ಸರ್ಕಾರಿ ಅಧಿಕಾರಿಗೆ ಚಪ್ಪಲಿಯಿಂದ ಹೊಡೆದ ಬಿಜೆಪಿ ನಾಯಕಿ ಸೋನಾಲಿ ಫೋಗಾಟ್; ವಿಡಿಯೋ ವೈರಲ್

ಸೋನಾಲಿ ಶುಕ್ರವಾರ ಹಿಸಾರ್​​ನ ಬಾಲ್ಸಮಂದ್​ ಮಂಡಿಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ಈ ವೇಳೆ ಹಿಸಾರ್​ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಸುಲ್ತಾನ್​ ಸಿಂಗ್​ ಸೋನಾಲಿ ಫೋಗಾಟ್​​ಗೆ ನಿಮ್ಮಂತಹ ಸುಂದರ ಚೆಲುವೆ, ಸ್ಟಾರ್​ ಈ ಉರಿ ಬಿಸಿಲಿನಲ್ಲಿ ಮಂಡಿಗೆ ಬರಬಾರದು ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ಫೋಗಾಟ್​ ಸುಲ್ತಾನ್​ ಸಿಂಗ್​ಗೆ ನಿಂದಿಸಿದ್ದಾರೆ. ಬಳಿಕ ತನ್ನ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಬಾರಿಸಿದ್ದಾರೆ.

news18-kannada
Updated:June 6, 2020, 12:31 PM IST
ಸರ್ಕಾರಿ ಅಧಿಕಾರಿಗೆ ಚಪ್ಪಲಿಯಿಂದ ಹೊಡೆದ ಬಿಜೆಪಿ ನಾಯಕಿ ಸೋನಾಲಿ ಫೋಗಾಟ್; ವಿಡಿಯೋ ವೈರಲ್
ಬಿಜೆಪಿ ನಾಯಕಿ ಚಪ್ಪಲಿಯಿಂದ ಅಧಿಕಾರಿಗೆ ಹೊಡೆಯುತ್ತಿರುವ ದೃಶ್ಯ
  • Share this:
ನವದೆಹಲಿ(ಜೂ.06): ಟಿಕ್​ ಟಾಕ್​ ಸ್ಟಾರ್​ ಹಾಗೂ ಹರಿಯಾಣದ ಬಿಜೆಪಿ ನಾಯಕಿ ಸೋನಾಲಿ ಫೋಗಾಟ್​ ಸರ್ಕಾರಿ ಅಧಿಕಾರಿಯೊಬ್ಬರಿಗೆ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋ ಬಹಳಷ್ಟು ವೈರಲ್ ಆಗಿದೆ.

ಹಿಸಾರ್ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಸುಲ್ತಾನ್​ ಸಿಂಗ್​​ ತನ್ನ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿದ ಎಂದು ಸೋನಾಲಿ ಫೋಗಾಟ್​ ಚಪ್ಪಲಿಯಿಂದ ಹೊಡೆದಿದ್ದಾರೆ ಎನ್ನಲಾಗಿದೆ. ವೈರಲ್​ ಆಗಿರುವ ವಿಡಿಯೋದಲ್ಲಿ ಫೋಗಾಟ್​ ಪದೇ ಪದೇ ಸುಲ್ತಾನ್​ ಸಿಂಗ್​ಗೆ ಚಪ್ಪಲಿಯಿಂದ ಬಾರಿಸಿದ್ದಾರೆ. ಜೊತೆಗೆ ನಿನಗೆ ಬದುಕಲು ಯಾವುದೇ ಹಕ್ಕು ಇಲ್ಲ ಎಂದು ಫೋಗಾಟ್​ ಹೇಳಿದ್ದಾರೆ.

ಸಿಂಗ್​​ಗೆ ಥಳಿಸಿದ ಬಳಿಕ ಪೊಲೀಸರನ್ನು ಕರೆದು ಆತನ ವಿರುದ್ದ ದೂರು ದಾಖಲಿಸುವಂತೆ ಫೋಗಾಟ್​ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಸಿಂಗ್ ಹಾಗೂ ಫೋಗಾಟ್​ ಇಬ್ಬರ ವಿರುದ್ಧವೂ ದೂರು ದಾಖಲಿಸಿಕೊಂಡಿದ್ದಾರೆ.

ಘಟನೆ ವೇಳೆ ಫೋಗಾಟ್​ ಜೊತೆಯಲ್ಲಿ ಮತ್ತಿತರರು ಇದ್ದರು ಎನ್ನಲಾಗಿದ್ದು, ಯಾರೂ ಸಹ ಮಾಸ್ಕ್​ ಧರಿಸಿರಲಿಲ್ಲ. ಹರಿಯಾಣ ಸರ್ಕಾರ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್​​ ಧರಿಸುವುದನ್ನು ಕಡ್ಡಾಯ ಮಾಡಿದ್ದರೂ ಸಹ ಅವರು ನಿಯಮ ಉಲ್ಲಂಘಿಸಿದ್ದಾರೆ.

ಏನಿದು ಘಟನೆ?

ಸೋನಾಲಿ ಶುಕ್ರವಾರ ಹಿಸಾರ್​​ನ ಬಾಲ್ಸಮಂದ್​ ಮಂಡಿಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ಈ ವೇಳೆ ಹಿಸಾರ್​ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಸುಲ್ತಾನ್​ ಸಿಂಗ್​ ಸೋನಾಲಿ ಫೋಗಾಟ್​​ಗೆ ನಿಮ್ಮಂತಹ ಸುಂದರ ಚೆಲುವೆ, ಸ್ಟಾರ್​ ಈ ಉರಿ ಬಿಸಿಲಿನಲ್ಲಿ ಮಂಡಿಗೆ ಬರಬಾರದು ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ಫೋಗಾಟ್​ ಸುಲ್ತಾನ್​ ಸಿಂಗ್​ಗೆ ನಿಂದಿಸಿದ್ದಾರೆ. ಬಳಿಕ ತನ್ನ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಬಾರಿಸಿದ್ದಾರೆ.

ಅವನಿಗೆ ಮಹಿಳೆಯ ಬಗ್ಗೆ ಈ ರೀತಿಯಾಗಿ ಮಾತನಾಡಲು ಯಾವ ಹಕ್ಕಿದೆ? ಒಂದು ವೇಳೆ ಈಗ ಅವನಿಗೆ ಪಾಠ ಕಲಿಸದಿದ್ದರೆ, ನಾಳೆ ಎಲ್ಲಾ ಮಹಿಳೆಯರ ಬಗ್ಗೆಯೂ ಹೀಗೆಯೇ ಮಾತನಾಡುತ್ತಾನೆ ಎಂದು ಫೋಗಾಟ್​ ಕಿಡಿಕಾರಿದ್ದಾರೆ.

ಫೋಗಾಟ್​ ವಿರುದ್ಧ ಮುಖ್ಯಮಂತ್ರಿ ಮನೋಹರ್ ಲಾಖ್​ ಖಟ್ಟರ್​ ಕ್ರಮ ತೆಗೆದುಕೊಳ್ಳಬೇಕೆಂದು ಕಾಂಗ್ರೆಸ್​ ವಕ್ತಾರ ರಣದೀಪ್​ ಸಿಂಗ್​ ಸುರ್ಜೆವಾಲಾ ಟ್ವೀಟ್​ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕೃತ್ಯಗಳನ್ನು ಬಿಜೆಪಿ ನಾಯಕಿ ಎಸಗಿದ್ದಾರೆ. ಸರ್ಕಾರಿ ಕೆಲಸ ಮಾಡುವುದು ಅಪರಾಧವೇ? ಸಿಎಂ ಮನೋಹರ್​ ಲಾಕ್​ ಖಟ್ಟರ್ ಸೋನಾಲಿ ಫೋಗಾಟ್​ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವರೇ ಎಂದು ಪ್ರಶ್ನಿಸಿದ್ದಾರೆ.
First published: June 6, 2020, 12:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading