ಮಹಿಳಾ ಪಿಜಿಯಲ್ಲಿ ಬೆಂಕಿ ಅವಘಡ; ಮೂವರು ಯುವತಿಯರು ಬಲಿ, ಹಲವು ಮಂದಿಗೆ ಗಾಯ

ಬೆಂಕಿ ಅವಘಡದಿಂದ ಗಾಯಗೊಂಡ ಯುವತಿಯರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ಕು ಅಗ್ನಿ ಶಾಮಕ ವಾಹನಗಳು ಸ್ಥಳಕ್ಕಾಗಮಿಸಿ, ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿವೆ.

news18-kannada
Updated:February 22, 2020, 8:25 PM IST
ಮಹಿಳಾ ಪಿಜಿಯಲ್ಲಿ ಬೆಂಕಿ ಅವಘಡ; ಮೂವರು ಯುವತಿಯರು ಬಲಿ, ಹಲವು ಮಂದಿಗೆ ಗಾಯ
ಬೆಂಕಿ ಅವಘಡ ಕಾಣಿಸಿಕೊಂಡ ಕಟ್ಟಡ.
  • Share this:
ಚಂಡೀಗಢ: ಮಹಿಳಾ ಪೇಯಿಂಗ್​ ಗೆಸ್ಟ್​ನಲ್ಲಿ (ಪಿಜಿ) ಶನಿವಾರ ಸಂಜೆ ಬೆಂಕಿ ಅವಘಡ ಸಂಭವಿಸಿ ಮೂವರು ಯುವತಿಯರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ.

ಸೆಕ್ಟರ್ 32 ಕಟ್ಟಡದ ಮೊದಲ ಮಹಡಿಯ ಪೇಯಿಂಗ್ ಗೆಸ್ಟ್​ನಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿಯರು ಇದ್ದರು. ಘಟನೆಯಲ್ಲಿ ಮೃತಪಟ್ಟ ಯುವತಿಯರು 19ರಿಂದ 22 ವರ್ಷದ ವಯಸ್ಸಿನವರು ಎಂದು ಚಂಡೀಗಢ ಜಿಲ್ಲಾ ವರಿಷ್ಠಾಧಿಕಾರಿ ವಿನೀತ್ ಕುಮಾರ್ ಹೇಳಿದ್ದಾರೆ.

ಬೆಂಕಿ ಅವಘಡದಿಂದ ಗಾಯಗೊಂಡ ಯುವತಿಯರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ಕು ಅಗ್ನಿ ಶಾಮಕ ವಾಹನಗಳು ಸ್ಥಳಕ್ಕಾಗಮಿಸಿ, ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿವೆ. ಶಾರ್ಟ್​ಸರ್ಕ್ಯೂಟ್​ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ: ಬಿಜೆಪಿ ಶಾಸಕನ ವಿರುದ್ಧದ ಗ್ಯಾಂಗ್​ ರೇಪ್ ಪ್ರಕರಣ; ಸಾಕ್ಷಗಳಿಲ್ಲ ಎಂದು ಕ್ಲೀನ್​ಚಿಟ್​ ನೀಡಿದ ಉತ್ತರಪ್ರದೇಶ ಪೊಲೀಸರು

First published:February 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ