ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನವೂ ಅನೇಕ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವುಗಳು ನಮಗೆ ಸಿಕ್ಕಾಪಟ್ಟೆ ಮನರಂಜನೆ ನೀಡಿದರೆ, ಇನ್ನೂ ಕೆಲವು ಜೀವನಪಾಠ ಹೇಳಿಕೊಡುತ್ತವೆ. ಅಂತಹದ್ದೇ ಮತ್ತೊಂದು ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ. ಸೆಂಚುರಿ ಬಾರಿಸಿದರೂ ಕೂಡ ಇನ್ನೂ ಗಟ್ಟಿಮುಟ್ಟಾಗಿರುವ ಈ ಅಜ್ಜಿ ನೀಡಿರುವ ಜೀವನಪಾಠಗಳು ಪ್ರತಿಯೊಬ್ಬರಿಗೂ ಅಗತ್ಯವಾಗಿವೆ.
100 ವರ್ಷ ತುಂಬಿರುವ ಲಿಯೊನೊರಾ ರೇಮಂಡ್ ಎಂಬ ಅಜ್ಜಿ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಪಾಲಿಸಬೇಕಾದ 5 ಉಪಯುಕ್ತ ಸಲಹೆಗಳು ನೀಡಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಜನರ ಹೃದಯವನ್ನು ಗೆದ್ದಿದ್ದಾರೆ. ‘ಹ್ಯೂಮನ್ಸ್ ಆಫ್ ಬಾಂಬೆ’ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿರುವ ಈ ವಿಡಿಯೋದಲ್ಲಿ ಅಜ್ಜಿ ಟೋಪಿ ಹಾಗೂ ವರ್ಣರಂಜಿತ ಉಡುಪು ಧರಿಸಿದ್ದಾರೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸಾಧ್ಯವಾದಷ್ಟು ಖುಷಿ ಖುಷಿಯಿಂದ ಇರಲು ಪ್ರಯತ್ನಿಸಿ. ನಾನು ನೀಡುವ ಈ 5 ಉಪಯುಕ್ತ ಸಲಹೆಗಳನ್ನು ಪಾಲಿಸಿ ಉತ್ತಮ ಜೀವನ ನಡೆಸಿರಿ ಎಂದು ಅವರು ಸಲಹೆ ನೀಡಿದ್ದಾರೆ.
ಹಾಗಾದ್ರೆ ಆ ಅಜ್ಜಿ ನೀಡಿರುವ 5 ಉಪಯುಕ್ತ ಸಲಹೆಗಳು ಯಾವುವು ಅಂತೀರಾ..?. ‘ನಿಮಗೆ ಅಗತ್ಯವೆನಿಸುವವರೆಗೂ ಒಬ್ಬಂಟಿಯಾಗಿರಿ’, ‘ನಿಮ್ಮ ಸ್ಮಾರ್ಟ್‌ಫೋನ್‌ಗಳನ್ನು ದೂರ ಎಸೆಯಿರಿ', ‘ಪ್ರತಿ ವರ್ಷವೂ ಒಂದು ತಿಂಗಳ ಸಂಬಳವನ್ನು ಉಳಿಸಿ’,' ‘ನಿಮ್ಮ ಜೀವನವನ್ನು ಯಾವಾಗಲೂ ಗಂಭೀರವಾಗಿ ತೆಗೆದುಕೊಳ್ಳಬೇಡಿ’ ಮತ್ತು ‘ಯಾರಾದರೂ ನಗುವಿಲ್ಲದವರನ್ನು ನೋಡಿದರೆ ಅವರಿಗೆ ನಿಮ್ಮ ನಗುವನ್ನು ನೀಡಿ’ ಎಂದು ಜೀವನಪಾಠ ಹೇಳಿದ್ದಾರೆ.
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ