• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ದಾರಿ ಯಾವುದಯ್ಯ ಹಣಗಳಿಸಲು ಎಂದಿದ್ದಕ್ಕೆ ಅಡ್ಡದಾರಿ ತೋರಿಸಿದ ಟಿಕ್​ಟಾಕ್​ ಯುವತಿಯ ಬಂಧನ!

ದಾರಿ ಯಾವುದಯ್ಯ ಹಣಗಳಿಸಲು ಎಂದಿದ್ದಕ್ಕೆ ಅಡ್ಡದಾರಿ ತೋರಿಸಿದ ಟಿಕ್​ಟಾಕ್​ ಯುವತಿಯ ಬಂಧನ!

ಹನೀನ್ ಹೊಸಮ್

ಹನೀನ್ ಹೊಸಮ್

ಈ ಘಟನೆ ಈಜಿಪ್ಟ್​ನಲ್ಲಿ ನಡೆದಿದೆ. 20 ವರ್ಷ ವಯಸ್ಸಿನ ಹನೀನ್ ಹೊಸಮ್​ ಎಂಬಾಕೆ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾಳೆ. ಹನೀನ್​ ಟಿಕ್​ಟಾಕ್​ ಬಳಸುತ್ತಿದ್ದು, 9 ಲಕ್ಷಕ್ಕೂ ಅಧಿಕ ಫಾಲೋವರ್ಸ್​ ಹೊಂದಿದ್ದಳು. ಟಿಕ್​ಟಾಕ್​ನಲ್ಲಿ ಆಗಾಗ ಹಣಗಳಿಸುವ ದಾರಿಯನ್ನು ಹೇಳುತ್ತಿದ್ದಳು

  • Share this:

    ಸಾಮಾಜಿಕ ಜಾಲತಾಣದ ಮೂಲಕ ಹಣ ಗಳಿಸಬಹುದು ಎಂಬುದು ಅನೇಕರಿಗೆ ಗೊತ್ತಿದೆ, ಸೋಷಿಯಲ್​ ಮೀಡಿಯಾದಲ್ಲಿ ಬ್ರಾಂಡ್​ ಪ್ರಮೋಷನ್​, ಇನ್ನಿತರ ವಿಡಿಯೋಗಳನ್ನು ಹರಿಯಬಿಡುವ ಮೂಲಕ ಅನೇಕರು ಹಣಗಳಿಸುತ್ತಿದ್ದಾರೆ. ಇನ್ನು ಕೆಲವರಿಗೆ ಹಣಗಳಿಸುವ ಆಸೆಯಿದ್ದರು ಹೇಗೆ ಎಂಬುದು ತಿಳಿದಿರುವುದಿಲ್ಲ. ಅದರಂತೆ ಇಲ್ಲೊಬ್ಬಳು ಟಿಕ್​ಟಾಕ್​ ಬಳಸುತ್ತಿದ್ದ ಯುವತಿ ​ ತನ್ನ ಫಾಲೋಚರ್ಸ್​ಗೆ ಹಣ ಗಳಿಸುವ ದಾರಿಯೊಂದನ್ನು ಹೇಳಿಕೊಟ್ಟು ಜೈಲು ಸೇರಿದ್ದಾಳೆ.. ಅಂಥಹದ್ದೇನು ಹೇಳಿದ್ದಾಳೆ ಆಕೆ?


    ಈ ಘಟನೆ ಈಜಿಪ್ಟ್​ನಲ್ಲಿ ನಡೆದಿದೆ. 20 ವರ್ಷ ವಯಸ್ಸಿನ ಹನೀನ್ ಹೊಸಮ್​ ಎಂಬಾಕೆ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾಳೆ. ಹನೀನ್​ ಟಿಕ್​ಟಾಕ್​ ಬಳಸುತ್ತಿದ್ದು, 9 ಲಕ್ಷಕ್ಕೂ ಅಧಿಕ ಫಾಲೋವರ್ಸ್​ ಹೊಂದಿದ್ದಳು. ಟಿಕ್​ಟಾಕ್​ನಲ್ಲಿ ಆಗಾಗ ಹಣಗಳಿಸುವ ದಾರಿಯನ್ನು ಹೇಳುತ್ತಿದ್ದಳು. ಅದರಲ್ಲೂ ಮಹಿಳೆಯರು ಸುಲಭವಾಗಿ ಹಣಗಳಿಸುವುದು ಹೇಗೆ ಎಂಬುದನ್ನು ವಿಡಿಯೋ ಮೂಲಕ ಹಂಚಿಕೊಳ್ಳುತ್ತಿದ್ದಳು. ಆದರೀಗ ಹಣ ಗಳಿಸುವ ನಿಟ್ಟಿನಲ್ಲಿ ವೇಶ್ಯಾವಾಟಿಕೆಗೆ ಸಹಾಯ ಮಾಡುತ್ತಿದ್ದಾಳೆ ಎಂಬ ಕಾರಣಕ್ಕೆ ಆಕೆಯನ್ನು ಈಜಿಪ್ಟ್​ ಸರ್ಕಾರ ಬಂಧಿಸಿದೆ. ಶಿಕ್ಷೆಯನ್ನು ನೀಡಿದೆ.


    ಘಟನೆಗೆ ಸಂಭಂದಿಸಿದಂತೆ ಹನೀನ್​ ನ್ಯಾಯಾಲಕ್ಕೆ ತೆರಳಲಿಲ್ಲ. ಆದರೆ ಮಾಡಿದ ತಪ್ಪಿಗೆ 10 ವರ್ಷ ಜೈಲು ಶಿಕ್ಷೆ ಜತೆಗೆ 10 ಲಕ್ಷ ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ. ಹನೀನ್​ ಜತೆಗೆ ಮೂವರು ಯುವತಿಯನ್ನು ಬಂಧಿಸಿದ್ದು, ಅವರಿಗೂ 10 ಲಕ್ಷ ದಂಡ ವಿಧಿಸಲಾಗಿದೆ.


    ಇಂದು ಸಾಮಾಜಿಕ ಜಾಲತಾಣ ಅಗಾಧವಾಗಿ ಬೆಳದಿದೆ. ವಿಶ್ವದಲ್ಲಿ ಬಹುತೇಕ ಜನರು ಸಾಮಾಜಿಕ ಜಾಲತಾಣ ಬಳಸುತ್ತಿದ್ದಾರೆ. ಜತೆಗೆ ಹಣ ಮಾಡುವ ಮಾರ್ಗವನ್ನು ಕಂಡುಕೊಳ್ಳುತ್ತಿದ್ದಾರೆ. ಸೋಷಿಯಲ್​ ಮೀಡಿಯಾ ಮೂಲಕ ದಿನಕ್ಕೆ ಅನೇಕ ಘಟನೆಗಳು ಬೆಳಕಿಗೆ ಬರುತ್ತಿರುತ್ತದೆ. ಅದರ ಜತೆಗೆ ಇಂತಹ ಘಟನೆಗಳು ಬಳಕೆದಾರರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.

    Published by:Harshith AS
    First published: