ಆಗಸ್ಟ್ 7 ಮತ್ತು 8 ರ ಮಧ್ಯರಾತ್ರಿ ಗ್ರಾಮಸ್ಥರು ಈ ಪ್ರದೇಶದಲ್ಲಿ ಡ್ರೋನ್ ಚಲಿಸುವ ಶಬ್ದಗಳನ್ನು ಕೇಳಿಸಿಕೊಂಡಿದ್ದಾರೆ ಎಂದು ಡಿಜಿಪಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ತರುವಾಯ, ಅನುಮಾನಾಸ್ಪದವಾಗಿ ಗಡಿ ಭಾಗಕ್ಕಿಂತ ಕೊಂಚ ದೂರದಲ್ಲಿ ಬ್ಯಾಗ್ಗಳನ್ನು ಎಸೆದಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದೆ. ಅನುಮಾನ ಬಂದು ಆ ಚೀಲವನ್ನು ತೆರೆದಾಗ, ಡಬಲ್ ಡೆಕ್ಕರ್ ಪ್ಲಾಸ್ಟಿಕ್ ಟಿಫಿನ್, ಐದು ಹ್ಯಾಂಡ್ ಗ್ರೆನೇಡ್ಗಳು ಮತ್ತು 100 ಕಾರ್ಟ್ರಿಜ್ಗಳನ್ನು ಹೊಂದಿರುವ ಏಳು ಪೌಚ್ಗಳನ್ನು ಕಂಡು ಬಂದಿವೆ. 2 ಕೆಜಿ ತೂಕದ ಸ್ಫೋಟಕ ವಸ್ತುಗಳು, ಒಂದು ಸ್ವಿಚ್ ಮತ್ತು ರಿಮೋಟ್ ಕಂಟ್ರೋಲ್ ಸಾಧನ ಕೂಡ ಈ ಬ್ಯಾಗಿನಲ್ಲಿ ಪತ್ತೆಯಾಗಿದೆ.
ಡ್ರೋನ್ ಓಡಾಟದ ಬಗ್ಗೆ ಗ್ರಾಮದ ಸರಪಂಚರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ನಮಗೆ ಈ ಸಂಗತಿ ಗೊತ್ತಾಗಿದೆ ಎಂದು ಡಿಜಿಪಿ ಹೇಳಿದ್ದಾರೆ. "ನಾವು NSG ಗೆ ಕರೆ ಮಾಡಿದ್ದೇವೆ. ಅವರು ಈ ಸಂಗತಿಯನ್ನು ಪರಿಶೀಲಿಸುತ್ತಿದ್ದಾರೆ. ನಿನ್ನೆ ತಡರಾತ್ರಿ ತಂಡವು ಬಂದು ಅತ್ಯಂತ ಅತ್ಯಾಧುನಿಕ ಬಾಂಬ್ ಎಂದು ಪ್ರಾಥಮಿಕ ವರದಿಯನ್ನು ನೀಡಿದೆ. ಇದು ಸುಮಾರು 2-3 ಕೆಜಿ ಆರ್ಡಿಎಕ್ಸ್ ಮತ್ತು ಸ್ವಿಚ್ ಮೆಕ್ಯಾನಿಸಂ ಹೊಂದಿದೆ. ಟೈಮ್ ಬಾಂಬ್ ಆಗಿಯೂ ಇದನ್ನು ಪರಿವರ್ತಿಸಬಹುದು. ಸ್ಪ್ರಿಂಗ್ ಮೆಕ್ಯಾನಿಸಂ ಮತ್ತು ಎರಡು
ಯು-ಆಕಾರದ ಆಯಸ್ಕಾಂತಗಳನ್ನು ಹೊಂದಿರುವ ಮ್ಯಾಗ್ನೆಟಿಕ್ ಮೆಕ್ಯಾನಿಸಂ ಕೂಡ ಇದೆ ಎಂದು ಡಿಜಿಪಿ ಹೇಳಿದರು.
ಮುದ್ರಿತ ಸರ್ಕ್ಯೂಟ್ ಬೋರ್ಡ್ ಕೂಡ ಇದೆ ಎಂದು ಅವರು ಹೇಳಿದರು, ಇದು ರಿಮೋಟ್ ಸಿಗ್ನಲ್ನಿಂದ ಆಫ್ ಆಗುತ್ತದೆ ಎಂದು ಸೂಚಿಸುತ್ತದೆ. ಮೂರು ಡಿಟೋನೇಟರ್ಗಳು ಮತ್ತು ಒಂಬತ್ತು ವೋಲ್ಟ್ಗಳ ಪವರ್ ಎನರ್ಜೈಸರ್ ಕೂಡ ಪತ್ತೆಯಾಗಿದೆ. ಸ್ಫೋಟಕಗಳನ್ನು ಸೂಕ್ಷ್ಮವಾಗಿ ಜೋಡಿಸಲಾಗಿದೆ ಎಂದು ತೋರುತ್ತದೆ ಎಂದು ಡಿಜಿಪಿ ಹೇಳಿದರು.
ಟಿಫಿನ್ ಬಾಂಬ್ ಬಳಸಿಕೊಂಡು ಸಂಭಾವ್ಯ ಗುರಿ ಇಟ್ಟುಕೊಂಡು ಈ ಕೆಲಸಕ್ಕೆ ಕೈ ಹಾಕಲಾಗಿದೆ, ಇದು ದೇಶದ ಯಾವ ಭಾಗದಲ್ಲಿ ದಾಳಿ ನಡೆಸಲು ಗುರಿ ಇಟ್ಟುಕೊಂಡಿರಬಹುದು ಎಂಬುದನ್ನು ಕಂಡು ಹಿಡಿಯಲು ತನಿಖೆ ನಡೆಯುತ್ತಿದೆ ಮತ್ತು ಯಾರಿಗೆ ರವಾನೆ ಮಾಡಲು ಹೀಗೆ ಮಾಡಲಾಯಿತು ಎನ್ನುವ ಕುರಿತು ಶೀಘ್ರ ತನಿಖೆ ನಡೆಸುವುದಾಗಿ ಎಂದು ಹೇಳಿದರು.
"ಕಳೆದ ಎರಡು ಮೂರು ತಿಂಗಳಲ್ಲಿ ಗಡಿಯುದ್ದಕ್ಕೂ ಈ ರೀತಿಯ ಚಟುವಟಿಕೆ ಹೆಚ್ಚಾಗಿದೆ. ಇದು ಅತ್ಯಂತ ಕೆಟ್ಟ ಮತ್ತು ಆತಂಕಕಾರಿ ಬೆಳವಣಿಗೆ ”ಎಂದು ಡಿಜಿಪಿ ಹೇಳಿದರು.
ಜನರಿಂದ ಸಹಕಾರ ಕೋರಿ ಹಾಗೂ ಇಂತಹ ಸ್ಫೋಟಕಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಡಿಜಿಪಿ ಹೇಳಿದರು. "ನಾವು ಈ ಬೆಳವಣಿಗೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಬಯಸುತ್ತೇವೆ. ಆಕರ್ಷಕ ಸ್ಟಿಕ್ಕರ್ ಹೊಂದಿರುವ ಮಕ್ಕಳ ಟಿಫಿನ್ ಬಾಕ್ಸ್ನಲ್ಲಿ ಐಇಡಿ ಸ್ಪೋಟಕ ಅಳವಡಿಸಲಾಗಿದೆ ಎಂದರೆ ಅದು ಮಕ್ಕಳನ್ನೇ ಗುರಿಯಾಗಿಸಿಕೊಂಡು ಈ ರೀತಿ ಕೃತ್ಯ ಎಸಗಲಾಗಿದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ