ಇಲ್ಲಿ 100 ರೂಪಾಯಿಗೆ ಖಾತೆ ತೆರೆದು ಬ್ಯಾಂಕ್​ಗಿಂತಲೂ ಹೆಚ್ಚು ಬಡ್ಡಿ ಪಡೆಯಿರಿ!

ಒಂದು ವೇಳೆ ನೀವು ಪೋಸ್ಟ್​ ಆಫೀಸ್​ನಲ್ಲಿ ಉಳಿತಾಯ ಖಾತೆಯನ್ನು ತೆರೆಯಲು ಯೋಚಿಸುತ್ತಿದ್ದೀರೆಂದಾದರೆ, ನಿಮ್ಮ ಬಳಿ ಮೂರು ಆಯ್ಕೆಗಳಿವೆ. ಈ ಮೂರೂ ಉಳಿತಾಯ ಖಾತೆಗಳಲ್ಲಿ ನೀವು ಕನಿಷ್ಟ ಮೊತ್ತ ಉಳಿಸಿಕೊಳ್ಳಬೇಕೆಂಬ ಷರತ್ತು ಇಲ್ಲ.

Precilla Olivia Dias
Updated:September 3, 2018, 10:23 AM IST
ಇಲ್ಲಿ 100 ರೂಪಾಯಿಗೆ ಖಾತೆ ತೆರೆದು ಬ್ಯಾಂಕ್​ಗಿಂತಲೂ ಹೆಚ್ಚು ಬಡ್ಡಿ ಪಡೆಯಿರಿ!
ಒಂದು ವೇಳೆ ನೀವು ಪೋಸ್ಟ್​ ಆಫೀಸ್​ನಲ್ಲಿ ಉಳಿತಾಯ ಖಾತೆಯನ್ನು ತೆರೆಯಲು ಯೋಚಿಸುತ್ತಿದ್ದೀರೆಂದಾದರೆ, ನಿಮ್ಮ ಬಳಿ ಮೂರು ಆಯ್ಕೆಗಳಿವೆ. ಈ ಮೂರೂ ಉಳಿತಾಯ ಖಾತೆಗಳಲ್ಲಿ ನೀವು ಕನಿಷ್ಟ ಮೊತ್ತ ಉಳಿಸಿಕೊಳ್ಳಬೇಕೆಂಬ ಷರತ್ತು ಇಲ್ಲ.
  • Share this:
ನ್ಯೂಸ್​ 18 ಕನ್ನಡ

ನವದೆಹಲಿ(ಸೆ.03): ಪ್ರಧಾನ ಮಂತ್ರಿ ಸಪ್ಟೆಂಬರ್​ 1 ರಂದು ಪೋಸ್ಟ್​ ಪೇಮೆಂಟ್​ ಬ್ಯಾಂಕ್​ ಲಾಂಚ್​ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಜನರ ಮನಸ್ಸಿನಲ್ಲಿ ಹಲಬವಾರು ಪ್ರಶ್ನೆಗಳು ಎದ್ದಿವೆ. ಈ ಗೊಂದಲಗಳನ್ನು ದೂರ ಮಾಡುವ ಸಣ್ಣ ಪ್ರಯತ್ನವಿದು. ಒಂದು ವೇಳೆ ನೀವು ಪೋಸ್ಟ್​ ಆಫೀಸ್​ನಲ್ಲಿ ಉಳಿತಾಯ ಖಾತೆ ತೆರೆಯಲು ನೀವು ಯೋಚಿಸುತ್ತಿದ್ದೀರೆಂದಾದರೆ, ನಿಮ್ಮ ಬಳಿ ಮೂರು ಆಯ್ಕೆಗಳಿವೆ. ಈ ಮೂರೂ ರೀತಿಯ ಖಾತೆಗಳಲ್ಲಿ ಕನಿಷ್ಟ ಮೊತ್ತ ಇಡಬೇಕೆಂಬ ಯಾವುದೇ ನಿಯಮವಿಲ್ಲ. ಹಾಗಾದ್ರೆ ಈ ಖಾತೆಗಳ ಮನೂಲಕ ಸಿಗುವ ಆ ವಿಶೇಷ ಸೇವೆಗಳೇನು? ಇದು ಉಳಿದ ಸರ್ಕಾರಿ ಬ್ಯಾಂಕ್​ಗಳಿಂದ ಹೇಗೆ ಭಿನ್ನವಾಗಿದೆ? ಇಲ್ಲಿದೆ ವಿವರ

ಸರ್ಕಾರಿ ಬ್ಯಾಂಕ್​ಗಳಿಗೆ ಹೋಲಿಸಿದರೆ, ಈ ಮೂರು ರೀತಿಯ ಉಳಿತಾಯ ಖಾತೆಗಳಲ್ಲಿ ಹೆಚ್ಚು ಬಡ್ಡಿ ಸಿಗುತ್ತದೆ. ಈ ಮೂರು ರೀತಿಯ ಖಾತೆಗಳಲ್ಲಿ ರೆಗ್ಯುಲರ್​ ಸೇವೆಂಗ್ಸ್ ಅಕೌಂಟ್​ ಹಾಗೂ ಎರಡು ರೀತಿಯ ಬೇಸಿಕ್​ ಸೇವಿಂಗ್ಸ್​ ಅಕೌಂಟ್ಸ್​​ ಕೂಡಾ ಇವೆ.ಸಫಲ ಖಾತೆ: ನೀವ ನಿಮ್ಮ ಪ್ರಾಯ 10 ವರ್ಷ ಅಥವಾ ಅದಕ್ಕೂ ಹೆಚ್ಚಿದ್ದರೆ, ನೀವು ಕೇವಲ 100 ರೂಪಾಯಿ ಜಮೆ ಮಾಡಿ ಈ ಖಾತೆ ತೆರೆಯಬಹುದಾಗಿದೆ. ಇದರೊಂದಿಗೆ ನಿಮಗೆ ಉಚಿತ ಎಟಿಎಂ​- ಡೆಬಿಟ್​ ಕಾರ್ಡ್​ ಕೂಡಾ ಸಿಗುತ್ತದೆ. ಆದರೆ ನೀವು ಈ ಖಾತೆಯಲ್ಲಿ 1 ಲಕ್ಷಕ್ಕೂ ಅಧಿಕ ಹಣ ಇಡಲು ಸಾಧ್ಯವಿಲ್ಲ. ಇದರಲ್ಲಿ ನಾಮಿನೇಶನ್​ ಸೌಲಭ್ಯವೂ ಸಿಗುತ್ತದೆ.

ಸುಗಮ ಖಾತೆ: ಸುಗಮ ಖಾತೆಯನ್ನೂ 10 ವರ್ಷ ಅಥವಾ ಅದಕ್ಕೂ ಮೇಲ್ಪಟ್ಟ ಯಾವುದೇ ವ್ಯಕ್ತಿ ತೆರೆಯಬಹುದಾಗಿದೆ. ಇನ್ನು ಈ ಖಾತೆಯನ್ನು ತೆರೆಯಲು ಹಣ ಜಮೆ ಮಾಡಲೇಬೇಕೆಂದಿಲ್ಲ. ಇಲ್ಲಿ ಕನಿಷ್ಟ ಮೊತ್ತ ಇಡಬೇಕೆಂಬ ನಿಯಮವಿಲ್ಲ. ಇದರಲ್ಲೂ ನೀವು ಗರಿಷ್ಟ 1 ಲಕ್ಷ ರೂಪಾಯಿ ಜಮೆ ಮಾಡಬಹುದು. ಇದರಲ್ಲೂ ಡೆಬಿಟ್​ ಕಾರ್ಡ್​ ಉಚಿತವಾಗಿ ನೀಡಲಾಗುತ್ತದೆ ಹಾಗೂ ನಾಮಿನೇಶನ್​ ಸೌಲಭ್ಯ ನೀಡಲಾಗುತ್ತದೆ.

ಸರಳ ಖಾತೆ: 10 ವರ್ಷ ಇಲ್ಲವೇ ಅದಕ್ಕೂ ಮೇಲ್ಪಟ್ಟವರು ಸಾಮಾನ್ಯ ಕೆವೈಸಿ ಮಾಹಿತಿಯೊಂದಿಗೆ ಈ ಖಅತೆ ತೆರೆಯಬಹುದು. ಈ ಖಾತೆ ತೆರೆಯಲು ನಿಗದಿತ ಕನಿಷ್ಟ ಮೊತ್ತವಿಲ್ಲ. ಆದರೆ ಈ ಖಾತೆಯಲ್ಲಿ ನೀವು 50 ಸಾವಿರಕ್ಕೂ ಹೆಚ್ಚು ಮೊತ್ತ ಇಡುವಂತಿಲ್ಲ. ಇದರೊಂದಿಗೂ ನಿಮಗೆ ಎಟಿಎಂ ಉಚಿತವಾಗಿ ನೀಡುತ್ತಾರೆ ಹಾಗೂ ನಾಮಿನೇಶನ್​ ಸೌಲಭ್ಯ ನೀಡಲಾಗುತ್ತದೆ.ಅನಿಯಮಿತ ಎಟಿಎಂ ಟ್ರಾನ್ಸಾಕ್ಷನ್​: ಒಂದು ವೇಳೆ ನೀವು ಭಾರತೀಯ ಅಂಚೆಯ ಎಟಿಎಂ ಅಥವಾ ಪಿಎನ್​ಬಿ ಬ್ಯಾಂಕ್​ನ ಎಟಿಎಂನಲ್ಲಿ ವ್ಯವಹಾರ ನಡೆಸಿದರೆ, ತಿಂಗಳಿನಲ್ಲಿ ನಡೆಸುವ ಪ್ರತಿಯೊಂದು ಟ್ರಾನ್ಸಾಕ್ಷನ್​ಗೆ ಯಾವುದೇ ದಂಡ ಬೀಳುವುದಿಲ್ಲ. ಮಹಾನಗರಗಳಲ್ಲಿ ನೀವು ಬೇರೆ ಬ್ಯಾಂಕ್​ಗಳ ಎಟಿಎಂಗಳಲ್ಲಿ ಕೇವಲ 3 ಬಾರಿ ಟ್ರಾನ್ಸಾಕ್ಷನ್​ ಮಾಡಬಹುದಾಗಿದೆ. ಸಣ್ಣ ನಗರಗಳಲ್ಲಿ 5 ಉಚಿತ ಟ್ರಾನ್ಸಾಕ್ಷನ್​ನಡೆಸಬಹುದಾಗಿದೆ.ಮನೆಯಲ್ಲೇ ಬ್ಯಾಂಕ್​ ಸೇವೆಗಳು: ಈ ಮೂರೂ ವಿಭಾಗಗಳಲ್ಲಿ ನೀವು ಖಾತೆ ತೆರೆದರೆ, ನಿಮ್ಮ ಮನೆ ಬಾಗಿಲಲ್ಲೇ ಬ್ಯಾಂಕ್​ ಸೇವೆಗಳು ಲಭ್ಯವಾಗಲಿವೆ. ಆದರೆ ಇದಕ್ಕಾಗಿ ನೀವು 15 ರಿಂದ 35 ರೂಪಾಯಿ ಹೆಚ್ಚುವರಿ ನೀಡಬೇಕಾಗುತ್ತದೆ.
First published:September 3, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading