ಆಗ್ರಾಗೆ ಟ್ರಂಪ್​​​​​​ ಭೇಟಿ ಹಿನ್ನೆಲೆ; ಪ್ರವಾಸಿಗರಿಗೆ ತಾಜ್​ಮಹಲ್​ ಪ್ರವೇಶ ನಿರ್ಬಂಧ

ಯಾರು ಆಗ್ರಾದಲ್ಲಿ ಇಲ್ಲವೋ ಅವರಿಗೆ ಭದ್ರತಾ ವ್ಯವಸ್ಥೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಹೀಗಾಗಿ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಆಗ್ರಾ(ಫೆ.24): ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಇಂದು ಭಾರತಕ್ಕೆ ಆಗಮಿಸುತ್ತಿದ್ದಾರೆ. ಟ್ರಂಪ್​​ ಆಗ್ರಾದಲ್ಲಿರುವ ವಿಶ್ವವಿಖ್ಯಾತ ತಾಜ್​ ಮಹಲ್​ಗೂ ಭೇಟಿ ನೀಡಲಿದ್ದಾರೆ. ಹೀಗಾಗಿ ಭದ್ರತಾ ದೃಷ್ಟಿಯಿಂದ ಇಂದು ಪ್ರವಾಸಿಗರಿಗೆ ತಾಜ್​ಮಹಲ್ ಪ್ರವೇಶ ನಿರ್ಬಂಧಿಸಲಾಗಿದೆ.

  ಇಂದು ಸಂಜೆ 4.45ಕ್ಕೆ ಡೊನಾಲ್ಡ್​ ಟ್ರಂಪ್​ ಆಗ್ರಾಗೆ ತೆರಳಲಿದ್ದು, 5.15ಕ್ಕೆ ಪ್ರೇಮ ಸ್ಮಾರಕ ತಾಜ್​ಮಹಲ್​ಗೆ ಭೇಟಿ ನೀಡಲಿದ್ದಾರೆ. ಸುಮಾರು 1 ಗಂಟೆ ಸಮಯ 17ನೇ ಶತಮಾನದ ಭವ್ಯ ತಾಣ ತಾಜ್​ಮಹಲ್​ನಲ್ಲಿ ಕಳೆಯಲಿದ್ದಾರೆ. ಹೀಗಾಗಿ ತಾಜ್​​ಮಹಲ್​ ಸುತ್ತ ಬಿಗಿ ಭದ್ರತೆ ವಹಿಸಲಾಗಿದೆ.

  Namaste Trump: ಇಂದು ಭಾರತಕ್ಕೆ ಡೊನಾಲ್ಡ್ ಟ್ರಂಪ್ ಆಗಮನ; ಇಲ್ಲಿದೆ ಅವರ 2 ದಿನದ ವೇಳಾಪಟ್ಟಿ

  "ಬೆಳಗ್ಗೆ 11.30ರವರೆಗೆ ಮಾತ್ರ ಪ್ರವಾಸಿಗರು ತಾಜ್​ಮಹಲ್​ಗೆ ಭೇಟಿ ನೀಡಬಹುದಾಗಿದೆ. ಅಲ್ಲಿಯವರೆಗೆ ಮಾತ್ರ ಟಿಕೆಟ್​ ನೀಡಲಾಗುತ್ತದೆ. ಬಳಿಕ ಡೊನಾಲ್ಡ್​ ಟ್ರಂಪ್​ ಭೇಟಿ ಹಿನ್ನೆಲೆ, ಉನ್ನತ ಮಟ್ಟದ ಭದ್ರತಾ ವ್ಯವಸ್ಥೆ ದೃಷ್ಟಿಯಿಂದ ತಾಜ್​ಮಹಲ್​ಗೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗುತ್ತದೆ ಎಂದು ಆಗ್ರಾ ಡಿಎಂ ಪ್ರಭು ಎನ್​ ಸಿಂಗ್​ ಹೇಳಿದ್ದಾರೆ.

  "ಕೆಲವು ದಿನಗಳ ಹಿಂದೆ ಆಗ್ರಾಗೆ ಭೇಟಿ ನೀಡಲಿರುವ ದೇಶದ ವಿವಿಧ ಭಾಗಗಳ ಪ್ರವಾಸಿಗರು ಪ್ರವಾಸೋದ್ಯಮ ಕಚೇರಿಗೆ ಕರೆ ಮಾಡಿ ಸೋಮವಾರ ತಾಜ್​ಮಹಲ್​ ತೆರೆಯಲಾಗುತ್ತದೆಯೇ ಇಲ್ಲವೇ ಎಂದು ಕೇಳಿದ್ದರು. ಯಾರು ಆಗ್ರಾದಲ್ಲಿ ಇಲ್ಲವೋ ಅವರಿಗೆ ಭದ್ರತಾ ವ್ಯವಸ್ಥೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಹೀಗಾಗಿ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ," ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

  ರಾತ್ರೋರಾತ್ರಿ ಭೂಗತ ಪಾತಕಿ ರವಿ ಪೂಜಾರಿಯನ್ನು ಬೆಂಗಳೂರಿಗೆ ಕರೆತಂದ ಪೊಲೀಸರು

   
  First published: