• Home
  • »
  • News
  • »
  • national-international
  • »
  • Girl's Death: ಒಬ್ಬಳಿಗೆ ಪ್ರಿಯತಮ ಕೈಕೊಟ್ಟಿದ್ದಕ್ಕೆ ವಿಷ ಕುಡಿದ ಮೂವರು ಬಾಲಕಿಯರು! ದುಡುಕಿನ ನಿರ್ಧಾರಕ್ಕೆ ಇಬ್ಬರು ಬಲಿ

Girl's Death: ಒಬ್ಬಳಿಗೆ ಪ್ರಿಯತಮ ಕೈಕೊಟ್ಟಿದ್ದಕ್ಕೆ ವಿಷ ಕುಡಿದ ಮೂವರು ಬಾಲಕಿಯರು! ದುಡುಕಿನ ನಿರ್ಧಾರಕ್ಕೆ ಇಬ್ಬರು ಬಲಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

16 ವರ್ಷದ ಮೂವರು ಬಾಲಕಿಯರು ಶಾಲೆಗೆ ಚಕ್ಕರ್ ಹಾಕಿದ್ದರು. ಬಳಿಕ ಪಕ್ಕದ ಊರಿನ ಅಂಗಡಿಗೆ ಹೋಗಿ ವಿಷ ಖರೀದಿಸಿದ್ದಾರೆ. ಬಳಿಕ ನಿರ್ಜನ ಪ್ರದೇಶಕ್ಕೆ ಬಂದು ಮೂವರೂ ಆ ವಿಷ ಕುಡಿದಿದ್ದಾರೆ. ಇದಕ್ಕೆ ಕಾರಣ ಏನು ಗೊತ್ತಾ?

  • News18 Kannada
  • Last Updated :
  • Madhya Pradesh, India
  • Share this:

ಮಧ್ಯ ಪ್ರದೇಶ: ಶಾಲೆಗೆ (School) ಚಕ್ಕರ್ ಹಾಕಿದ ಮೂವರು ಬಾಲಕಿಯರು (Girls) ಅವಾಂತರವನ್ನೇ ಮಾಡಿಕೊಂಡಿದ್ದಾರೆ. ಶಾಲೆಗೆ ರಜೆ (Leave) ಹಾಕಿ, ಪಕ್ಕದ ಊರಿಗೆ (Village) ಬಂದು, ಅಲ್ಲಿ ವಿಷದ ಬಾಟಲಿ (Poison Bottle) ಖರೀದಿ ಮಾಡಿ, ನಿರ್ಜನ ಪ್ರದೇಶಕ್ಕೆ ತೆರಳಿ, ಅಲ್ಲಿ ಮೂವರೂ ವಿಷ ಕುಡಿದಿದ್ದಾರೆ. ಈ ಪೈಕಿ ಇಬ್ಬರು ಸಾವನ್ನಪ್ಪಿದ್ರೆ (Death), ಒಬ್ಬಳು ಬಚಾವ್ ಆಗಿದ್ದಾಳೆ. ಸೆಹೋರ್‌ನಿಂದ ಇಂದೋರ್‌ಗೆ ಬಂದಿದ್ದ ಮೂವರು ಶಾಲಾ ಬಾಲಕಿಯರು ಈ ರೀತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಬಾಲಕಿಯರನ್ನು ಪೂಜಾ, ಆರತಿ ಮತ್ತು ಪಾಲಕ್ ಎಂದು ಗುರುತಿಸಲಾಗಿದೆ. ಈ ಬಾಲಕೀಯರು ವಿಷ ಸೇವಿಸಿರುವ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿತ್ತು. ಇದಾದ ಬಳಿಕ ಆಸ್ಪತ್ರೆಗೆ ಆಗಮಿಸಿದ ಪೊಲೀಸರು ವಿಷ ಸೇವನೆಗೆ ಕಾರಣ ತಿಳಿದುಕೊಂಡಿದ್ದಾರೆ ಎನ್ನಲಾಗಿದೆ. ತನಿಖೆ ವೇಳೆ ಸ್ಫೋಟಕ ವಿಚಾರವೊಂದು ಬೆಳಕಿಗೆ ಬಂದಿದೆ.


ವಿಷ ತಂದು ಕುಡಿದ ಮೂವರು ಬಾಲಕಿಯರು


16 ವರ್ಷದ ಮೂವರು ಬಾಲಕಿಯರು ಶಾಲೆಗೆ ಚಕ್ಕರ್ ಹಾಕಿದ್ದರು. ಬಳಿಕ ಪಕ್ಕದ ಊರಿನ ಅಂಗಡಿಗೆ ಹೋಗಿ ವಿಷ ಖರೀದಿಸಿದ್ದಾರೆ. ಬಳಿಕ ನಿರ್ಜನ ಪ್ರದೇಶಕ್ಕೆ ಬಂದು ಮೂವರೂ ಆ ವಿಷ ಕುಡಿದಿದ್ದಾರೆ. ಮೂವರಲ್ಲಿ ಇಬ್ಬರು ಬಾಲಕಿಯರು ಮೃತಪಟ್ಟಿದ್ದು, ಇನ್ನೊಬ್ಬಳ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.


120 ಕಿಲೋ ಮೀಟರ್ ಬಂದ ಬಾಲಕಿಯರು!


ಮಧ್ಯ ಪ್ರದೇಶದ ಅಷ್ಟಾ ಪಟ್ಟಣ ಎಂಬಲ್ಲಿನ ಮೂವರು 16 ವರ್ಷದ ಬಾಲಕಿಯರು ಶುಕ್ರವಾರ ಶಾಲೆಗೆ ಬಂಕ್ ಮಾಡಿ 120 ಕಿಮೀ ದೂರದ ಇಂದೋರ್‌ಗೆ ಬಸ್‌ನಲ್ಲಿ ಬಂದಿದ್ದಾರೆ. ಇಲ್ಲಿನ ನಿರ್ಜನ ಪ್ರದೇಶವೊಂದರಲ್ಲಿ ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರಲ್ಲಿ ಇಬ್ಬರು ರಾತ್ರಿ ಸಾವನ್ನಪ್ಪಿದ್ದು, ಬೆಳಗ್ಗೆ ಮತ್ತೊಬ್ಬಳು ಸಾವನ್ನಪ್ಪಿದ್ದಾಳೆ. ಇನ್ನು ಒಬ್ಬಳ ಸ್ಥಿತಿ ಚಿಂತಾಜನಕವಾಗಿದೆ.


ಇದನ್ನೂ ಓದಿ: Viral News: ಗೃಹಪ್ರವೇಶದ ದಿನ ಬಲಿ ಕೊಡಲು ಹೋದಾಗ ಜಸ್ಟ್ ಮಿಸ್; ಕೋಳಿ ಬದುಕಿತು, ಮನೆ ಮಾಲೀಕ ಸತ್ತ!


ಒಬ್ಬ ಬಾಲಕಿಗೆ ಕೈಕೊಟ್ಟ ಪ್ರಿಯಕರ!


ಬಾಲಕಿಯರಲ್ಲಿ ಒಬ್ಬಳು ತನ್ನ ಪ್ರಿಯಕರನನ್ನು ಭೇಟಿಯಾಗಲು ಬಂದಿದ್ದಳು ಎನ್ನಲಾಗಿದೆ. ಆದರೆ ಆತ ಅವಳನ್ನು ಭೇಟಿಯಾಗಲು ನಿರಾಕರಿಸಿದ್ದನಂತೆ. ಇದೇ ಕಾರಣಕ್ಕೆ ನೊಂದ ಆಕೆ ಮೊದಲಿಗೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಳು. ಆದರೆ ಅದೇನಾಯಿತೋ ಏನೋ ಮೂವರೂ ಒಮ್ಮೆಲೇ ವಿಷ ಕುಡಿದು, ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತ ನಿರ್ಧರಿಸಿದ್ದಾರೆ.


ಸ್ವಲ್ಪ ಕಾಲ ತಿರುಗಾಡಿ, ಬಳಿಕ ವಿಷ ಸೇವನೆ


ಘಟನೆಯಲ್ಲಿ ಮೂವರು ಸ್ನೇಹಿತೆಯರು ಒಟ್ಟಿಗೆ ವಿಷ ಸೇವಿಸಿದ್ದಾರೆ ಎಂದು ತನಿಖಾಧಿಕಾರಿಗಳು ಹೇಳುತ್ತಾರೆ. "ಇಂಧೋರ್‌ಗೆ ಬಂದ ನಂತರ, ಅವರು ಸ್ವಲ್ಪ ಕಾಲ ತಿರುಗಾಡಿದರು ಮತ್ತು ನಂತರ ಭನ್ವಾರ್ಕುವಾನ್‌ನ ಆಸ್ಪತ್ರೆಯ ಸಮೀಪವಿರುವ ತೋಟದಲ್ಲಿ ವಿಷ ಸೇವಿಸಿದರು ಅಂತ ಪೊಲೀಸರು ಹೇಳಿದ್ದಾರೆ.


ಮೂವರನ್ನು ಆಸ್ಪತ್ರೆಗೆ ಸೇರಿಸಿದ ಸ್ಥಳೀಯರು


ಇನ್ನು ಸ್ಥಳೀಯರು ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿಂದ ಅವರನ್ನು ಎಂವೈ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರಲ್ಲಿ ಇಬ್ಬರು ಚಿಕಿತ್ಸೆ ಸಮಯದಲ್ಲಿ ಸಾವನ್ನಪ್ಪಿದರು ಎಂದು ಹೆಚ್ಚುವರಿ ಡಿಸಿಪಿ ಪ್ರಶಾಂತ್ ಚೌಬೆ ಹೇಳಿದ್ದಾರೆ.


ಇದನ್ನೂ ಓದಿ: Bombay High Court: ಹೆಂಡತಿಗೆ ಮನೆ ಕೆಲಸ ಮಾಡು ಎನ್ನುವುದು ದೌರ್ಜನ್ಯವಲ್ಲ! ಬಾಂಬೆ ಹೈಕೋರ್ಟ್‌ ಮಹತ್ವದ ತೀರ್ಪು


ಬದುಕಿರುವ ಬಾಲಕಿ ಹೇಳುವುದೇನು?


ಇನ್ನು ಬದುಕಿರುವ ಬಾಲಕಿಯೊಬ್ಬಳು ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. “ತನ್ನ ಗೆಳೆಯ ತನ್ನೊಂದಿಗೆ ಮಾತನಾಡದ ಕಾರಣ ಅವರಲ್ಲಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡರೆ, ಎರಡನೆಯವರು ಕೌಟುಂಬಿಕ ಕಲಹದ ಕಾರಣಕ್ಕೆ ವಿಷ ಸೇವಿಸಿದ್ದಾಳಂತೆ. ಮೂರನೆಯವಳು ಅವಳ ಇಬ್ಬರೂ ಸ್ನೇಹಿತರು ವಿಷ ಸೇವಿಸುತ್ತಿದ್ದರಿಂದ ಹೆದರಿ ಅವಳೂ ಕೂಡ ವಿಷ ಸೇವಿಸಿದಳು ಎಂದು ಹೇಳಿದ್ದಾಳೆ. ಇದೀಗ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Published by:Annappa Achari
First published: