ಟ್ರಂಪ್​ಗೆ ಟಿಕ್ ಟಾಕ್ ಶಾಕ್; ಅಮೇರಿಕಾ ಬದಲಿಗೆ ಐರ್ಲೆಂಡ್‌ನಲ್ಲಿ ದತ್ತಾಂಶ ಕೇಂದ್ರ ತೆರೆಯುವುದಾಗಿ ಘೊಷಣೆ

ಟಿಕ್ ಟಾಕ್ ಅಪ್ಲಿಕೇಶನ್ ವಿಶ್ವಾದ್ಯಂತ ಒಂದು ಬಿಲಿಯನ್ ಬಳಕೆದಾರರನ್ನು ಹೊಂದಿದೆ. ವಿಶ್ವದಲ್ಲೇ ಅತ್ಯಂತ ಜನಪ್ರಿಯ ಆ್ಯಪ್ ಎಂದು ಗುರುತಿಸಿಕೊಂಡಿದೆ. ಹೀಗಾಗಿ ಈಗ ಅಮೇರಿಕಾಕ್ಕೆ ಸಡ್ಡು ಹೊಡೆದು ಐರ್ಲೆಂಡ್‌ನಲ್ಲಿ ತನ್ನ ಮೊದಲ ದತ್ತಾಂಶ ಕೇಂದ್ರವನ್ನು ತೆರೆಯುವುದಾಗಿ ಹೇಳಿದೆ.

news18-kannada
Updated:August 7, 2020, 10:20 AM IST
ಟ್ರಂಪ್​ಗೆ ಟಿಕ್ ಟಾಕ್ ಶಾಕ್; ಅಮೇರಿಕಾ ಬದಲಿಗೆ ಐರ್ಲೆಂಡ್‌ನಲ್ಲಿ ದತ್ತಾಂಶ ಕೇಂದ್ರ ತೆರೆಯುವುದಾಗಿ ಘೊಷಣೆ
ಟಿಕ್​ ಟಾಕ್​
  • Share this:
ನವದೆಹಲಿ (ಆ.7): ಜಗತ್ತಿನ ದೊಡ್ಡಣ್ಣ ತಾನೇ ಎಂದು ಬೀಗುವ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆಗೆ ಚೀನಾ ಮೂಲದ ಟಿಕ್ ಟಾಕ್ ಕಂಪನಿ ಡೋಂಟ್ ಕೇರ್ ಎಂದಿದೆ. ಅಮೇರಿಕಾದಲ್ಲಿ ಅವಕಾಶ ನೀಡದಿದ್ದರೆ ಐರ್ಲೆಂಡ್‌ನಲ್ಲಿ ತಮ್ಮ‌‌ ಹೊಸ ದತ್ತಾಂಶ ಕೇಂದ್ರ ತೆರೆಯುವುದಾಗಿ ಘೊಷಣೆ ಮಾಡಿದೆ.

ಸೆಪ್ಟೆಂಬರ್ 15 ರೊಳಗೆ ಟಿಕ್ ಟಾಕ್ ಕಂಪನಿಯು ಅಮೇರಿಕಾದಲ್ಲಿ ನಡೆಸುತ್ತಿರುವ ಕಾರ್ಯಾಚರಣೆಯನ್ನು ಅಮೆರಿಕಾದ ಕಂಪನಿಗೆ ಮಾರಾಟ ಮಾಡಬೇಕು. ಇಲ್ಲದಿದ್ದರೆ ಟಿಕ್ ಟಾಕ್ ಆ್ಯಪ್ ಅನ್ನು ದೇಶದಲ್ಲಿ ನಿಷೇಧಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದರು. ಅಂತೆಯೇ ಟಿಕ್​ ಟಾಕ್​ ಬ್ಯಾನ್​ ಮಾಡುವ ಆದೇಶಕ್ಕೆ ಡೊನಾಲ್ಡ್​ ಟ್ರಂಪ್​ ಸಹಿ ಹಾಕಿದ್ದಾರೆ. ಈಗ ಅಮೇರಿಕಾ ಕಂಪನಿಗೆ ಮಾರಿಕೊಳ್ಳಲು ಒಪ್ಪದ  ಟಿಕ್‌ಟಾಕ್ ಈಗ ಅಮೇರಿಕಾದಲ್ಲಿ ಬೇಡ ಎಂದರೆ  ಐರ್ಲೆಂಡ್‌ನಲ್ಲಿ ತಮ್ಮ‌‌ ಹೊಸ ದತ್ತಾಂಶ ಕೇಂದ್ರ ತೆರೆಯುವುದಾಗಿ ಘೊಷಿಸಿದೆ.

ಕೊರೋನಾ ಕಷ್ಟ ಆರಂಭವಾದಾಗಿನಿಂದಲೂ ಚೀನಾ ದೇಶದ ವಿರುದ್ಧ ಮುಗಿ ಬೀಳುತ್ತಿರುವ ಡೊನಾಲ್ಡ್ ಟ್ರಂಪ್ ಟ್ರಂಪ್, ಮುಂದುವರೆದ ಭಾಗವಾಗಿ ಟಿಕ್‌ಟಾಕ್ ನಿಂದ ರಾಷ್ಟ್ರೀಯ ಭದ್ರತೆಗೆ ಅಪಾಯ ಎಂದು ಬಣ್ಣಿಸಿದ್ದರು. ಟಿಕ್ ಟಾಕ್ ಕಂಪನಿಯು ಅಮೆರಿಕನ್ನರ ವೈಯಕ್ತಿಕ ಡೇಟಾವನ್ನು ಚೀನಾದ ಗುಪ್ತಚರ ಸೇವೆಗಳೊಂದಿಗೆ ಹಂಚಿಕೊಳ್ಳುತ್ತಿದೆ ಎಂದು ಹರಿಹಾಯ್ದಿದ್ದರು. ಇದೇ ಹಿನ್ನಲೆಯಲ್ಲಿ ಅಮೆರಿಕದಲ್ಲಿ ಟಿಕ್ ಟಾಕ್ ಬ್ಯಾನ್ ಮಾಡಿದ್ದಾರೆ.‌

ಟಿಕ್ ಟಾಕ್ ಅಪ್ಲಿಕೇಶನ್ ವಿಶ್ವಾದ್ಯಂತ ಒಂದು ಬಿಲಿಯನ್ ಬಳಕೆದಾರರನ್ನು ಹೊಂದಿದೆ. ವಿಶ್ವದಲ್ಲೇ ಅತ್ಯಂತ ಜನಪ್ರಿಯ ಆ್ಯಪ್ ಎಂದು ಗುರುತಿಸಿಕೊಂಡಿದೆ. ಹೀಗಾಗಿ ಈಗ ಅಮೇರಿಕಾಕ್ಕೆ ಸಡ್ಡು ಹೊಡೆದು ಐರ್ಲೆಂಡ್‌ನಲ್ಲಿ ತನ್ನ ಮೊದಲ ದತ್ತಾಂಶ ಕೇಂದ್ರವನ್ನು ತೆರೆಯುವುದಾಗಿ ಹೇಳಿದೆ. 498 ಮಿಲಿಯನ್ ಡಾಲರ್ ವೆಚ್ಚದಲ್ಲಿ ಹೊಸ ದತ್ತಾಂಶ ಕೇಂದ್ರವು ಸ್ಥಾಪನೆಯಾಗಲಿದ್ದು 2022ರ ವೇಳೆಗೆ ದತ್ತಾಂಶ ಕೇಂದ್ರವು ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದೆ.

ಈ ಬಗ್ಗೆ ಟಿಕ್‌ಟಾಕ್‌ನ ಮುಖ್ಯ ಜಾಗತಿಕ ಮಾಹಿತಿ ಭದ್ರತಾ ಅಧಿಕಾರಿ ರೋಲ್ಯಾಂಡ್ ಕ್ಲೋಟಿಯರ್, ಐರ್ಲೆಂಡ್‌ನಲ್ಲಿ  ಮೊದಲ ದತ್ತಾಂಶ ಕೇಂದ್ರವನ್ನು ತೆರೆಯುತ್ತಿರುವುದರಿಂದ  ಸಾಕಷ್ಟು ಹೊಸ ಉದ್ಯೋಗಗಳನ್ನು ಸೃಷ್ಟಿಯಾಗುತ್ತವೆ. ಟಿಕ್‌ ಟಾಕ್ ಸಂಸ್ಥೆಯು ಬಳಕೆದಾರರ ದತ್ತಾಂಶ ಸುರಕ್ಷತೆ ಮತ್ತು ರಕ್ಷಣೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಟಿಕ್ ಟಾಕ್ ಆ್ಯಪ್ ಅನ್ನು ನಿಷೇಧಿಸುವ ಮಾತುಗಳನ್ನು ಆಡುತ್ತಿರುವ ಸಂದರ್ಭದಲ್ಲೇ ಅಮೇರಿಕಾದ ಅತ್ಯಂತ ದೊಡ್ಡ ಟೆಕ್ ಕಂಪನಿ ಮೈಕ್ರೋಸಾಫ್ಟ್ ಚೀನಾದ ಟಿಕ್ ಟಾಕ್ ಅಪ್ಲಿಕೇಶನ್‌ನ ಅಮೇರಿಕಾದ ಕಾರ್ಯಾಚರಣೆಯನ್ನು ಖರೀದಿಸಲು ಟಿಕ್‌ ಟಾಕ್‌ನ  ಮೂಲ ಕಂಪನಿ ಬೈಟ್‌ಡ್ಯಾನ್ಸ್‌ ಜೊತೆ ಮಾತುಕತೆ ನಡೆಸಿತ್ತು ಎಂದು ತಿಳಿದುಬಂದಿದೆ.
Published by: Rajesh Duggumane
First published: August 7, 2020, 10:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading