ಖ್ಯಾತ ಇಂಡೋ-ಕೆನಡಿಯನ್ ಟಿಕ್ಟಾಕ್ ತಾರೆ (TikTok star) ಮೇಘಾ ಠಾಕೂರ್ (Megha Thakur) 21 ವರ್ಷಕ್ಕೆ ನಿಧನ (Death) ಹೊಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ (Social Media) ಯಾವಾಗಲೂ ಇವರು ಸಕ್ರಿಯರಾಗಿರುತ್ತಿದ್ದರು. ಮೇಘಾ ಠಾಕೂರ್ ಹಠಾತ್ ಸಾವು ಕುಟುಂಬದವರನ್ನು ಚಿಂತೆಗೀಡು ಮಾಡಿದೆ. ಅಲ್ಲದೇ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತ ಪಡಿಸಿದ್ದಾರೆ. ಮೇಘಾ ಠಾಕೂರ್ ಅವರ ಸಾವನ್ನು ಪೋಷಕರು ಇನ್ಸ್ಟಾಗ್ರಾಂ ಮೂಲಕ ದೃಢಪಡಿಸಿದ್ದಾರೆ. 'ನಮ್ಮ ಸುಂದರ ಮಗಳು ನವೆಂಬರ್ 24ರಂದು ಹಠಾತ್ ನಿಧನರಾಗಿದ್ದಾರೆ ಎಂದು ತಿಳಿಸಲು ನಮಗೆ ಬಹಳ ದುಃಖವಾಗುತ್ತಿದೆ' ಎಂದು ಪೋಸ್ಟ್ ಹಾಕಿದ್ದಾರೆ. ಅಲ್ಲದೇ ಮೇಘಾ ಠಾಕೂರ್ ತಮ್ಮನ್ನು ತಾವು ಹೆಚ್ಚು ಪ್ರೀತಿಸುತ್ತಿದ್ದರಂತೆ. ಅವರ ಕೊನೆಯ ಇನ್ಸ್ಟಾಗ್ರಾಂ ಪೋಸ್ಟ್ ಎಲ್ಲೆಡೆ ವೈರಲ್ ಆಗಿದೆ.
ಮೇಘಾ ಪೋಷಕರು ಹೇಳಿದ್ದೇನು?
'ಮೇಘಾ ಆತ್ಮವಿಶ್ವಾಸ ಮತ್ತು ಸ್ವಾವಲಂಬಿ ಹುಡುಗಿ. ಅವಳು ತನ್ನ ಅಭಿಮಾನಿಗಳನ್ನು ತುಂಬಾ ಪ್ರೀತಿಸುತ್ತಿದ್ದಳು. ಆದ್ದರಿಂದ ಅವಳು ತನ್ನ ಸಾವಿನ ಬಗ್ಗೆ ಎಲ್ಲರಿಗೂ ತಿಳಿಯಬೇಕೆಂದು ಬಯಸಿದ್ದಳು. ಈ ಸಮಯದಲ್ಲಿ, ನಾವು ಮೇಘಾಗೆ ನಿಮ್ಮ ಪ್ರಾರ್ಥನೆ ಮತ್ತು ಸಂತಾಪವನ್ನು ಕೋರುತ್ತೇವೆ. ನಿಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವಳ ಮುಂದಿನ ಪ್ರಯಾಣದಲ್ಲಿ ಆಕೆಯೊಂದಿಗೆ ಇರುತ್ತದೆ' ಎಂದು ಬರೆದಿದ್ದಾರೆ.
ದೇಹದ ಸಕಾರಾತ್ಮಕತೆಯ ಬಗ್ಗೆ ಮಾತು
ಸಾಮಾಜಿಕ ಜಾಲತಾಣದಲ್ಲಿ ಮೇಘಾ ಠಾಕೂರ್ ತನ್ನ ನೋಟದಿಂದ ಅಭಿಮಾನಿಗಳನ್ನು ಸೆಳೆದಿದ್ದರು. ಮೇಘಾ ದೇಹದ ಸಕಾರಾತ್ಮಕತೆಯ ಬಗ್ಗೆ ಮಾತನಾಡುತ್ತಾಳೆ. ಮೇಘಾ ಠಾಕೂರ್ ಅವರು ಮೂಲತಃ ಮಧ್ಯಪ್ರದೇಶದ ಇಂದೋರ್ಗೆ ಸೇರಿದವಳು. ತನ್ನ ಹೆತ್ತವರೊಂದಿಗೆ ಕೆನಡಾದ ಒಂಟಾರಿಯೊದ ಬ್ರಾಂಪ್ಟನ್ನಲ್ಲಿ ವಾಸಿಸುತ್ತಿದ್ದಳು. ಅವರು ಟ್ವಿಟರ್ನಲ್ಲಿ 93,000 ಮತ್ತು ಇನ್ಸ್ಟಾಗ್ರಾಮ್ನಲ್ಲಿ 102,000 ಅನುಯಾಯಿಗಳನ್ನು ಹೊಂದಿದ್ದರು.
ಇದನ್ನೂ ಓದಿ: Explained: ಮೆಕ್ಕಾದಲ್ಲಿ ಉಮ್ರಾ ಆಚರಣೆ ನಡೆಸಿದ ಶಾರುಕ್ ಖಾನ್; ಇದ್ರಿಂದ ಏನೆಲ್ಲ ಫಲ ಸಿಗುತ್ತಂತೆ?
ಮೇಘಾ ಸಾವಿನ ರಹಸ್ಯ
ಮೇಘಾ ಅವರ ಕುಟುಂಬವು ಅವರ ಸಾವಿನ ಕಾರಣವನ್ನು ಬಹಿರಂಗಪಡಿಸಿಲ್ಲ. ಆದ್ರೆ ಜುಲೈ 2022 ರಲ್ಲಿ, ನಾಲ್ಕು ತಿಂಗಳ ಹಿಂದೆ ಅವರು ಹೃದಯಾಘಾತಕ್ಕೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ. ಜುಲೈನಲ್ಲಿ ಮೇಘಾ ಅವರು ಪೆÇೀಸ್ಟ್ ಮಾಡಿದ ವೀಡಿಯೊದಲ್ಲಿ, "ನನಗೆ ನಿಜವಾಗಿಯೂ ಕೆಟ್ಟ ಆತಂಕವಿದೆ. ಇದು ಒತ್ತಡಕ್ಕೆ ತಿರುಗಿತು, ಅದು ಹೃದಯಾಘಾತಕ್ಕೆ ತಿರುಗಿತು." ಎಂದು ಹಾಕಿಕೊಂಡಿದ್ದರು.
ಅಭಿಮಾನಿಗಳಿಂದ ಸಂತಾಪ
ಮೇಘಾ ಸಾವಿನ ಸುದ್ದಿ ಕೇಳಿ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. "ಇದು ನಿಜವಾಗುವುದಿಲ್ಲ ಓ ಮೈ ಗಾಡ್". "ನನ್ನ ಪ್ರೀತಿಯ ಮೇಘಾ, ಇದು ಸಂಪೂರ್ಣವಾಗಿ ವಿನಾಶಕಾರಿಯಾಗಿದೆ. ಸೃಜನಶೀಲ ಪ್ರತಿಭೆಯ ನಷ್ಟದಿಂದ ನಾನು ತುಂಬಾ ದುಃಖಿತನಾಗಿದ್ದೇನೆ, "ಮೇಘಾ ಅವರು ಪ್ರಭಾವಶಾಲಿ, ಬಲಶಾಲಿಯಾಗಿದ್ದರು.
ಮೇಘಾ ಬಗ್ಗೆ ಮಾಹಿತಿ
ಮೇಘಾ ಠಾಕೂರ್ ಜುಲೈ 17, 2001 ರಂದು ಮಧ್ಯಪ್ರದೇಶದ ಇಂದೋರ್ನಲ್ಲಿ ಜನಿಸಿದ್ದಾರೆ. ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಕ್ರಿಯರಾಗಿದ್ದರು. ಅವರು 2019 ರಿಂದ ಅವರು ಟಿಕ್ಟಾಕ್ನಲ್ಲಿ ಹೆಚ್ಚು ಜನಪ್ರಿಯರಾಗಿದ್ದರು. ಅವರು ಕೆನಡಾದ ಒಂಟಾರಿಯೊದ ಕ್ಯಾಲೆಡನ್ನಲ್ಲಿರುವ ಮೇಫೀಲ್ಡ್ ಸೆಕೆಂಡರಿ ಸ್ಕೂಲ್ನಿಂದ ಪದವಿ ಪಡೆದಿದ್ದ ಅವರು 2019 ರಲ್ಲಿ ಒಂಟಾರಿಯೊದ ಲಂಡನ್ನಲ್ಲಿರುವ ವೆಸ್ಟರ್ನ್ ಯೂನಿವರ್ಸಿಟಿಗೆ ಸೇರಿದರು.
ಇದನ್ನೂ ಓದಿ: Twin Sisters Marriage: ಒಬ್ಬನನ್ನೇ ಮದುವೆಯಾದ ಅವಳಿ ಸಹೋದರಿಯರು! ಎಂಥಾ ಆಫರ್ ಗುರು ಎಂದ ನೆಟ್ಟಿಗರು!
ಮೇಘಾ ಅವರು ಸುಮಾರು ಒಂದು ವರ್ಷದವಳಿದ್ದಾಗ ಕುಟುಂಬದೊಂದಿಗೆ ಭಾರತದ ಇಂದೋರ್ನಿಂದ ಕೆನಡಾಕ್ಕೆ ವಲಸೆ ಹೋಗಿದ್ದರು. ವರದಿಗಳ ಪ್ರಕಾರ ನವೆಂಬರ್ 29, 2022 ರಂದು ಆಕೆಯ ಹುಟ್ಟೂರಾದ ಒಂಟಾರಿಯೊದ ಬ್ರಾಂಪ್ಟನ್ನಲ್ಲಿ ಆಕೆಯ ಅಂತ್ಯಕ್ರಿಯೆಯನ್ನು ನಡೆಸಲಾಗಿದೆಯಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ