HOME » NEWS » National-international » TIKTOK LIKELY TO COMEBACK AS BENGALURU BASED COMPANY TRYING A DEAL TO PURCHASE THE APP STG SNVS

Tik Tok - ಭಾರತದಲ್ಲಿ ಟಿಕ್​ಟಾಕ್ ಮತ್ತೆ ಪ್ರಾರಂಭ? ಬೆಂಗಳೂರು ಮೂಲದ ಕಂಪನಿಯಿಂದ ಖರೀದಿಗೆ ಯತ್ನ

ನಿಷೇಧವಾಗುವ ಮುನ್ನ ಭಾರತದಲ್ಲಿ ಅತ್ಯಂತ ಜನಪ್ರಿಯ ಆ್ಯಪ್ ಎನಿಸಿದ್ದ ಟಿಕ್ ಟಾಕ್ ಇದೀಗ ಕಂಬ್ಯಾಕ್ ಮಾಡುವ ಸಾಧ್ಯತೆ ದಟ್ಟವಾಗಿದೆ. ಬೆಂಗಳೂರು ಮೂಲದ ಗ್ಲಾನ್ಸ್ ಡಿಜಿಟಲ್ ಸಂಸ್ಥೆ ಟಿಕ್ ಟಾಕ್ ಖರೀದಿಸಲು ಪ್ರಯತ್ನಿಸುತ್ತಿದೆ.

news18
Updated:February 15, 2021, 3:40 PM IST
Tik Tok - ಭಾರತದಲ್ಲಿ ಟಿಕ್​ಟಾಕ್ ಮತ್ತೆ ಪ್ರಾರಂಭ? ಬೆಂಗಳೂರು ಮೂಲದ ಕಂಪನಿಯಿಂದ ಖರೀದಿಗೆ ಯತ್ನ
ಟಿಕ್​ ಟಾಕ್
  • News18
  • Last Updated: February 15, 2021, 3:40 PM IST
  • Share this:
ಟಿಕ್‌ಟಾಕ್ ಭಾರತದಲ್ಲಿ ಬ್ಯಾನ್ ಆಗಿ ಅನೇಕ ತಿಂಗಳುಗಳೇ ಕಳೆದುಹೋಗಿವೆ. ಜೂನ್ 29 ರಿಂದ ಭಾರತದಲ್ಲಿ ಈ ಚೀನಿ ಆ್ಯಪ್ ಅಧಿಕೃತವಾಗಿ ನಿಷೇಧಕ್ಕೆ ಒಳಗಾಗಿದೆ. Tik Tok ಬ್ಯಾನ್ ಕೆಲವರಿಗೆ ಸಂತೋಷ ನೀಡಿದರೆ ಇನ್ನೂ ಕೆಲವರನ್ನು ದುಃಖದ ಕಡಲಿನಲ್ಲಿ ಮುಳುಗುವಂತೆ ಮಾಡಿದೆ. ಟಿಕ್‌ಟಾಕ್ ಆ್ಯಪ್ ಹೊಸ ರೂಪ ಪಡೆದು ಭಾರತಕ್ಕೆ ಬರಲಿದೆ ಎಂಬ ಗಾಳಿಸುದ್ದಿಗಳು ಕೂಡ ಹರಿದಾಡುತ್ತಿವೆ. ಈ ಮಧ್ಯೆ ಹೊಸ ಸುದ್ದಿಯೊಂದು ಬಂದಿದೆ. ಇಂಟರ್ ನೆಟ್ ತಂತ್ರಜ್ಞಾನ ಕಂಪನಿ ಬೈಟ್ ಡಾನ್ಸ್ ಒಡೆತನದಲ್ಲಿರುವ ಟಿಕ್ ಟಾಕ್ ಅನ್ನು ಖ್ಯಾತ ಟೆಕ್ ಸಂಸ್ಥೆಯಾಗಿರುವ ಗ್ಲಾನ್ಸ್‌ ಖರೀದಿ ಮಾಡಲಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.

ಟಿಕ್‌‌ಟಾಕ್‌ನ ಭಾರತೀಯ ವಿಭಾಗವನ್ನು ಖರೀದಿಸಲು ಬೆಂಗಳೂರು ಮೂಲದ ‘ಗ್ಲಾನ್ಸ್‌ ಡಿಜಿಟಲ್‌ ಎಕ್ಸ್‌ ಪೀರಿಯನ್ಸ್‌’ ಸಂಸ್ಥೆ ಮಾತುಕತೆ ನಡೆಸುತ್ತಿದೆ. ಟಿಕ್‌ಟಾಕ್‌ನ ಮಾತೃಸಂಸ್ಥೆಯಾದ ಇದು, ಚೀನಾ ಮೂಲದ ಬೈಟ್‌ಡ್ಯಾನ್ಸ್ ಜೊತೆಗೆ ಮಾತುಕತೆ ನಡೆಸುತ್ತಿದೆ ಎಂದು ಬ್ಲೂಮ್‌ಬರ್ಗ್‌ ವರದಿ ಮಾಡಿದೆ. ವರದಿಯ ಪ್ರಕಾರ, ಜಪಾನ್‌ ಮೂಲದ ಸಾಫ್ಟ್‌ ಬ್ಯಾಂಕ್‌ ಗ್ರೂಪ್‌ ಮಾತುಕತೆ ಆರಂಭಿಸಿದೆ. ಇದು ಇನ್ನೂ ಆರಂಭಿಕ ಹಂತದಲ್ಲಿರುವುದರಿಂದ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ. ‘ಗ್ಲಾನ್ಸ್‌ ಡಿಜಿಟಲ್‌ ಎಕ್ಸ್‌ಪೀರಿಯನ್ಸ್‌’ನ ಮಾತೃ ಸಂಸ್ಥೆ ‘ಇನ್‌ಮೊಬಿ’ ಮತ್ತು ‘ಬೈಟ್‌ಡ್ಯಾನ್ಸ್‌’ ಎರಡರಲ್ಲೂ ಜಪಾನ್‌ ಮೂಲದ ಸಾಫ್ಟ್‌ ಬ್ಯಾಂಕ್‌ ಹೂಡಿಕೆ ಮಾಡಿದೆ. ಈ ಹಿನ್ನೆಲೆ ಸಾಫ್ಟ್‌ ಬ್ಯಾಂಕ್‌ ಈ ಮಾತುಕತೆಗೆ ಒಂದು ಉತ್ತಮ ವೇದಿಕೆಯನ್ನು ಒದಗಿಸಿದೆ.

ಟಿಕ್‌ಟಾಕ್‌ನ ಮಾರಾಟದ ಯಾವುದೇ ಒಪ್ಪಂದಕ್ಕೆ ಭಾರತೀಯ ಅಧಿಕಾರಿಗಳಿಂದ ಅಂತಿಮ ಅನುಮೋದನೆಯ ಅಗತ್ಯವಿರುತ್ತದೆ ಎಂದು ವರದಿ ತಿಳಿಸಿದೆ. ಈ ಬಗ್ಗೆ ಗ್ಲಾನ್ಸ್ ವಕ್ತಾರರನ್ನು ಬ್ಲೂಮ್‌ಬರ್ಗ್‌ ಸಂಪರ್ಕಿಸಿದಾಗ ಡೀಲ್​ನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದ್ದಾರೆ.

ಇದನ್ನೂ ಓದಿ: FASTag: ಇಂದು ಮಧ್ಯರಾತ್ರಿಯಿಂದ ಫಾಸ್ಟ್‌ಟ್ಯಾಗ್ ಕಡ್ಡಾಯ; ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..!

ಕಳೆದ ವರ್ಷ ಭಾರತ ಮತ್ತು ಚೀನಾ ನಡುವೆ ಗಡಿ ವಿಚಾರವಾಗಿ ಸಂಘರ್ಷ ಹೆಚ್ಚಾದ ಬಳಿಕ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಟಿಕ್‌ಟಾಕ್ ಸೇರಿ 400ಕ್ಕೂ ಹೆಚ್ಚು ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತ್ತು. ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ನೇತೃತ್ವದ ಹೊಸ ಆಡಳಿತದಿಂದ ಕೂಡ ಟಿಕ್‌ಟಾಕ್‌ನ ಮೇಲೆ ನಿಷೇಧದ ತೂಗುಗತ್ತಿ ತೇಲಾಡುತ್ತಿದೆ. ಹೀಗಾಗಿ ಸಾಫ್ಟ್‌ ಬ್ಯಾಂಕ್ ಟಿಕ್‌ಟಾಕ್‌ನ ಭಾರತೀಯ ಕಾರ್ಯಾಚರಣೆ ರಕ್ಷಿಸುವ ಮತ್ತು ಸ್ಥಳೀಯ ಪಾಲುದಾರರಿಗಾಗಿ ಹುಡುಕಾಟದಲ್ಲಿದೆ ಎಂದು ಹೇಳಲಾಗಿದೆ.

ಡೊನಾಲ್ಡ್ ಟ್ರಂಪ್ ‘ರಾಷ್ಟ್ರೀಯ ಭದ್ರತಾ ಕಾಳಜಿ’ ಹಿನ್ನೆಲೆ ಅಮೆರಿಕದ ಮಾರುಕಟ್ಟೆಯಿಂದ ಟಿಕ್‌ಟಾಕ್‌ ಅಪ್ಲಿಕೇಶನ್ ನಿಷೇಧಿಸುವ ಬಗ್ಗೆ ಎಚ್ಚರಿಕೆ ನೀಡಿದ ನಂತರ ಈ ಮೊಕದ್ದಮೆಯನ್ನು ಕೈಬಿಡುವಂತೆ ಫೆಡರಲ್ ನ್ಯಾಯಾಧೀಶರಲ್ಲಿ ಸಾಫ್ಟ್ ಬ್ಯಾಂಕ್ ಮನವಿ ಮಾಡಿಕೊಂಡಿದೆ. ಚೀನಾದೊಂದಿಗಿನ ಸಂಬಂಧ ಬಿಗಡಾಯಿಸುತ್ತಿರುವುದರಿಂದ ಚೀನಾ ಮೂಲದ ತಂತ್ರಜ್ಞಾನ ಕಂಪನಿಗಳಿಗೆ ಭಾರತ ಹಲವು ನಿಯಮಗಳನ್ನು ರೂಪಿಸಿತ್ತು. ಟಿಕ್‌ಟಾಕ್‌ನ ಬಳಕೆದಾರರ ಡೇಟಾ ಮತ್ತು ತಂತ್ರಜ್ಞಾನವು ತನ್ನ ಗಡಿಯೊಳಗೆ ಇರಬೇಕೆಂದು ಭಾರತ ಸರ್ಕಾರ ಒತ್ತಾಯಿಸುತ್ತದೆ ಎಂದು ವರದಿ ಹೇಳಿದೆ. ತಂತ್ರಜ್ಞಾನ ರಫ್ತಿಗೆ ಸಂಬಂಧಿಸಿದ ಚೀನಾದ ಹೊಸ ನಿಯಮಗಳು ಈ ಮಾತುಕತೆಗಳನ್ನು ಹೆಚ್ಚು ಸಂಕೀರ್ಣಗೊಳಿಸಿವೆ.

ಇದನ್ನೂ ಓದಿ: Valentines Day Gift: ಪ್ರೇಮಿಗಳ ದಿನದಂದು ಮಡದಿಗೆ ತನ್ನ ಕಿಡ್ನಿಯನ್ನೇ ಉಡುಗೊರೆಯಾಗಿ ನೀಡಿದ ಗಂಡ..!ಟಿಕ್‌ಟಾಕ್ ಭಾರತದಲ್ಲಿ ತನ್ನ ಅತಿದೊಡ್ಡ ಮಾರುಕಟ್ಟೆಯನ್ನು ಹೊಂದಿದ್ದು, 20 ಕೋಟಿಗೂ ಹೆಚ್ಚು ಜನರು ಈ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದರು. ಆದಾಗ್ಯೂ, ಭಾರತ ಸರ್ಕಾರ ತನ್ನ ಸಾರ್ವಭೌಮತ್ವ ಮತ್ತು ಭದ್ರತಾ ಹಿನ್ನೆಲೆ ಉಲ್ಲೇಖಿಸಿ ಟಿಕ್‌ಟಾಕ್ ಸೇರಿದಂತೆ ಹಲವಾರು ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಲು ನಿರ್ಧರಿಸಿತ್ತು. ಕಳೆದ ತಿಂಗಳಷ್ಟೇ ಈ ನಿಷೇಧವನ್ನು ತೆಗೆದುಹಾಕಲಾಗುವುದಿಲ್ಲ ಎಂದು ಸೂಚಿಸಿದ ಕೇಂದ್ರ ಸರ್ಕಾರ ಭಾರತದಲ್ಲಿ ಚೀನೀ ಅಪ್ಲಿಕೇಶನ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶಿಸಿತ್ತು. ಬೈಟ್‌ಡ್ಯಾನ್ಸ್ ತನ್ನ ಸ್ಥಳೀಯ ಕಾರ್ಯಾಚರಣೆ ಹೆಚ್ಚಿಸಲು ಪ್ರಾರಂಭಿಸಿದ್ದು, ಅದು ಸಾವಿರಾರು ಭಾರತೀಯ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಿದೆ.

ಬೆಂಗಳೂರಿನ ಗ್ಲಾನ್ಸ್‌ ಡಿಜಿಟಲ್‌ ಎಕ್ಸ್‌ ಪೀರಿಯನ್ಸ್‌ ನ ಮಾತೃಸಂಸ್ಥೆ ಇನ್‌ಮೊಬಿ ಆಗಿದೆ. ಇದೇ ಇನ್‌ಮೊಬಿಯ ಶಾರ್ಟ್‌ ವಿಡಿಯೋ ಆ್ಯಪ್‌ ಆಗಿರುವ ರೊಪೊಸೊ, ಟಿಕ್‌ಟಾಕ್ ನಿಷೇಧದ ನಂತರ ಭಾರತದಲ್ಲಿ ಅತ್ಯಂತ ಹೆಚ್ಚಿನ ಜನಪ್ರಿಯತೆ ಗಳಿಸಿದೆ.
Published by: Vijayasarthy SN
First published: February 15, 2021, 3:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories