ಬಳಕೆದಾರರ ಮಾಹಿತಿಯನ್ನು ಚೀನಾಗೆ ಮಾರುವುದಿಲ್ಲ, ಎಲ್ಲಾ ನಿಯಮಗಳನ್ನು ಪಾಲಿಸುತ್ತೇವೆ; ಸ್ಪಷ್ಟನೆ ನೀಡಿದ ಟಿಕ್​ ಟಾಕ್​

ಭದ್ರತಾ ದೃಷ್ಟಿಯಿಂದ ಚೀನಾದ ಆ್ಯಪ್​ಗಳನ್ನು ಬ್ಯಾನ್​ ಮಾಡಿರುವುದಾಗಿ ಸರ್ಕಾರ ತಿಳಿಸಿದೆ. ಇದಾದ ಬೆನ್ನಲ್ಲೇ ಪ್ಲೇ ಸ್ಟೋರ್​ನಿಂದ ಟಿಕ್​ ಟಾಕ್​ ಆ್ಯಪ್ ಡಿಲೀಟ್​ ಮಾಡಲಾಗಿದೆ. ಈ ವಿಚಾರವಾಗಿ ಚೀನಾದ ಬೈಟ್​ ಡಾನ್ಸ್​ ಒಡೆತನದ ಟಿಕ್​ ಟಾಕ್​ ಸ್ಪಷ್ಟನೆ ನೀಡಿದ್ದು, ನಾವು ಭದ್ರತಾ ನಿಯಮಗಳನ್ನು ಪಾಲಿಸುತ್ತೇವೆ ಎಂದು ಹೇಳಿದೆ.

news18-kannada
Updated:June 30, 2020, 2:11 PM IST
ಬಳಕೆದಾರರ ಮಾಹಿತಿಯನ್ನು ಚೀನಾಗೆ ಮಾರುವುದಿಲ್ಲ, ಎಲ್ಲಾ ನಿಯಮಗಳನ್ನು ಪಾಲಿಸುತ್ತೇವೆ; ಸ್ಪಷ್ಟನೆ ನೀಡಿದ ಟಿಕ್​ ಟಾಕ್​
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಜೂ.30): ಚೀನಾದ 59 ಆ್ಯಪ್​ಗಳನ್ನು ಬ್ಯಾನ್​ ಮಾಡಿ ಕೇಂದ್ರ ಸರ್ಕಾರ ಸೋಮವಾರ ಸಂಜೆ ಆದೇಶ ಹೊರಡಿಸಿತ್ತು.  ಭದ್ರಯಾ ದೃಷ್ಟಿಯಿಂದ ಈ ಆ್ಯಪ್​ಗಳನ್ನು ಬ್ಯಾನ್​ ಮಾಡಿರುವುದಾಗಿ ಸರ್ಕಾರ ತಿಳಿಸಿತ್ತು. ಈ ಬೆನ್ನಲ್ಲೇ ಸರ್ಕಾರಕ್ಕೆ ಸ್ಪಷ್ಟನೆ ನೀಡಲು ಟಿಕ್​ ಟಾಕ್​ ಮುಂದಾಗಿದೆ. 

ಭದ್ರತಾ ದೃಷ್ಟಿಯಿಂದ ಚೀನಾದ ಆ್ಯಪ್​ಗಳನ್ನು ಬ್ಯಾನ್​ ಮಾಡಿರುವುದಾಗಿ ಸರ್ಕಾರ ತಿಳಿಸಿತ್ತು. ಇದಾದ ಬೆನ್ನಲ್ಲೇ ಪ್ಲೇ ಸ್ಟೋರ್​ನಿಂದ ಟಿಕ್​ ಟಾಕ್​ ಆ್ಯಪ್ ಡಿಲೀಟ್​ ಮಾಡಲಾಗಿದೆ. ಈ ವಿಚಾರವಾಗಿ ಚೀನಾದ ಬೈಟ್​ ಡಾನ್ಸ್​ ಒಡೆತನದ ಟಿಕ್​ ಟಾಕ್​ ಸ್ಪಷ್ಟನೆ ನೀಡಿದ್ದು, ನಾವು ಭದ್ರತಾ ನಿಯಮಗಳನ್ನು ಪಾಲಿಸುತ್ತೇವೆ ಎಂದು ಹೇಳಿದೆ.

ಈ ಬಗ್ಗೆ ಮಾತನಾಡಿರುವ ಟಿಕ್​ ಟಾಕ್​ನ ಭಾರತೀಯ ಮುಖ್ಯಸ್ಥ ನಿಖಿಲ್​ ಗಾಂಧಿ, "ಸರ್ಕಾರ 59 ಚೀನಾ ಆ್ಯಪ್​ಗಳನ್ನು ರದ್ದು ಮಾಡಲು ಆದೇಶ ಹೊರಡಿಸಿದೆ. ಇದರಲ್ಲಿ ಟಿಕ್​ ಟಾಕ್​ ಕೂಡ ಇದೆ. ಈ ವಿಚಾರವಾಗಿ ನಮ್ಮ ಪ್ರತಿಕ್ರಿಯೆಯನ್ನು ನಾವು ಸರ್ಕಾರಕ್ಕೆ ಸಲ್ಲಿಕೆ ಮಾಡುತ್ತೇವೆ," ಎಂದಿದ್ದಾರೆ.

ಇನ್ನು ಭದ್ರತಾ ನಿಯಮಗಳನ್ನು ಪಾಲಿಸುವ ಭರವಸೆ ನೀಡಿರುವ ಅವರು, ಭಾರತದ ಕಾನೂನಿನ ಅಡಿಯಲ್ಲಿ ಯಾವೆಲ್ಲ ಡಾಟಾ ಖಾಸಗಿತನಕ್ಕೆ ಸಂಬಂಧಿಸಿದಂತೆ ಯಾವೆಲ್ಲ ನಿಯಮಗಳಿವೆಯೋ ಅದನ್ನು ನಾವು ಪಾಲಿಸುತ್ತೇವೆ. ಟಿಕ್​ ಟಾಕ್​ನ ಮಾಹಿತಿಯನ್ನು ಚೀನಾ ಸೇರಿದಂತೆ ಯಾವ ಸರ್ಕಾರದ ಜೊತೆಗೂ ನಾವು ಹಂಚಿಕೊಳ್ಳುವುದಿಲ್ಲ. ನಮ್ಮ ಬಳಕೆದಾರರ ಮಾಹಿತಿಯನ್ನು ಗೌಪ್ಯವಾಗಿಡುವುದು ನಮ್ಮ ಮೊದಲ ಆದ್ಯತೆ,"ಎಂದಿದ್ದಾರೆ ನಿಖಿಲ್.

ಚೀನೀ ಆ್ಯಪ್​ಗಳು ಮಾಹಿತಿ ಕಳ್ಳತನ ಮತ್ತು ದುರ್ಬಳಕೆ ಮಾಡುತ್ತಿವೆ. ಇದರಿಂದ ಜನರ ಮತ್ತು ದೇಶದ ಸುರಕ್ಷತೆಗೆ ಅಪಾಯ ಇದೆ ಎಂಬಂಥ ದೂರುಗಳು ಸಾಕಷ್ಟು ಕೇಳಿ ಬಂದಿವೆ. ಭಾರತದ ಸಾರ್ವಭೌಮತೆ, ಸಮಗ್ರತೆ, ರಕ್ಷಣೆ, ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ಬರುವಂಥ ಚಟುವಟಿಕೆಗಳಲ್ಲಿ ಹಲವು ಚೀನೀ ಆ್ಯಪ್​ಗಳು ನಿರತವಾಗಿರುವುದಕ್ಕೆ ಪ್ರಬಲ ಸಾಕ್ಷ್ಯಗಳಿವೆ. ಆದ್ದರಿಂದ ಕೇಂದ್ರ ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
First published: June 30, 2020, 2:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading