ಸಿಆರ್​ಪಿಎಫ್ ಯೋಧನ ಸಾವಿಗೆ ಪ್ರತೀಕಾರ; ಮೂರು ಉಗ್ರರನ್ನು ಹೊಡೆದುರುಳಿಸಿದ ಸೇನೆ

ಉಸ್ಮಾನ್ ಗುರುತನ್ನು ಸೇನೆ ಪತ್ತೆ ಹಚ್ಚಿದೆ. ಮತ್ತಿಬ್ಬರು ಉಗ್ರರು ಯಾರು ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಸದ್ಯ ಇವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

news18-kannada
Updated:July 13, 2020, 9:07 AM IST
ಸಿಆರ್​ಪಿಎಫ್ ಯೋಧನ ಸಾವಿಗೆ ಪ್ರತೀಕಾರ; ಮೂರು ಉಗ್ರರನ್ನು ಹೊಡೆದುರುಳಿಸಿದ ಸೇನೆ
ಸಾಂದರ್ಭಿಕ ಚಿತ್ರ
  • Share this:
ಶ್ರೀನಗರ (ಜು.13): ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಉಗ್ರರ ದಾಳಿಯಲ್ಲಿ ಓರ್ವ ಸಿಆರ್ಪಿಎಫ್ ಯೋಧ ಹುತಾತ್ಮನಾಗಿದ್ದ. ಇದಕ್ಕೆ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. ಈ ದಾಳಿಯ ಸಂಚುಕೋರ ಸೇರಿ ಮೂವರು ಉಗ್ರರನ್ನು ಸೇನೆ ಹತ್ಯೆ ಮಾಡಿದೆ.

ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಸದಸ್ಯ ಉಸ್ಮಾನ್ ಇತ್ತೀಚೆಗೆ ಸೊಪೋರ್ ಭಾಗದಲ್ಲಿ ದಾಳಿ ನಡೆಸಿದ್ದ. ಈ ವೇಳೆ ಸಿಆರ್ಪಿಎಫ್ ಪಡೆಯ ಓರ್ವ ಸೈನಿಕ ಹುತಾತ್ಮನಾಗಿದ್ದು, ಮತ್ತೋರ್ವ ಪೊಲೀಸ್ ಅಧಿಕಾರಿಗೆ ಗಾಯಗಳಾಗಿದ್ದವು. ಈ ದಾಳಿ ನಂತರ ಸೇನೆ ಉಸ್ಮಾನ್ಗಾಗಿ ಹುಡುಕಾಟ ನಡೆಸಿತ್ತು.

ಉಸ್ಮಾನ್​ ಅಡಗಿರುವ ಖಚಿತ ಮಾಹಿತಿ ಮೇರೆಗೆ ಭಾನುವಾರ ಮುಂಜಾನೆ 4 ಗಂಟೆಗೆ ಪೊಲೀಸರು ಹಾಗೂ ಸಿಆರ್​ಪಿಎಫ್​ಸೊಪೋರ್ ಭಾಗದಲ್ಲಿ ಜಂಟಿ ಕಾರ್ಯಾಚರಣೆಗೆ ಇಳಿದಿತ್ತು . ಈ ವೇಳೆ ಆತನ ಜೊತೆ ಮತ್ತಿಬ್ಬರು ಉಗ್ರರು ಇರುವ ವಿಚಾರ ಬೆಳಕಿಗೆ ಬಂದಿತ್ತು. ಸತತ 13 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸೇನೆ ಮೂವರು ಉಗ್ರರರನ್ನು ಹೊಡೆದುರುಳಿಸಿದೆ.

ಉಸ್ಮಾನ್ ಗುರುತನ್ನು ಸೇನೆ ಪತ್ತೆ ಹಚ್ಚಿದೆ. ಮತ್ತಿಬ್ಬರು ಉಗ್ರರು ಯಾರು ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಇವರು ಕೂಡ ಪಾಕಿಸ್ತಾನ ಮೂಲದವರು ಎಂದು ಶಂಕಿಸಲಾಗಿದೆ. ಸದ್ಯ ಇವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಗಡಿಯಲ್ಲಿ ಹೈ ಅಲರ್ಟ್:
ಭಾರತದೊಳಗೆ ಪಾಕಿಸ್ತಾನ ಉಗ್ರರು ನುಸುಳುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಮೂಲಗಳು ಎಚ್ಚರಿಕೆ ನೀಡಿವೆ. ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಕಣಿವೆ ರಾಜ್ಯದಲ್ಲಿ ನಿರಂತರ ಕಾರ್ಯಾಚರಣೆ:
ಕಣಿವೆ ರಾಜ್ಯ ಕಾಶ್ಮೀರದಲ್ಲಿ ಇತ್ತೀಚೆಗೆ ಉಗ್ರರ ಉಪಟಳ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಸೇನೆ ಹಾಗೂ ಪೊಲೀಸರು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಲೇ ಇದ್ದಾರೆ. ಕಳೆದ ಕೆಲ ತಿಂಗಳಲ್ಲಿ ಅನೇಕ ವಾಂಟೆಡ್ ಉಗ್ರರರನ್ನು ಸೇನೆ ಹೊಡೆದುರುಳಿಸಿದೆ.
Published by: Rajesh Duggumane
First published: July 13, 2020, 9:07 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading