದೊಡ್ಡ ವಿದೇಶಿ ಮಾರುಕಟ್ಟೆಯಾಗಿತ್ತು.

news18-kannada
Updated:September 15, 2020, 9:50 AM IST
Tik Tok: ಟಿಕ್ ಟಾಕ್ ಮಾದರಿಯಲ್ಲಿ ಮತ್ತೊಂದು ಆ್ಯಪ್: ಯೂಟ್ಯೂಬ್​ನಿಂದ ಭಾರತದಲ್ಲಿ ಟೆಸ್ಟಿಂಗ್
Tiktok
  • Share this:
ನವದೆಹಲಿ(ಸೆ.15): ಭಾರತದಲ್ಲಿ ಟಿಕ್​ಟಾಕ್ ಬ್ಯಾನ್​ ಆದ ಬಳಿಕ ಹೊಸ ಟಿಕ್​​​ಟಾಕ್​​ನ ಪ್ರತಿಸ್ಪರ್ಧಿಯ ಬೀಟಾ ಆವೃತ್ತಿಯನ್ನು ಟೆಸ್ಟಿಂಗ್ ಮಾಡುವುದಾಗಿ ಯೂಟ್ಯೂಬ್ ಘೋಷಿಸಿದೆ. ಯೂಟ್ಯೂಬ್ ಚಿಕ್ಕ ವಿಡಿಯೋಗಳನ್ನು 15 ಸೆಕೆಂಡ್​ಗಳಿಗೆ ಮಿತಿಗೊಳಿಸಲಿದೆ. ಚೀನೀ ಒಡೆತನದ ಟಿಕ್​ಟಾಕ್​ನಂತೆಯೇ ಕ್ರಿಯೇಟಿವ್ ಟೂಲ್​ಗಳನ್ನು(ಪರಿಕರಗಳು) ಹೊಂದಿರುತ್ತದೆ. ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದರಿಂದ ಭಾರತವು ಜೂನ್​ನಲ್ಲಿ ಟಿಕ್​ಟಾಕ್​ ಸೇರಿದಂತೆ ಇತರೆ 58 ಚೀನೀ ಆ್ಯಪ್​ಗಳನ್ನು ನಿಷೇಧಿಸಿತ್ತು. ಆ ಸಮಯದಲ್ಲಿ ಭಾರತವು ಟಿಕ್​ಟಾಕ್​ನ ಅತಿದೊಡ್ಡ ವಿದೇಶಿ ಮಾರುಕಟ್ಟೆಯಾಗಿತ್ತು. ಭಾರತದಲ್ಲಿ ಸುಮಾರು 120 ಮಿಲಿಯನ್ ಟಿಕ್​ಟಾಕ್​ ಬಳಕೆದಾರರು ಇದ್ದರು ಎಂದು ತಿಳಿದು ಬಂದಿದೆ.ಚೀನೀ ಆ್ಯಪ್​ ಟಿಕ್​ಟಾಕ್ ನಿಷೇಧದ ಬಳಿಕ ಭಾರತವು ಅದರ ಸ್ಥಾನವನ್ನು ತುಂಬಲು ಹಲವು ಸ್ಥಳೀಯ ಸ್ಪರ್ಧಿಗಳೊಂದಿಗೆ ಯೂಟ್ಯೂಬ್ ಸ್ಪರ್ಧೆಯಲ್ಲಿದೆ. ಭಾರತ-ಚೀನಾ ಗಡಿಯಲ್ಲಿರುವ ಗಾಲ್ವಾನ್ ಕಣಿವೆಯಲ್ಲಿ ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಭಾರತ ಟಿಕ್​ ಟಾಕ್​ ಸೇರಿದಂತೆ ಅನೇಕ ಚೀನೀ ಆ್ಯಪ್​ಗಳನ್ನು ನಿಷೇಧಿಸಿ ಘೋಷಿಸಿತು.



​ 800 ಮಿಲಿಯನ್​​ ಟಿಕ್​ಟಾಕ್​ ಬಳಕೆದಾರರು ಬೆಳೆದದ್ದು ಹೇಗೆ?

ಈ ವಿಡಿಯೋ ತುಣುಕುಗಳು​​, ತಮ್ಮ ಮೊಬೈಲ್​ ಫೋನ್​ಗಳನ್ನು ಹೊರತುಪಡಿಸಿ ಏನನ್ನೂ ಬಳಸದೆ, ಚಿಕ್ಕ ಹಾಗೂ ಆಕರ್ಷಕ ವಿಡಿಯೋಗಳನ್ನು ಚಿತ್ರೀಕರಿಸಲು ಬಯಸಲು ಕ್ರಿಯಾಶೀಲರು ಹಾಗೂ ಕಲಾವಿದರಿಗೆ ಎಂದು ಬ್ಲಾಗ್​ ಪೋಸ್ಟ್​​ನಲ್ಲಿ ಯೂಟ್ಯೂಬ್​ ಪ್ರೊಡಕ್ಟ್​ ಮ್ಯಾನೇಜ್​ಮೆಂಟ್​​ನ ಉಪಾಧ್ಯಕ್ಷ ಕ್ರಿಸ್ ಜಾಫ್​ ಹೇಳಿದ್ದಾರೆ.

ಡ್ರಗ್ಸ್​ ಕೇಸ್​​: ನಟಿ ರಾಗಿಣಿ ಜೈಲಿಗೆ, ಸಂಜನಾ ವಿಚಾರಣೆಗೆ; ಇನ್ನೆರಡು ದಿನ ಸಿಸಿಬಿ ಪೊಲೀಸರಿಂದ ಫುಲ್​​ ಡ್ರಿಲ್​​

ಈ ಹೊಸ ಫ್ಲಾಟ್​​ಫಾರ್ಮ್​​ ಬಹು ವಿಡಿಯೋ ತುಣುಕುಗಳನ್ನು ಒಟ್ಟಿಗೆ ಸೇರಿಸಲು(ಸ್ಟ್ರಿಂಗ್) ಹಲವು ರೀತಿಯ ಕ್ಯಾಮೆರಾಗಳನ್ನು ಹೊಂದಿದೆ. ಸ್ಪೀಡ್​ ಕಂಟ್ರೋಲರ್(ವೇಗ ನಿಯಂತ್ರಣ) ಮತ್ತು ಹ್ಯಾಂಡ್ಸ್​-ಫ್ರೀ ರೆಕಾರ್ಡ್​ ಮಾಡಲು ಟೈಮರ್ ಹಾಗೂ ಕೌಂಟ್​​ಡೌನ್ ಫೀಚರ್​​ಗಳನ್ನು ಸಹ ಒಳಗೊಂಡಿದೆ.

ಈ ಶಾರ್ಟ್​​ ವಿಡಿಯೋಗಳು ಬಳಕೆದಾರರಿಗೆ ಸಂಗೀತವನ್ನು ಬಳಸಿಕೊಂಡು ರೆಕಾರ್ಡ್​​ ಮಾಡುವ ಜೊತೆಗೆ ಹಾಡುಗಳ ಲೈಬ್ರರಿಗೆ ಪ್ರವೇಶವನ್ನು ನೀಡುತ್ತವೆ.
Published by: Latha CG
First published: September 15, 2020, 9:29 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading