Tianlei 500: ಚೀನಾದ ಹೊಸ ಸಮರಾಸ್ತ್ರಕ್ಕೆ ಅಮೆರಿಕ ಕೂಡ ಆತಂಕ; ಎನಿದೆ ಈ ಚೀನೀ ಸ್ಕೈ ಥಂಡರ್ ವಿಶೇಷತೆ?

ತೈವಾನ್ ದೇಶ ಅಮೆರಿಕದ 66 ಎಫ್-16ವಿ ಯುದ್ಧವಿಮಾನಗಳನ್ನ ಖರೀದಿಸಿದ ಬೆನ್ನಲ್ಲೇ ಚೀನಾ ತನ್ನ ಹೊಸ ವೆಪನ್ ಸಿಸ್ಟಂ ಅನ್ನು ಅನಾವರಣಗೊಳಿಸಿ ಶತ್ರು ದೇಶಗಳಿಗೆ ಡೇಂಜರ್ ಸಿಗ್ನಲ್ ರವಾನಿಸಿದೆ.

ಚೀನಾದ ಯುದ್ಧವಿಮಾನಗಳು

ಚೀನಾದ ಯುದ್ಧವಿಮಾನಗಳು

  • News18
  • Last Updated :
  • Share this:
    ನವದೆಹಲಿ: ಹಲವು ದೇಶಗಳೊಂದಿಗೆ ಸಂಘರ್ಷದ ಸಂಬಂಧ ಹೊಂದಿರುವ ಚೀನಾ ಈಗ ಗಣನೀಯವಾಗಿ ತನ್ನ ಸೇನಾ ಶಕ್ತಿ ವೃದ್ಧಿಸಿಕೊಳ್ಳುತ್ತಿದೆ. ಎರಡು ದಿನಗಳ ಹಿಂದಷ್ಟೇ ಚೀನಾ ಸ್ಕೈ ಥಂಡರ್ ಎಂಬ ಹೊಚ್ಚ ಹೊಸ ವೆಪನ್ ಸಿಸ್ಟಂ ಅನಾವರಣಗೊಳಿಸಿತು. ಟಿಯಾನ್​ಲೀ 500 (Tianlei 500) ಎಂದು ಹೆಸರಿಸಲಾಗಿರುವ ಈ ಶಸ್ತ್ರ ವ್ಯವಸ್ಥೆ ಶತ್ರು ಪಡೆಗಳ ಪಾಲಿಗೆ ಸಿಂಹಸ್ವಪ್ನವಾಗಬಹುದು ಎಂದು ತಜ್ಞರು ಹೇಳುತ್ತಾರೆ.

    ಅಮೆರಿಕದ ನೌಕಾಪಡೆ ಬಳಿ ಇರುವ ಜೆಎಸ್​ಒಡಬ್ಲ್ಯೂ ಎಜಿಎಂ 154ಎ ವೆಪನ್ ಸಿಸ್ಟಂ ಮಾದರಿಯಲ್ಲಿ ಚೀನಾದ ಟಿಯಾನ್​ಲೀ-500 ಅನ್ನು ರೂಪಿಸಲಾಗಿದೆ. ಚೀನಾದ ಈ ಹೊಸ ಅಸ್ತ್ರವು ಒಮ್ಮೆಲೇ ಶತ್ರುಪಡೆಯ ವಾಯುನೆಲೆಯನ್ನು ಸಂಪೂರ್ಣ ನಾಶ ಮಾಡಬಲ್ಲುದು.

    ಇದನ್ನೂ ಓದಿ: ಆರೇಳು ತಿಂಗಳಲ್ಲೆ ನಿರುದ್ಯೋಗ ಪ್ರೇರಿತ ಕೆಟ್ಟ ಪರಿಣಾಮಗಳನ್ನು ಭಾರತ ಎದುರಿಸಲಿದೆ; ರಾಹುಲ್ ಗಾಂಧಿ ಎಚ್ಚರಿಕೆ

    ಯುದ್ಧವಿಮಾನಗಳಿಗೆ ಈ ವೆಪನ್ ಸಿಸ್ಟಂಗಳನ್ನ ಅಳವಡಿಸಲಾಗುತ್ತದೆ. ಎತ್ತರಕ್ಕೆ ಹೋಗಿ ಅಲ್ಲಿಂದ ಈ ಬಾಂಬ್​ಗಳನ್ನ ಹಾಕಬಹುದು. ಲೇಸರ್ ಆಧಾರಿತವಾಗಿ ಮತ್ತು ಜಿಪಿಎಸ್​ನಂಥ ನ್ಯಾವಿಗೇಶನ್ ಸಿಸ್ಟಂ ಸಹಾಯದಿಂದ ನಿರ್ದಿಷ್ಟ ಗುರಿಯನ್ನು ಬಾಂಬ್​ಗಳು ಸ್ವಯಂ ಆಗಿ ತಲುಪುವಂತೆ ತಂತ್ರಜ್ಞಾನ ಅಳವಡಿಸಲಾಗಿದೆ. 60 ಕಿಮೀ ದೂರದವರೆಗೂ ಈ ಬಾಂಬ್ ಹೋಗಬಲ್ಲುದು.



    ಈ ಸ್ಕೈ ಥಂಡರ್ ಸಿಸ್ಟಂ ಸುಮಾರು ಟೆನಿಸ್ ಬಾಲ್ ಗಾತ್ರದ ಮತ್ತು 500 ಕಿಲೋ ಒಟ್ಟಾರೆ ತೂಕದ 249 ಯುದ್ಧಾಸ್ತ್ರಗಳನ್ನ ಹೊತ್ತೊಯ್ದು ಒಮ್ಮೆಗೇ ಎಸೆದು 6 ಸಾವಿರ ಚದರ ಮೀಟರ್ ವಿಸ್ತೀರ್ಣ ಪ್ರದೇಶವನ್ನು ಧೂಳೀಪಟ ಮಾಡುವ ಸಾಮರ್ಥ್ಯ ಹೊಂದಿದೆ.
    Published by:Vijayasarthy SN
    First published: