• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಚೀನಾ ಮೂಲದ ಟಿಕ್​ಟಾಕ್​ ಸೇರಿದಂತೆ ಅನೇಕ ಅಪ್ಲಿಕೇಶನ್​ಗಳು ಭಾನುವಾರದಿಂದ ಅಮೆರಿಕದಲ್ಲೂ ಬ್ಯಾನ್!

ಚೀನಾ ಮೂಲದ ಟಿಕ್​ಟಾಕ್​ ಸೇರಿದಂತೆ ಅನೇಕ ಅಪ್ಲಿಕೇಶನ್​ಗಳು ಭಾನುವಾರದಿಂದ ಅಮೆರಿಕದಲ್ಲೂ ಬ್ಯಾನ್!

ಡೊನಾಲ್ಡ್‌ ಟ್ರಂಪ್‌.

ಡೊನಾಲ್ಡ್‌ ಟ್ರಂಪ್‌.

ತಾಂತ್ರಿಕ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಚೀನಾ ನಡುವೆ ಕಳೆದ ಹಲವು ವರ್ಷಗಳಿಂದ ಉದ್ವಿಗ್ನತೆಯ ವಾತಾವರಣ ಇದೆ. ಇದೇ ಕಾರಣಕ್ಕೆ ಅಂತಾರಾಷ್ಟ್ರೀಯ ವೇದಿಕೆಯಲ್ಲೂ ಸಹ ಹಲವಾರು ಭಾರಿ ಡೊನಾಲ್ಡ್ ಟ್ರಂಪ್ ಚೀನಾ ಸರ್ಕಾರ ಅಮೆರಿಕನ್ನರ ವ್ಯಯಕ್ತಿಕ ಮಾಹಿತಿಯನ್ನು ಕದಿಯುತ್ತಿದೆ ಎಂದು ಆರೋಪ ಹೊರಿಸುತ್ತಿದ್ದರು.

ಮುಂದೆ ಓದಿ ...
  • Share this:

ವಾಷಿಂಗ್ಟನ್​: ಮೊಬೈಲ್​ನ ಯಾವುದೇ ಪ್ಲಾಟ್​ಫಾರ್ಮ್​ನಲ್ಲಿರುವ ಆ್ಯಪ್ ಸ್ಟೋರ್ ಮೂಲಕ ಚೀನಾ ಮೂಲದ ಮೆಸೇಜಿಂಗ್ ಮತ್ತು ವಿಡಿಯೋ ಹಂಚಿಕೆ ಅಪ್ಲಿಕೇಶನ್​ಗಳಾದ ಟಿಕ್​ಟಾಕ್ ಮತ್ತು ವೀ-ಚಾಟ್ ಅಪ್ಲಿಕೇಶನ್​ಗಳನ್ನು ಡೌನ್ಲೋಡ್ ಮಾಡುವುದನ್ನು ಅಮೆರಿಕ ವಾಣಿಜ್ಯ ಇಲಾಖೆ ಟಿಕ್ನಿ​ಟಷೇಧಿಸಿದೆ. ಹೀಗಾಗಿ ಭಾನುವಾರದಿಂದ ಈ ಅಪ್ಲಿಕೇಶನ್​ಗಳು ಅಮೆರಿಕದ ಜನರಿಗೆ ಲಭ್ಯವಿರುವುದಿಲ್ಲ ಎಂದು ವೈಟ್​ಹೌಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೆ, “ಈ ಅಪ್ಲಿಕೇಶನ್​ಗಳು ಮತ್ತು ಕಂಪೆನಿಗಳು ದೇಶದ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಹಾಕುತ್ತಿವೆ ಮತ್ತು ಬಳಕೆದಾರರ ಮಾಹಿತಿಯನ್ನು ಚೀನಾಕ್ಕೆ ರವಾನಿಸುತ್ತಿದೆ ಎಂಬ ಸಂಶಯ ನಮಗಿದೆ. ಇದೇ ಕಾರಣಕ್ಕಾಗಿ ಈ ಅಪ್ಲಿಕೇಶನ್ಗಳ ಬಳಕೆಯ ಮೇಲೆ ನಿರ್ಬಂಧ ಹೇರಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ನಿರ್ಧರಿಸಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ  “ಚೀನಾದ ಕಮ್ಯುನಿಸ್ಟ್ ಪಕ್ಷ ಅಮೆರಿಕದ ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಮತ್ತು ದೇಶದ ಆರ್ಥಿಕತೆಗೆ ಧಕ್ಕೆ ತರುವ ಸಲುವಾಗಿಯೇ ಈ ಅಪ್ಲಿಕೇಶನ್ ಗಳನ್ನು ಬಳಸುವ ಉದ್ದೇಶಗಳನ್ನು ಹೊಂದಿದೆ. ಹೀಗಾಗಿ ಅಧ್ಯಕ್ಷರ ನಿರ್ದೇಶನದ ಮೇರೆಗೆ, ಅಮೆರಿಕದ ನಾಗರೀಕರ ವೈಯಕ್ತಿಕ ದತ್ತಾಂಶಗಳ ಚೀನಾದ ದುರುದ್ದೇಶಪೂರಿತ ಸಂಗ್ರಹವನ್ನು ಎದುರಿಸಲು ನಾವು ಮಹತ್ವದ ಕ್ರಮ ಕೈಗೊಂಡಿದ್ದೇವೆ" ಎಂದು ಯುಎಸ್ ವಾಣಿಜ್ಯ ಇಲಾಖೆಯ ಕಾರ್ಯದರ್ಶಿ ವಿಲ್ಬರ್ ರಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಬಿಬಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.


ತಾಂತ್ರಿಕ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಚೀನಾ ನಡುವೆ ಕಳೆದ ಹಲವು ವರ್ಷಗಳಿಂದ ಉದ್ವಿಗ್ನತೆಯ ವಾತಾವರಣ ಇದೆ. ಇದೇ ಕಾರಣಕ್ಕೆ ಅಂತಾರಾಷ್ಟ್ರೀಯ ವೇದಿಕೆಯಲ್ಲೂ ಸಹ ಹಲವಾರು ಭಾರಿ ಡೊನಾಲ್ಡ್ ಟ್ರಂಪ್ ಚೀನಾ ಸರ್ಕಾರ ಅಮೆರಿಕನ್ನರ ವ್ಯಯಕ್ತಿಕ ಮಾಹಿತಿಯನ್ನು ಕದಿಯುತ್ತಿದೆ ಎಂದು ಆರೋಪ ಹೊರಿಸುತ್ತಿದ್ದರು. ಅಲ್ಲದೆ, ಈ ಆರೋಪದ ಕಾರಣಕ್ಕಾಗಿಯೇ ಟಿಕ್​ಟಾಕ್ ಸೇರಿದಂತೆ ಅನೇಕ ಚೀನಾ ಅಪ್ಲಿಕೇಶನ್​ಗಳನ್ನು ಬ್ಯಾನ್ ಮಾಡುವ ಮಾತುಗಳನ್ನು ಅಡುತ್ತಿದ್ದರು.


ಈ ನಡುವೆ ಭಾರತ ಸರ್ಕಾರ ಗಡಿ ಸಂಘರ್ಷವನ್ನು ಮುಂದಿಟ್ಟು ಚೀನಾದ ನೂರಾರು ಅಪ್ಲಿಕೇಶನ್​ಗಳನ್ನು ಭಾರತದಲ್ಲಿ ಬಳಕೆಗೆ ಸಿಗದಂತೆ ಕಳೆದ ಜೂನ್ ತಿಂಗಳಲ್ಲಿ ಬ್ಯಾನ್ ಮಾಡಿತ್ತು. ಭಾರತ ಇಂತಹ ಕ್ರಮಕ್ಕೆ ಮುಂದಾಗುತ್ತಿದ್ದಂತೆ ಇದೀಗ ಅಮೆರಿಕ ಸಹ ಚೀನಾ ಮೂಲದ ಟಿಕ್​ಟಾಕ್, ವೀ-ಚಾಟ್ ಸೇರಿದಂತೆ ಹಲವಾರು ಅಪ್ಲಿಕೇಶನ್​ಗಳ ಮೇಲೆ ನಿರ್ಬಂಧ ಹೇರಲು ಮುಂದಾಗಿದೆ.


ಅಸಲಿಗೆ ಅಮೆರಿಕ ಕಳೆದ ಎರಡು ತಿಂಗಳಿನಿಂದ ಚೀನಾ ಅಪ್ಲಿಕೇಶನ್​ಗಳನ್ನು ಬ್ಯಾನ್ ಮಾಡುವ ಕುರಿತು ಆಯಾ ಕಂಪೆನಿಗಳಿಗೆ ಎಚ್ಚರಿಕೆ ನೀಡುತ್ತಲೇ ಇತ್ತು. ಹೀಗಾಗಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಟಿಕ್​ಟಾಕ್ ಕಂಪೆನಿಯ ಹೂಡಿಕೆದಾರರು ನಿರ್ಬಂಧದಿಂದ ತಮಗಾಗುವ ನಷ್ಟವನ್ನು ಭರ್ತಿ ಮಾಡುವ ಸಲುವಾಗಿ ಇಡೀ ಕಂಪೆನಿಯನ್ನು ಅಮೆರಿಕ ಮೂಲದ ಮೈಕ್ರೋಸಾಫ್ಟ್ ಕಂಪೆನಿಗೆ ಮಾರಾಟ ಮಾಡಲು ಮುಂದಾಗಿದ್ದರು.


ಈ ಸಂಬಂಧ ಹಲವು ಸುತ್ತಿನ ಮಾತುಕತೆ ಸಹ ನಡೆದಿತ್ತು. ಆದರೆ, ಟಿಕ್​ಟಾಕ್ ಕಂಪೆನಿ ಮಾರಾಟ ಪ್ರಯತ್ನದ ನಡುವೆಯೇ ಈ ಅಪ್ಲಿಕೇಶನ್ ಅನ್ನು ಡೊನಾಲ್ಡ್ ಟ್ರಂಪ್ ಸರ್ಕಾರ ಬ್ಯಾನ್ ಮಾಡಲು ಹೊರಟಿದೆ. ಇದರಿಂದ ಈ ಕಂಪೆನಿಗಳು ಭಾರೀ ಪ್ರಮಾಣದ ನಷ್ಟವನ್ನು ಎದುರಿಸಲಿವೆ ಎನ್ನಲಾಗುತ್ತಿದೆ.


ಇದನ್ನೂ ಓದಿ : ಇದನ್ನೂ ಓದಿ : ಬಂಗಾಳ, ಕೇರಳದಿಂದ ದಾಳಿಗೆ ಸಂಚು ರೂಪಿಸುತ್ತಿದ್ದ 9 ಶಂಕಿತ ಅಲ್-ಖೈದಾ ಉಗ್ರರ ಬಂಧನ


ಇದಲ್ಲದೆ, ಚೀನಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟಿಕ್‌ಟಾಕ್ ಮತ್ತು ವೀಚಾಟ್‌ನ ಮೂಲ ಕಂಪನಿಯಾದ ಬೈಟ್‌ಡ್ಯಾನ್ಸ್ ಲಿಮಿಟೆಡ್‌ನೊಂದಿಗೆ ಅಮೆರಿಕದ ಬೇರೆ ಯಾವುದೇ ಕಂಪೆನಿಗಳ ವಹಿವಾಟುಗಳನ್ನು ನಿಷೇಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಸ್ಟ್ 6 ರಂದು ಸಹಿ ಹಾಕಿದ್ದರು. ಈ ಆದೇಶವು 45 ದಿನಗಳ ನಂತರ ಜಾರಿಗೆ ಬರಲಿದೆ ಎಂದು ಅಮೇರಿಕಾ ಹೇಳಿತ್ತು. ಹೀಗಾಗಿ ಟಿಕ್​ಟಾಕ್ ಸೇರಿದಂತೆ ಬಹುತೇಕ ಚೀನಾ ಅಪ್ಲಿಕೇಶನ್​ಗಳು ಮತ್ತೆ ಅಮೆರಿಕದಲ್ಲಿ ನೆಲೆ ಕಂಡುಕೊಳ್ಳುವುದು ಅಸಾಧ್ಯ ಎಂದೇ ಹೇಳಲಾಗುತ್ತಿದೆ.


ಗಾಲ್ವಾನ್ ವ್ಯಾಲಿ ಘರ್ಷಣೆಯ ನಂತರ ಭಾರತದಲ್ಲಿ ಚೀನಾದ ನೂರಾರು ಆ್ಯಪ್‌ಗಳನ್ನು ನಿಷೇಧಿಸಲಾಯಿತು. ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಬೆದರಿಕೆ ಹಾಕಿದ್ದನ್ನು ಉಲ್ಲೇಖಿಸಿ ಜೂನ್‌ನಲ್ಲಿ ಕೇಂದ್ರವು 59 ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತ್ತು. ಕಳೆದ ವಾರ, ನಿಷೇಧಿತ ಅಪ್ಲಿಕೇಶನ್‌ಗಳ ತದ್ರೂಪುಗಳಾಗಿದ್ದ 47 ಅಪ್ಲಿಕೇಶನ್‌ಗಳನ್ನು ಸಹ ನಿರ್ಬಂಧಿಸಲಾಗಿದೆ. ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ಭಾರತದ ಕ್ರಮವನ್ನು, ಚೀನಾ, ವಿಶ್ವ ವಾಣಿಜ್ಯ ಸಂಸ್ಥೆಯ ನಿಯಮಗಳ ಉಲ್ಲಂಘನೆ ಎಂದು ಕರೆದಿದೆ.

top videos
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು