ಗೋವನ್ನು ತಿನ್ನುವ ಹುಲಿಗಳಿಗೆ ಘೋರಶಿಕ್ಷೆ: ಗೋವಾ ಶಾಸಕ ಚರ್ಚಿಲ್ ಅಲೆಮಾವೊ

ಸ್ಥಳೀಯರು ತಮ್ಮ ಜಾನುವಾರುಗಳ ಮೇಲೆ ದಾಳಿ ಮಾಡಿದ್ದಕ್ಕೆ ಹುಲಿಗಳನ್ನು ಕೊಂದಿದ್ದಾರೆ. ಹಾಗೆಯೇ ಹುಲಿ ದಾಳಿಯಿಂದ ಗೋವುಗಳನ್ನು ಕಳೆದುಕೊಂಡ ರೈತರಿಗೆ ಮೂರು ನಾಲ್ಕು ದಿನಗಳಲ್ಲಿ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಗೋವಾ ಎನ್​​ಸಿಪಿ ಶಾಸಕ ಚರ್ಚಿಲ್​​​​​ ಅಲೆಮಾವೊ

ಗೋವಾ ಎನ್​​ಸಿಪಿ ಶಾಸಕ ಚರ್ಚಿಲ್​​​​​ ಅಲೆಮಾವೊ

 • Share this:
  ನವದೆಹಲಿ(ಫೆ.05): ಮುಷ್ಯರಂತೆಯೇ ಗೋವನ್ನು ಕೊಲ್ಲುವ ಹುಲಿಗಳಿಗೆ ಘೋರಶಿಕ್ಷೆ ವಿಧಿಸಬೇಕು ಎನ್ನುವ ಮೂಲಕ ಗೋವಾದ ನ್ಯಾಷನಲ್​​​​​ ಕಾಂಗ್ರೆಸ್​ ಪಾರ್ಟಿ(ಎನ್​​ಸಿಪಿ) ಶಾಸಕ ಚರ್ಚಿಲ್​​ ಅಲೆಮಾವೊ ವ್ಯಂಗ್ಯವಾಡಿದ್ಧಾರೆ. ಇಂದು ವಿಧಾನಸಭಾ ಅಧಿವೇಶನದಲ್ಲಿ ಮಾತಾಡಿದ ಎನ್​​ಸಿಪಿ ಶಾಸಕ ಚರ್ಚಿಲ್​​ ಅಲೆಮಾವೊ, ಗೋಮಾಂಸ ತಿನ್ನುತ್ತಾರೆ ಎಂಬ ಕಾರಣಕ್ಕೆ ಮನುಷ್ಯರಿಗೆ ಶಿಕ್ಷಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ಗೋವನ್ನು ಕೊಂದು ತಿನ್ನುವ ಹುಲಿಗಳಿಗೆ ಯಾಕೆ ಶಿಕ್ಷೆ ನೀಡುವುದಿಲ್ಲ? ಎಂದು ಪ್ರಶ್ನಿಸಿದ್ಧಾರೆ.

  ಇತ್ತೀಚೆಗೆ ಮಹದಾಯಿ ಅಭಯಾರಣ್ಯದಲ್ಲಿ ಹುಲಿ ಮತ್ತು ತನ್ನ ಮರಿಗಗಳನ್ನು ಐವರನ್ನೊಳಗೊಂಡ ಸ್ಥಳೀಯರ ಗುಂಪೊಂದು ಕೊಂದು ಹಾಕಿತ್ತು. ಈ ಸಂಬಂಧ ವಿರೋಧ ಪಕ್ಷದ ನಾಯಕ ದಿಗಂಬರ್​​​ ಕಾಮತ್​​​​ ಸನದಲ್ಲಿ ಪ್ರಸ್ತಾಪಿಸಿದರು. ಆಗ ಚರ್ಚಿಲ್​​ ಅಲೆಮಾವೊ, ಯಾರಾದರೂ ಮನುಷ್ಯರು ದನದ ಮಾಂಸ ತಿಂದರೆ ಶಿಕ್ಷೆ ನೀಡುತ್ತೀರಿ. ಅದೇ ರೀತಿ ಗೋವನ್ನು ತಿನ್ನುವ ಹುಲಿಗಳಿಗೆ ಯಾಕೇ ಶಿಕ್ಷೆ ವಿಧಿಸಬೇಕು ಎಂದರು.

  ವನ್ಯಜೀವಿಗಳ ಸಂರಕ್ಷಣೆ ಹೇಗೆ ಮುಖ್ಯವೋ ಹಾಗೆಯೇ ಮುನುಷ್ಯರು ಕೂಡ ಮುಖ್ಯ. ದನದ ಮಾಂಸ ತಿಂದ ಮಾತ್ರಕ್ಕೆ ನೀವು ಮನುಷ್ಯರಿಗೆ ಶಿಕ್ಷೆ ನೀಡಲು ಮುಂದಾಗುತ್ತೀರಿ. ಅದೇ ರೀತಿ ಗೋವು ಕೊಂದ ಹುಲಿಗಳಿಗೆ ಯಾಕೇ ಶಿಕ್ಷೆ ನೀಡವುದಿಲ್ಲ ಎಂದು ಪ್ರಶ್ನಿಸುವ ಮೂಲಕ ಗೋವು ಹೆಸರಿನಲ್ಲಿ ನಡೆಯುವ ಗುಂಪು ಥಳಿತದ ಬಗ್ಗೆ ಗಮನ ಸಳೆದರು ಚರ್ಚಿಲ್​​.

  ಇದನ್ನೂ ಓದಿ: ಸಿ.ಪಿ ಯೋಗೇಶ್ವರ್​​ಗೆ ಮಂತ್ರಿ ಸ್ಥಾನ ನೀಡಬೇಡಿ ಎನ್ನಲು ನಾವ್ಯಾರು?; ಅದು ಹೈಕಮಾಂಡ್​ಗೆ ಬಿಟ್ಟದ್ದು: ಎಂ.ಪಿ ರೇಣುಕಾಚಾರ್ಯ

  ಇನ್ನು ಇದೇ ವೇಳೆ ವಿರೋಧ ಪಕ್ಷದ ನಾಯಕ ದಿಗಂಬರ್​​​ ಕಾಮತ್​​​​ ಸನದಲ್ಲಿ ಪ್ರಸ್ತಾಪಿಸಿದರ ಬಗ್ಗೆ ಮುಖ್ಯಮಂತ್ರಿ ಪ್ರಮೋದ್​ ಸಾವಂತ್​​​ ಪ್ರತಿಕ್ರಿಯಿಸಿದರು. ಸ್ಥಳೀಯರು ತಮ್ಮ ಜಾನುವಾರುಗಳ ಮೇಲೆ ದಾಳಿ ಮಾಡಿದ್ದಕ್ಕೆ ಹುಲಿಗಳನ್ನು ಕೊಂದಿದ್ದಾರೆ. ಹಾಗೆಯೇ ಹುಲಿ ದಾಳಿಯಿಂದ ಗೋವುಗಳನ್ನು ಕಳೆದುಕೊಂಡ ರೈತರಿಗೆ ಮೂರು ನಾಲ್ಕು ದಿನಗಳಲ್ಲಿ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.
  First published: