ಹೈಪಟೈಟಿಸ್​ ಸಿ ವೈರಸ್​ ಅನ್ವೇಷಣೆ: ಮೂವರಿಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ

ರಕ್ತದಿಂದ ಹರಡುವ ಹೆಪಟೈಟಿಸ್​ ವಿರುದ್ಧದ ಹೋರಾಟಕ್ಕೆ ಈ ಮೂವರಿಗೆ ಈ ಪ್ರಶಸ್ತಿ ನೀಡಲಾಗಿದೆ.

ನೊಬೆಲ್​ ಪುರಸ್ಕೃತರು

ನೊಬೆಲ್​ ಪುರಸ್ಕೃತರು

 • Share this:
  ವೈದ್ಯಕೀಯ ಕ್ಷೇತ್ರದಲ್ಲಿನ  ಸಾಧನೆಗೆ ಮೂವರಿಗೆ ಜಂಟಿಯಾಗಿ ಪ್ರತಿಷ್ಠಿತ ನೊಬೆಲ್​ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಅಮೆರಿಕರದವರಾದ ಹಾರ್ವೆ ಆಲ್ಟರ್​, ಚಾರ್ಲ್ಸ್​ ರೈಸ್​ ಹಾಗೂ ಬ್ರಿಟನ್​ನ ಮೈಕೆಲ್​ ಹೌಟನ್​ ಈ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿದ್ದಾರೆ. ಹೈಪಟೈಟಿಸ್​ ಸಿ ವೈರಸ್​ ಅನ್ವೇಷಣೆಗಾಗಿ ಈ ಪ್ರಶಸ್ತಿ ನೀಡಲಾಗಿದೆ.  ರಕ್ತದಿಂದ ಹರಡುವ ಹೆಪಟೈಟಿಸ್​ ವಿರುದ್ಧದ ಹೋರಾಟ ಕುರಿತು ಈ ಮೂವರು ಅನ್ವೇಷಣೆ ನಡೆಸಿದ್ದರು.  ಪಿತ್ತಜನಕಾಂಗದ ಕ್ಯಾನ್ಸರ್​ ಮತ್ತು ಸಿರೋಸಿಸ್​ ಪ್ರಮುಖ ಜಾಗತಿಕ ಆರೋಗ್ಯ ಸಮಸ್ಯೆಯಾಗಿದೆ ಎಂದು ಇದೇ ವೇಳೆ ನೊಬೆಲ್​ ಪ್ರಶಸ್ತಿ ಆಯ್ಕೆ ತೀರ್ಪುಗಾರರು ತಿಳಿಸಿದ್ದಾರೆ.

  ವಿಶ್ವ ಆರೋಗ್ಯ ಸಂಘಟನೆ ಪ್ರಕಾರ ಸರಿಸುಮಾರು 70ಮಿಲಿಯನ್​ ಜನರು ಈ ಹೆಪಟೈಟಿಸ್​ಗೆ ಪ್ರತಿವರ್ಷ ತುತ್ತಾಗುತ್ತಿದ್ದಾರೆ. ಇದರಿಂದಾಗಿ ನಾಲ್ಕು ಲಕ್ಷ ಜನರು ಪ್ರತಿ ವರ್ಷ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದು ದೀರ್ಘಕಾಲ ಪಿತ್ತಕೋಶದ ಉರಿಯೂತ ಮತ್ತು ಕ್ಯಾನ್ಸರ್​ಗೆ ಪ್ರಮುಖ ಕಾರಣವಾಗಿದೆ.  ಈ ಪ್ರತಿಷ್ಠಿತ ಪ್ರಶಸ್ತಿ ಚಿನ್ನದ ಪದಕ ಹಾಗೂ 10 ಮಿಲಿಯನ್​ ಸ್ವೀಡಿಸ್​ ಹಣ ಹೊಂದಿದೆ.

  ಪ್ರತಿ ವರ್ಷ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಗುರುತಿಸಿ ಪುರಸ್ಕರಿಸುವ ಈ ಪ್ರಶಸ್ತಿಯನ್ನು ಒಟ್ಟು ಆರು ಕ್ಷೇತ್ರಗಳಲ್ಲಿ ನೀಡಲಾಗುವುದು. ಭೌತಶಾಸ್ತ್ರ, ರಸಾಯನ ಶಾಸ್ತ್ರ, ಸಾಹಿತ್ಯಮ ಶಾಂತಿ ಹಾಗೂ ಅರ್ಥಶಾಸ್ತ್ರದ ಕ್ಷೇತ್ರಗಳಲ್ಲಿನ ಸಾಧನೆಗೂ ಈ ಪ್ರಶಸ್ತ್ರಿ ನೀಡಲಾಗುವುದು. ಅಕ್ಟೋಬರ್​ ಮೊದಲವಾರದಿಂದ ಈ ಪ್ರಶಸ್ತಿಗಳು ಪ್ರಕಟವಾಗುತ್ತವೆ.
  Published by:Seema R
  First published: