ಟಿಕ್‌ಟಾಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆವಿನ್ ಮೇಯರ್ ತಮ್ಮ ಸ್ಥಾನವನ್ನು ತ್ಯಜಿಸಿದ್ದಾರೆ ಎಂದು ಕಂಪನಿ ಇಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಜನಪ್ರಿಯ ಕಿರು-ರೂಪದ ವೀಡಿಯೊ-ಹಂಚಿಕೆ ಅಪ್ಲಿಕೇಶನ್ ಮತ್ತು ಅದರ ಉದ್ಯೋಗಿಯೊಬ್ಬರು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತಾತ್ಮಕ ಆದೇಶದ ಮತ್ತು ಅಮೆರಿಕದಲ್ಲಿ ವಹಿವಾಟುಗಳನ್ನು ನಿಷೇಧಿಸುವ ಬಗ್ಗೆ ಪ್ರತ್ಯೇಕವಾಗಿ ಮೊಕದ್ದಮೆ ಹೂಡಿದ ಕೆಲ ದಿನಗಳ ನಂತರ ಕೆವಿನ್ ಮೇಯರ್ ರಾಜೀನಾಮೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಸಿಇಓ ಕೆವಿನ್ ಮೇಯರ್ ಈ ಕುರಿತು ತಮ್ಮ ಕಂಪೆನಿ ಉದ್ಯೋಗಿಗಳಿಗೆ ಪತ್ರ ಬರೆದಿದ್ದು ಈ ಪತ್ರದಲ್ಲಿ, "ನಾನು ಟಿಕ್‌ಟಾಕ್ ಕಂಪನಿಯನ್ನು ತೊರೆಯಲು ನಿರ್ಧರಿಸಿದ್ದೇನೆ ಎಂದು ನಿಮ್ಮೆಲ್ಲರಿಗೂ ತಿಳಿಸಲು ಬಯಸಿದ್ದು ಭಾರವಾದ ಹೃದಯದಿಂದ ರಾಜೀನಾಮೆ ನೀಡುತ್ತಿದ್ದೇನೆ” ಎಂದು ತಿಳಿಸಿದ್ಧಾರೆ.
ಹೀಗಾಗಿ ಟಿಕ್‌ಟಾಕ್ ಜನರಲ್ ಮ್ಯಾನೇಜರ್ ವನೆಸ್ಸಾ ಪಪ್ಪಾಸ್ ಅವರು ಕೆವಿನ್ ಮೇಯರ್ ಅವರನ್ನು ಮಧ್ಯಂತರ ಆಧಾರದ ಮೇಲೆ ನೇಮಕ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಕಳೆದ ಜೂನ್‌ನಲ್ಲಿ ಕೆವಿನ್ ಮೇಯರ್ ಟಿಕ್‌ಟಾಕ್ ಚೀನಾ ಮೂಲದ ಪೋಷಕ ಬೈಟ್‌ಡಾನ್ಸ್‌ನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಒಒ) ಹುದ್ದೆಯನ್ನು ವಹಿಸಿಕೊಂಡಿದ್ದರು. ಅವರು ನೇರವಾಗಿ ಕಂಪನಿಯ ಸ್ಥಾಪಕ ಮತ್ತು ಸಿಇಒ ಯಿಮಿಂಗ್ ಜಾಂಗ್‌ಗೆ ವರದಿ ಮಾಡುತ್ತಿದ್ದರು. ಸಿಇಓ ಮೇಯರ್ ಡಿಸ್ನಿಯಲ್ಲಿ ಸುದೀರ್ಘ ಮತ್ತು ಯಶಸ್ವಿ ವೃತ್ತಿಜೀವನದ ನಂತರ ಟಿಕ್‌ಟಾಕ್‌ಗೆ ಸೇರಿಕೊಂಡಿದ್ದರು.
ನವೆಂಬರ್ 3 ರ ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಮುಂಚಿತವಾಗಿ, ಟ್ರಂಪ್ ಅವರು ಎರಡನೇ ಅವಧಿಗೆ ಮತ್ತೆ ಅಧಿಕಾರಕ್ಕೇರಲು ಪ್ರಯತ್ನಿಸುತ್ತಿದ್ದು ಅಮೆರಿಕದಲ್ಲಿ "ಚೀನಾ ವಿರೋಧಿ ವಾಕ್ಚಾತುರ್ಯದ ವ್ಯಾಪಕ ಅಭಿಯಾನ" ವನ್ನು ಮತ್ತಷ್ಟು ವ್ಯಾಪಕವಾಗಿ ಹರಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಮೆರಿಕದಲ್ಲೂ ಟಿಕ್‌ಟಾಕ್ ಅನ್ನು ನಿಷೇಧಿಸಲಾಗಿದ್ದು, ಈ ಕಂಪೆನಿಯನ್ನು ಖರೀದಿಸುವ ಬಗ್ಗೆ ಮೈಕ್ರೋಸಾಫ್ಟ್ ಮಾತುಕತೆ ನಡೆಸಿದೆ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ