ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆ ಮಹತ್ವದ ಕಾರ್ಯಾಚರಣೆ: ಮೂವರು ಉಗ್ರರ ಹತ್ಯೆ

ಇನ್ನು ಭಾರತೀಯ ಸೇನೆ ಮೂವರು ಉಗ್ರರನ್ನು ಗುರುತಿಸಿದೆ. ಈ ಪೈಕಿ ಆದಿಲ್ ಶೇಖ್ ಎಂದು ಹೇಳಲಾಗುತ್ತಿದೆ. ಮತ್ತೋರ್ವ ಉಗ್ರ ವಾಸೀಮ್ ವಾನಿ ಎಂದು ತಿಳಿದು ಬಂದಿದೆ. ಮೂರನೇ ಉಗ್ರ ಮಾತ್ರ ಇನ್ನೂ ಯಾರು ಎಂದು ತಿಳಿದು ಬಂದಿಲ್ಲ.

news18-kannada
Updated:January 20, 2020, 4:58 PM IST
ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆ ಮಹತ್ವದ ಕಾರ್ಯಾಚರಣೆ: ಮೂವರು ಉಗ್ರರ ಹತ್ಯೆ
ಇನ್ನು ಭಾರತೀಯ ಸೇನೆ ಮೂವರು ಉಗ್ರರನ್ನು ಗುರುತಿಸಿದೆ. ಈ ಪೈಕಿ ಆದಿಲ್ ಶೇಖ್ ಎಂದು ಹೇಳಲಾಗುತ್ತಿದೆ. ಮತ್ತೋರ್ವ ಉಗ್ರ ವಾಸೀಮ್ ವಾನಿ ಎಂದು ತಿಳಿದು ಬಂದಿದೆ. ಮೂರನೇ ಉಗ್ರ ಮಾತ್ರ ಇನ್ನೂ ಯಾರು ಎಂದು ತಿಳಿದು ಬಂದಿಲ್ಲ.
  • Share this:
ಶ್ರೀನಗರ(ಜ.20): ಜಮ್ಮು-ಕಾಶ್ಮೀರದಲ್ಲಿ ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸೇರಿದ ಮೂವರನ್ನು ಭಾರತೀಯ ಸೇನಾ ಪಡೆ ಸೆದೆಬಡಿದಿದೆ. ಇಂದು ಶೋಪಿಯಾನ್ ಎಂಬಲ್ಲಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರ ಹತ್ಯೆಗೈಯಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಭಾರತೀಯ ಸೇನಾ ಪಡೆಯ ಮೇಲೆ ದಾಳಿಗೆ ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಮೂವರು ಸಂಚು ರೂಪಿಸಿದ್ದಾರೆ. ಈ ವಿಷಯ ತಿಳಿದ ಕೂಡಲೇ ಶೋಪಿಯಾನ್​​ ಜಿಲ್ಲೆಯಲ್ಲಿದ್ದ ಉಗ್ರರ ಮೇಲೆ ಭಾರತೀಯ ಸೇನೆ ದಾಳಿ ಮಾಡಿದೆ. ದಾಳಿಯಲ್ಲಿ ಮೂವರು ಉಗ್ರರ ಹತ್ಯೆಗೈದು ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನಲಾಗಿದೆ.

ಇನ್ನು ಭಾರತೀಯ ಸೇನೆ ಮೂವರು ಉಗ್ರರನ್ನು ಗುರುತಿಸಿದೆ. ಈ ಪೈಕಿ ಆದಿಲ್ ಶೇಖ್ ಎಂದು ಹೇಳಲಾಗುತ್ತಿದೆ. ಮತ್ತೋರ್ವ ಉಗ್ರ ವಾಸೀಮ್ ವಾನಿ ಎಂದು ತಿಳಿದು ಬಂದಿದೆ. ಮೂರನೇ ಉಗ್ರ ಮಾತ್ರ ಇನ್ನೂ ಯಾರು ಎನ್ನುವುದು ತಿಳಿದು ಬಂದಿಲ್ಲ.

ಇದನ್ನೂ ಓದಿ: ಮಂಗಳೂರಿನ ಇಂಡಿಗೋ ವಿಮಾನದಲ್ಲಿ ಮತ್ತೊಂದು ಬಾಂಬ್​ ಪತ್ತೆ; ಕರಾವಳಿ ತಲ್ಲಣ

ಕಳೆದ 2018ರಲ್ಲಿ ಆದಿಲ್​​ ಶೇಖ್​​ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ ಮಾಜಿ ಶಾಸಕ ಅಜಜ್ ಮಿರ್ ಮನೆಯಲ್ಲಿ ಎಂಟು ಶಸ್ತ್ರಾಸ್ತ್ರಗಳನ್ನು ದರೋಡೆ ಮಾಡಿದ್ದ ಎಂಬು ಆರೋಪ ಕೇಳಿ ಬಂದಿತ್ತು. ಇನ್ನು ವಾಸೀಮ್​ ವಾನಿ ಮಾತ್ರ ಹಲವು ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ಸೇನಾ ಪಡೆ ತಿಳಿಸಿದೆ.​
First published:January 20, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading