ಒಟ್ಟಿಗೆ ರಾಜಸ್ಥಾನ ಆಡಳಿತ ಸೇವಾ ಪರೀಕ್ಷೆ ಪಾಸಾದ ಮೂವರು ಸಹೋದರಿಯರು

ಈಗಾಗಲೇ ಇಬ್ಬರು ಸಹೋದರಿಯರು ಹಿಂದೆ ರಾಜಸ್ಥಾನ ಆಡಳಿತ ಸೇವಾ ಪರೀಕ್ಷೆಯನ್ನು ಬರೆದು ಪಾಸಾಗಿ ಈಗ ಸೇವೆಯಲ್ಲಿ ಇದ್ದಾರೆ. ಈಗ ಮತ್ತೆ ಇನ್ನುಳಿದ ಮೂವರು ಸಹೋದರಿಯರು ಹೊಸದಾಗಿ ಪರೀಕ್ಷೆ ಬರೆದು ಪಾಸಾಗಿದ್ದಾರೆ.

ಮೂವರು ಸಹೋದರಿಯರು

ಮೂವರು ಸಹೋದರಿಯರು

  • Share this:

ಒಂದೇ ಮನೆಯಲ್ಲಿ ತಂದೆ ತಾಯಿ ರಾಜ್ಯ ಆಡಳಿತ ಸೇವೆಯಲ್ಲಿ ಇರುತ್ತಾರೆ ಮತ್ತು ಅವರಂತೆಯೇ ಮಕ್ಕಳು ಸಹ ಈ ರಾಜ್ಯ ಆಡಳಿತ ಸೇವಾ ಪರೀಕ್ಷೆಯನ್ನು ಕ್ಲಿಯರ್ ಮಾಡಿರುವಂತಹ ಅನೇಕ ಉದಾಹರಣೆಗಳನ್ನು ನಾವೆಲ್ಲಾ ನೋಡಿರುತ್ತೇವೆ.ಆದರೆ ರಾಜಸ್ಥಾನದ ಹನುಮಾನ್‌ಘರ್‌ನಲ್ಲಿ ಮೂವರು ಸಹೋದರಿಯರು ಒಟ್ಟಿಗೆ ರಾಜಸ್ಥಾನ ಆಡಳಿತ ಸೇವಾ (ಆರ್‌ಎಎಸ್) ಪರೀಕ್ಷೆಯನ್ನು ಬರೆದದ್ದು ಅಲ್ಲದೆ, ಮೂವರು ಅದನ್ನು ಪಾಸ್ ಮಾಡಿ ಸೈ ಎನಿಸಿಕೊಂಡಿದ್ದಾರೆ.


ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪರ್ವೀನ್ ಕಸ್ವಾನ್ ಮೂವರು ಸಹೋದರಿಯರು ಒಟ್ಟಿಗೆ ರಾಜಸ್ಥಾನ ಆಡಳಿತ ಸೇವಾ ಪರೀಕ್ಷೆಯಲ್ಲಿ ಪಾಸಾಗಿರುವಂತಹ ಸುದ್ದಿಯನ್ನು ತಮ್ಮ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.  ಈ ವಿಶಿಷ್ಟವಾದ ಸಾಧನೆಗೈದ ಸಹೋದರಿಯರಿಗೆ ಅಭಿನಂದಿಸಿ, ಸಹೋದರಿಯರ ಫೋಟೋವನ್ನೂ ಹಂಚಿಕೊಂಡಿದ್ದಾರೆ.


ಈಗಾಗಲೇ ಇಬ್ಬರು ಸಹೋದರಿಯರು ಹಿಂದೆ ರಾಜಸ್ಥಾನ ಆಡಳಿತ ಸೇವಾ ಪರೀಕ್ಷೆಯನ್ನು ಬರೆದು ಪಾಸಾಗಿ ಈಗ ಸೇವೆಯಲ್ಲಿ ಇದ್ದಾರೆ. ಈಗ ಮತ್ತೆ ಇನ್ನುಳಿದ ಮೂವರು ಸಹೋದರಿಯರು ಹೊಸದಾಗಿ ಪರೀಕ್ಷೆ ಬರೆದು ಪಾಸಾಗಿದ್ದಾರೆ. ಈ ಮೂಲಕ  ಐದು ಜನ ಸಹೋದರಿಯರು ರಾಜಸ್ಥಾನ ಆಡಳಿತ ಸೇವಾ ಅಧಿಕಾರಿಗಳಾಗಿ ಮುಂದಿನ ದಿನಗಳಲ್ಲಿ ಕೆಲಸ ಮಾಡಲಿರುವುದು ತುಂಬಾ ವಿಶೇಷವಾದ ಸಂಗತಿಯಾಗಿದೆ.


ಈ ಕುರಿತು ತಮ್ಮ ಟ್ವಿಟರ್​ನಲ್ಲಿ ತಿಳಿಸಿರುವ ಪರ್ವೀನ್ ಕಸ್ವಾನ್  , ''ಎಂತಹ ಸಂತೋಷದ ವಿಚಾರ, ಅಂಶು, ರೀತು ಮತ್ತು ಸುಮನ್ ಎಂಬ ಮೂವರು ಸಹೋದರಿಯರು ಒಟ್ಟಿಗೆ ಈ ಪರೀಕ್ಷೆಯನ್ನು ಪಾಸಾಗಿದ್ದಾರೆ. ಅವರನ್ನು ಹೆತ್ತ ತಂದೆ ತಾಯಿಗೆ ಹೆಮ್ಮೆ ಪಡುವ ವಿಚಾರವಾಗಿದೆ. ಒಟ್ಟು ಐದು ಜನ ಸಹೋದರಿಯರಿದ್ದು, ಈಗಾಗಲೇ ಹಿರಿಯ ಇಬ್ಬರು ಸಹೋದರಿಯರಾದ ರೋಮಾ ಮತ್ತು ಮಂಜು ರಾಜಸ್ಥಾನ ಆಡಳಿತ ಸೇವಾ ವಿಭಾಗದಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದು, ಇವರ ತಂದೆ ಸಹದೇವ್ ಸಹರನ್, ಒಬ್ಬ ರೈತರಾಗಿದ್ದು ತುಂಬಾ ಹೆಮ್ಮೆಯ ವಿಷಯವಾಗಿದೆ'' ಎಂದು ಬರೆದುಕೊಂಡಿದ್ದಾರೆ.


ಈ ಟ್ವೀಟ್ ಸುಮಾರು 5000ಕ್ಕಿಂತಲೂ ಹೆಚ್ಚಿನ ಜನರಿಂದ ಲೈಕ್ ಪಡೆದಿದ್ದು, ಈ ಮೂವರು ಸಹೋದರಿಯರು ಮಾಡಿದ ವಿಶಿಷ್ಟ ಸಾಧನೆಗೆ ಹಲವರು ಅಭಿನಂದನೆ ತಿಳಿಸಿದ್ದಾರೆ.


ಇದನ್ನು ಓದಿ: ರಾಜ್ಯದೆಲ್ಲೆಡೆ ಮಳೆ ಅಬ್ಬರ: ಉಕ್ಕಿ ಹರಿಯುತ್ತಿರುವ ನದಿಗಳು; ಬೆಳೆ ನಾಶ ಆತಂಕದಲ್ಲಿ ರೈತರು

ರಾಜಸ್ಥಾನ ಸಾರ್ವಜನಿಕ ಸೇವಾ ಆಯೋಗ (ಆರ್‌ಪಿಎಸ್‌ಸಿ) ಆರ್‌ಎಎಸ್ 2018 ರ ಪರೀಕ್ಷೆಯ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದ್ದು, ಪರೀಕ್ಷೆಯಲ್ಲಿ ಜುನಜುನ್ ನಿವಾಸಿಯಾದ ಮುಕ್ತಾ ರಾವ್ ಪ್ರಥಮ ಸ್ಥಾನ ಪಡೆದರೆ, ಟೋಂಕ್‌ನ ಮನಮೋಹನ್ ಶರ್ಮಾ ಮತ್ತು ಜೈಪುರದ ಶಿವಾಕ್ಷಿ ಖಂಡಲ್ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದಿದ್ದಾರೆ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟ್ವೀಟ್ ಮೂಲಕ ಪರೀಕ್ಷೆಯಲ್ಲಿ ಅಗ್ರಸ್ಥಾನವನ್ನು ಪಡೆದವರನ್ನು ಅಭಿನಂದಿಸಿದ್ದಾರೆ.


"ಪರೀಕ್ಷೆಯಲ್ಲಿ ಜುನಜುನ್ ನಗರದ ನಿವಾಸಿಯಾದ ಮುಕ್ತಾ ರಾವ್ ಪ್ರಥಮ ಸ್ಥಾನ ಪಡೆದ, ಟೋಂಕ್‌ನ ಮನಮೋಹನ್ ಶರ್ಮಾ ಮತ್ತು ಜೈಪುರದ ಶಿವಾಕ್ಷಿ ಖಂಡಲ್ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದಿದ್ದಕ್ಕೆ ಅಭಿನಂದನೆಗಳು, ರಾಜ್ಯದ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದ್ದು, ನಿಮಗೆಲ್ಲಾ ನನ್ನ ಹಾರೈಕೆ ಸದಾ ಇರುತ್ತದೆ", ಎಂದು ಮುಖ್ಯಮಂತ್ರಿ ಟ್ವೀಟ್ನಲ್ಲಿ ಬರೆದಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
First published: