ಸರ್ಕಾರಿ ಶಾಲೆ ಆವರಣದೊಳಗೆ ಎಣ್ಣೆ ಪಾರ್ಟಿ; ಓರ್ವ ಶಿಕ್ಷಕ ಸೇರಿ ಇಬ್ಬರು ಸಿಬ್ಬಂದಿ ಅಮಾನತು: ವಿಡಿಯೋ ವೈರಲ್

ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಶಿಕ್ಷಕರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ವಿಭಾಗೀಯ ಆಯುಕ್ತರಿಗೆ ಪ್ರಸ್ತಾಪವನ್ನು ಮಾಡಲಾಗಿದೆ ಎಂದು ಬುಡಕಟ್ಟು ಅಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತ ಎಸ್.ಎಸ್.ಮಾರ್ಕಮ್ ಹೇಳಿದರು.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಕೆಟ್ಟ ಚಟಗಳಿಗೆ ಬಲಿಯಾಗಬೇಡಿ. ನಿಮ್ಮ ಭವಿಷ್ಯವನ್ನು ಕೆಟ್ಟ ಚಟಗಳಿಗೆ ನೀಡಬೇಡಿ ಎಂದು ಉಪದೇಶ ಮಾಡುವುದನ್ನು ಸಾಮಾನ್ಯವಾಗಿ ನೋಡಿರುತ್ತೇವೆ. ಆದರೆ, ಮಧ್ಯಪ್ರದೇಶದಲ್ಲಿ ಸರ್ಕಾರಿ ಶಾಲೆಯ ಆವರಣದಲ್ಲಿ ಒಬ್ಬ ಶಿಕ್ಷಕ ಮತ್ತು ಇಬ್ಬರು ಸಿಬ್ಬಂದಿ ಮದ್ಯ ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಪ್ರೌಢ ಶಾಲೆಯೊಂದರ ಆವರಣದೊಳಗೆ ಒಬ್ಬ ಶಿಕ್ಷಕ ಮತ್ತು ಇಬ್ಬರು ಶಾಲಾ ಸಿಬ್ಬಂದಿ ಸೇರಿ ಮದ್ಯ ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಇದರಿಂದಾಗಿ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ ಎಂದು ಭಾನುವಾರ ಮೂಲಗಳು ತಿಳಿಸಿವೆ.

  ಘಟನೆಯ ವಿವರ ಏನು..?

  ಸಿಯೋನಿ ಜಿಲ್ಲೆಯ ಗಣೇಶ್ಗಂಜ್ ನಗರದಲ್ಲಿರುವ ಲಖ್ನದೋನ್ ಬ್ಲಾಕ್ನಲ್ಲಿರುವ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಶಿಕ್ಷಕ ಮತ್ತು ಸಿಬ್ಬಂದಿ ಮದ್ಯ ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಶಾಲಾ ಆವರಣದೊಳಗೆ ಮದ್ಯ ಸೇವನೆ ಮಾಡಿದ ಸಹಾಯಕ ಶಿಕ್ಷಕ ಸುನೀಲ್ ಕುಮಾರ್, ಕ್ಲರ್ಕ್ ವಿನೋದ್ ಹರ್ಷಲ್ ಮತ್ತು ವಾಚ್ಮ್ಯಾನ್ ಶಿವಕುಮಾರ್ ಎಂಬುವರನ್ನು ಶನಿವಾರ ಅಮಾನತು ಮಾಡಲಾಗಿದೆ.

  ಇದನ್ನೂ ಓದಿ: ಪ.ಬಂಗಾಳ ಚುನಾವಣೆ; ತೇಜಸ್ವಿ ಯಾದವ್​-ಮಮತಾ ಬ್ಯಾನರ್ಜಿ ಭೇಟಿ, ರಣತಂತ್ರ ಹೆಣೆಯಲಿರುವ ನಾಯಕರು?

  ಇನ್ನು, ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಶಿಕ್ಷಕರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ವಿಭಾಗೀಯ ಆಯುಕ್ತರಿಗೆ ಪ್ರಸ್ತಾಪವನ್ನು ಮಾಡಲಾಗಿದೆ ಎಂದು ಬುಡಕಟ್ಟು ಅಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತ ಎಸ್.ಎಸ್.ಮಾರ್ಕಮ್ ಹೇಳಿದರು.

  ಶಾಲೆ ಆವರಣದೊಳಗೆ ಮದ್ಯ ಸೇವಿಸಿದ ಶಿಕ್ಷಕ ಮತ್ತು ಶಾಲಾ ಸಿಬ್ಬಂದಿ ಬಗ್ಗೆ ಮಾಹಿತಿ ನೀಡುವಂತೆ ಶಾಲೆಯ ಪ್ರಾಂಶುಪಾಲರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಆಯುಕ್ತ ಮಾರ್ಕಮ್ ಅವರು ತಿಳಿಸಿದ್ದಾರೆ.
  Published by:MAshok Kumar
  First published: